For Quick Alerts
ALLOW NOTIFICATIONS  
For Daily Alerts

ಈ ನಾಲ್ಕು ರಾಶಿಯವರು, ಒರಟು ಸ್ವಭಾವದವರು-ತುಂಬಾನೇ ವಾದ ಮಾಡುವವರು!

By Arshad
|

ಪ್ರತಿ ನಾಣ್ಯಕ್ಕೂ ಎರಡು ಬದಿಗಳಿರುವಂತೆ ಈ ಪ್ರಪಂಚದಲ್ಲಿಯೂ ಎರಡು ಬಗೆಯ ವ್ಯಕ್ತಿಗಳಿದ್ದಾರೆ. ಮೊದಲನೆಯ ಬಗೆ ಆಶಾವಾದಿಗಳಾಗಿದ್ದರೆ ಎರಡನೆಯವರು ನಿರಾಶಾವಾದಿಗಳು. ಆಶಾವಾದಿಗಳು ಸದಾ ಸಂತೋಷವಾಗಿದ್ದು ಇವರು ಪ್ರೀತಿಯನ್ನು ಹಂಚುತ್ತಾ, ಎಲ್ಲರೊಂದಿಗೆ ಸುಲಭವಾಗಿ ಬೆರೆಯುತ್ತಾರೆ. ಆದರೆ ವ್ಯತಿರಿಕ್ತವಾಗಿ ನಿರಾಶಾವಾದಿಗಳು ಪ್ರತಿಯೊಂದರಲ್ಲಿಯೂ ತಪ್ಪುಗಳನ್ನೇ ಹುಡುಕುತ್ತಾ ಯಾವ ಕೆಲಸವೂ ಸಾಧ್ಯವಾಗದು ಎಂಬ ಭಾವನೆಯನ್ನು ಹೊಂದಿರುತ್ತಾರೆ ಹಾಗೂ ಎಲ್ಲರೊಂದಿಗೆ ಇವರು ಸುಲಭವಾಗಿ ಬೆರೆಯಲಾರರು.

ಕೆಲವು ರಾಶಿಗಳಲ್ಲಿ ಹುಟ್ಟಿದ ಎಲ್ಲಾ ವ್ಯಕ್ತಿಗಳು ನಿರಾಶಾವಾದಿಗಳಲ್ಲ. ಆದರೆ ಈ ರಾಶಿಯ ಗುಣಲಕ್ಷಣಗಳು ನಿರಾಶಾವಾದವನ್ನು ಬಿಂಬಿಸುತ್ತವೆ. ವಾಸ್ತವದಲ್ಲಿ ಈ ವ್ಯಕ್ತಿಗಳು ಹೊರಗಿನಿಂದ ದೃಢ ಹಾಗೂ ಹೊರಗಿನಿಂದ ಋಣಾತ್ಮಕ ಭಾವನೆಯನ್ನು ಪ್ರಕಟಿಸುವವರಾಗಿದ್ದರೂ ಸ್ವಭಾವತಃ ಒಳ್ಳೆಯವರೂ, ನೇರ ವ್ಯಕ್ತಿತ್ವದವರೂ ಹಾಗೂ ಮೋಸ ಮಾಡದವರೂ ಆಗಿರುತ್ತಾರೆ.

ಈ ರಾಶಿಗೆ ಸೇರಿದ ಕೆಲವು ವ್ಯಕ್ತಿಗಳಿಗೆ ಇಲ್ಲಿ ನೀಡಿರುವ ಮಾಹಿತಿಗಳು ನಿರಾಶೆ ಮೂಡಿಸಬಹುದು. ಆದರೆ ಜ್ಯೋತಿಷ್ಯಾಸ್ತ್ರ ವಿವರಿಸಿದ ವಿಷಯಗಳನ್ನು ಆಧರಿಸಿ ಈ ಮಾಹಿತಿಗಳನ್ನು ಸಂಗ್ರಹಿಸಲಾಗಿದೆ. ಜನ್ಮತಃ ಕೆಲವು ರಾಶಿಗಳ ವ್ಯಕ್ತಿಗಳು ಹಠವಾದಿಗಳೂ ಚಿಕ್ಕ ಚಿಕ್ಕ ವಿಷಯಕ್ಕೂ ಸಿಟ್ಟು ಮಾಡಿಕೊಳ್ಳುವವರೂ ಆಗಿರುತ್ತಾರೆ. ಈ ವ್ಯಕ್ತಿಗಳೊಂದಿಗೆ ನೀವು ಒಡನಾಟ ಹೊಂದಿದ್ದರೆ ಇವರಿಂದ ನಿಮಗಾಗುವ ಕಷ್ಟಗಳಿಗೆ ನಾವು ವಿಷಾದಿಸುತ್ತೇವೆ. ಆದರೆ ವಾಸ್ತವದಲ್ಲಿ ಈ ವ್ಯಕ್ತಿಗಳು ತೋರಿದಷ್ಟು ಕಠಿಣರಲ್ಲ ಹಾಗೂ ಇವರು ಕನ್ನಡಿಯ ಮಿಥ್ಯೆಯನ್ನು ನಿವಾರಿಸಿ ಮೋಸವನ್ನು ತೋರಿಸಿ ವಾಸ್ತವದ ಚಿತ್ರಣವನ್ನು ನೀಡುವವರಾಗಿರುತ್ತಾರೆ

ನಿರಾಶಾವಾದಿಗಳು ವಿಶ್ಲೇಷಕರೂ, ಸಾಕಷ್ಟು ತಾರ್ಕಿಕವಾಗಿ ಯೋಚಿಸುವವರೂ ಹಾಗೂ ಗಂಭೀರ ಚಿಂತಕರೂ ಆಗಿರುತ್ತಾರೆ. ಪ್ರತಿ ಸಂದರ್ಭದಲ್ಲಿಯೂ ಇವರು ಇತರರಿಗಿಂತ ಎರಡು ಹೆಜ್ಜೆ ಮುಂದೆಯೇ ಯೋಚಿಸುತ್ತಾರೆ. ಇವರು ಸದಾ ಎದುರಾಗುವ ಕಷ್ಟಗಳನ್ನು ಊಹಿಸಿ ಇದಕ್ಕೆ ತಯಾರಿ ನಡೆಸಿರುತ್ತಾರೆ. ವಾಸ್ತವದಲ್ಲಿ ಹೇಗಿರಬೇಕು ಎಂಬುದಕ್ಕೆ ಈ ವ್ಯಕ್ತಿಗಳನ್ನು ಧಾರಾಳವಾಗಿ ನಂಬಬಹುದು. ಇದಕ್ಕೂ ಹೊರತಾಗಿ ನಿಮ್ಮ ಪ್ರಯತ್ನದಿಂದ ನೀವು ಈ ವ್ಯಕ್ತಿಗಳನ್ನು ಮೆಚ್ಚಿಸಲು ಯತ್ನಿಸಿದರೆ ನಿಮಗೆ ಶುಭ ಹಾರೈಕೆಗಳು. ಬನ್ನಿ, ಈ ರಾಶಿಗಳು ಯಾವುವು ಎಂಬುದನ್ನು ನೋಡೋಣ...

ಮಿಥುನ

ಮಿಥುನ

• ಈ ವ್ಯಕ್ತಿಗಳು ಜನ್ಮತಃ ಟೀಕಾಕಾರರಾಗಿರುತ್ತಾರೆ. ಇವರು ಹಾಸ್ಯಮನೋಭಾವವನ್ನು ಹೊಂದಿದ್ದು ನೀವೆಷ್ಟೇ ಕಷ್ಟಪಟ್ಟರೂ ಇವರ ಮನಸ್ಸನ್ನು ಬದಲಿಸಲು ಸಾಧ್ಯವಿಲ್ಲ

• ಈ ವ್ಯಕ್ತಿಗಳು ತಾವು ಇಷ್ಟಪಡುವ ವಿಷಯ ಅಥವಾ ವಸ್ತುಗಳನ್ನು ಆಯ್ದುಕೊಳ್ಳಲು ಬಹಳ ಹೆಚ್ಚು ಕಷ್ಟಪಡುತ್ತಾರೆ. ಆದರೆ ಇವರು ತಮ್ಮ ನಿರ್ಧಾರಗಳನ್ನು ವಾಸ್ತವಾಂಶಗಳನ್ನು ಆಧರಿಸಿ ಕೈಗೊಳ್ಳುತ್ತಾರೆ.

• ಇವರು ಸದಾ ತಾವೇ ಸರಿ ಎಂಬ ಭಾವನೆಯನ್ನು ಹೊಂದಿರುತ್ತಾರೆ. ಹಾಗೂ ಇತರ ಎಲ್ಲಾ ವಿಷಯಗಳಲ್ಲಿ ತಪ್ಪನ್ನು ಹುಡುಕುತ್ತಾರೆ. ಈ ವ್ಯಕ್ತಿಗಳು ಅತಿ ಚಿಕ್ಕ ಗುರಿಯನ್ನು ಹೊಂದಿರುತ್ತಾರೆ ಹಾಗೂ ಬಳಿಕ ನಿರಾಶೆಯನ್ನು ಅನುಭವಿಸುತ್ತಾರೆ.

ಮಿಥುನ

ಮಿಥುನ

• ಈ ವ್ಯಕ್ತಿಗಳನ್ನು ಸುಲಭವಾಗಿ ಮೆಚ್ಚಿಸಲು ಸಾಧ್ಯವಿಲ್ಲ, ಇವರು ತಮ್ಮ ವಾದ ಸರಿ, ಇತರರ ವಾದ ತಪ್ಪು ಎಂದು ಸಾಧಿಸಲು ಹಲವಾರು ನೆಪಗಳನ್ನೂ ನೀಡುತ್ತಾರೆ.

• ಈ ರಾಶಿಯ ಗುಣದಂತೆ ಈ ವ್ಯಕ್ತಿಗಳು ತಾವೇ ಸರಿ ಎಂಬ ಮೊಂಡುವಾದ ಹೂಡುವವರಾಗಿರುತ್ತಾರೆ. ಹಾಗಾಗಿಈ ವ್ಯಕ್ತಿಗಳೊಂದಿಗೆ ಚರ್ಜಿಸುವಾಗ ವಾದಿಸಿ ಗೆಲ್ಲಬಲ್ಲಿರಿ ಎಂಬುದನ್ನು ಮರೆತುಬಿಡಿ. ಮೌನ ವಹಿಸಿದಷ್ಟೂ ನಿಮಗೇ ಕ್ಷೇಮ.

ಕುಂಭ

ಕುಂಭ

• ಕುಂಭ ರಾಶಿಯವರು ಪ್ರತಿ ವಿಷಯದಲ್ಲಿಯೂ ಕೊಂಕು ಮಾತಾಡುವವರು ಹಾಗೂ ತಪ್ಪು ಹುಡುಕುವವರಾಗಿದ್ದರೂ ತಮ್ಮ ಜೀವನಕ್ಕೆ ಸಂಬಂಧಿಸಿದ ವಿಷಯಗಳಿಗೆ ಮಾತ್ರ ಈ ವಾದವನ್ನು ಅನ್ವಯಿಸುತ್ತಾರೆ (ಸಧ್ಯ ಬಚಾವಾದೆವು)

• ಇವರು ಸದಾ ತಮ್ಮನ್ನು ತಾವು ಉತ್ತಮವಾಗಿಸಲು ಯತ್ನಿಸುತ್ತಿರುತ್ತಾರೆ

• ಒಂದು ವೇಳೆ ಈ ರಾಶಿಯ ವ್ಯಕ್ತಿ ನಿಮ್ಮ ಸ್ನೇಹಿತರಾಗಿದ್ದರೆ ಓರ್ವ ವ್ಯಕ್ತಿ ಎಷ್ಟು ಹೆಚ್ಚು ಪರಿಪೂರ್ಣತೆಯಿಂದಿರಲು ಸಾದ್ಯ ಹಾಗೂ ಇವರು ಇತರರು ಹೇಗಿರಬೇಕೆಂದು ಬಯಸಬಹುದು ಎಂಬುದನ್ನು ಅರಿಯುತ್ತೀರಿ.

ಕುಂಭ

ಕುಂಭ

• ಇವರಿಗೆ ಎಲ್ಲವೂ ಸುಲಭವಾಗಿ ಬರಬೇಕು ಹಾಗೂ ತಮಗೆ ಬೇಕಾದುದೆಲ್ಲಾ ಒಂದು ವೇಳೆ ಬರದೇ ಇದ್ದರೆ ಇವರು ತಾಳ್ಮೆ ಕಳೆದುಕೊಳ್ಳುತ್ತಾರೆ. ತಮಗೆ ಬೇಕಾದುದು ಸಿಗದಿದ್ದಾಗ ಇವರು ವಿಧಿಯನ್ನು ಹಳಿಯುತ್ತಾರೆ.

• ಇವರು ಇತರರ ಕುಂದು, ತಪ್ಪುಗಳನ್ನು ಹುಡುಕಿ ಕೊಡಲು ಅತ್ಯಂತ ಸಮರ್ಥರಾಗಿರುತ್ತಾರೆ.

ಕನ್ಯಾ

ಕನ್ಯಾ

• ಈ ರಾಶಿಗೆ ಸೇರಿದ ವ್ಯಕ್ತಿಗಳು ತಮ್ಮ ಸುತ್ತಮುತ್ತಲ ಎಲ್ಲದರಲ್ಲಿಯೂ ತಪ್ಪುಗಳನ್ನೇ ಕಾಣುವುದು ಪ್ರಮುಖ ಲಕ್ಷಣವಾಗಿದೆ. ಇವರು ತಮ್ಮಲ್ಲಿಯೂ ಹಾಗೂ ಇತರರಲ್ಲಿ ಕಾಣಬರುವ ತಪ್ಪುಗಳಿಗೇ ಹೆಚ್ಚಿನ ಮಹತ್ವ ನೀಡುತ್ತಾರೆ

• ಸಾಮಾನ್ಯವಾಗಿ ಈ ವ್ಯಕ್ತಿಗಳು ಸದಾ ತಾವು ನಿರೀಕ್ಷಿಸಿದ್ದ ಮಟ್ಟದಲ್ಲಿ ತಮ್ಮ ಜೀವನ ನಡೆಯುತ್ತಿಲ್ಲ, ಜೀವನದ ಎಲ್ಲಾ ನಷ್ಟಗಳು ತಮಗೇ ಆಗುತ್ತಿವೆ ಎನ್ನುವಂತೆ ವರ್ತಿಸುತ್ತಿರುತ್ತಾರೆ.

• ಆದರೆ ಈ ರಾಶಿಯ ಜನರು ಅತಿ ಪರಿಶ್ರಮಿಗಳು ಎಂಬುದನ್ನು ಮರೆಯುವಂತಿಲ್ಲ

ಕನ್ಯಾ

ಕನ್ಯಾ

• ತೊಂದರೆ ಏನೆಂದರೆ, ಇವರು ತಮಗೆ ಸಂಬಂಧಿಸಿದ ಎಲ್ಲಾ ವಿಷಯ ಮತ್ತು ವಸ್ತುಗಳು ಪರಿಪೂರ್ಣವಾಗಿರಬೇಕು ಹಾಗೂ ಇವರ ಕಲ್ಪನೆಯ ಪರಿಪೂರ್ಣತೆ ವಾಸ್ತವಕ್ಕೂ ದೂರವಾಗಿಯೇ ಇರುತ್ತದೆ. ಹಾಗಾಗಿ ಎಷ್ಟೇ ಚೆನ್ನಾಗಿದ್ದರೂ ಇವರು ಆ ವಸ್ತು ಅಥವಾ ವಿಷಯದಲ್ಲಿ ತಪ್ಪು ಅಥವಾ ಕುಂದುಗಳನ್ನೇ ಹುಡುಕುತ್ತಾರೆ. ಕಛೇರಿಯಲ್ಲಿ, ಮನೆಯಲ್ಲಿ ಅಥವಾ ಸ್ನೇಹಿತರಲ್ಲಿಯೇ ಆಗಲಿ ಇವರ ಮನೋಭಾವ ಬದಲಾಗುವುದಿಲ್ಲ.

• ಇನ್ನೊಂದು ಗುಣ ನಿಮಗೆ ಇವರ ಬಗ್ಗೆ ಭಿನ್ನಾಭಿಪ್ರಾಯ ಮೂಡಿಸಬಹುದು, ಏಕೆಂದರೆ ಇವರು ಜನ್ಮತಃ ವಿಮರ್ಶಕರಾಗಿರುತ್ತಾರೆ.

• ಇವರು ಸಾಮಾನ್ಯವಾಗಿ ವಾಸ್ತವದಲ್ಲಿ ಜೀವಿಸುತ್ತಾರೆ ಹಾಗೂ ಯಾವುದೇ ಕೆಟ್ಟ ಘಳಿಗೆಯನ್ನು ಎದುರಿಸಲು ಸದಾ ಸಿದ್ದರಿರುತ್ತಾರೆ. ಧನಾತ್ಮಕವಾಗಿ ಚಿಂತಿಸುವ ಬದಲು ಇವರು ಪ್ರತಿಯೊಂದರಲ್ಲಿಯೂ ಋಣಾತ್ಮಕ ಧೋರಣೆಯನ್ನೇ ಪ್ರಕಟಿಸುತ್ತಾರೆ.

ಮಕರ

ಮಕರ

• ಈ ರಾಶಿಯಲ್ಲಿ ಜನಿಸಿದ ವ್ಯಕ್ತಿಗಳು ಯಾವುದೇ ಸಂದರ್ಭದಲ್ಲಿ ಏನಾದರೂ ಕೆಟ್ಟದ್ದೇ ಸಂಭವಿಸುತ್ತದೆ ಎಂದು ನಿರೀಕ್ಷಿಸುತ್ತಿರುತ್ತಾರೆ.

• ಇವರು ಗಂಭಿರ ಪ್ರವೃತ್ತಿಯುಳ್ಳವರೂ ಎಲಾ ವಿಷಯವನ್ನು ಪ್ರಾಯೋಗಿಕವಾಗಿಯೇ ಪರಿಗಣಿಸುವವರಾಗಿರುತ್ತಾರೆ. ಇವರು ಇತರರಿಂದ ಹೆಚ್ಚೇನನ್ನೂ ನಿರೀಕ್ಷಿಸುವುದಿಲ್ಲ ಹಾಗೂ ಇವರಿಗೆ ಯಾವುದೇ ವಿಷಯವನ್ನು ಮನದಟ್ಟು ಮಾಡಿಸುವುದು ಹಾಗೂ ಮನವೊಲಿಸುವುದು ಭಾರೀ ಕಷ್ಟದ ಕೆಲಸ.

• ಇವರು ಅನಗತ್ಯವಾಗಿ ಹೆಚ್ಚೇ ಚಿಂತಿಸುತ್ತಾರೆ ಹಾಗೂ ಹೆಚ್ಚಿನ ಸಂದರ್ಭದಲ್ಲಿ ಇವರು ಮೇಲ್ನೋಟಕ್ಕೆ ಅತಿ ಹೆಚ್ಚೇ ಋಣಾತ್ಮಕ ಧೋರಣೆಯವರಾಗಿ ಕಾಣಿಸಿಕೊಳ್ಳುತ್ತಾರೆ.

ಮಕರ

ಮಕರ

ಕೆಲವೊಮ್ಮೆ ನಿರಾಶಾವಾದವೂ ಅನುಕೂಲಕರವಾಗಿಯೇ ಇರುತ್ತದೆ. ಏಕೆಂದರೆ ಇವರು ಯಾವುದೇ ಯೋಜನೆಯ ಇನ್ನೊಂದು ಮಗ್ಗುಲಲ್ಲಿ ಯೋಚಿಸುತ್ತಾ ಒಂದು ವೇಳೆ ಯೋಜನೆ ವಿಫಲಗೊಂಡರೆ ಏನಾಗುತ್ತದೆ ಎಂಬ ವಿಷಯಕ್ಕೆ ಹೆಚ್ಚಿನ ಮಹತ್ವ ನೀಡಿದ ಬಳಿಕವೇ ಯೋಜನೆಯ ಯಶಸ್ವಿಯ ಬಗ್ಗೆ ಚರ್ಚಿಸುತ್ತಾರೆ. ಹಾಗಾಗಿ ನಿಮ್ಮ ಯಾವುದೇ ಯೋಜನೆಯ ಬಗ್ಗೆ ಸರಿಯಾದ ಅಭಿಪ್ರಾಯ ತಿಳಿದುಕೊಳ್ಳಬೇಕೆಂದರೆ ಯಾರನ್ನು ಕೇಳಬೇಕು ಎಂದು ಈಗ ನಿಮಗೆ ಸ್ಪಷ್ಟವಾಗಿರಬಹುದಲ್ಲವೇ? ಈ ನಾಲ್ಕು ರಾಶಿಯ ವ್ಯಕ್ತಿಗಳನ್ನು ಯಾವುದೇ ವಿಷಯದಲ್ಲಿ ಮನವೊಲಿಸುವುದು ಅಷ್ಟು ಸುಲಭವಲ್ಲ!

English summary

These Zodiac Signs Are The Most Pessimistic Ones By Far!

Pessimists are analytical, quite logical and serious in thinking. They think two steps ahead of us in every situation; they plan for the worst and get prepared for the worst. Pessimistic people are the ones who you can count on for a reality check. But otherwise, if you are trying to please them, then good luck with that! Given below are zodiac signs that are the most pessimistic in nature
X
Desktop Bottom Promotion