For Quick Alerts
ALLOW NOTIFICATIONS  
For Daily Alerts

ವಿಸ್ಮಯ ಜಗತ್ತು: ಇದುವರೆಗೆ ದಾಖಲಿಸಲ್ಪಟ್ಟ ವಿಲಕ್ಷಣ ಸಾವುಗಳು

By Super
|

ಈ ಜಗತ್ತಿನಲ್ಲಿ ಅನಿವಾರ್ಯವಾದುದೆಂದರೆ ಸಾವು ಮತ್ತು ಸುಂಕ ಎಂಬ ಕುಹಕನುಡಿಯೊಂದಿದೆ. ಹುಟ್ಟಿದವರೆಲ್ಲರೂ ಒಂದಲ್ಲಾ ಒಂದು ದಿನ ಸಾಯಲೇಬೇಕು. ಇದು ನಿಸರ್ಗನಿಯಮ. ಆದರೆ ಈ ದಿನ ಯಾವುದು ಎಂದು ಯಾರಿಗೂ ಗೊತ್ತಿಲ್ಲ. ಆದರೆ ಆಯಸ್ಸು ತೀರುವ ಮುನ್ನವೇ ಹಲವರು ತಮ್ಮದಲ್ಲದ ಕಾರಣಕ್ಕೆ ಸಾವನ್ನಪ್ಪುತ್ತಾರೆ. ಉದಾಹರಣೆಗೆ ಅಪಘಾತ, ಆತಂಕವಾದ, ನೈಸರ್ಗಿಕ ಪ್ರಕೋಪ ಇತ್ಯಾದಿ. ಇನ್ನೂ ಕೆಲವರು ಜೀವನದಲ್ಲಿ ಹತಾಶರಾಗಿ ಆತ್ಮಹತ್ಯೆಗೆ ಶರಣಾಗುತ್ತಾರೆ.

ನಮ್ಮ ಸರ್ಕಾದಲ್ಲಿಯೂ ಜನನ ಮರಣದ ದಾಖಲೆಗಳ ವಿಭಾಗವಿದ್ದು ಇಲ್ಲಿ ಪ್ರತಿ ಜನನ ಮತ್ತು ಮರಣಗಳ ಬಗ್ಗೆ ವಿವರ ಸಲ್ಲಿಸುವುದು ಪ್ರತಿಯೊಬ್ಬರ ಕರ್ತವ್ಯವೂ ಆಗಿದೆ. ಆದರೆ ಕೆಲವು ಸಾವುಗಳು ವಿಲಕ್ಷಣ ಕಾರಣಗಳಿಂದಾಗಿದ್ದು ಇವುಗಳನ್ನೂ ದಾಖಲಿಸಲಾಗಿದೆ. ಈ ವಿಲಕ್ಷಣ ಕಾರಣಗಳ ಬಗ್ಗೆ ತಿಳಿದುಬಂದರೆ ಬೆನ್ನುಹುರಿಯಲ್ಲಿ ಚಳಕು ಮೂಡುತ್ತದೆ. ಸಾವನ್ನು ಪಡೆಯಲು ಜನರು ಎಂತಹ ಚಿತ್ರವಿಚಿತ್ರ ವಿಧಾನಗಳನ್ನು ಅನುಸರಿಸಿದ್ದರು ಎಂದು ತಿಳಿದುಬಂದರೆ ಇದರ ಯೋಚನೆಯೇ ಚಳಿ ಹುಟ್ಟಿಸಬಹುದು. ಬನ್ನಿ ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೋಡೋಣ...

ಟೀವಿಯ ವೈರು ಕತ್ತರಿಸುವಾಗ

ಟೀವಿಯ ವೈರು ಕತ್ತರಿಸುವಾಗ

ಎಲ್ಸಿಡಿ ಎಲ್ ಇಡಿ ಟೀವಿಗೂ ಮುನ್ನ ಇದ್ದ ಕ್ಯಾಥೋಡ್ ರೇ ಟ್ಯೂಬ್ ಟೀವಿ ಸೆಟ್ಟುಗಳ ಹಿಂದೆ ಪಿಕ್ಚರ್ ಟ್ಯೂಬ್ ಎಂಬ ಡೋಮಕ್ಕೆ ದಪ್ಪನಾದ ವೈರು ಜೋಡಿಸಿರುತ್ತಾರೆ. ಕಪ್ಪು ಬಿಳಿಪು ಟೀವಿಗೆ 18kv ಅಂದರೆ ಹದಿನೆಂಟು ಸಾವಿರ ವೋಲ್ಟುಗಳ ಕರೆಂಟ್ ಇರುತ್ತದೆ. ಕಲರ್ ಟ್ಯೂಬ್ ನಲ್ಲಿ 24kv ಇರುತ್ತದೆ. ಇದನ್ನು ಸರ್ವಥಾ ಮುಟ್ಟಕೂಡದು. ಆದರೆ ಮೈಕಲ್ ಆಂಡರ್ಸನ್ ಗಾಡ್ವಿನ್ ಎಂಬ ಯುವಕ ಲೋಹದ ಪಾತ್ರೆಯೊಂದನ್ನು ಬೋರಲಾಗಿಟ್ಟು ಅದರ ಮೇಲೆ ಕುಳಿತು ಇಂತಹ ಒಂದು ಹಳೆಯ ಟೀವಿ ರಿಪೇರಿ ಮಾಡುತ್ತಿದ್ದ. ಗೊತ್ತಿಲ್ಲದೇ ನೇರವಾಗಿ ಈ ಅಧಿಕ ವೋಲ್ಟೇಜಿನ ವೈರನ್ನು ತುಂಡರಿಸಿದ! ಅಷ್ಟೇ ಮರುಕ್ಷಣ ಪರಂಧಾಮಕ್ಕೆ ಕಳುಹಿಸಲ್ಪಟ್ಟಿದ್ದ.

ಕಾರಿನ ಗಾಜಿಗೆ ಸಿಕ್ಕಿ ಸತ್ತ ಯುವಕ

ಕಾರಿನ ಗಾಜಿಗೆ ಸಿಕ್ಕಿ ಸತ್ತ ಯುವಕ

ಛಾಂಟೆ ಜಾವಾನ್ ಮಾಲ್ಲಾರ್ಡ್ ಎಂಬ ಯುವತಿ ತನ್ನ ಕಾರನ್ನು ಪಾನಮತ್ತ ಸ್ಥಿತಿಯಲ್ಲಿ ಚಲಾಯಿಸುತ್ತಿದ್ದಾಗ ಕಾರು ಎತ್ತ್ತ ಸಾಗುತ್ತಿದೆ ಎಂಬ ಪರಿವೆಯೇ ಇಲ್ಲದೇ ಪಾದಾಚಾರಿಯೊಬ್ಬನಿಗೆ ಢಿಕ್ಕಿ ಹೊಡೆದಿತ್ತು. ಢಿಕ್ಕಿಯ ಆಘಾತಕ್ಕೆ ಆತನ ತಲೆ ನೇರವಾಗಿ ಕಾರಿನ ಗಾಜಿನೊಳಗೆ ತೂರಿ ಕುತ್ತಿಗೆಯನ್ನು ಕಬಂಧಕ ಬಾಹುಗಳಂತೆ ಅಪ್ಪಿಕೊಂಡಿತ್ತು. ಆದರೆ ಪಾನಮತ್ತ ಯುವತಿಗೆ ಇದರ ಪರಿವೆಯೇ ಇಲ್ಲದೇ ಅದೇ ಸ್ಥಿತಿಯಲ್ಲಿ ತನ್ನ ಮನೆಯವರೆಗೂ ಓಡಿಸಿಕೊಂಡು ಹೋಗಿದ್ದಳು. ಪಾಪದ ಯುವಕನ ಕುತ್ತಿಗೆಯಿಂದ ರಕ್ತ ಸೋರುತ್ತಿದ್ದಂತೆಯೇ ಅಲ್ಲಿಯೇ ಸಾವನ್ನಪ್ಪಿದ್ದ.

Image courtesy

ಉಪ್ಪರಿಗೆ ಮೇಲಿನಿಂದ ದನ ಬಿದ್ದು ಸತ್ತ ವ್ಯಕ್ತಿ

ಉಪ್ಪರಿಗೆ ಮೇಲಿನಿಂದ ದನ ಬಿದ್ದು ಸತ್ತ ವ್ಯಕ್ತಿ

ಹೀಗೂ ಸಾವು ಬರಬಹುದು ಎಂದು ಯಾರೂ ಊಹಿಸಿರಲಾರರು, ಅದರಲ್ಲೂ ಒಂದು ದನ ಉಪ್ಪರಿಗೆಯ ಮೇಲಿನಿಂದ ಬಿದ್ದು! ಹೌದು, ಜೋವಾವೋ ಮಾರಿಯಾ ಡಿಸೋಜಾ ಎಂಬ ವ್ಯಕ್ತಿ ತನ್ನ ಮನೆಯ ಹೊರಭಾಗದಲ್ಲಿ ನಿಂತಿದ್ದಾಗ ದನವೊಂದು ಉಪ್ಪರಿಗೆಯ ಮೇಲಿನಿಂದ ನೇರವಾಗಿ ಇವನ ಮೇಲೆ ಬಿದ್ದಿತ್ತು. ಅ ದನದ ಆಗಾಧ ಭಾರವನ್ನು ತಾಳಲಾರದೇ ತಕ್ಷಣವೇ ಸತ್ತಿದ್ದ. ಅಷ್ಟಕ್ಕೂ ಮೆಟ್ಟಿಲ ಮೇಲೆ ಹೋಗಲೊಲ್ಲದ ದನ ಮೇಲೆ ಹೋಗಿದ್ದಾದರೂ ಹೇಗೆ? ಮೇವನ್ನರಸುತ್ತಾ ಹಿಂಭಾಗದ ಉಪ್ಪರಿಗೆ ಗುಡ್ಡದ ಅಂಚಿಗೆ ಸಮಾನವಾಗಿದ್ದು ಅಲ್ಲಿಂದ ದನ ಮನೆಯ ಮಾಡಿನ ಸಂದಿನಲ್ಲಿ ಬೆಳೆದಿದ್ದ ಹುಲ್ಲನ್ನು ತಿನ್ನಲು ಹೋಗಿರಬಹುದು ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ.

Image courtesy

ಗರಗಸದಿಂದ ಆತ್ಮಹತ್ಯೆ

ಗರಗಸದಿಂದ ಆತ್ಮಹತ್ಯೆ

ಹ್ಯಾಂಪ್ಷೈರ್ ಪ್ರಾಂತದ ಬಿಷಪ್ ಸ್ಟೋಕ್ ಎಂಬ ಪಟ್ಟಣದ ಐವತ್ತು ವರ್ಷ ವಯಸ್ಸಿನ ಡೇವಿಡ್ ಫಿಲ್ ಸತ್ತದ್ದು ಮಾತ್ರ ಯಾರೂ ಊಹಿಸದ ವಿಲಕ್ಷಣ ವಿಧಾನದಿಂದ. ಅಂದರೆ ಒಂದು ಗರಗಸವನ್ನು ಟೈಮರ್ ಗಡಿಯಾರದ ಮೂಲಕ ಉಪಕರಣವೊಂದಕ್ಕೆ ಅಳವಡಿಸಿ ನೇರವಾಗಿ ಕುತ್ತಿಗೆ ಕುಯ್ಯುವಂತೆ ಪ್ರೋಗ್ರಾಂ ಮಾಡಿದ್ದ. ಈ ವಿಧಾನದಲ್ಲಿ ಕೆಲವೇ ಸೆಕೆಂಡುಗಳಲ್ಲಿ ಗರಗಸ ಚಕಚಕನೆ ಕುಯ್ಯುತ್ತಾ ಕೆಳಬರುತ್ತಾ ದಾರಿಯಲ್ಲಿದ್ದ ಎಲ್ಲವನ್ನೂ ಕತ್ತರಿಸಿ ಹಾಕುತ್ತಿತ್ತು. ಬಳಿಕ ತನ್ನ ಕುತ್ತಿಗೆಯನ್ನೇ ಇದರ ಕೆಳಗಿಟ್ಟು ಟೈಮರ್ ಬಟನ್ ಆನ್ ಮಾಡಿದ್ದ. ಕೊಂಚ ಹೊತ್ತಿನ ಬಳಿಕ ಬಂದವರಿಗೆ ಈತನ ಶವ ಕಂಡುಬಂದಿದ್ದು ರುಂಡ ಪೂರ್ಣವಾಗಿ ಕತ್ತರಿಸದೇ ಮುಕ್ಕಾಲು ಭಾಗ ತುಂಡಾಗಿ ನೇತಾಡುತ್ತಿದ್ದ ಸ್ಥಿತಿಯಲ್ಲಿ ಕಂಡುಬಂದಿತ್ತು.

Image source

ಒತ್ತಡದಲ್ಲಿ ನಡೆಸಿದ ಸ್ಫೋಟ

ಒತ್ತಡದಲ್ಲಿ ನಡೆಸಿದ ಸ್ಫೋಟ

ನಾರ್ವೆ ದೇಶದ 'ಬೈಫೋರ್ಡ್ ಡಾಲ್ಫಿನ್' ಎಂಬ ಹೆಸರಿನ ತೈಲದ ರಿಗ್ ಒಂದರಲ್ಲಿ ಚಾಲಕನಾಗಿದ್ದ ಟ್ರಸ್ ಹ್ಯಾಲೆವಿಕ್ ಎಂಬಾತ ಸತ್ತ ವಿಧಾನವಂತೂ ಅತ್ಯಂತ ಅಮಾನುಷ ಮತ್ತು ಭೀಕರವಾಗಿದೆ. ತನ್ನ ಶರೀರವನ್ನೇ ಸ್ಪೋಟಕಗಳ ನಡುವೆ ಇಟ್ಟು ಸ್ಪೋಟಿಸಿ ತೈಲದ ರಿಗ್ ಒಂದರ ಮೇಲೆಲ್ಲಾ ತುಂಡುಗಳು ಚೆಲ್ಲಾಡುವಂತೆ ಮಾಡಿದ್ದ. ಈ ಸ್ಪೋಟ ಎಷ್ಟು ಭಯಾನಕವಾಗಿತ್ತೆಂದರೆ ಈತನ ಬೆನ್ನುಹುರಿಯ ಒಂದು ಭಾಗ ಸುಮಾರು ಮೂವತ್ತು ಅಡಿ ದೂರ ಹೋಗಿ ಬಿದ್ದಿತ್ತು. ಬಳಿಕ ನಡೆಸಿದ ತನಿಖೆಯಲ್ಲಿ ಈತ ಒಂದು ಚಿಕ್ಕ ಕೋಣೆಯಲ್ಲಿ ಹೆಚ್ಚು ಒತ್ತಡವುಂಟು ಮಾಡಿ ಸ್ಪೋಟಕ ಸ್ಪೋಟಿಸುವಂತೆ ಮಾಡಿದ್ದ ಹಾಗೂ ಸಮಯ ಕಾದು ಈ ಕೋಣೆಯಲ್ಲಿ ಕುಳಿತು ತನ್ನ ಆತ್ಮಹತ್ಯೆಯ ವಿಧಾನವನ್ನು ಕಾರ್ಯಗತಗೊಳಿಸಿದ್ದ ಎಂದು ತಿಳಿದುಬಂದಿದೆ.

Image Courtesy

ಆನೆಯಿಂದ ತುಳಿಸಿ ಸಾವು

ಆನೆಯಿಂದ ತುಳಿಸಿ ಸಾವು

ಭಾರತದ ಇತಿಹಾಸವನ್ನು ಓದಿದವರಿಗೆ ಈ ವಿಷಯ ತಿಳಿದೇ ಇರುತ್ತದೆ. ಸುಮಾರು ನೂರೈವತ್ತು ವರ್ಷಗಳ ಹಿಂದೆ ತಪ್ಪಿತಸ್ಥರನ್ನು ನೆಲದಲ್ಲಿ ಕೇವಲ ರುಂಡ ಮಾತ್ರ ನೆಲದ ಹೊರಗೆ ಇರುವಂತೆ ಹುಗಿದು ಇವರ ತಲೆಯ ಮೇಲೆ ಆನೆ ಕಾಲಿಟ್ಟು ಹೋಗುವಂತಹ ಶಿಕ್ಷೆ ವಿಧಿಸಲಾಗುತ್ತಿತ್ತು. ದಾಖಲೆಗಳ ಪ್ರಕಾರ ಆನೆಗಳು ತಮ್ಮ ಕಾಲನ್ನು ನೇರವಾಗಿ ತಲೆಯ ಮೇಲಿಡುತ್ತಿದ್ದವು. ಆದರೆ ಇದನ್ನೂ ಹಿಂದೆ ಅಂದರೆ ಇನ್ನೂರು ವರ್ಷಗಳ ಹಿಂದೆ ಆನೆಗಳ ಕಾಲುಗಳಿಗೆ ಲೋಹದ ಪಟ್ಟಿಗಳನ್ನು ಕತ್ತಿಯ ಅಲಗಿನಂತೆ ಹರಿತವಾಗಿಸಿ ಆನೆಯ ಕಾಲುಗಳ ಕೆಳಗಿ ಲಾಳದಂತೆ ಕೂರಿಸಲಾಗುತ್ತಿತ್ತು. ಈ ಲಾಳದ ಕಾಲನ್ನು ತಲೆಯ ಮೇಲಿಟ್ಟು ನಡೆದರೆ ತಲೆ ಚೂರು ಚೂರಾಗಿ ಹೋಗುತ್ತಿತ್ತಂತೆ, ಆದರೆ ಈ ವಿಧಾನದ ಬಗ್ಗೆ ಸ್ಪಷ್ಟವಾದ ದಾಖಲೆ ಅಥವಾ ಸಾಕ್ಷ್ಯಗಳಿಲ್ಲ.

Image courtesy

ಹಾರುವ ಹುಲ್ಲು ಕತ್ತರಿಸುವ ಯಂತ್ರಯಿಂದ ಬಂದ ಸಾವು

ಹಾರುವ ಹುಲ್ಲು ಕತ್ತರಿಸುವ ಯಂತ್ರಯಿಂದ ಬಂದ ಸಾವು

ಹುಲ್ಲು ಕತ್ತರಿಸುವ ಯಂತ್ರ ನೆಲದ ಮೇಲೆ ಓಡಾಡುವ ಯಂತ್ರವಾಗಿದೆ. ಆದ್ರೆ ಜಾನ್ ಬೊವೆನ್ ಎಂಬಾತನ ಪಾಲಿಗೆ ಈ ಯಂತ್ರ ಹಾರುವ ಯಂತ್ರದ ರೂಪದ ಯಮನಾಗಿ ಪರಿಣಮಿಸಿತ್ತು. ಯಾವುದೋ ಘಳಿಗೆಯಲ್ಲಿ ಕೊಂಚ ದೂರದಿಂದ ಹಾರಿದ ಈ ಯಂತ್ರದ ಬುಡದಲ್ಲಿರುವ ಹರಿತವಾದ ಕತ್ತಿಗಳು ವೇಗದಿಂದ ತಿರುಗುತ್ತಿರುವಂತೆಯೇ ನೇರವಾಗಿ ತಲೆಯ ಮೇಲೆ ಬಿದ್ದು ಆತನ ದೇಹವನ್ನು ಕೊಡಲಿಯಿಂದ ಸೀಳಿದಂತೆ ಸೀಳಿ ಸೀಳಿ ಹಾಕಿಬಿಟ್ಟಿತ್ತು.

Image courtesy

English summary

Most Bizarre Deaths Ever Recorded

Death is something that cannot be stopped, changed or put on hold. When it is time for you to tell the world a final adieu you would have to and there can be nothing that can stop you from it. In this article, we are here to share some of the most bizarre deaths that have ever been recorded. Read on to know more about the most untimely deaths that can give you nightmares with just the thought of it.
X
Desktop Bottom Promotion