For Quick Alerts
ALLOW NOTIFICATIONS  
For Daily Alerts

ಆಫೀಸ್‌ನ ವಾಸ್ತು ಸಲಹೆಗಳು: ಹೀಗೆ ಮಾಡಿದರೆ ಕೆಲಸದಲ್ಲಿ ಯಶಸ್ಸು -ಸಮೃದ್ಧಿ ದೊರೆಯುವುದು

|
ಆಫೀಸ್ ವಾಸ್ತು ಟಿಪ್ಸ್ | ಇವುಗಳನ್ನ ಪಾಲಿಸಿ ಯಶಸ್ಸು ನಿಮ್ಮದಾಗುತ್ತೆ | Oneindia Kannada

ಪ್ರತಿಯೊಬ್ಬರು ತಾವು ಕೈಗೊಂಡ ಕೆಲಸ ಕಾರ್ಯಗಳಲ್ಲಿ ಯಶಸ್ಸು ಹಾಗೂ ಲಾಭ ದೊರೆಯಬೇಕು ಎಂದು ಬಯಸುವುದು ಸಹಜ. ಆದರೆ ಕೆಲವೊಮ್ಮೆ ನಮ್ಮ ಸುತ್ತಲಿರುವ ನಕರಾತ್ಮಕ ಶಕ್ತಿ ಹಾಗೂ ವಾಸ್ತು ದೋಷಗಳಿಂದಾಗಿ ನಮ್ಮ ನಿರೀಕ್ಷೆಗೆ ತಕ್ಕಂತೆ ಲಾಭ ಅಥವಾ ಯಶಸ್ಸನ್ನು ಪಡೆದುಕೊಳ್ಳಲು ಸಾಧ್ಯವಾಗದೆ ಇರಬಹುದು. ಹಾಗಾಗಿ ಹಿಂದೂ ಧರ್ಮದಲ್ಲಿ ವಾಸ್ತು ಎನ್ನುವುದು ಬಹಳ ಪವಿತ್ರ ಹಾಗೂ ಪ್ರಮುಖ ಪಾತ್ರವನ್ನು ವಹಿಸುತ್ತದೆ.

ವ್ಯಕ್ತಿ ಹೊಸ ಕಟ್ಟಡ, ಮನೆ ಹಾಗೂ ಕಚೇರಿ ಯಾವುದೇ ಆಗಿರಲಿ ಎಲ್ಲವೂ ವಾಸ್ತು ಪ್ರಕಾರವಾಗಿ ಇರಬೇಕು. ಇಲ್ಲವಾದರೆ ಸಕಾರಾತ್ಮಕ ಶಕ್ತಿಯು ನಮ್ಮಿಂದ ದೂರ ಉಳಿದುಕೊಳ್ಳುವುದು. ಇಲ್ಲವೇ ಮನೆಯಲ್ಲಿ ಅನೇಕ ಕಷ್ಟಗಳು ತಲೆ ದೂರುವುದು. ಕಚೇರಿಗಳಲ್ಲಿ ಸೂಕ್ತ ಕೆಲಸಗಾರರು ದೊರೆಯದೆ ಇರಬಹುದು. ಅಧಿಕಾರಿಗಳು ಹಾಗೂ ಉದ್ಯೋಗಿಗಳ ನಡುವೆ ಜಗಳ ಸಂಭವಿಸಬಹುದು. ಕಿರಿಕಿರಿಯ ವಾತಾವರಣದಿಂದ ಕೆಲಸವು ನಿಗದಿತ ಸಮಯಕ್ಕೆ ಪೂರ್ಣಗೊಳ್ಳದೆ ಇರಬಹುದು. ಲಾಭವಿಲ್ಲದೆ ಕಚೇರಿಯನ್ನು ಮುಚ್ಚುವ ಪರಿಸ್ಥಿತಿಯು ಒದಗಿಬರಬಹುದು.

Vastu Tips For Office

ನಕಾರಾತ್ಮಕ ಶಕ್ತಿಯಿಂದ ಉದ್ಯಮವು ನಷ್ಟ ಅನುಭವಿಸಬಹುದು:

ಮನೆಯ ನಿರ್ಮಾಣದಲ್ಲಿ ಹೇಗೆ ವಾಸ್ತುವನ್ನು ಪ್ರಮುಖವಾಗಿ ಪರಿಗಣಿಸಲಾಗುವುದೋ ಹಾಗೆಯೇ ಕಚೇರಿಗಳಲ್ಲೂ ವಾಸ್ತುವು ಸೂಕ್ತವಾಗಿರಬೇಕು. ಇಲ್ಲವಾದರೆ ಅನೇಕ ಸಮಸ್ಯೆಗಳು ತಲೆದೂರುವುದು. ನಕರಾತ್ಮಕ ಶಕ್ತಿಯು ಹೆಚ್ಚುವುದರ ಜೊತೆಗೆ ಉದ್ಯೋಗ ಅಥವಾ ವ್ಯವಹಾರದಲ್ಲಿ ನಷ್ಟ ಅನುಭವಿಸಬೇಕಾಗುವುದು. ಅಲ್ಲದೆ ನಿರೀಕ್ಷೆಯಂತಹ ಯಶಸ್ಸನ್ನು ತಲುಪಲು ಸಾಧ್ಯವಾಗದೆ ಇರಬಹುದು. ವ್ಯವಹಾರವು ಉತ್ತಮ ರೀತಿಯಲ್ಲಿ ಚೇತರಿಕೆ ಕಾಣದೆ ಇರಬಹುದು. ಇಂತಹ ಸ್ಥಿತಿಯ ಹಿಂಭಾಗದಲ್ಲಿ ನಕಾರಾತ್ಮಕ ಶಕ್ತಿಯು ಕಾರ್ಯ ನಿರ್ವಹಿಸುತ್ತಿರುತ್ತದೆ ಎಂದು ಹೇಳಲಾಗುವುದು. ಅಂತಹ ದುಷ್ಟ ಶಕ್ತಿಯಿಂದ ವ್ಯವಹಾರ/ವ್ಯಾಪಾರವನ್ನು ರಕ್ಷಿಸಲು ಕೆಲವು ಪರಿಹಾರಗಳು ಇವೆ.

ಕೆಲವು ವಾಸ್ತು ನಿಯಮವನ್ನು ಅನುಸರಿಸುವುದರಿಂದ ಋಣಾತ್ಮಕಶಕ್ತಿಯಿಂದ ದೂರಸರಿಯಬಹುದು. ಜೊತೆಗೆ ವ್ಯಾಪಾರವು ಉತ್ತಮವಾಗುವುದು. ನಿಮಗೂ ಈ ವಿಚಾರದ ಬಗ್ಗೆ ಇನ್ನಷ್ಟು ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ಈ ಮುಂದೆ ನೀಡಿರುವ ವಾಸ್ತು ಸಲಹೆಯನ್ನು ಪರಿಗಣಿಸಿ...

ಈ ವಾಸ್ತು ಟಿಪ್ಸ್ ಬಳಸಿ ಶ್ರೀಮಂತಿಕೆ ನಿಮ್ಮದಾಗಿಸಿ

1. ಕಛೇರಿಗಳ ನಿರ್ಮಾಣಕ್ಕೆ ಇರುವ ಸ್ಥಳವು ಚದರ ಅಥವಾ ಆಯತಾಕಾರವಾಗಿರಬೇಕು. ಸಮ್ಮಿತಿ/ಸಮಾನತೆಯ ಸ್ಥಿತಿಯಲ್ಲಿ ಕುಳಿತುಕೊಳ್ಳುವ ವ್ಯಕ್ತಿಯ ಮನಸ್ಸಿನಲ್ಲಿ ಸಮತೋಲನ ಖಾತ್ರಿಯಾಗಿರುತ್ತದೆ. ಹಾಗಾಗಿ ಅನುಚಿತವಾದ ಸ್ಥಳಗಳ ಆಯ್ಕೆಯನ್ನು ಮಾಡುವುದನ್ನು ನಿಲ್ಲಿಸಿ.

2. ಕಚೇರಿಯ ಸ್ಥಳವು ಬೃಹತ್ ಚಟುವಟಿಕೆಗಳಿಂದ ಕೂಡಿರುವ ಸ್ಥಳದಲ್ಲಿ ಇರುವಂತೆ ನೋಡಿಕೊಳ್ಳಬೇಕು. ಏಕಾಂತ ಸ್ಥಳದಲ್ಲಿ ನೆಲಗೊಳ್ಳುವ ಕಚೇರಿಗಳು ಉತ್ತಮ ಲಾಭ ತಂದುಕೊಡದು ಎಂದು ಹೇಳಲಾಗುವುದು.

3. ನೈಋತ್ಯ ದಿಕ್ಕಿನಲ್ಲಿ ಕಚೇರಿಯನ್ನು ನಿರ್ಮಿಸಬೇಕು.

4. ಕಚೇರಿಯಲ್ಲಿ ಪ್ರವೇಶಿಸುವ ವ್ಯಕ್ತಿಯನ್ನು ಕಚೇರಿಯಲ್ಲಿ ಕುಳಿತಿರುವವರೆಲ್ಲರು ನೋಡದಂತೆ ಇರಬೇಕು. ಆ ರೀತಿಯಲ್ಲಿ ಪ್ರವೇಶ ಇರಬೇಕು.

5. ಕಚೇರಿಯ ಪ್ರವೇಶದ್ವಾರವು ಉತ್ತರದಿಕ್ಕಿಗೆ ಇರುವಂತೆ ನೋಡಿಕೊಳ್ಳಬೇಕು. ಈ ಬಗೆಯ ಪ್ರವೇಶದ ದಿಕ್ಕು ಕಚೇರಿಗಳಿಗೆ ಮಂಗಳಕರವಾದದ್ದು ಎಂದು ಹೇಳಲಾಗುವುದು.

6. ಕಚೇರಿಯಲ್ಲಿ ಜೋಡಿಸುವ ಮೇಜು ತುಂಬಾ ಉದ್ದವಾಗಿರಬಾರದು. ಅದು ಯೋಜನೆಗಳು ಅಥವಾ ಕೆಲಸದ ವಿಳಂಬಕ್ಕೆ ಕಾರಣವಾಗುವುದು. ಮೇಜಿನ ಆಕಾರ ಚದರ ಅಥವಾ ಆಯತ ಆಕಾರದಲ್ಲಿ ಇರಬೇಕು. ಇತರ ಆಕಾರಗಳು ಅನೇಕ ದೃಷ್ಟಿಕೋನಗಳನ್ನು ಸೃಷ್ಟಿಸುವುದು. ಜೊತೆಗೆ ಗೊಂದಲವನ್ನು ಸೃಷ್ಟಿಸಬಹುದು. ಅನಿಯಮಿತವಾದ ಆಕಾರವನ್ನು ಹೊಂದಬಾರದು. ಅಲ್ಲದೆ ಉದ್ದ ಮತ್ತು ಅಗಲದ ಅನುಪಾತವು 2:1 ಆಗಿರಬೇಕು. ಪ್ರಗತಿ ಸಾಧಿಸಲು ಇದು ಅತ್ಯಂತ ಮಂಗಳಕರವಾದ ಅನುಪಾತವಾಗಿರುತ್ತದೆ.

7. ಕಚೇರಿಯ ಹಿರಿಯಸಿಬ್ಬಂದಿಗಳು ದಕ್ಷಿಣ ಅಥವಾ ಪಶ್ಚಿಮ ಮುಖವಾಗಿ ಕುಳಿತುಕೊಳ್ಳಬೇಕು. ಪಶ್ಚಿಮ ದಿಕ್ಕಿಗೆ ಕುಳಿತು ಪೂರ್ವಕ್ಕೆ ಮುಖವಾಗಿ ಕುಳಿತುಕೊಳ್ಳಬೇಕು. ದಕ್ಷಿಣಕ್ಕೆ ಕುಳಿತು ಉತ್ತರ ದಿಕ್ಕಿಗೆ ಮುಖವಾಗಿ ಇರಬೇಕು.

8. ಉತ್ತರ ಭಾಗವನ್ನು ಕುಬೇರನ ಸ್ಥಾನ ಎನ್ನಲಾಗುವುದು. ಈ ಸ್ಥಳದಲ್ಲಿ ಬಾಗಿಲು ಇದ್ದರೆ ವ್ಯಾಪಾರ ಹಾಗೂ ವ್ಯವಹಾರಗಳು ಲಾಭದಿಂದ ಕೂಡಿರುತ್ತದೆ ಎನ್ನಲಾಗುವುದು. ಉದ್ಯೋಗವನ್ನು ಮಾಡುತ್ತಿದ್ದರೆ ಆ ಕಚೇರಿಯ ಬಾಗಿಲು ಪೂರ್ವ ದಿಕ್ಕಿನಲ್ಲಿ ಇದ್ದರೆ ಒಳ್ಳೆಯದು.

9. ಅದೇ ರೀತಿ ಪೂರ್ವ ಮತ್ತು ದಕ್ಷಿಣ ದಿಕ್ಕಿನಲ್ಲಿ ಕಿರಿಯ ಸಿಬ್ಬಂದಿಗಳು ಕುಳಿತುಕೊಳ್ಳಲು ಅತ್ಯಂತ ಮಂಗಳಕರವಾದದ್ದು ಎಂದು ಪರಿಗಣಿಸಲಾಗಿದೆ.

10. ಕಚೇರಿಯಲ್ಲಿ ಕುಳಿತು ಕೆಲಸ ಮಾಡುವವರು ಅವರ ಹಿಂದೆ ಯಾವುದೇ ಕಿಟಕಿ ಅಥವಾ ಬಾಗಿಲು ಇರಬಾರದು ಎನ್ನುವುದನ್ನು ಖಚಿತಪಡಿಸಿಕೊಳ್ಳಬೇಕು.

11. ಉತ್ತರ ಮುಖವಾಗಿ ಕುಳಿತುಕೊಳ್ಳುವಾಗ ಫೈಲ್, ಫೋಲ್ಡರ್ಸ್, ಕಂಪ್ಯೂಟರ್ ಹಾಗೂ ಇನ್ನಿತರ ಸಂಬಂಧಿತ ಸಂಗತಿಗಳು ನಿಮ್ಮ ಎಡ ಭಾಗದಲ್ಲಿ ಇರುವಂತೆ ನೋಡಿಕೊಳ್ಳಬೇಕು. ಪೂರ್ವಕ್ಕೆ ಮುಖವಾಗಿ ಕುಳಿತುಕೊಳ್ಳುವುದಾದರೆ ಸಾಮಾಗ್ರಿಗಳು ಬಲಭಾಗದಲ್ಲಿ ಇರುವಂತೆ ನೋಡಿಕೊಳ್ಳಬೇಕು.

12. ಅನೇಕರು ದೇವರ ಚಿತ್ರಗಳನ್ನು ಆಫೀಸ್‍ನಲ್ಲಿ ಇಟ್ಟು ಪೂಜೆ ಗೈಯುತ್ತಿರುತ್ತಾರೆ. ಇದು ಉಚಿತವಾದದ್ದಲ್ಲ. ಪೂಜಿಸುವುದಕ್ಕಾಗಿ ದೇವರ ವಿಗ್ರಹ ಹಾಗೂ ಫೋಟೋವನ್ನು ಪ್ರತ್ಯೇಕ ಸ್ಥಳದಲ್ಲಿ ಇಟ್ಟು ಆರಾಧಿಸಬೇಕು.

13. ಕೆಲಸ ಮಾಡುವ ಮೇಜಿನ ಮೇಲೆಯೇ ಊಟವನ್ನು ಮಾಡಬಾರದು. ಕೆಲಸಕ್ಕೆ ಮೀಸಲಿರುವ ಟೇಬಲ್ ಕೆಲಸಕ್ಕೆ ಮಾತ್ರ ಸೀಮಿತವಾಗಿರಬೇಕು.

14. ಕಚೇರಿಯಲ್ಲಿ ಎಲ್ಲವನ್ನೂ ಸೂಕ್ತ ರೀತಿಯಲ್ಲಿ ಆಯೋಜಿಸಿರಬೇಕು. ಅಸ್ತವ್ಯಸ್ತಗೊಂಡ ವಿಷಯಗಳಿಂದ ಮನಸ್ಸಿಗೆ ಇರಿಸುಮುರಿಸು ಉಂಟುಮಾಡುವುದು.

15. ಪಶ್ಚಿಮ ದಿಕ್ಕಿನ ಗೋಡೆಯ ಬಳಿ ಎಲ್ಲಾ ಬಗೆಯ ಫೈಲ್‍ಗಳನ್ನು ಇರಿಸಿಕೊಳ್ಳಲು ಪ್ರಯತ್ನಿಸಿ.

English summary

Vastu Tips for Office: tips for success-prosperity at work

The office must be in the Southwest direction. The plot should be square or rectangular. The table should either be square or rectangular in shape. The person sitting/occupying the main chair should not be directly visible from the outside. There should not be windows/doors behind the person. Make sure to sit facing the North or East direction.
Story first published: Thursday, August 30, 2018, 17:27 [IST]
X
Desktop Bottom Promotion