Latest Updates
-
ಮದುವೆ ಸಂಭ್ರಮಕ್ಕೆ ಸಿದ್ಧರಾಗಿದ್ದೀರಾ? ಮಳೆಗಾಲದ ಮದುವೆಗೆ ಈ 5 ಟಿಪ್ಸ್ ಮರೆಯದಿರಿ! -
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್ -
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ!
ಅಚ್ಚರಿ ಜಗತ್ತು: ಮಹಿಳೆಯ ಹೃದಯವನ್ನೇ ಅಡುಗೆ ಮಾಡಿ ಸೇವಿಸಿದ ನರರಾಕ್ಷಸ!!
ಈ ಲೇಖನ ದುರ್ಬಲ ಹೃದಯಗಳಿಗಾಗಿ ಅಲ್ಲ, ಎಂದು ಮೊದಲೇ ಹೇಳಿಬಿಡುತ್ತೇವೆ. ಏಕೆಂದರೆ ಈ ಮಾಹಿತಿ ಮಾನವತೆಯಲ್ಲಿರುವ ನಿಮ್ಮ ನಂಬುಗೆಯನ್ನೆ ಅಲ್ಲಾಡಿಸಬಹುದು. ಈ ಜಗತ್ತಿನಲ್ಲಿ ಎಷ್ಟು ಒಳ್ಳೆಯದು ನಡೆಯುತ್ತದೆಯೋ ಅಷ್ಟೇ ಕ್ರೂರವಾದದ್ದೂ ನಡೆಯುತ್ತದೆ. ಕೆಲವು ಪ್ರಕರಣಗಳಂತೂ ಬೆನ್ನುಹುರಿಯನ್ನೇ ಚುರುಗುಟ್ಟಿಸುವಂತಹದ್ದಾಗಿದ್ದು ಎಂತಹ ಧೈರ್ಯವಂತರನ್ನೇ ಅಲ್ಲಾಡಿಸಿಬಿಡುತ್ತದೆ.
ಭಾರತದಲ್ಲಿಯೇ ಒಬ್ಬ ನರರಾಕ್ಷಸನಿಗೆ ಜನರ ಮೆದುಳನ್ನು ತಿನ್ನುವ ವಿಚಿತ್ರ ಬಯಕೆಯಿಂದ ಸರಣಿ ಕೊಲೆಗಾರನಾಗಿರಲಿಲ್ಲವೇ? ಅಂತಹದ್ದೇ ಇನ್ನೊಂದು ಪ್ರಕರಣ ರಷ್ಯಾದಿಂದ ವರದಿಯಾಗಿದೆ. ಈ ಪ್ರಕರಣದಲ್ಲಿ ನರರಾಕ್ಷಸನೊಬ್ಬ ಯುವ ಮಹಿಳೆಯೊಬ್ಬಳನ್ನು ಕೊಂದು ಆಕೆಯ ಹೃದಯವನ್ನು ಅಡುಗೆ ಮಾಡಿ ತಿಂದ ವಿದ್ರಾವಕ ಘಟನೆ ವರದಿಯಾಗಿದೆ. ಬನ್ನಿ ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೋಡೋಣ....

ಇದು ನಡೆದದ್ದು ರಷ್ಯಾದಲ್ಲಿ
ಅಲೆಕ್ಸೀ ಯೆಸ್ತ್ರೆಬೋವ್ ಎಂಬ ನರಭಕ್ಷಕನೊಬ್ಬ ತನ್ನ ನಾಲಿಗೆಯ ಚಪಲ ತೀರಿಸಲೆಂದು ಮಹಿಳೆಯೊಬ್ಬಳನ್ನು ಬರ್ಬರವಾಗಿ ಕೊಂದ ಘಟನೆ ರಷ್ಯಾದಿಂದ ವರದಿಯಾಗಿದೆ. ಹೀಗೆ ಕೊಲೆಯಾಗಲ್ಪಟ್ಟ ಮಹಿಳೆ ಇನ್ನೂ ಕೇವಲ ಇಪ್ಪತ್ತೇಳು ವರ್ಷದವಳಾಗಿದ್ದು ಇಬ್ಬರು ಸುಂದರ ಮಕ್ಕಳ ತಾಯಿಯೂ ಆಗಿದ್ದಳು.

ಕೊಲೆಯ ವಿವರ
ವರದಿಗಳ ಪ್ರಕಾರ ಈ ನರಭಕ್ಷಕ ಮಹಿಳೆಯ ಕತ್ತಿನ ಮೇಲೆ ಅಡುಗೆಮನೆಯಲ್ಲಿ ಸಾಮಾನ್ಯವಾಗಿ ಬಳಸುವ ಕತ್ತಿಯಿಂದ ಪ್ರಹಾರ ಮಾಡಿ ಆಕೆಯ ಧ್ವನಿಪೆಟ್ಟಿಗೆಯನ್ನೇ ಕತ್ತರಿಸಿ ಹೊರತೆಗೆದಿದ್ದ.

ಇನ್ನೂ ಹೆಚ್ಚಿನ ಗಾಯ ಮಾಡುವುದೇ ಆತನ ಉದ್ದೇಶವಾಗಿತ್ತು
ಆಕೆ ಮೃತಳಾದ ಬಳಿಕ ಆತ ಎದೆಗೂಡನ್ನು ಬಗೆದು ಹೃದಯ ಮತ್ತು ಎಡಶ್ವಾಸಕೋಶವನ್ನು ಹೊರತೆಗೆದ ಹಾಗೂ ಪಕ್ಕದಲ್ಲಿಯೇ ಇದ್ದ ಒಲೆಯ ಮೇಲೆ ಒಂದು ಪಾತ್ರೆಯಲ್ಲಿ ನೀರು ಬಿಸಿಮಾಡಲಿಟ್ಟು ಬೇಯಿಸಿದ ಸಹಾ! ಬಳಿಕ ಆರಾಮವಾಗಿ ತನ್ನ ಫ್ಲಾಟ್ ನ ಮಾಲೀಕನಿಗೆ ಕರೆ ಮಾಡಿ ತಣ್ಣಗೇ ಹೇಗೆಂದ."ಪೋಲೀಸರನ್ನು ಮತ್ತು ಆಂಬ್ಯುಲೆನ್ಸ್ ವಾಹನವೊಂದನ್ನು ಕರೆಸಿ, ನಾನಿಲ್ಲಿ ರಕ್ತದಲ್ಲಿ ಬಿದ್ದಿದ್ದೇನೆ, ಪಕ್ಕದಲ್ಲೊಂದು ಶವವಿದೆ"

ಪೋಲೀಸರು ಬಂದಾಗ
ಪೋಲೀಸರು ಹಾಗೂ ತುರ್ತುಘಟಕದ ವೈದ್ಯರ ತಂಡ ಈ ಕೋಣೆಗ ಆಗಮಿಸಿದಾಗ ಎಲ್ಲೆಲ್ಲೂ ರಕ್ತ ಚೆಲ್ಲಾಡಿದ್ದನ್ನು ಗಮನಿಸಿದರು. ಈ ಸಿಬ್ಬಂದಿಯನ್ನು ಆರಾಮವಾಗಿ ಸ್ವಾಗತಿಸಿದ ಅಲೆಕ್ಸೀ ಹೀಗೆಂದ "ಒಲೆಯ ಮೇಲೊಂದು ಹೃದಯ ಬೇಯುತ್ತಿದೆ"

ಆದರೆ, ಆಮೇಲೇನಾಯ್ತು?
ಈ ಕೃತ್ಯಕ್ಕೆ ಏನು ಕಾರಣ ಎಂದು ಇದುವರೆಗೆ ಸ್ಪಷ್ಟವಾಗಿಲ್ಲ. ಆದರೆ ಕಿಡಿ ಇಲ್ಲದೆಯೇ ಹೊಗೆ ಏಳುತ್ತದೆಯೇ? ಈತನ ಈ ಕೃತ್ಯಕ್ಕೂ ಯಾವುದೋ ಒಂದು ಅಗೋಚರ ಕಾರಣವಿರಬಹುದು. ಮಾನವರಿಗೆ ಅತಿಯಾದ ನಿರಾಶೆಯಾದಾಗ ಅಥವಾ ದಮನಿಸಲಪಟ್ಟಾಗ ಸಹನೆಯ ಕಟ್ಟೆಯೊಡೆದು ಊಹಿಸಲೂ ಸಾಧ್ಯವಿಲ್ಲದ ಕುಕೃತ್ಯಗಳನ್ನು ಎಸಗುವುದನ್ನು ಮನಃಶಾಸ್ತ್ರಜ್ಞರು ಕಂಡುಕೊಂಡಿದ್ದಾರೆ.

ಈ ವ್ಯಕ್ತಿ ಯಾರು?
ಈ ವ್ಯಕ್ತಿ ಹೀಗೆ ಮಾಡಲು ಏನು ಕಾರಣ ಎಂಬುದನ್ನು ಕಂಡುಹಿಡಿಯಲು ಹಲವಾರು ಪ್ರಯೋಗಗಳನ್ನು ನಡೆಸಲಾಯ್ತಾದರೂ ಸ್ಪಷ್ಟವಾದ ವಿವರಣೆ ಇದುವರೆಗೆ ಸಿಕ್ಕಿಲ್ಲ.

ಈತನಿಗೆ ಮಾನಸಿಕ ಸಮಾಲೋಚನೆ ಅಗತ್ಯ
ಈತನನ್ನು ಹೊಡೆದು ಬಡಿದು ಮಾಡಿದರೂ ಯಾವುದೇ ಕಾರಣಕ್ಕೂ ಈತ ಈ ಕೃತ್ಯ ಏಕೆ ಮಾಡಿದೆ ಎಂದು ಹೇಳುತ್ತಿಲ್ಲ. ಹಾಗಾಗಿ ಮುಂದಿನ ಕ್ರಮವಾಗಿ ಈತನಿಗೆ ಮಾನಸಿಕ ಸಮಾಲೋಚನೆಯ ಮೂಲಕ ಇದರ ಮೂಲವನ್ನು ಅರಿಯುವುದು ಮುಂದಿನ ಕ್ರಮವಾಗಿದೆ. ಈ ಕೃತ್ಯದ ಮೂಲಕ ನಾವು ಕಲಿಯಬೇಕಾಗಿರುವ ಪಾಠವೆಂದರೆ, ಒಂದು ವೇಳೆ ನಮ್ಮಲ್ಲಿ ಯಾವುದೋ ಅವ್ಯಕ್ತ ಭೀತಿ, ತಿರಸ್ಕಾರ, ದ್ವೇಶ ಮೊದಲಾದವುಗಳಿದ್ದರೆ ಇವುಗಳನ್ನು ಪ್ರಕಟಿಸಿ ಇದಕ್ಕೊಂದು ಪರಿಹಾರ ಕಂಡುಕೊಳ್ಳವುದೇ ಶ್ರೇಯಸ್ಕರ. ಏಕೆಂದರೆ ಮನಸ್ಸಿನಾಳದಲ್ಲಿ ಹುದುಗಿರುವ ದ್ವೇಶ, ಹತಾಶೆ, ಸಿಟ್ಟು, ಸೇಡಿನ ಮನೋಭಾವನೆ ಮೊದಲಾದವು ಮುಂದಿನ ದಿನಗಳಲ್ಲಿ ಜ್ವಾಲಾಮುಖಿಯಾಗಿ ನಿಮ್ಮಿಂದ ಯಾವ ಕೆಲಸ ಮಾಡಿಸಬಹುದು ಎಂದು ಊಹಿಸಲೂ ಸಾಧ್ಯವಿಲ್ಲ!



Click it and Unblock the Notifications