For Quick Alerts
ALLOW NOTIFICATIONS  
For Daily Alerts

ಸುಲಭವಾಗಿ ರೆಡಿಯಾಗುತ್ತೆ ಕಡಲೆ ಕಾಳಿನ ಕರಿ

|
Kala Chana Curry
ಕಡಲೆ ಕಾಳನ್ನು ಅನೇಕ ಖಾದ್ಯಗಳಿಗೆ ಬಳಸಲಾಗುತ್ತೆ. ಮಸಾಲೆ ಬೆರೆಸಿ ಕಡಲೆ ಕಾಳಿನ ಗೊಜ್ಜು ತಯಾರಿಸಿದರೆ ತಿನ್ನಲು ತುಂಬಾ ರುಚಿಕರ. ಥಟ್ ಅಂತ ರೆಡಿಯಾಗುವ ಈ ಕಡಲೆ ಕಾಳಿನ ಗೊಜ್ಜನ್ನು ಹೀಗೆ ತಯಾರಿಸಿ ಸವಿಯಿರಿ.

ಬೇಕಾಗುವ ಪದಾರ್ಥಗಳು:
* 1 ಕಪ್ ಕಡಲೆಕಾಳು
* 1/2 ಚಮಚ ಜೀರಿಗೆ, 1/2 ಚಮಚ ಸಾಸಿವೆ
* 2-4 ಕತ್ತರಿಸಿದ ಹಸಿರು ಮೆಣಸಿನ ಕಾಯಿ
* ಕೊತ್ತಂಬರಿ, ಕರಿಬೇವು
* 1/2 ಚಮಚ ಕೆಂಪು ಮೆಣಸಿನ ಪುಡಿ
* ಉಪ್ಪು, ಎಣ್ಣೆ, ಏಲಕ್ಕಿ ಪುಡಿ
* ಟೊಮೆಟೊ ಪೇಸ್ಟ್
* ಸ್ವಲ್ಪ ಗರಂ ಮಸಾಲ

ಕಡಲೆ ಕಾಳಿನ ಗೊಜ್ಜು ಮಾಡುವುದು ಹೀಗೆ:

ಹಿಂದಿನ ರಾತ್ರಿಯೇ ಕಡಲೆ ಕಾಳನ್ನು ನೆನೆಸಿರಬೇಕು. ಕನಿಷ್ಠ 6 ಗಂಟೆಯಾದರೂ ನೆನೆಸಿರಬೇಕು. ಅದನ್ನು ಕುಕ್ಕರ್ ನಲ್ಲಿ ಬೇಯಿಸಿ ನೀರನ್ನು ಬೆಸೆದು ಒಂದೆಡೆ ಇಡಬೇಕು.

ಬಾಣಲೆಯಲ್ಲಿ ಎಣ್ಣೆ ಕಾಯಿಸಿ ಅದಕ್ಕೆ ಜೀರಿಗೆ, ಸಾಸಿವೆ ಹಾಕಿ ಅದು ಸಿಡಿಯುತ್ತಿದ್ದಂತೆ ಕರಿಬೇವು ಹಾಕಿ ಕತ್ತರಿಸಿದ ಹಸಿರು ಮೆಣಸಿನ ಕಾಯಿ ಬೆರೆಸಿ ತಿರುಗಿಸಬೇಕು. ನಂತರ ಉಪ್ಪು, ಕೊತ್ತಂಬರಿ, ಕೆಂಪು ಮೆಣಸಿನ ಪುಡಿ ಬೆರೆಸಿ ಚೆನ್ನಾಗಿ ತಿರುಗಿಸಬೇಕು.

ನಂತರ ಇದಕ್ಕೆ ಟೊಮೆಟೊ ಪೇಸ್ಟ್ ಹಾಕಿ ನೀರು ಹಾಕಿ ಸ್ವಲ್ಪ ಗಟ್ಟಿಯಾಗುವವರೆಗೂ ತಿರುಗಿಸುತ್ತಿರಬೇಕು. ಆಮೇಲೆ ಬೇಯಿಸಿದ ಕಡಲೆ ಕಾಳನ್ನು ಸೇರಿಸಿ ಗರಂ ಮಸಾಲೆ ಮತ್ತು ಏಲಕ್ಕಿ ಪುಡಿ ಹಾಕಿ 5-6 ನಿಮಿಷ ಚೆನ್ನಾಗಿ ಬೇಯಿಸಿದರೆ ಕಡಲೆ ಕಾಳಿನ ಗೊಜ್ಜು ತಿನ್ನಲು ರೆಡಿಯಾಗಿರುತ್ತೆ.

English summary

Kala Chana Recipe | Kala Chana Curry | ಕಡಲೆಕಾಳಿನ ರೆಸಿಪಿ | ಕಡಲೆ ಕಾಳಿನ ಗೊಜ್ಜು ಮಾಡುವ ವಿಧಾನ

There are different ways to make kala chana recipe but lets check out the simplest ways to cook kala chana curry.
Story first published: Monday, October 10, 2011, 10:36 [IST]
X
Desktop Bottom Promotion