For Quick Alerts
ALLOW NOTIFICATIONS  
For Daily Alerts

ವಿಶ್ವದಲ್ಲಿನ ತುಂಬಾ ಅಪಾಯಕಾರಿ ಪ್ರಾಣಿಗಳು

|

ವಿಶ್ವದಲ್ಲಿನ ಅತೀ ಅಪಾಯಕಾರಿ ಪ್ರಾಣಿಯ ಬಗ್ಗೆ ನಿಮಗೆ ತಿಳಿದಿದೆಯಾ? ಯಾವುದೇ ರೀತಿಯ ಭೀತಿ ಮೂಡಿಸುವ ಘಟನೆ ಅಥವಾ ವಿದ್ಯಮಾನಗಳು ಆಗುವ ತನಕ ಜನರು ಇಂತಹ ವಿಚಾರಗಳನ್ನು ಸಂಪೂರ್ಣವಾಗಿ ಕಡೆಗಣಿಸುವರು. ವಿಶ್ವದಲ್ಲಿ ತುಂಬಾ ಅಪಾಯಕಾರಿ ಆಗಿರುವಂತಹ ಕೆಲವೊಂದು ಪ್ರಾಣಿಗಳ ಬಗ್ಗೆ ಈ ಲೇಖನದಲ್ಲಿ ನಾವು ನಿಮಗೆ ತಿಳಿಸಿಕೊಡಲಿದ್ದೇವೆ.

ಈ ಪ್ರಾಣಿಗಳು ನಿಮಗೆ ಆರಂಭದಲ್ಲಿ ತುಂಬಾ ಅಪಾಯಕಾರಿ ಅಥವಾ ಹಾನಿಕರ ಎಂದು ಅನಿಸದು. ಆದರೆ ಅವುಗಳಲ್ಲಿ ಇರುವಂತಹ ಅದ್ಭುತವಾಗಿರುವ ಶಕ್ತಿಯು ಆ ಪ್ರಾಣಿಗಳನ್ನು ತುಂಬಾ ಅಪಾಯಕಾರಿ ಎಂದು ಪರಿಗಣಿಸಲಾಗುತ್ತದೆ. ಈ ಪಟ್ಟಿಯು ನಿಮಗೆ ತುಂಬಾ ಅಚ್ಚರಿ ಉಂಟು ಮಾಡುವುದು ಖಚಿತ. ಯಾಕೆಂದರೆ ಮನುಷ್ಯನು ಈ ಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದುಕೊಂಡಿದ್ದಾನೆ. ಈ ಪಟ್ಟಿಯಲ್ಲಿ ಇರುವ ಪ್ರಾಣಿಗಳು ಯಾವುದು ಎಂದು ನೀವು ತಿಳಿಯಿರಿ.

ಮನುಷ್ಯ!

ಮನುಷ್ಯ!

ಇದು ನಿಮಗೆ ಅಚ್ಚರಿ ಮೂಡಿಸಬಹುದು. ಆದರೆ ನಾವು ತುಂಬಾ ಅಪಾಯಕಾರಿ ಪ್ರಾಣಿ ಎಂದು ಪರಿಗಣಿಸಲಾಗಿದೆ. ಕುತಂತ್ರದ ಗುಣಲಕ್ಷಣವು ನಮಗೆ ಆಹಾರ ಸರಪಳಿಯಲ್ಲಿ ಮೇಲಕ್ಕೆ ಏರಲು ಅವಕಾಶ ಮಾಡಿಕೊಟ್ಟಿದೆ ಮತ್ತು ಉಳಿವಿನ ವಿಚಾರಕ್ಕೆ ಬಂದರೆ ಆಗ ನಾವು ತುಂಬಾ ಮುಂದಿರುತ್ತೇವೆ. ಆಯುಧಗಳನ್ನು ಬಳಸುವುದು ಕೂಡ ನಮಗೆ ಬೇರೆಯವರಿಗಿಂತ ಹೆಚ್ಚಿನ ಮೇಲುಗೈ ಒದಗಿಸಿಕೊಡುವುದು.

ಕತ್ತೆಕಿರುಬ

ಕತ್ತೆಕಿರುಬ

ಕತ್ತೆಕಿರುಬದ ಮುಖವು ಯಾವಾಗಲು ವಿಲಕ್ಷಣ ನಗುವಿನಂತೆ ಕಾಣುವುದು. ಯಾಕೆಂದರೆ ಇವುಗಳು ಸತ್ತಿರುವ ಪ್ರಾಣಿಗಳನ್ನು ತಿನ್ನುವುದು. ಆದರೆ ಹಸಿವಾದ ಸಮಯದಲ್ಲಿ ಇವುಗಳು ಬೇಟೆಯಾಡುತ್ತವೆ. ಮನುಷ್ಯನ ಮೃತದೇಹಗಳು ಬಯಲಿನಲ್ಲಿ ಸಿಕ್ಕಿದ ವೇಳೆ ಮನುಷ್ಯನ ಮಾಂಸವನ್ನು ಕೂಡ ಇವು ತಿನ್ನುತ್ತವೆ. ಇವುಗಳು ತುಂಬಾ ಅಪಾಯಕಾರಿ ಕೊಲೆಗಾರರು, ಯಾಕೆಂದರೆ ಇವುಗಳ ಕಡಿತವು ಅಷ್ಟು ಭಯಾನಕವಾಗಿ ಇರುತ್ತದೆ. ಇವುಗಳು ಸಾಮಾನ್ಯವಾಗಿ ತುಂಬಾ ಆಕ್ರಮಣಕಾರಿ ಆಗಿರುತ್ತದೆ.

ಚಿಪ್ಪು ಬಸವನ ಹುಳು

ಚಿಪ್ಪು ಬಸವನ ಹುಳು

ಚಿಪ್ಪು ಬಸವನ ಹುಳು ಸಮುದ್ರಕ್ಕಿಂತ ಹೆಚ್ಚಾಗಿ ಸಮುದ್ರ ತೀರದಲ್ಲಿ ವಾಸ ಮಾಡುತ್ತವೆ. ಇದರ ಒಂದು ಹನಿ ವಿಷವು 20 ಮಂದಿಯನ್ನು ಸುಲಭವಾಗಿ ಕೊಲ್ಲಲು ಸಾಕು ಎಂದು ನಂಬಲಾಗಿದೆ. ಇನ್ನು ವಿಚಿತ್ರವೆಂದರೆ ಇದಕ್ಕೆ ಯಾವುದೇ ರೀತಿಯ ಚಿಕಿತ್ಸೆಯು ಇಲ್ಲ.

ಬಾಕ್ಸ್ ಜೆಲ್ಲಿಫಿಶ್

ಬಾಕ್ಸ್ ಜೆಲ್ಲಿಫಿಶ್

ಸಮುದ್ರದಲ್ಲಿ ಇರುವಂತಹ ಮತ್ತೊಂದು ಅಪಾಯಕಾರಿ ಜೀವಿ ಎಂದರೆ ಅದು ಜೆಲ್ಲಿ ಫಿಶ್. ಬಾಕ್ಸ್ ಜೆಲ್ಲಿಫಿಶ್ ನ ಕಡಿತದಿಂದ ನೀವು ಒಂದು ಸಲ ಪಾರಾದರೂ ಅದರ ನೋವಿನಿಂದ ತುಂಬಾ ದಿನಗಳ ತನಕ ತೊಂದರೆ ಎದುರಿಸಬೇಕಾಗುತ್ತದೆ. ಆದರೆ ಬಾಕ್ಸ್ ಜೆಲ್ಲಿ ಫಿಶ್ ಕಡಿತದಿಂದಾಗಿ ಹಲವಾರು ಮಂದಿ ಸಾವನ್ನಪ್ಪಿರುವಂತಹ ಘಟನೆಯು ವರದಿಯಾಗಿದೆ.

ಕಾಡೆತ್ತು

ಕಾಡೆತ್ತು

ಕಾಡೆತ್ತು ಹೆಚ್ಚು ಅಪಾಯಕಾರಿ ಅಲ್ಲ ಎಂದು ಜನರು ಯಾವಾಗಲೂ ತಪ್ಪು ತಿಳಿದುಕೊಂಡಿದ್ದಾರೆ. ಆದರೆ ಇದು ನಿಜವಲ್ಲ. ಕಾಡೆತ್ತು ಗಂಟೆಗೆ 40 ಕಿ.ಮೀ. ವೇಗದಲ್ಲಿ ಓಡಬಲ್ಲದು ಮತ್ತು ಇದು ಸುಮಾರು 2 ಸಾವಿರ ಪೌಂಡ್ ತೂಕ ಹೊಂದಿದೆ. ಇವುಗಳು ತುಂಬಾ ಆಕ್ರಮಣಕಾರಿ ಮತ್ತು ಕೆಲವೇ ಸೆಕೆಂಡುಗಳಲ್ಲಿ ಇವು ತಮ್ಮ ಎದುರಾಳಿಗಳ ಮೇಲೆ ದಾಳಿ ಮಾಡುವುದು. ನೀವು ಆಲೋಚಿಸಲು ಸಾಧ್ಯವಾಗದೆ ಇರುವ ಸಮಯದಲ್ಲಿ ದಾಳಿ ನಡೆದಿರುವುದು.

ಸಿಯಾಫು ಇರುವೆಗಳು

ಸಿಯಾಫು ಇರುವೆಗಳು

ಈ ಇರುವೆಗಳನ್ನು ಚಲಿಸುವ ಇರುವೆಗಳು ಎಂದು ಕರೆಯಲಾಗುತ್ತದೆ. ಇವುಗಳು ಸುಮಾರು 50 ಮಿಲಿಯನ್ ಪ್ರಮಾಣದಲ್ಲಿ ಬರುತ್ತದೆ. ಇವುಗಳ ಕುಟುಂಬ ಸದಸ್ಯರನ್ನು ಕಣ್ತಪ್ಪಿನಿಂದ ಯಾರಾದರೂ ಕೊಂದರೆ ಆಗ ತಕ್ಷಣವೇ ಇವುಗಳು ದಾಳಿ ಮಾಡುತ್ತವೆ. ಇವುಗಳು ತುಂಬಾ ಹರಿತವಾದ ದವಡೆಯಿಂದ ತಪ್ಪಿಸಿಕೊಳ್ಳುವುದು ತುಂಬಾ ಕಷ್ಟದ ಕೆಲಸ. ಇವುಗಳು ತಮ್ಮಲ್ಲಿನ ದವಡೆಯನ್ನು ತುಂಬಾ ಹಾನಿಕಾರಕ ಆಯುಧವಾಗಿ ಬಳಸಿಕೊಳ್ಳುತ್ತದೆ. ಇದರಿಂದಾಗಿ ಇವುಗಳು ತುಂಬಾ ಅಪಾಯಕಾರಿ.

English summary

Most Dangerous Animals In The World

Have you ever wondered what are the most dangerous animals in the world? The kind of creatures that can cause serious damage might not look scary initially. For example, humans are also listed in the list of the most dangerous animals. But, give it a thought, there is no dangerous animal like humans as they can kill anything.
X
Desktop Bottom Promotion