For Quick Alerts
ALLOW NOTIFICATIONS  
For Daily Alerts

Dasara 2022: ದಸರಾ ಮುಹೂರ್ತ ಯಾವಾಗ? ವಿಜಯದಶಮಿ ಮಹತ್ವವೇನು?

|

ನಾಡಹಬ್ಬ ದಸರಾ ಹಬ್ಬ ಆಚರಣೆಗೆ ನಾಡಿನ ಜನತೆ ಸಿದ್ಧತೆ ನಡೆಸುತ್ತಿದ್ದಾರೆ. ನವರಾತ್ರಿ ಕಳೆದ ಮಾರನೇಯ ದಿನ ನಾಡಹಬ್ಬವಾದ ದಸರಾವನ್ನು ತುಂಬಾ ವಿಜೃಂಭಣೆಯಿಂದ ಆಚರಣೆಗೆ ಈಗಾಗಲೇ ಸಿದ್ಧತೆಗಳು ನಡೆಯುತ್ತಿವೆ.

ಮೈಸೂರು ದಸರಾ ವಿಶ್ವ ಪ್ರಸಿದ್ಧವಾದ ಹಬ್ಬವಾಗಿದೆ. ಈ ದಸರಾ ವೈಭೋಗ ಕಣ್ತುಂಬಿಗಳು ದೇಶ-ವಿದೇಶಗಳಿಂದ ಲಕ್ಷಾಂತರ ಭಕ್ತರು-ಪ್ರವಾಸಿಗರು ಮೈಸೂರಿಗೆ ಆಗಮಿಸುತ್ತಾರೆ. ಎರಡು ವರ್ಷಗಳಿಂದ ಕೊರೊನಾ ಕಾರಣದಿಂದಾಗಿ ಮೈಸೂರು ದಸರಾವನ್ನು ವಿಜೃಂಭಣೆಯಿಂದ ಆಚರಿಸಲು ಸಡಗರ ಸಂಭ್ರಮದಿಂದ ಕರ್ನಾಟಕದ ಜನತೆ ಸಿದ್ಧತೆ ನಡೆಸುತ್ತಿದ್ದಾರೆ. ಈ ವರ್ಷ ದಸರಾ ಹಬ್ಬವನ್ನು ಯಾವಾಗ ಆಚರಿಸಲಾಗುವುದು, ವಿಜಯ ಮುಹೂರ್ತ ಯಾವಾಗ ಎಂದು ನೋಡೋಣ ಬನ್ನಿ:

ದಸರಾ ಯಾವಾಗ?

ದಸರಾ ಯಾವಾಗ?

ದಸರಾ ಹಾಗೂ ವಿಜಯದಶಮಿ ತುಂಬಾ ಮಹತ್ವಾದ ಹಬ್ಬವಾಗಿದ್ದು ಇದನ್ನು ಅಶ್ವಿನಿ ಮಾಸದ ನವರಾತ್ರಿಯ ಮಾರನೇಯ ದಿನ ಅಂದರೆ 10ನೇ ಆಚರಿಸಲಾಗುವುದು. ಈ ವರ್ಷ ದಸರಾ ಹಬ್ಬವನ್ನು ಅಕ್ಟೋಬರ್ 5ರಂದು ಆಚರಿಸಲಾಗುವುದು.

ದಶಮಿ ತಿಥಿ ಪ್ರಾರಂಭ ಅಕ್ಟೋಬರ್ 4 ಮಧ್ಯಾಹ್ನ 2:20ಕ್ಕೆ (ಮಂಗಳವಾರ)

ದಶಮಿ ತಿಥಿ ಮುಕ್ತಾಯ: ಅಕ್ಟೋಬರ್‌ 5 ಮಧ್ಯಾಹ್ನ 12ಕ್ಕೆ (ಬುಧವಾರ)

ದಸರಾ ಮುಹೂರ್ತ

ದಸರಾ ಮುಹೂರ್ತ

ದಶಮಿ ತಿಥಿ ಪ್ರಾರಂಭ: ಅಕ್ಟೋಬರ್ 4 ಮಧ್ಯಾಹ್ನ 2:20ಕ್ಕೆ

ದಶಮಿ ತಿಥಿ ಮುಕ್ತಾಯ: ಅಕ್ಟೋಬರ್ 5 ಮಧ್ಯಾಹ್ನ 12 ಗಂಟೆಗೆ

ಶ್ರವಣ ನಕ್ಷತ್ರ ಪ್ರಾರಂಭ: ಅಕ್ಟೋಬರ್ 4, ರಾತ್ರಿ 10:51ಕ್ಕೆ

ಶ್ರವಣ ನಕ್ಷತ್ರ ಮುಕ್ತಾಯ: ಅಕ್ಟೋಬರ್ 5 ರಾತ್ರಿ 9:15ಕ್ಕೆ

ಅಮೃತ ಕಾಲ: ಅಕ್ಟೋಬರ್ 5 ಬೆಳಗ್ಗೆ 11:33ರಿಂದ ಮಧ್ಯಾಹ್ನ 01:02ರವರೆಗೆ

ವಿಜಯ ದಶಮಿ

ವಿಜಯ ದಶಮಿ

ವಿಜಯ ದಶಮಿಯನ್ನು ದುಷ್ಟನನ್ನು ಸಂಹರಿಸಿದ ವಿಜಯದ ದಿನವಾಗಿದೆ. ಈ ದಿನ ದುರ್ಗಾ ದೇವಿ ಮಹಿಷಾಸುರ ಎಂಬ ರಾಕ್ಷಸನನ್ನು ಸಂಹರಿಸಿದಳು ಎಂಬ ಪೌರಾಣಿಕ ಕತೆಯಿದೆ. ಯಾವುದೇ ಮನುಷ್ಯನಿಂದ, ದೇವರಿಂದ ಅಥವಾ ವಿಶಿಷ್ಟ ಶಕ್ತಿಯಿಂದ ತನ್ನನ್ನು ಸಂಹರಿಸಲು ಸಾಧ್ಯವಾಗಬಾರದು ಎನ್ನುವ ವರವನ್ನು ಪಡೆದಿದ್ದ ಈ ರಾಕ್ಷಸ ಮೂರು ಲೋಕಕ್ಕೆ ಸಾಕಷ್ಟು ತೊಂದರೆಗಳನ್ನು ನೀಡುತ್ತಿದ್ದ. ಆಗ ದೇವಿ ದುರ್ಗೆಯ ಅವತಾರದಲ್ಲಿ ಬಂದು ಮಹಿಷಾಸುರನನ್ನು ಸಂಹರಿಸಿದ ದಿನವನ್ನು ವಿಜಯ ದಶಮಿಯಂದು ಆಚರಿಸಲಾಗುವುದು.

ರಾವಣನ ದಹನ ಮಾಡಲಾಗುವುದು

ರಾವಣನ ದಹನ ಮಾಡಲಾಗುವುದು

ವಿಜಯ ದಶಮಿಗೂ ರಾಮಾಯಣಕ್ಕೆ ಸಂಬಂಧವಿದೆ. ವಿಜಯ ದಶಮಿಯಂದು ರಾವಣ ದಹನ ಮಾಡುವ ಪದ್ಧತಿ ಕೂಡ ಇದೆ. ಈ ದಿನ ಶ್ರೀ ರಾಮ ದೇವಿ ಆಶೀರ್ವಾದ ಪಡೆದು ರಾವಣನನ್ನು ಸೋಲಿಸಿ ಪತ್ನಿಯನ್ನು ಸೆರೆಯಿಂದ ಬಿಡಿಸಿದ ಎಂದು ರಾಮಾಯಣದಲ್ಲಿ ಹೇಳಲಾಗಿದೆ. ವಿಜಯದಶಮಿ ಎಂಬುವುದು ಒಳ್ಳೆಯತನ ಗೆಲ್ಲುತ್ತದೆ, ಸತ್ಯ ಗೆಲ್ಲುತ್ತದೆ ಎಂಬುವುದರ ಸಂಕೇತವಾಗಿದೆ.

English summary

Dasara 2022 Date, Time, History, Rituals and Significance of Vijayadashami in kannada

Dasara 2022: Here are dasara date, vijayadashami muhurat, ravan dahan time and significance of vijayadashami read on.
X
Desktop Bottom Promotion