For Quick Alerts
ALLOW NOTIFICATIONS  
For Daily Alerts

ನವರಾತ್ರಿ ಉಪವಾಸ ಮಾಡುವವರಿಗಾಗಿ ಈ 12 ರೆಸಿಪಿ

|

ನವರಾತ್ರಿ ಹಬ್ಬದಲ್ಲಿ ಉಪವಾಸ ಮಾಡುವವರು ಆ ಒಂಭತ್ತು ದಿನ ತಮ್ಮ ಆಹಾರಕ್ರಮವನ್ನು ಸಂಪೂರ್ಣವಾಗಿ ಬದಲಾಯಿಸಿರುತ್ತಾರೆ. ಈರುಳ್ಳಿ, ಬೆಳ್ಳುಳ್ಳಿ ಹಾಕಿದ ಪದಾರ್ಥಗಳನ್ನು ತಿನ್ನುವುದಿಲ್ಲ, ಕೆಲವರೂ ಎಣ್ಣೆಯನ್ನು ಕೂಡ ಬಳಸುವುದಿಲ್ಲ. ವ್ರತದ ಅಡುಗೆಯನ್ನು ತುಪ್ಪ ಬಳಸಿ ಮಾಡುತ್ತಾರೆ. ಪುಡಿ ಉಪ್ಪು ಮತ್ತು ಸಂಸ್ಕರಿಸಿದ ಗೋಧಿ ಹಿಟ್ಟನ್ನು ಬಳಸುವಂತಿಲ್ಲ. ಆದರೆ ಕಲ್ಲುಪ್ಪು ಮತ್ತು ಸಂಸ್ಕರಿಸದ ಗೋಧಿ ಹಿಟ್ಟನ್ನು ಬಳಸಬಹುದು.

ಚಪಾತಿ, ಅವಲಕ್ಕಿ ಮತ್ತು ಫ್ರೂಟ್ ಸಲಾಡ್ ಇವುಗಳು ಪ್ರಮುಖವಾದ ವ್ರತ ಆಹಾರಗಳಾಗಿವೆ. ಇಲ್ಲಿ ನಾವು ನವರಾತ್ರಿ ಸಮಯದಲ್ಲಿ ವ್ರತ ಮಾಡುವವರಿಗೆ ಬಾಯಿಗೆ ರುಚಿಕರವಾದ ಕೆಲವು ಆಹಾರಗಳ ಬಗ್ಗೆ ಹೇಳಿದ್ದೇವೆ ನೋಡಿ:

 ಫ್ರೈ ಆಲೂ ಸಬ್ಜಿ

ಫ್ರೈ ಆಲೂ ಸಬ್ಜಿ

* ಪ್ಯಾನ್ ಗೆ ತುಪ್ಪ ಹಾಕಿ ಬಿಸಿ ಮಾಡಿ ಅದರಲ್ಲಿ ಬೇಯಿಸಿದ ಬೇಬಿ ಆಲಕೂಗಡ್ಡೆಯನ್ನು ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ ಒಂದು ಪೇಪರ್ ನಲ್ಲಿ ಹಾಕಿಡಿ.

* ನಂತರ 1 ಚಮಚ ತುಪ್ಪ ಹಾಕಿ ಬಿಸಿ ಮಾಡಿ ಅದರಲ್ಲಿ ಎಣ್ಣೆ ಹಾಕಿ ನಂತರ ಜೀರಿಗೆ ಮತ್ತು ಕರಿಬೇವಿನ ಎಲೆ ಹಾಕಿ, ಅರಿಶಿಣ ಪುಡಿ, ಕಲ್ಲುಪ್ಪು, ಕೊತ್ತಂಬರಿ ಪುಡಿ, ಖಾರದ ಪುಡಿ ಹಾಕಿ ಸ್ವಲ್ಪ ನೀರು ಹಾಕಿ ಮಿಕ್ಸ್ ಮಾಡಿ 2 ನಿಮಿಷ ಕುದಿಸಿ, ನಂತರ ಫ್ರೈ ಮಾಡಿದ ಆಲೂಗಡ್ಡೆ ಹಾಕಿ 5 ನಿಮಿಷ ಬೇಯಿಸಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ವ್ರತ ರೆಸಿಪಿ ರೆಡಿ.

ಹುರುಳಿಕಾಳಿನ ಪರೋಟ

ಹುರುಳಿಕಾಳಿನ ಪರೋಟ

ಹುರುಳಿಕಾಳು ಆರೋಗ್ಯಕ್ಕೆ ಹಿತ. ಅದರಲ್ಲೂ ನವರಾತ್ರಿ ದಿನ ಒಪ್ಪೊತ್ತಿನ ಉಪವಾಸಕ್ಕೆ ಹುರುಳಿಕಾಳಿನ ಈ ಪರೋಟ ಹೇಳಿ ಮಾಡಿಸಿದ್ದು.

ಫ್ರೂಟ್ ಸಲಾಡ್

ಫ್ರೂಟ್ ಸಲಾಡ್

ನವರಾತ್ರಿ ಹಬ್ಬದಲ್ಲಿ ಒಪ್ಪೊತ್ತಿನ ಉಪವಾಸ ಮಾಡುವವರು ಹಣ್ಣು ಸೇವಿಸುವುದು ರೂಢಿ. ಆದರೆ ಬರಿ ಹಣ್ಣು ತಿಂದರೆ ಅತಿ ಸಿಹಿಎನಿಸಬಹುದು. ಜೊತೆಗೆ ಒಂದಿಷ್ಟು ರುಚಿ ಬೆರೆಸಿದರೆ ತಿನ್ನಲೂ ಚೆಂದ, ಉಪವಾಸವೂ ಆದ ಹಾಗೆ. ಇಲ್ಲಿದೆ ಫ್ರೂಟ್ ಸಲಾಡ್ ರೆಸಿಪಿ.

ವ್ರತ ಅವಲಕ್ಕಿ ಉಪ್ಪಿಟ್ಟು

ವ್ರತ ಅವಲಕ್ಕಿ ಉಪ್ಪಿಟ್ಟು

ಅವಲಕ್ಕಿಯನ್ನು ತೊಳೆದು ಇಡಿ.

* ನಂತರ ಪಾತ್ರೆಗೆ ತುಪ್ಪ ಹಾಕಿ ನಂತರ ಜೀರಿಗೆ, ಪಲಾವ್ ಎಲೆ, ಲವಂಗ, ಕರಿ ಮೆಣಸು, ಚಕ್ಕೆ ಹಸಿ ಮೆಣಸಿನಕಾಯಿ ಹಾಕಿ, ನಂತರ ಬೇಯಿಸಿ ಹಿಸುಕಿದ ಆಲೂಗಡ್ಡೆ ಹಾಕಿ, ಅರಿಶಿಣ ಪುಡಿ ಮತ್ತು ರುಚಿಗೆ ತಕ್ಕ ಉಪ್ಪು ಸೇರಿಸಿ, ಅವಲಕ್ಕಿಯನ್ನು ಹಾಕಿ ಮಿಕ್ಸ್ ಮಾಡಿ 2 ನಿಮಿಷ ಸೌಟ್ ನಿಂದ ಆಡಿಸಿ ತೆಗೆದರೆ ವ್ರತ ಅವಲಕ್ಕಿ ಉಪ್ಪಿಟ್ಟು ರೆಡಿ.

ಖುಷ್ ಖುಷ್ ಆಲೂ

ಖುಷ್ ಖುಷ್ ಆಲೂ

* ಮೊದಲು ಅರ್ಧ ಕಪ್ ಗಸೆಗಸೆಯನ್ನು 10 ನಿಮಿಷ ನೆನೆ ಹಾಕಿ ನಂತರ ಗಸೆಗಸೆ, ಹಸಿ ಮೆಣಸಿನಕಾಯಿ ಹಾಕಿ ಪೇಸ್ಟ್ ಮಾಡಿ ನಂತರ ನಿಂಬೆ ರಸ ಹಾಕಿ ಮಿಕ್ಸ್ ಮಾಡಿ.

* ಪ್ಯಾನ್ ಗೆ 2 ಚಮಚ ತುಪ್ಪ ಹಾಕಿ ಅದರಲ್ಲಿ ಬೇಯಿಸಿ, ಕತ್ತರಿಸಿದ ಆಲೂಗಡ್ಡೆಯನ್ನು ಹಾಕಿ ಫ್ರೈ ಮಾಡಿ. ನಂತರ ಒಂದು ಪಾತ್ರೆಯಲ್ಲಿ ಹಾಕಿಡಿ.

* ಈಗ ಪ್ಯಾನ್ ಬಿಸಿ ಮಾಡಿ ಅದರಲ್ಲಿ 2 ಚಮಚ ತುಪ್ಪ ಹಾಕಿ, ನಂತರ ಪೇಸ್ಟ್ ಮಾಡಿದ ಮಿಶ್ರಣವನ್ನು ಹಾಕಿ 2 ನಿಮಿಷ ಫ್ರೈ ಮಾಡಿ, ನಂತರ ಫ್ರೈ ಮಾಡಿದ ಆಲೂಗಡ್ಡೆ ಹಾಕಿ ರುಚಿಗೆ ತಕ್ಕ ಉಪ್ಪು ಸೇರಿಸಿ, ಅರಿಶಿಣ ಪುಡಿ ಹಾಕಿ ಗ್ರೇವಿ ರೀತಿ ಆಗುವವರೆಗೆ ಬೇಯಿಸಿ, ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಖುಷ್ ಖುಷ್ ಆಲೂ ರೆಡಿ.

ಕಡಲೆ ಖಾದ್ಯ

ಕಡಲೆ ಖಾದ್ಯ

ನವರಾತ್ರಿ ಸಮಯದಲ್ಲಿ ವ್ರತ ಮಾಡುವವರು ಕಡಲೆ ಬಳಸಿ ಅಡುಗೆ ಮಾಡಿ ತಿನ್ನಬಹುದು. ಕಡಲೆ ಕಾಳಿನ ರೆಸಿಪಿಗೆ ಇಲ್ಲಿ ನೋಡಿ.

ಬಾಳೆಕಾಯಿ ಮಸಾಲೆ ಗ್ರೇವಿಯ ರೆಸಿಪಿ

ಬಾಳೆಕಾಯಿ ಮಸಾಲೆ ಗ್ರೇವಿಯ ರೆಸಿಪಿ

ಇಲ್ಲಿ ನಾವು ಈರುಳ್ಳಿ, ಬೆಳ್ಳುಳ್ಳಿ ಹಾಕದೆ ಮಾಡುವ ಬಾಳೆಕಾಯಿ ಮಸಾಲೆ ಗ್ರೇವಿಯ ರೆಸಿಪಿ ನೀಡಿದ್ದೇವೆ ನೋಡಿ.

ಮಟರ್ ಪನ್ನೀರ್ ಡ್ರೈ

ಮಟರ್ ಪನ್ನೀರ್ ಡ್ರೈ

ಇಲ್ಲಿ ನೀಡಿರುವ ಮಟರ್ ಪನ್ನೀರ್ ಡ್ರೈಯಲ್ಲಿ ಬೆಳ್ಳುಳ್ಳಿ ಹಾಕಲಾಗಿದೆ. ಆದರೆ ವ್ರತಕ್ಕೆ ಈ ಅಡುಗೆ ಮಾಡುವುದಾದರೆ ಈರುಳ್ಳಿ, ಬೆಳ್ಳುಳ್ಳಿ ಹಾಕದೆಯೂ ಇದನ್ನು ಮಾಡಬಹುದು.

 ಸಾಬುದಾನ ಖೀರ್

ಸಾಬುದಾನ ಖೀರ್

ನವರಾತ್ರಿಗೆ ಸಾಬುದಾನ ಬಳಸಿ ಅನೇಕ ಖಾದ್ಯಗಳನ್ನು ತಯಾರಿಸಲಾಗುವುದು. ಸಿಹಿ ಬಯಸುವ ನಾಲಗೆಗೆ ಸಾಬುದಾನ ಖೀರ್ ಬೆಸ್ಟ್.

 ಬಾಳೆಹಣ್ಣಿನ ಬರ್ಫಿ

ಬಾಳೆಹಣ್ಣಿನ ಬರ್ಫಿ

ನವರಾತ್ರಿಗೆ ವಿಧವಿಧದ ಅಡುಗೆ ಮಾಡ ಬಯಸುವುದು ಸಹಜ, ಆದರೆ ಆ ಅಡುಗೆ ರುಚಿಯ ಜೊತೆಗೆ ಮಾಡಲು ಸುಲಭವಾಗಿದ್ದರೆ ಎಲ್ಲರು ಅಂತಹ ಅಡುಗೆಯನ್ನು ಮಾಡಬಯಸುತ್ತಾರೆ. ಅಂತಹ ಅಡುಗೆಯ ಪಟ್ಟಿಗೆ ಈ ಬಾಳೆಹಣ್ಣಿನ ಬರ್ಫಿಯನ್ನು ಸೇರಿಸಬಹದು.

ತಾಲಿಪಟ್

ತಾಲಿಪಟ್

ನವರಾತ್ರಿ ಸಮಯದಲ್ಲಿ ಮತ್ತು ಇತರ ಹಬ್ಬ, ವ್ರತ ಸಮಯದಲ್ಲಿ ಉಪವಾಸ ಮಾಡುವವರಿಗಾಗಿ ಈ ತಾಲಿಪಟ್ ರೆಸಿಪಿ ನೀಡಲಾಗಿದೆ. ನೀವು ಕೂಡ ನವರಾತ್ರಿ ಉಪವಾಸ ಸಮಯದಲ್ಲಿ ಮಾಡಬಹುದಾದ ಅಡುಗೆಯ ರೆಸಿಪಿ ಹುಡುಕಾಟದಲ್ಲಿದ್ದರೆ, ಈ ಲೇಖನದತ್ತ ಕಣ್ಣಾಡಿಸಿ.

ಹೆಸರುಬೇಳೆಯ ಹಲ್ವಾ

ಹೆಸರುಬೇಳೆಯ ಹಲ್ವಾ

ಹೆಸರುಬೇಳೆಯಿಂದ ಮಾಡಿದ ಹಲ್ವಾವನ್ನು ವ್ರತ ಮಾಡುವವರು ತಿನ್ನಬಹುದು. ಇದರ ರೆಸಿಪಿಯನ್ನು ಮುಂದಿನ ಲೇಖನದಲ್ಲಿ ನೀಡಲಾಗುವುದು.

English summary

Awesome Recipes For Navratri Fasting

It is the time for both festivities and fasting.So, celebrate the festival of Navratri with Boldsky and enjoy your days of fasting with our special recipes for Navratri fasting.
X
Desktop Bottom Promotion