Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಬಾಳೆಕಾಯಿ ಮಸಾಲ ಗ್ರೇವಿ ರೆಸಿಪಿ
ಸಾರು ಬಾಳೆಕಾಯಿಯಿಂದ ಅನೇಕ ಬಗೆಯಲ್ಲಿ ಖಾದ್ಯವನ್ನು ತಯಾರಿಸಬಹುದು. ಇದನ್ನು ಸಾಂಬರ್ ಗೆ ಹಾಕಲಾಗುವುದು, ಇದರಿಂದ ಪಲ್ಯ ಮಾಡಬಹುದು, ಗ್ರೇವಿ ಮಾಡಬಹುದು. ಬಾಳೆಕಾಯಿಯಿಂದ ತಯಾರಿಸುವ ಖಾದ್ಯಗಳನ್ನು ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ತಯಾರಿಸುತ್ತಾರೆ.
ಇಲ್ಲಿ ನಾವು ibis & Novotel ಹೋಟೆಲ್ ನಲ್ಲಿ ಕೆಲಸ ಮಾಡುತ್ತಿರುವ ಪ್ರಸಿದ್ಧ ಅಡುಗೆ ಭಟ್ಟರಾಗಿರುವ ಕೈಲಾಶ್ ಗುಂಡ ಪಲ್ಲಿ ನಮಗೆ ತಿಳಿಸಿರುವ ರೆಸಿಪಿಯ ವಿಧಾನವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಸಂತೋಷ ಪಡುತ್ತೇನೆ. ಇದು ಆಂಧ್ರ ಶೈಲಿಯ ಬಾಳೆಕಾಯಿ ಗ್ರೇವಿ ರೆಸಿಪಿಯಾಗಿದೆ.

ಬೇಕಾಗುವ ಸಾಮಗ್ರಿಗಳು:
* 3-4 ಚಮಚ ಎಣ್ಣೆ
* 5 ಸಾರು ಬಾಳೆ ಕಾಯಿ 4 ( ಸಿಪ್ಪೆ ತೆಗೆದು ಕತ್ತರಿಸಿರಬೇಕು)
* ಸ್ವಲ್ಪ ಕರಿಬೇವಿನ ಎಲೆ
* ಅರ್ಧ ಚಮಚದಷ್ಟು ಸಾಸಿವೆ
* 1 ಚಮಚ ಕೆಂಪು ಮೆಣಸಿನ ಪುಡಿ
* 2 ಚಮಚ ಹುಣಸೆ ಹಣ್ಣಿನ ರಸ
* 1/2 ಚಮಚ ಅರಿಶಿಣ ಪುಡಿ
* 5-6 ಬೆಳ್ಳುಳ್ಳಿ ಎಸಳು
* ಅರ್ಧ ಇಂಚಿನಷ್ಟು ದೊಡ್ಡದಿರುವ ಶುಂಠಿ
* 1 ಚಮಚದಷ್ಟು ಅಕ್ಕಿ
* ರುಚಿಗೆ ತಕ್ಕ ಉಪ್ಪು
ತಯಾರಿಸುವ ವಿಧಾನ:
1. ಶುಂಠಿ, ಅಕ್ಕಿ, ಬೆಳ್ಳುಳ್ಳಿ ಇವುಗಳನ್ನು ಅರೆದು ಪೇಸ್ಟ್ ಮಾಡಿಡಬೇಕು.
2. ಈಗ ಬಾಳೆಕಾಯಿಗೆ ಸ್ವಲ್ಪ ಉಪ್ಪು ಹಾಕಿ ಬೇಯಿಸಿ ನೀರು ಬಸಿದು ಒಂದು ಪಾತ್ರೆಯಲ್ಲಿಡಬೇಕು.
3. ಈಗ ಪಾತ್ರೆಯನ್ನು ಉರಿಯ ಮೇಲಿಟ್ಟು ಬಿಸಿ ಮಾಡಿ ಅದರಲ್ಲಿ ಎಣ್ಣೆ ಹಾಕಿ ಕಾಯಿಸಬೇಕು. ಎಣ್ಣೆ ಬಿಸಿಯಾದಾಗ ಸಾಸಿವೆ ಹಾಕಿ, ಸಾಸಿವೆ ಚಟಾಪಟ ಶಬ್ದ ಮಾಡುವಾಗ ಕರಿಬೇವಿನ ಎಲೆ ಹಾಕಿ ನಂತರ ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಹಾಕಿ ಅರಿಶಿ ಪುಡಿ ಹಾಗೂ ಖಾರದ ಪುಡಿ ಹಾಕಿ 2 ನಿಮಿಷ ಹುರಿದು, ಹುಣಸೆ ಹಣ್ಣಿನ ರಸ ಹಾಕಿ ಸೌಟ್ ನಿಂದ ಒಮ್ಮೆ ತಿರುಗಿಸಿ ನಂತರ ಎರಡು ಕಪ್ ನೀರು ಹಾಕಬೇಕು, ಜೊತೆಗೆ ರುಚಿ ತಕ್ಕ ಉಪ್ಪ ಹಾಕಿ ಈ ಮಿಶ್ರಣವನ್ನು ಕುದಿಸಿ.
4. ನಂತರ ಬೇಯಿಸಿದ ಬಾಳೆಕಾಯಿಯನ್ನು ಹಾಕಿ ಗ್ರೇವಿಯ ಮಿಶ್ರಣವಾಗುವವರೆಗೆ ಬೇಯಿಸಿ ಉರಿಯಿಂದ ಇಳಿಸಿದರೆ ರುಚಿಕರವಾದ ಬಾಳೆಕಾಯಿ ಗ್ರೇವಿ ರೆಡಿ.



Click it and Unblock the Notifications
