Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ?
ನಿತ್ಯವು ನಾವು ಹೊಸ ಹೊಸ ಟ್ರೆಂಟ್‌ಗಳನ್ನು ನೋಡುವ ಕಾಲವಿದು. ಜೆನ್ ಜಿ ಯುಗದಲ್ಲಿ ಒಂದೊಂದು ಟ್ರೆಂಡ್‌ಗಳು ಒಂದೊಂದು ರೀತಿಯ ಕ್ಷಣಗಳನ್ನು ತರುತ್ತಿವೆ. ಅದ್ರಲ್ಲೂ ವಿಶೇಷ ಎಂಬಂತೆ ಡೇಟಿಂಗ್ ಟ್ರೆಂಡ್‌ಗಳು ಎಲ್ಲರ ಗಮನ ಸೆಳೆಯುತ್ತಿವೆ. ಇತ್ತೀಚಿಗೆ ಡೇಟಿಂಗ್ ಆಪ್‌ಗಳ ಸಂಖ್ಯೆಯೂ ಹೆಚ್ಚಾಗುತ್ತಿದ್ದು, ಅವರ ಜೋಡಿಗಳನ್ನು ಹುಡುಕಿ ಡೇಟ್ ಸಂಸ್ಕೃತಿಗೆ ಮಾರುಹೋಗುತ್ತಿರುವುದು ನೋಡಬಹುದು.
ಆದ್ರೆ ಸಿಂಗಲ್ ಆಗಿದ್ದೂ ಸೋಲೋ ಡೇಟ್ ಬಗ್ಗೆ ಕೇಳಿದ್ದೀರಾ? ಹೌದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕೇಳಿಬರುತ್ತಿರುವ ಒಂದು ಹೊಸ ರೀತಿಯ ಟ್ರೆಂಡ್ ಇದು. ಸೋಲೋ ಡೇಟ್‌ನಲ್ಲಿ ಏಕಾಂಗಿಯಾಗಿರುವುದು, ಒಬ್ಬರೇ ಸುತ್ತಾಡುವುದು. ಮೊದಲೆಲ್ಲ ಸಿನಿಮಾ, ಹೋಟೆಲ್, ಪ್ರವಾಸಿ ಸ್ಥಳಕ್ಕೆ ತಮ್ಮಿಷ್ಟದ ಹುಡುಗ ಅಥವಾ ಹುಡುಗಿಯೊಂದಿಗೆ ಹೋಗುತ್ತಿದ್ದ ಟ್ರೆಂಡ್ ಈಗ ಬದಲಾಗಿ ಸೋಲೋ ಡೇಟ್ ಎಂಬ ಹೊಸ ರೂಪ ಪಡೆದಿದೆ.

ಹೌದು ಇತ್ತೀಚಿಗೆ ಒಬ್ಬಂಟಿಯಾಗಿ ಓಡಾಡುವುದು, ಪ್ರವಾಸ, ವಾಸಿಸುವುದು ಟ್ರೆಂಡ್ ಆಗಿದೆ. ಹಾಗೆ ಈ ಸೋಲೋ ಡೇಟ್ ಕೂಡ ಹೊಸ ಯುಗದ ಟ್ರೆಂಡ್ ಇನ್ನು ಈ ಸೋಲೋ ಡೇಟ್‌ನಲ್ಲಿ ಹಲವು ರೀತಿಯ ಪ್ರಯೋಜನವಿದೆ. ಸೋಲೋ ಡೇಟ್ ಮಾಡುವುದು ನಿಮ್ಮ ಒಟ್ಟಾರೆ ಆರೋಗ್ಯಕ್ಕೆ ಬಹಳಷ್ಟು ಕೊಡುಗೆ ನೀಡಲಿದೆ ಎನ್ನಲಾಗಿದೆ. ಹಾಗಾದ್ರೆ ಇದರಿಂದ ಯಾವ ರೀತಿಯ ಲಾಭ ನೋಡಬಹುದು ಎಂಬುದನ್ನು ನಾವಿಲ್ಲಿ ತಿಳಿದುಕೊಳ್ಳೋಣ.
ಸೋಲೋ ಡೇಟ್‌ನಿಂದ ಆತ್ಮವಿಶ್ವಾಸ ಹೆಚ್ಚಾಗಲಿದೆ
ಒಂಟಿಯಾಗಿ ಹೊರಗೆ ಹೋಗುವುದು ಹಾಗೆ ಒಂಟಿಯಾಗಿ ಹೊಸ ಸ್ಥಳಗಳಿಗೆ ಭೇಟಿ ನೀಡುವುದು ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಲು ಕಾರಣವಾಗಲಿದೆ. ಇದು ಯಾವುದೇ ವಿಚಾರಲ್ಲಿ ನಿಮಗೆ ಒಬ್ಬಂಟಿಯಾಗಿ ನಿರ್ಧಾರ ತೆಗೆದುಕೊಳ್ಳಲು ನೆರವಾಗುತ್ತದೆ. ಹಾಗೆ ಹೊಸ ಸ್ಥಳದಲ್ಲಿ ನೀವು ಪ್ರಯಾಣಿಸಲು ಇದು ಆತ್ಮವಿಶ್ವಾಸ ಹೆಚ್ಚಿಸುತ್ತದೆ.
ಒಂಟಿತನ ಕಾಡದಂತೆ ಮಾಡಲಿದೆ
ಸೋಲೋ ಡೇಟ್‌ನಿಂದಾಗಿ ನೀವು ಒಂಟಿತನದಿಂದ ಹೊರಬರುತ್ತೀರಿ. ಹಲವರಿಗೆ ಒಂಟಿತನ ಎಂಬುದು ದೊಡ್ಡ ಸಮಸ್ಯೆಗೆ ಕಾರಣವಾಗುತ್ತದೆ. ಆದ್ರೆ ನೀವು ಸೋಲೋ ಡೇಟ್ ಅನುಭವಿಸುವುದು ಒಂಟಿತನವನ್ನು ಎದುರಿಸಲು ಹಾಗೆ ಒಂಟಿತನದಲ್ಲೂ ಸಂತಸ ಅನುಭವಿಸುವುದು ಹೇಗೆ ಅನ್ನೋದನ್ನು ಕಲಿಸುತ್ತದೆ. ಇದರಿಂದ ನಿಮಗೆ ಜೊತೆಗಾರರು ಬೇಕು ಎಂಬ ಭಾವನೆ ಅಥವಾ ಹಪಾಹಪಿಯನ್ನು ದೂರಾಗಿಸಬಹುದು.
ಸಮಸ್ಯೆಗಳ ಎದುರಿಸಲು ನೆರವಾಗುತ್ತದೆ
ನೀವು ಎಂತಹ ದೊಡ್ಡ ಸಮಸ್ಯೆಗೆ ಒಳಗಾಗಿದ್ದರೂ ಅದನ್ನು ಎದುರಿಸಬೇಕಾದರೆ ಮತ್ತೊಬ್ಬರ ಸಹಾಯಕ್ಕೆ ಮುಂದಾಗುತ್ತಿರಬಹುದು, ಆದ್ರೆ ಸೋಲೋ ಡೇಟಿಂಗ್ ಎಂಬುದು ಈ ಎಲ್ಲಾ ವಿಚಾರದಲ್ಲಿ ನಿಮಗೆ ಸಹಕಾರಿಯಾಗಲಿದೆ. ಎಂತಹ ಸಮಸ್ಯೆಯನ್ನಾದರು ಒಂಟಿಯಾಗಿ ಎದುರಿಸಲು ಇದು ನಿಮ್ಮನ್ನು ತಯಾರು ಮಾಡುತ್ತದೆ. ಹಾಗೆ ವ್ಯಕ್ತಿಗಳಿಂದಲೇ ಸಮಸ್ಯೆಗಳು ಬರುವುದರಿಂದ ಒಂಟಿಯಾಗಿದ್ದರೆ ಈ ಸಮಸ್ಯೆಗಳು ದೂರಾಗಿಸಲಿದೆ.
ಮಾನಸಿಕ ಸಮಸ್ಯೆಗಳಿಗೆ ಕಡಿವಾಣ
ನೀವು ಒಂಟಿಯಾಗಿದ್ದರೆ ಈ ಸೋಲೋ ಡೇಟ್ ನಿಮ್ಮ ಮಾನಸಿಕ ಸ್ಥಿತಿ ಉತ್ತಮವಾಗಿಸಲು ನೆರವಾಗಲಿದೆ. ನಿಮ್ಮ ದೊಡ್ಡ ಮಾನಸಿಕ ಸಮಸ್ಯೆಗಳಿಂದ ಹಿಡಿದು ಸಣ್ಣ ಪುಟ್ಟ ಕಿರಿಕಿರಿಗಳಿಗೆ ಈ ಸೋಲೋ ಡೇಟ್ ಸೂಕ್ತ ಪರಿಹಾರ, ಯಾರ ಹಂಗಿಲ್ಲದೆ ಬದುಕು ಕಟ್ಟಿಕೊಳ್ಳುವ ದಾರಿ ಸುಗಮವಾಗಲಿದೆ. ಹಾಗೆ ನಿಮ್ಮ ಚಿಂತೆಗಳನ್ನು ದೂರಾಗಿಸಲು ಸಹ ಒಂಟಿಯಾಗಿ ಪ್ರವಾಸಕ್ಕೆ ಮುಂದಾಗುವುದು ಉತ್ತಮ ಎಂಬುದು ಇದರ ಉದ್ದೇಶವಾಗಿದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ಅದು ವಿಶ್ವಾಸಾರ್ಹವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications
