For Quick Alerts
ALLOW NOTIFICATIONS  
For Daily Alerts

ಒಪ್ಪೊತ್ತಿನ ಉಪವಾಸಕ್ಕೆ ಹುರುಳಿಕಾಳಿನ ಪರೋಟ

|
Kuttu Ka Parantha Recipe
ಹುರುಳಿಕಾಳು ಆರೋಗ್ಯಕ್ಕೆ ಹಿತ. ಅದರಲ್ಲೂ ನವರಾತ್ರಿ ದಿನ ಒಪ್ಪೊತ್ತಿನ ಉಪವಾಸಕ್ಕೆ ಹುರುಳಿಕಾಳಿನ ಈ ಪರೋಟ ಹೇಳಿ ಮಾಡಿಸಿದ್ದು. ಉಪವಾಸ ಕೈಗೊಂಡವರು ಈ ಹುರುಳಿಕಾಳಿನ ಪರೋಟವನ್ನು ಹೇಗೆ ಮಾಡುವುದು ಎಂದು ಇಲ್ಲಿ ತಿಳಿದುಕೊಳ್ಳಬಹುದು.

ಪರೋಟಾಗೆ ಬೇಕಾಗುವ ಪದಾರ್ಥ:

* 2 ಕಪ್ ಹುರುಳಿಕಾಳಿನ ಹಿಟ್ಟು
* 2 ಆಲೂಗಡ್ಡೆ (ಬೇಯಿಸಿ ಸಿಪ್ಪೆ ತೆಗೆದು ಕಲಸಿರಬೇಕು)
* 1 ಚಮಚ ಉಪ್ಪು
* ತುಪ್ಪ

ಹುರುಳಿಕಾಳಿನ ಪರೋಟ ಮಾಡುವ ವಿಧಾನ:
ಮೊದಲು ಚೆನ್ನಾಗಿ ಹಿಸುಕಿದ ಆಲೂಗಡ್ಡೆಯೊಂದಿಗೆ ಹುರುಳಿಕಾಳಿನ ಹಿಟ್ಟನ್ನು ಉಪ್ಪಿನೊಂದಿಗೆ ಕಲೆಸಿಕೊಳ್ಳಬೇಕು. ಅದಕ್ಕೆ ಅಗತ್ಯವಿದ್ದಷ್ಟು ನೀರನ್ನು ಬೆರೆಸಿ ಪರೋಟ ಹಿಟ್ಟಿನಂತೆ ಕಲೆಸಿ 30 ನಿಮಿಷ ಹಾಗೆ ಇಡಬೇಕು. 30 ನಿಮಿಷದ ನಂತರ ಹಿಟ್ಟಿನಿಂದ ಚಿಕ್ಕ ಚಿಕ್ಕ ಉಂಡೆಗಳನ್ನು ಮಾಡಿಕೊಂಡು ಪರೋಟದಂತೆ ಒತ್ತಿಕೊಳ್ಳಬೇಕು.

ತವೆಯನ್ನು ಬಿಸಿ ಮಾಡಿ ಪರೋಟ ಹಾಕಿ ಸುತ್ತಲೂ ತುಪ್ಪ ಹಾಕಬೇಕು. ಅದು ಸ್ವಲ್ಪ ಕೆಂಪಗಾಗುವ ತನಕ ಬೇಯಿಸಿ ಮಗುಚಬೇಕು. ಹೀಗೆ ಎರಡೂ ಕಡೆ ಪರೋಟ ಬೆಂದ ನಂತರ ತವೆಯಿಂದ ಇಳಿಸಿದರೆ ಹುರುಳಿಕಾಯಿ-ಆಲೂ ಪರೋಟ ತಿನ್ನಲು ಸಿದ್ಧವಾಗಿರುತ್ತೆ.

English summary

Kuttu Ka Parantha Recipe | Kuttu Potato Parantha for Navratri Fasting | ಹುರುಳಿಕಾಳಿನ ಪರೋಟ ರೆಸಿಪಿ | ನವರಾತ್ರಿ ಉಪವಾಸಕ್ಕೆ ಹುರುಳಿಕಾಳು ಆಲೂ ಪರೋಟ ರೆಸಿಪಿ

During the Navratri fasting, people eat one meal in a day and also the Navratri fast recipes are strictly vegetarian. Kuttu ka parantha is an easy to make Navratri fast recipe made with boiled potatoes. Take a look to know how to go through this kuttu ka parantha recipe.
Story first published: Wednesday, September 28, 2011, 13:14 [IST]
X
Desktop Bottom Promotion