For Quick Alerts
ALLOW NOTIFICATIONS  
For Daily Alerts

ನಮ್ಮ ಅದೃಷ್ಟ ಹಾಗೂ ಪಾಲಿಗೆ ಏನು ಸಿಗುತ್ತದೆಯೋ ಅದರಲ್ಲಿಯೇ ಸಂತೋಷ ಕಾಣಿ

|

ಜೀವನ ಸುಂದರ ಎನ್ನುವ ಮಾತು ನಿಜ. ಆದರೆ ಅದನ್ನು ಪ್ರತಿಯೊಬ್ಬರು ಸೂಕ್ತ ರೀತಿಯಲ್ಲಿ ಅರ್ಥ ಮಾಡಿಕೊಳ್ಳಬೇಕು ಅಷ್ಟೇ. ಕೆಲವು ಸಮಯ ಹಾಗೂ ಸಂದರ್ಭಗಳು ವಿಭಿನ್ನವಾದ ಅನುಭವವನ್ನು ನೀಡುತ್ತಲೇ ಇರುತ್ತವೆ. ಅವುಗಳನ್ನು ಅರ್ಥೈಸಿಕೊಳ್ಳುವುದು ಹಾಗೂ ಸ್ವೀಕರಿಸುವ ಪರಿ ಬದಲಾಗಬೇಕು ಅಷ್ಟೆ. ಹೆಚ್ಚಿನ ಸಂದರ್ಭದಲ್ಲಿ ನಾವು ಇತರರ ಬದುಕನ್ನು ನೋಡಿ, ಅದರಂತೆಯೇ ನಮ್ಮ ಬದುಕು ಇರಬೇಕು ಎಂದು ಬಯಸುತ್ತೇವೆ. ಅಷ್ಟೇ ಅಲ್ಲದೆ ಕೆಲವು ಮಹತ್ತರ ಕೆಲಸ ಹಾಗೂ ಬದಲಾವಣೆಗೂ ಮುಂದಾಗುವುದು ಉಂಟು.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನಮ್ಮ ಆಲೋಚನೆಗಳು ನಮ್ಮ ಮನಸ್ಸನ್ನು ಅವಲಂಬಿಸಿರುತ್ತದೆ. ನಮ್ಮ ಮನಸ್ಸು ನಕ್ಷತ್ರಗಳಿಂದ ಪ್ರಭಾವಿತವಾಗಿರುತ್ತದೆ. ಪ್ರತಿ ರಾಶಿಚಕ್ರದ ಚಿಹ್ನೆಯು ಕೆಲವು ನಿಗದಿತ ಗ್ರಹಗಳು ಹಾಗೂ ಸಂಬಂಧಿತ ಅಂಶಗಳನ್ನು ಒಳಗೊಂಡಿರುತ್ತವೆ. ಹಾಗಾಗಿ ನಮ್ಮ ಅದೃಷ್ಟ ಹಾಗೂ ಪಾಲಿಗೆ ಏನು ಸಿಗುತ್ತದೆಯೋ ಅದರಲ್ಲಿಯೇ ಸಾಧನೆ ಮಾಡಲು ಮುಂದಾಗಬೇಕು. ಅದನ್ನು ಬಿಟ್ಟು ದೊಡ್ಡ ಆಮಿಷಗಳ ಹಿಂದೆ ಹೋಗುವುದರಿಂದ ಯಾವುದೇ ಲಾಭ ಉಂಟಾಗದು. ಕೆಲವು ರಾಶಿಚಕ್ರದವರು ಹೀಗೆ ದೊಡ್ಡ ಸಂಗತಿಯನ್ನು ಎದುರಿಸಲು ಮುಂದಾಗುತ್ತಾರೆ. ಹಾಗಾದರೆ ಆ ರಾಶಿಚಕ್ರದವರು ಯಾರು? ಎನ್ನುವುದನ್ನು ಈ ಮುಂದಿನ ಲೇಖನದಲ್ಲಿ ವಿವರಿಸಲಾಗಿದೆ...

ವೃಷಭ

ವೃಷಭ

ಜೀವನವು ವಿವಿಧ ಭಾವನೆಗಳಿಂದ ಮಿಶ್ರಣವಾಗಿದೆ ಎಂದು ಈ ರಾಶಿಯವರು ಭಾವಿಸುತ್ತಾರೆ. ಅಂತಹ ಭಾವನೆಗಳ ನಡುವೆ ಕೆಲವೊಮ್ಮೆ ಚಿಕ್ಕ ವಿಷಯಗಳು ತಾತ್ಕಾಲಿಕವಾದ ಸಂತೋಷವನ್ನು ನೀಡುತ್ತದೆ. ಇವರು ಅಂತಹ ಸಂದರ್ಭದಲ್ಲಿ ಹೆಚ್ಚಿನ ಸಂತೋಷವನ್ನು ಬಯಸುವರು. ಆಗ ನಕಾರಾತ್ಮಕ ಭಾವನೆಗೆ ಒಳಗಾಗುವ ಸಾಧ್ಯತೆಗಳಿರುತ್ತವೆ. ಇವರು ದೊಡ್ಡ ಸಂಗತಿ ಹಾಗೂ ದೊಡ್ಡ ಐಷಾರಾಮಿ ಜೀವನವನ್ನು ಬಯಸುತ್ತಾರೆ. ಆದರೆ ಅದರಿಂದ ಸಂತೋಷ ಅಥವಾ ನೆಮ್ಮದಿ ದೊರೆಯದು. ನೀವು ನಿಮ್ಮ ಅದೃಷ್ಟದಲ್ಲಿ ಸಿಗುವ ಸಣ್ಣ ಪುಟ್ಟ ಕ್ಷಣಗಳನ್ನು ಆನಂದಿಸಿ. ಅದೇ ನಿಮಗೆ ದೊಡ್ಡ ಕೊಡುಗೆಯಾಗಿ ಪರಿಣಮಿಸುವುದು.

 ತುಲಾ

ತುಲಾ

ಇವರು ದಿನದ 24 ಗಂಟೆಗಳ ಕಾಲವೂ ತಮ್ಮ ಸುತ್ತಲಿನ ಸಂಗತಿಗಳನ್ನು ಹೆಚ್ಚು ವೀಕ್ಷಿಸುತ್ತಾರೆ. ಮಾನಸಿಕ ಮತ್ತು ಭೌತಿಕವಾಗಿ ಸಿಗುವ ಸಂತೋಷದ ಕ್ಷಣಗಳನ್ನು ಆನಂದಿಸುತ್ತಾರೆ. ತಮ್ಮನ್ನು ತಾವು ನಕಾರಾತ್ಮಕ ವಿಚಾರಗಳಿಂದ ದೂರ ಇರಿಸಿಕೊಳ್ಳುತ್ತಾರೆ. ನೀವು ಜೀವನದಲ್ಲಿ ಅನಗತ್ಯವಾಗಿ ಆಸೆ ಹುಟ್ಟಿಸುವ ದೊಡ್ಡ ಸಂಗತಿಗಳ ಹಿಂದೆ ಓಡದಿರಿ. ಅದು ನಿಮ್ಮ ನೆಮ್ಮದಿಯನ್ನು ಹಾಳುಮಾಡಬಹುದು. ರುಚಿಕರವಾದ ಊಟ, ಮುಖದಲ್ಲಿ ಒಂದು ನಗು ಹಾಗೂ ಸಣ್ಣ ಪುಟ್ಟ ತಮಾಷೆಗಳು ನಿಮಗೆ ಹೆಚ್ಚಿನ ಸಂತೋಷ ನೀಡುತ್ತವೆ. ಅವುಗಳನ್ನು ಆನಂದಿಸಲು ಕಲಿಯಿರಿ.

ಮಿಥುನ

ಮಿಥುನ

ಇವರು ಗಂಭೀರ ಸ್ವಭಾವ ಹಾಗೂ ಜೀವನದ ಕೆಲವು ಪ್ರಮುಖ ಭಾಗಗಳಲ್ಲಿ ಮಾತ್ರ ಕೇಂದ್ರೀಕರಿಸುವ ಗುಣವನ್ನು ಹೊಂದಿರುತ್ತಾರೆ. ಇವರು ಇತರರಿಂದ ಪ್ರಭಾವಿತವಾದ ಸಂಗತಿಗಳ ಮೇಲೆ ಹೆಚ್ಚು ಗಮನವನ್ನು ಕೇಂದ್ರೀಕರಿಸುವರು. ಜೊತೆಗೆ ಅವರಂತೆಯೇ ದೊಡ್ಡ ಸಂಗತಿಗಳನ್ನು ಅನುಭವಿಸಬೇಕು ಎನ್ನುವ ಹಂಬಲ ಹೊಂದುವರು. ಇದರಿಂದ ದುಃಖದ ಸಂಗತಿಯನ್ನು ಎದುರಿಸ ಬೇಕಾಗುವುದು. ಇವರು ಜೀವನದಲ್ಲಿ ಸಿಗುವ ಸಣ್ಣ ಸಣ್ಣ ವಿಚಾರಗಳನ್ನು ಆನಂದಿಸಲು ಕಲಿಯಬೇಕು. ಉದ್ಯಾನಗಳಲ್ಲಿ ಕುಳಿತು ಅಲ್ಲಿಯ ಅನುಭವ ಆನಂದಿಸುವುದು ಹಾಗೂ ಸಣ್ಣ ವಾಕಿಂಗ್ ಮಾಡುವುದರ ಮೂಲಕವು ಜೀವನದ ಖುಷಿಯನ್ನು ಅನುಭವಿಸಬಹುದು.

ಕರ್ಕ

ಕರ್ಕ

ಭಾವನಾತ್ಮಕ ಜೀವಿಗಳಾದ ಇವರು ಕುಟುಂಬದ ಸಂತೋಷಕ್ಕೆ ಹೆಚ್ಚಿನ ಆದ್ಯತೆ ನೀಡುವರು. ಜೀವನದಲ್ಲಿ ಪ್ರಮುಖ ಗುರಿ ಹಾಗೂ ದೊಡ್ಡ ಸಾಧನೆಯ ಕುರಿತು ಹೆಚ್ಚಿನ ಚಿಂತನೆ ಹಾಗೂ ಪ್ರಯತ್ನಗಳನ್ನು ನಿರಂತರವಾಗಿ ಕೈಗೊಳ್ಳುವರು. ಆದರೆ ಇದರಿಂದ ಬಯಸಿದಂತಹ ಸಂತೋಷ ದೊರೆಯದು. ಸ್ನೇಹಿತರೊಂದಿಗೆ ಕಳೆಯುವ ಸಂತೋಷದ ಕ್ಷಣಗಳು ಹಾಗೂ ಉತ್ತಮ ನಗುವಿನ ತಮಾಷೆಗಳು ಹೆಚ್ಚಿನ ಆನಂದ ನೀಡುವುದು. ಸಣ್ಣ ಪುಟ್ಟ ತಮಾಷೆ ಹಾಗೂ ಆನಂದದ ಕ್ಷಣಗಳು ನಿಮ್ಮ ಋಣಾತ್ಮಕ ಚಿಂತನೆಗಳನ್ನು ದೂರ ಸರಿಸುವುದು.

ಕನ್ಯಾ

ಕನ್ಯಾ

ಸಂತೋಷದ ಸಣ್ಣ ಸಣ್ಣ ಕ್ಷಣಗಳು ಸಹ ಮುಖದಲ್ಲಿ ನಗುವನ್ನು ತರುವುದು. ಜೊತೆಗೆ ಮನಸ್ಸಿಗೂ ನೆಮ್ಮದಿಯನ್ನು ನೀಡುವುದು ಎನ್ನುವುದನ್ನು ಇವರು ತಿಳಿದುಕೊಳ್ಳಬೇಕು. ವಿಶೇಷವಾದ ಹೊಸ ರುಚಿಯನ್ನು ತಯಾರಿಸುವುದು, ಮಗುವಿನೊಂದಿಗೆ ಆಡುವುದು ಅಥವಾ ತಮ್ಮನ್ನು ತಾವು ಇತರ ಕೆಲಸದಲ್ಲಿ ತೊಡಗಿಸಿ ಕೊಳ್ಳುವುದರಿಂದ ಹೆಚ್ಚಿನ ಸಂತೋಷ ಹಾಗೂ ನೆಮ್ಮದಿ ದೊರೆಯುವುದು ಎನ್ನುವುದನ್ನು ಅರಿಯಬೇಕು. ಈ ರಾಶಿಯವರು ಇತರರಿಂದ ಹೆಚ್ಚಿನ ನಿರೀಕ್ಷೆ ಹೊಂದುವುದು ಹಾಗೂ ದೊಡ್ಡ ಸಂಗತಿಗಳನ್ನು ಪಡೆಯುವುದರ ಬಗ್ಗೆ ಹೆಚ್ಚಿನ ಹಂಬಲ ಹೊಂದುವುದರಿಂದಲೇ ಬೇಸರಕ್ಕೆ ಒಳಗಾಗುವ ಸಾಧ್ಯತೆಗಳು ಹೆಚ್ಚು.

English summary

These five Zodiac Signs Don't Chase Just The Big Matters In Life

Yes, it is true that life is beautiful. But not everyone understands that. Though it offers different tastes at different points of time, the taste that we focus upon, lies all in our own hands. While some focus on the sour tastes of it, others remember the sweeter more. However, there are some who just forget about the sweetness after they have been exposed to the bitter phases of life. There are very few who can still know that life is still beautiful despite its weirdness at times.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more