Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು!
ಬೇಸಿಗೆಯ ಸಮಯದಲ್ಲಿ ದೇಹವು ತಂಪಾಗಿಡುವಂತಹ ಆಹಾರ ಸೇವಿಸುವುದು ಕಾಮನ್. ಅದ್ರಲ್ಲೂ ಬೇಸಿಗೆಯಲ್ಲಿ ಮಧ್ಯಾಹ್ನದ ಊಟದ ಸಮಯಕ್ಕೆ ಬಹಳ ರುಚಿಯಾಗಿ ಹಾಗೆ ಕಡಿಮೆ ಮಸಾಲೆಯುಕ್ತ ಆಹಾರ ಸೇವಿಸುವುದು ನಿಮ್ಮ ಆರೋಗ್ಯದ ದೃಷ್ಟಿಯಿಂದ ಬಹಳ ಉತ್ತಮ. ಏಕೆಂದರೆ ಈ ಬಿಸಿಲಿನ ಸಮಯದಲ್ಲಿ ದೇಹವು ಕಡಿಮೆ ಮಸಾಲೆ ಭರಿತ ಆಹಾರವನ್ನು ಇಷ್ಟಪಡಲಿದೆ. ಹೀಗಾಗಿ ನಾವಿಂದು ಸುಲಭದ ಮೊಸರನ್ನ ಮಾಡುವ ಕುರಿತು ಹೇಳಲಿದ್ದೇವೆ.
ಸಾಮಾನ್ಯವಾಗಿ ನೀವು ಮನೆಯಲ್ಲಿ ಮೊಸರನ್ನ ಮಾಡಿ ಸವಿದಿರುತ್ತೀರಿ. ಬೇಸಿಗೆಯ ಸಮಯದಲ್ಲಿ ಮಧ್ಯಾಹ್ನ ಇದನ್ನು ಸವಿಯುವುದು ಬಹಳ ಉತ್ತಮ. ತಣ್ಣಗಿರುವ ಹಾಗೆ ಕಡಿಮೆ ಮಸಾಲೆಗಳಿಂದ ತುಂಬಿರುವ ಕಾರಣ ದೇಹಕ್ಕೆ ಇದು ಅಮೃತದಂತಾಗಲಿದೆ. ಹಾಗೆ ಜೀರ್ಣಕ್ರಿಯೆಗೂ ಸಹ ಇದು ಬಹಳ ಉತ್ತಮ. ನಾವಿಂದು ಹೋಟೆಲ್ ಶೈಲಿಯಲ್ಲಿ ಹೊಸ ರೀತಿ ಮೊಸರನ್ನ ಮಾಡುವ ಕುರಿತು ಇಲ್ಲಿ ತಿಳಿದುಕೊಳ್ಳೋಣ.

ಮೊಸರನ್ನ ಹಲವು ಬಗೆಯಲ್ಲಿ ಮಾಡಬಹುದು. ಎಲ್ಲರು ಇಷ್ಟಪಡುವ ರೀತಿಯಲ್ಲಿ ಮೊಸರನ್ನ ಮಾಡಿದ್ರೆ ಮನೆ ಮಂದಿ ಎಲ್ಲರೂ ಸವಿಯಲು ಬಯಸುತ್ತಾರೆ. ಹಾಗೆ ಬೇಸಿಗೆಯಲ್ಲಿ ಖಾರವಾದ ಹಾಗೆ ಮಸಾಲೆ ಭರಿತ ಆಹಾರ ಸೇವನೆಗಿಂತಲೂ ಈ ರೀತಿ ತಿನಿಸುಗಳು ಬಹಳ ಇಷ್ಟವಾಗುತ್ತೆ. ಹಾಗಾದ್ರೆ ದೇಹಕ್ಕೆ ತಂಪು ತರುವಂತಹ ಹಾಗೆ ಬೇಸಿಗೆಯಲ್ಲಿ ದೇಹದ ದಣಿವು ನೀಗಿಸುವ ಈ ವಿಶೇಷ ಮೊಸರನ್ನ ಮಾಡುವುದು ಹೇಗೆ ಅನ್ನೋದನ್ನು ನಾವಿಲ್ಲಿ ತಿಳಿದುಕೊಳ್ಳೋಣ.
ಮೊಸರನ್ನ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
- ನವಣೆ
- ಮೊಸರು
- ಒಣ ಮೆಣಸು
- ಹಣ್ಣುಗಳು
- ಜೀರಿಗೆ
- ಸಾಸಿವೆ
- ತುರಿದ ಕ್ಯಾರೆಟ್
- ಎಣ್ಣೆ
- ಕರಿಬೇವು
- ಕಡಲೆ ಬೇಳೆ
- ಹಸಿ ಮೆಣಸು
- ಉದ್ದಿನ ಬೇಳೆ
- ತುರಿದ ಶುಂಠಿ
- ಉಪ್ಪು
ನವಣೆ ಮೊಸರನ್ನ ಮಾಡುವ ಸುಲಭದ ವಿಧಾನವೇನು?
ಮೊದಲು ಒಂದು ಕಪ್ ನವಣೆಯನ್ನು ಬೌಲ್ಗೆ ಹಾಕಿ ನೀರುಹಾಕಿ ಚೆನ್ನಾಗಿ ತೊಳೆದುಕೊಳ್ಳಿ. ಈಗ ತೊಳೆದ ನವಣೆಯನ್ನು ಕುಕ್ಕರ್ಗೆ ಹಾಕಿ ಎರಡರಷ್ಟು ನೀರು ಹಾಕಿ 2 ಸೀಟಿ ಹೊಡೆಯಲು ಬಿಡಿ. ಇದು ಉದುರು ಉದುರಾಗಿ ಬರಲಿದೆ. ಚೆನ್ನಾಗಿ ಬೆಂದ ಈ ನವಣೆಯನ್ನು ತೆಗೆದು ಒಂದು ಬೌಲ್ಗೆ ಹಾಕಿಕೊಳ್ಳಿ. ಈಗ ಇದಕ್ಕೆ ಮೊಸರನ್ನು ಹಾಕಿಕೊಳ್ಳಿ.
ನಿಮಗೆ ಎಷ್ಟು ಅಗತ್ಯವೋ ಅಷ್ಟು ಮೊಸರು ಹಾಕಿಕೊಳ್ಳಬಹುದು. ಹಾಗೆ ಇದಕ್ಕೆ ತುರಿದ ಶುಂಠಿ, ಕೊತ್ತಂಬರಿ ಸೊಪ್ಪು, ಉಪ್ಪು, ತುರಿದ ಕ್ಯಾರೆಟ್, ದಾಳಿಂಬೆ ಕಾಳುಗಳನ್ನು ಹಾಕಿ ಮಿಶ್ರಣ ಮಾಡಿಕೊಳ್ಳಿ. ಮೊಸರು ಕಡಿಮೆಯಾದರ ಮತ್ತೆ ಸೇರಿಸಿಕೊಳ್ಳಿ. ತೆಳುವಾಗಿ ಬೇಕಿದ್ದರೆ ನೀರು ಸಹ ಹಾಕಿ ಮಿಕ್ಸ್ ಮಾಡಬಹುದು. ಹೀಗೆ ಮಿಕ್ಸ್ ಮಾಡಿಕೊಂಡು ಇಟ್ಟುಕೊಳ್ಳಿ.
ಇದಕ್ಕೆ ಒಂದು ಒಗ್ಗರಣೆ ಮಾಡಿ. ಬಾಣಲೆ ಇಟ್ಟ ಅದಕ್ಕೆ ಎಣ್ಣೆ ಹಾಕಿ ಬಳಿಕ ಸಾಸಿವೆ, ಜೀರಿಗೆ, ಕಡಲೆ ಬೇಳೆ, ಹಸಿ ಮೆಣಸು, ಕರಿವೇವು, ಉದ್ದಿನ ಬೇಳೆ, ಇಂಗು ಹಾಕಿ ಒಗ್ಗರಣೆ ರೆಡಿ ಮಾಡಿಕೊಂಡು ಈ ಮೊಸರನ್ನಕ್ಕೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಹಾಗೆ ಕೊನೆಯಲ್ಲಿ ಹಸಿ ದ್ರಾಕ್ಷಿ ಇಡಿಯಾಗಿ ಅಥವಾ ಕತ್ತರಿಸಿಕೊಂಡು ಸಹ ಇದಕ್ಕೆ ಹಾಕಿಕೊಳ್ಳಬಹುದು.
ಇಷ್ಟಾದರೆ ನವಣೆ ಮೊಸರನ್ನ ಸಿದ್ದವಾಗುತ್ತೆ. ಇದು ದೇಹಕ್ಕೆ ಬಹಳ ತಂಪು ತರುವಂತಹ ತಿನಿಸು. ಹಾಗೆ ಆರೋಗ್ಯಕ್ಕೂ ಬಹಳ ಉತ್ತಮ. ತೂಕ ಇಳಿಸಲು, ಉರಿಯೂತ ಕಡಿಮೆ ಮಾಡಲು, ಕಣ್ಣು ಉರಿ, ಉತ್ತಮ ನಿದ್ರೆಗೂ ಸಹ ಇದು ಬೆಸ್ಟ್ ಆಗಿರಲಿದೆ.



Click it and Unblock the Notifications
