ರಾಶಿ ಭವಿಷ್ಯ: ಜೀವನದಲ್ಲಿ ಸಮತೋಲನವನ್ನು ಪಡೆಯುವುದು ಹೇಗೆ?

Subscribe to Boldsky

ನಮ್ಮ ನಡವಳಿಕೆ ಮತ್ತು ವ್ಯಕ್ತಿತ್ವಕ್ಕೆ ಸಂಬಂಧಿಸಿದ ಕೆಲವು ವಿಷಯಗಳಿವೆ ಎಂದು ನಿಮಗೆ ತಿಳಿದಿತ್ತೇ? ನಿಮ್ಮ ಜೀವನವನ್ನು ಪರಿಪೂರ್ಣವಾಗಿ ನಡೆಸಲು ನಿಮ್ಮ ಜನ್ಮರಾಶಿಯನ್ನು ಆಧರಿಸಿ ಪಡೆಯುವ ಮಾರ್ಪಾಡುಗಳು ನೆರವಾಗಲಿವೆ. ನಮ್ಮೆಲ್ಲರ ಜೀವನದಲ್ಲಿ ಸಮತೋಲನ ಕಾಪಾಡಿಕೊಳ್ಳಬೇಕಾದರೆ ನಮ್ಮ ಜನ್ಮರಾಶಿಗೆ ಸಂಬಂಧಪಟ್ಟ ಕೆಲವು ವಿಷಯಗಳನ್ನು ಅನುಸರಿಸಬೇಕಾಗುತ್ತದೆ ಹಾಗೂ ಇದರ ಹೊರತಾಗಿ ಬೇರಾವ ವಿಧಾನವೂ ಇಷ್ಟು ಫಲಕಾರಿಯಾಗಿಲ್ಲ. ಬನ್ನಿ, ಈ ಪ್ರಯೋಜನವನ್ನು ಹೇಗೆ ಪಡೆದುಕೊಳ್ಳಬಹುದು ಎಂಬುದನ್ನು ನೋಡೋಣ...

ಮೇಷ: ಮಾರ್ಚ್ 21 ರಿಂದ ಏಪ್ರಿಲ್ 19

ಮೇಷ: ಮಾರ್ಚ್ 21 ರಿಂದ ಏಪ್ರಿಲ್ 19

ಈ ರಾಶಿಯ ವ್ಯಕ್ತಿಗಳು ಭಾವನಾತ್ಮಕ ಹಾಗೂ ಆತ್ಮವಿಶ್ವಾಸವುಳ್ಳ ವ್ಯಕ್ತಿಗಳಾಗಿರುತ್ತಾರೆ. ಇದೇ ಸಮಯದಲ್ಲಿ ಇವರು ಮುಂಗೋಪಿಗಳೂ ಹಾಗೂ ತಕ್ಷಣವೇ ನಿರ್ಧಾರಕ್ಕೆ ಬಂದು ಬಿಡುವ ಪ್ರವೃತ್ತಿಯವರೂ ಆಗಿದ್ದಾರೆ. ಇವರು ತಮ್ಮ ಜೀವನದಲ್ಲಿ ಸಮತೋಲನದ ಪಡೆದುಕೊಳ್ಳಲು ಧ್ಯಾನ ಹಾಗೂ ನಿರಾಳವಾಗಿರಲು ಸಮಯ ವಿನಿಯೋಗಿಸುವುದು ಅನಿವಾರ್ಯವಾಗಿದೆ. ತಮ್ಮ ವೃತ್ತಿ ಹಾಗೂ ವೈಯಕ್ತಿಕ ಜೀವನದಲ್ಲಿ ಸಮತೋಲನವನ್ನು ಕಾಯ್ದುಕೊಳ್ಳಲು ಎರಡೂ ಜೀವನಗಳನ್ನು ಒಂದಕ್ಕೊಂದು ತೊಡರಿಕೊಳ್ಳಲು ಬಿಡಬಾರದು ಹಾಗೂ ಸಾಧ್ಯವಾದಷ್ಟು ಸರಳ ಜೀವನ ನಡೆಸಬೇಕು.

ವೃಷಭ: ಏಪ್ರಿಲ್ 20ರಿಂದ ಮೇ 20

ವೃಷಭ: ಏಪ್ರಿಲ್ 20ರಿಂದ ಮೇ 20

ಇವರು ಸಾಮಾನ್ಯವಾಗಿ ಮೃದುಹೃದಯಿಗಳು ಹಾಗೂ ಸ್ನೇಹಪರರಾಗಿರುತ್ತಾರೆ. ಆದರೆ ಸಂದರ್ಭಾನುಸಾರ ಇವರು ಉದ್ವೇಗಿತರಾಗಿ ಕಠಿಣಹೃದಯಿಗಳು ಹಾಗೂ ಹಠಮಾರಿಗಳೂ ಆಗುತ್ತಾರೆ ಹಾಗೂ ತಮ್ಮ ಎಣಿಕೆಯಂತೆ ಪರಿಸ್ಥಿತಿ ನಡೆಯದೇ ಇದ್ದರೆ ಇವರು ಇದನ್ನು ವೈಯಕ್ತಿಕವಾಗಿ ಪರಿಗಣಿಸುತ್ತಾರೆ. ಈ ವ್ಯಕ್ತಿಗಳು ತಮ್ಮ ಜೀವನದಲ್ಲಿ ಸಮತೋಲನ ಸಾಧಿಸಲು ಇವರು ಸ್ವವಿಮರ್ಶೆಯಲ್ಲಿ ಹೆಚ್ಚಿನ ಸಮಯ ಕಳೆಯಬೇಕಾಗುತ್ತದೆ ಹಾಗೂ ತಮ್ಮ ಪ್ರಕ್ರಿಯೆಯಿಂದ ಯಾವ ಬಗೆಯ ಪರಿಣಾಮ ಉಂಟಾಗುತ್ತದೆ ಎಂದು ತಣ್ಣನೆಯ ಮನಸ್ಸಿನಿಂದ ಯೋಚಿಸಬೇಕಾಗುತ್ತದೆ. ಇವರ ಹಿತೈಷಿಗಳು ನೀಡುವ ಹಿತವಚನಗಳನ್ನು ಗಂಭೀರವಾಗಿ ಪರಿಗಣಿಸಿದ ಬಳಿಕವೇ ಪರಿಸ್ಥಿತಿಯನ್ನು ಅವಲೋಕಿಸಿ ತಮ್ಮ ನಿರ್ಧಾರವನ್ನು ಪ್ರಕಟಿಸಬೇಕು.

ಮಿಥುನ: ಮೇ 21-ಜೂನ್ 20

ಮಿಥುನ: ಮೇ 21-ಜೂನ್ 20

ಈ ವ್ಯಕ್ತಿಗಳು ಅತಿ ಚತುರರಾಗಿದ್ದು ಇವರನ್ನು ಸೋಲಿಸುವುದು ಅಷ್ಟು ಸುಲಭವಲ್ಲ. ಆದರೆ ಇದೇ ಕಾರಣಕ್ಕೆ ಇವರು ತಮ್ಮನ್ನು ಯಾರಾದರೂ ಸೋಲಿಸಬಲ್ಲರು ಎಂಬ ಉದ್ವೇಗದಲ್ಲಿಯೇ ಇರುತ್ತಾರೆ. ಈ ವ್ಯಕ್ತಿಗಳು ತಮ್ಮ ಜೀವನದಲ್ಲಿ ಸಮತೋಲನ ಸಾಧಿಸಲು ಧ್ಯಾನದ ಮೂಲಕ ತಮ್ಮ ಮನಸ್ಸನ್ನು ನಿಯಂತ್ರಣದಲ್ಲಿರಲು ಅನಿವಾರ್ಯವಾಗಿಯಾದರೂ ಕ್ರಮ ಕೈಗೊಳ್ಳಬೇಕು.

ಕಟಕ: ಜೂನ್ 21-ಜುಲೈ 22

ಕಟಕ: ಜೂನ್ 21-ಜುಲೈ 22

ಈ ವ್ಯಕ್ತಿಗಳು ತಮ್ಮವರ ಬಗ್ಗೆ ಅತಿ ಹೆಚ್ಚಿನ ಕಾಳಜಿ ವಹಿಸುವವರೂ ಹಾಗೂ ರಕ್ಷಣೆ ಒದಗಿಸುವವರೂ ಆಗಿರುತ್ತಾರೆ. ಕೆಲವೊಮ್ಮೆ ಇದೇ ಗುಣ ಇವರ ಪ್ರೀತಿಪಾತ್ರರಿಗೆ ಸ್ವಾಮ್ಯಸೂಚಕ ಹಾಗೂ ಒರಟುತನದಂತೆಯೂ ಅನ್ನಿಸಬಹುದು. ಈ ವ್ಯಕ್ತಿಗಳು ತಮ್ಮ ಜೀವನದಲ್ಲಿ ಸಮತೋಲನ ಸಾಧಿಸಲು ತಮ್ಮನ್ನು ಸಾಂತ್ವಾನಗೊಳಿಸುವ ವಿಧಾನಗಳನ್ನು ಕಂಡುಕೊಳ್ಳಬೇಕು ಹಾಗೂ ಈ ಮನೋಭಾವ ಇತರರಿಗೆ ಮುಜುಗರ ಉಂಟಗುವಂತಹ ಸಂದರ್ಭಗಳಿಂದ ದೂರವಿರಬೇಕು.

ಸಿಂಹ: ಜುಲೈ 23- ಆಗಸ್ಟ್ 23

ಸಿಂಹ: ಜುಲೈ 23- ಆಗಸ್ಟ್ 23

ಇವರು ದಿಟ್ಟ ಮನೋಭಾವ ಹಾಗೂ ಕ್ರಿಯಾತ್ಮಕರಾಗಿರುತ್ತಾರೆ. ಕೆಲವೊಮ್ಮೆ ಈ ಮನೋಭಾವ ಇತರರಿಗೆ ಸ್ವಾಮ್ಯ ಮನೋಭಾವದಂತೆ ಕಾಣಬಹುದು. ಈ ವ್ಯಕ್ತಿಗಳು ತಮ್ಮ ಜೀವನದಲ್ಲಿ ಸಮತೋಲನ ಸಾಧಿಸಲು ಇತರರು ಹೇಳುವುದನ್ನು ಕೇಳುವಷ್ಟು ತಾಳ್ಮೆಯನ್ನು ಬೆಳೆಸಿಕೊಳ್ಳಬೇಕಾಗುತ್ತದೆ ಹಾಗೂ ಇತರರ ಭಾವನೆಗಳನ್ನು ಗೌರವಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕಾಗುತ್ತದೆ.

ಕನ್ಯಾ: ಆಗಸ್ಟ್ 24-ಸೆಪ್ಟೆಂಬರ್ 23

ಕನ್ಯಾ: ಆಗಸ್ಟ್ 24-ಸೆಪ್ಟೆಂಬರ್ 23

ಈ ವ್ಯಕ್ತಿಗಳು ಎಲ್ಲದರಲ್ಲಿಯೂ ಉತೃಷ್ಟತೆಯನ್ನು ಬಯಸುವ ಹಾಗೂ ಯಾವುದೇ ಚಿಕ್ಕ ವಿಷಯವನ್ನೂ ಅತಿಹೆಚ್ಚಾಗಿ ಅಭ್ಯಸಿಸುವ ಮನೋಭಾವ ಹೊಂದಿರುತ್ತಾರೆ. ಇದೇ ಕಾರಣದಿಂದ ಇವರು ತಮ್ಮ ಕ್ಷೇತ್ರದ ಹೊರತಾದ ವಿಷಯದಲ್ಲಿಯೂ ಮೂಗು ತೂರಿಸುತ್ತಾರೆ. ಈ ವ್ಯಕ್ತಿಗಳು ತಮ್ಮ ಜೀವನದಲ್ಲಿ ಸಮತೋಲನ ಸಾಧಿಸಲು ತಮ್ಮ ಅಂತರಂಗದ ಯೋಚನೆಗಳಿಗೆ ಹೆಚ್ಚು ಗಮನ ನೀಡಬೇಕಾಗುತ್ತದೆ ಹಾಗೂ ಅಗತ್ಯಕ್ಕೂ ಮೀರಿದ ಸ್ವಯಂ-ನಿರ್ಣಾಯಕ ಭಾಷೆಯನ್ನು ಬಳಸುವುದನ್ನು ಕಡಿಮೆ ಮಾಡಬೇಕಾಗುತ್ತದೆ.

ತುಲಾ : ಸೆಪ್ಟೆಂಬರ್24-ಅಕ್ಟೋಬರ್ 23

ತುಲಾ : ಸೆಪ್ಟೆಂಬರ್24-ಅಕ್ಟೋಬರ್ 23

ಇವರು ಆದರ್ಶವಾದಿಗಳು ಹಾಗೂ ತಮ್ಮ ಸುತ್ತ ಮುತ್ತಲಿನವರನ್ನು ಸುಲಭವಾಗಿ ಒಪ್ಪಿಸಬಲ್ಲ ವ್ಯಕ್ತಿತ್ವ ಹೊಂದಿದ್ದಾರೆ. ಆದರೆ ಇವರು ಸುಲಭವಾಗಿ ಮೋಸಗೊಳಗಾಗುವ ಹಾಗೂ ಸ್ವಾರ್ಥಸಾಧನೆಗಾಗಿ ಬಳಸಲ್ಪಡುತ್ತಾರೆ. ಈ ವ್ಯಕ್ತಿಗಳು ತಮ್ಮ ಜೀವನದಲ್ಲಿ ಸಮತೋಲನ ಸಾಧಿಸಲು ಇತರರು ತಮ್ಮನ್ನು ದುರುಪಯೋಗಪಡಿಸಿಕೊಳ್ಳದಿರುವಂತೆ ಎಚ್ಚರಿಕೆ ವಹಿಸಬೇಕು. ವಿಶೇಷವಾಗಿ ಕೆಲವು ಸಂದರ್ಭಗಳಲ್ಲಿ ಸಮಾಲೋಚಿಸುವಾಗ ಎಚ್ಚರಿಕೆ ವಹಿಸಬೇಕು. ಇದರಿಂದ ಇತರರು ತಮ್ಮನ್ನು ದುರುಪಯೋಗಪಡಿಸಿಕೊಳ್ಳದಂತೆ ಹಾಗೂ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಲು ನೆರವಾಗುತ್ತದೆ.

ವೃಶ್ಚಿಕ: ಅಕ್ಟೋಬರ್ 24-ನವೆಂಬರ್ 22

ವೃಶ್ಚಿಕ: ಅಕ್ಟೋಬರ್ 24-ನವೆಂಬರ್ 22

ಇವರು ಅತಿಹೆಚ್ಚು ಭಾವಾವೇಶವುಳ್ಳವರೂ ಕೆಲವೊಮ್ಮೆ ಅತಿ ಹೆಚ್ಚು ಮುಂಗೋಪಿಗಳೂ, ಹೊಟ್ಟೆಕಿಚ್ಚಿನ ಸ್ವಭಾವದವರೂ ಹಾಗೂ ಒಂದು ವಸ್ತು ಅಥವಾ ವಿಷಯದ ಬಗ್ಗೆ ಅತಿ ಹೆಚ್ಚು ಕಾಳಜಿ ವಹಿಸುವವರಾಗಿರುತ್ತಾರೆ. ಇವೆರಡೂ ಇವರ ವ್ಯಕ್ತಿತ್ವದ ಎರಡು ವಿಭಿನ್ನ ಮುಖಗಳಾಗಿದ್ದು ಇದನ್ನು ಸಮತೋಲನದಲ್ಲಿರಿಸಲು ಬಹಳ ಕಷ್ಟಪಡಬೇಕಾಗುತ್ತದೆ. ಈ ವ್ಯಕ್ತಿಗಳು ತಮ್ಮ ಜೀವನದಲ್ಲಿ ಸಮತೋಲನ ಸಾಧಿಸಲು ಮನಸ್ಸನ್ನು ಹಿಡಿತರಲ್ಲಿರಿಸುವ ಪ್ರಾಣಾಯಾಮ ಹಾಗೂ ಭಾವನೆಗಳನ್ನು ನಿಯಂತ್ರಣದಲ್ಲಿರಿಸುವ ಯಾವುದೇ ವಿಧಾನವನ್ನು ಅನುಸರಿಸಬೇಕಾಗುತ್ತದೆ.

ಧನು: ನವೆಂಬರ್ 23-ಡಿಸೆಂಬರ್ 22

ಧನು: ನವೆಂಬರ್ 23-ಡಿಸೆಂಬರ್ 22

ಈ ವ್ಯಕ್ತಿಗಳು ಅತಿಹೆಚ್ಚು ಆಶಾವಾದಿಗಳಾಗಿರುತ್ತಾರೆ ಹಾಗೂ ಈ ಮನೋಭಾವ ಅಥವಾ ಚಿಂತನೆಯ ವ್ಯಕ್ತಿಗಳನ್ನು ಜಗತ್ತು ಸತತವಾಗಿ ಬೆಂಬಲಿಸುವುದಿಲ್ಲ ಎಂಬುದನ್ನು ಮರೆಯುತ್ತಾರೆ. ಈ ವ್ಯಕ್ತಿಗಳು ತಮ್ಮ ಜೀವನದಲ್ಲಿ ಸಮತೋಲನ ಸಾಧಿಸಲು ಇವರು ಎರಡು ಗುರಿಗಳನ್ನು ಹಾಗೂ ಭವಿಷ್ಯದ ಯೋಜನೆಗಳನ್ನು ಹೊಂದಿರಬೇಕು. ಇವು ನಿಜವಾಗಿರಬೇಕು ಹಾಗೂ ಸಾಧಿಸುವಂತಿರಬೇಕು. ಇದರಿಂದ ಈ ಗುರಿಗಳತ್ತ ತಮ್ಮ ಗಮನವನ್ನು ಕೇಂದ್ರೀಕರಿಸಿ ಜೀವನದಲ್ಲಿ ನೆಮ್ಮದಿ ಪಡೆಯಬಹುದು.

ಮಕರ: ಡಿಸೆಂಬರ್23-ಜನವರಿ 20

ಮಕರ: ಡಿಸೆಂಬರ್23-ಜನವರಿ 20

ಇವರು ಅತೀವವಾದ ಪ್ರಾಯೋಗಿಕ ವ್ಯಕ್ತಿತ್ವ ಹೊಂದಿದ್ದು ಇದರ ಬಗ್ಗೆ ಅನುಮಾನ ವ್ಯಕ್ತಪಡಿಸುವ ಯಾವುದೇ ವ್ಯಕ್ತಿಗಳ ಬಗ್ಗೆ ಥಟ್ಟನೇ ತಮ್ಮ ಅಭಿಪ್ರಾಯ ಬದಲಿಸಿ ಕೋಪಗೊಳ್ಳುವ ಗುಣ ಹೊಂದಿರುತ್ತಾರೆ. ಈ ವ್ಯಕ್ತಿಗಳು ತಮ್ಮ ಜೀವನದಲ್ಲಿ ಸಮತೋಲನ ಸಾಧಿಸಲು ತಮ್ಮ ದಿನದ ಸಂತೋಷದ ಕ್ಷಣಗಳನ್ನು ಬರೆದಿಟ್ಟು ಈ ಕ್ಷಣಗಳನ್ನೇ ಹೆಚ್ಚು ಹೆಚ್ಚಾಗಿ ಮತ್ತೆ ಮತ್ತೆ ಕಳೆಯುವ ಮೂಲಕ ಜೀವನದಲ್ಲಿ ಧನಾತ್ಮಕ ಧೋರಣೆ ಪಡೆಯಬಹುದು.

ಕುಂಭ: ಜನವರಿ 21-ಫೆಬ್ರವರಿ 18

ಕುಂಭ: ಜನವರಿ 21-ಫೆಬ್ರವರಿ 18

ಇವರು ಮುಕ್ತ ಮನೋಭಾವದ ವ್ಯಕ್ತಿಗಳಾಗಿದ್ದು ಯಾವುದೇ ಬಂಧನದಲ್ಲಿ ಇರಲು ಬಯಸದ ವ್ಯಕ್ತಿಗಳಾಗಿರುತ್ತಾರೆ. ಇದೇ ಕಾರಣಕ್ಕೆ ಇವರು ತಮ್ಮ ಪ್ರೀತಿಪಾತ್ರರ ಒಡನಾಟದಿಂದ ದೂರವಾಗಿದ್ದು ತಮ್ಮ ಇರುವಿಕೆಯನ್ನು ಸುಲಭವಾಗಿ ಊಹಿಸಲು ಅಸಾಧ್ಯವಾಗಿರುವಂತೆ ನಡೆದುಕೊಳ್ಳುತ್ತಾರೆ. ಈ ವ್ಯಕ್ತಿಗಳು ತಮ್ಮ ಜೀವನದಲ್ಲಿ ಸಮತೋಲನ ಸಾಧಿಸಲು ತಮ್ಮ ಆಪ್ತರೊಂದಿಗೆ ಮನಬಿಚ್ಚಿ ಮಾತನಾಡಬೇಕಾಗುತ್ತದೆ ಹಾಗೂ ಅವರ ಭಾವನೆಗಳನ್ನು ಮತ್ತು ಚಿಂತನೆಗಳನ್ನು ಅರ್ಥಮಾಡಿಕೊಂಡು ಆ ಪ್ರಕಾರ ನಡೆದುಕೊಳ್ಳಬೇಕಾಗುತ್ತದೆ.

ಮೀನ:ಫೆಬ್ರವರಿ 19-ಮಾರ್ಚ್ 20

ಮೀನ:ಫೆಬ್ರವರಿ 19-ಮಾರ್ಚ್ 20

ಇವರು ಅತೀವ ಸೂಕ್ಷ್ಮಸಂವೇದಿ ವ್ಯಕ್ತಿತ್ವ ಹೊಂದಿರುತ್ತಾರೆ. ಇದೇ ಇವರನ್ನು ಖ್ಯಾತಿ ಪಡೆಯಲು ನೆರವಾಗುತ್ತದೆ. ಆದರೆ ಇದರಿಂದಾಗಿ ಎದುರಾಗುವ ಮಾನಸಿಕ ಒತ್ತಡದಿಂದ ಆರೋಗ್ಯದ ಮೇಲೆ ಪರಿಣಾಮವನ್ನೂ ಎದುರಿಸಬೇಕಾಗುತ್ತದೆ. ಈ ವ್ಯಕ್ತಿಗಳು ತಮ್ಮ ಜೀವನದಲ್ಲಿ ಸಮತೋಲನ ಸಾಧಿಸಲು ಮನಸ್ಸಿನ ಒತ್ತಡಕ್ಕೆ ಕಾರಣವಾಗುವ ಯಾವುದೇ ಕ್ರಿಯೆಯನ್ನು ನಿಯಂತ್ರಿಸಬೇಕಾಗುತ್ತದೆ. ಇದಕ್ಕಾಗಿ ಇವರು ಇದುವರೆಗೆ ಅನುಸರಿಸಿಕೊಂಡು ಬಂದಿದ್ದ ಕೆಲವು ಮಾರ್ಗಗಳನ್ನು ಅಥವಾ ಯಾವುದೋ ಪರಿಸ್ಥಿತಿಯ ಒತ್ತಡದಿಂದ ಅನುಸರಿಸಿಕೊಂಡು ಬಂದಿರುವ ಜೀವನಶೈಲಿಯನ್ನು ಬದಲಿಸಬೇಕಾಗುತ್ತದೆ.

For Quick Alerts
ALLOW NOTIFICATIONS
For Daily Alerts

    English summary

    How To Find Balance In Life, Based On Your Zodiac Sign

    Do you know that there are certain things that are connected to our behaviour and personality? Certain guidance based on your zodiac sign will help you to lead a perfect life. To maintain balance in our individual lives, there are certain things that we need to follow and if these things are connected to our zodiac signs, then there is nothing better than that! So, check out on how you can make your life better by following certain advices and tips based on your zodiac sign...
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more