Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
8 ಬಾರಿ ಅಂಬಾರಿ ಹೊತ್ತ ಅರ್ಜುನ ಇನ್ನಿಲ್ಲ: ಬದುಕಿದ್ದಾಗ ರಾಜನಂತೆ ಮೆರೆದ, ಸತ್ತಾಗ ಮಾವುತನ ರಕ್ಷಿಸಿ ವೀರ ಮರಣವನ್ನಪ್ಪಿದ
ಅರ್ಜುನ, ಮೈಸೂರು ದಸಾರದ ಸಮಯದಲ್ಲಿ ತುಂಬಾನೇ ಕೇಳಿ ಬರುತ್ತಿದ್ದ ಹೆಸರು... 8 ವರ್ಷಗಳ ಮೈಸೂರು ದಸರಾದಲ್ಲಿ ಅಂಬಾರಿಯನ್ನು ಹೊತ್ತು ಸಾಗಿದ ಹೆಗ್ಗಳಿಕೆ ಅರ್ಜುನನಿಗೆ ಸಲ್ಲುತ್ತೆ, ಅಂಬಾರಿ ಹೊತ್ತು ಅರ್ಜುನ ಹೆಜ್ಜೆ ಹಾಕುತ್ತಿದ್ದರೆ ಲಕ್ಷಾಂತಕರ ಕಣ್ಣು ಈ ಗಜನ ಮೇಲೆ. ಅಲ್ಲದೆ ವೀರತ್ವದಲ್ಲಿಯೂ ಗುರುತಿಸಿಕೊಂಡಿದ್ದ ಅರ್ಜುನ ಇನ್ನು ನೆನಪು ಮಾತ್ರ.
ಘೋರ ಸಾವನ್ನಪ್ಪಿದ ಅರ್ಜುನ
ಕಾಡಾನೆ ಸೆರೆಹಿಡಿಯುವ ಕಾರ್ಯಾಚರಣೆಯಲ್ಲಿ ಬಾಗಿಯಾಗಿದ್ದ ಅರ್ಜುನ ತನ್ನ ಮಾವುತನ ರಕ್ಷಿಸಲು ಹೋಗಿ ತನ್ನ ಪ್ರಾಣವನ್ನು ಕಳೆದುಕೊಂಡಿದ್ದಾನೆ. ಕಾಡಾನೆ ವಿರುದ್ಧ ಒಬ್ಬಂಟಿಯಾಗಿ ಕಾದಾಟಕ್ಕಿಳಿದ ಅರ್ಜುನ ಬೇರೆಯವರ ರಕ್ಷಣೆ ಮಾಡಿ ತನ್ನ ಪ್ರಾಣ ಬಿಟ್ಟಿದ್ದಾನೆ, ಬದುಕಿದ್ದಾಗ ರಾಜನಂತೆ ಮೆರೆದ, ಸತ್ತಾಗ ವೀರನಾಗಿ ಸತ್ತ ನಮ್ಮ ಅರ್ಜುನ.

ಅರ್ಜುನನ ಅಕಾಲಿಕ ಮರಣ ಎಂಥವರ ಮನಸ್ಸು ಕದಡುತ್ತಿದೆ
ಅರ್ಜುನ ಹೇಗೆ ಸತ್ತ ಎಂದು ಕೇಳಿದಾಗ ಅವನ ಮೇಲೆ ತುಂಬಾನೇ ಗೌರವ ಮೂಡುತ್ತದೆ. ಕಾಡಾನೆಯನ್ನು ಸೆರೆ ಹಿಡಿಯುವ ಕಾರ್ಯಾಚರಣೆ ಅಂದರೆ ಸಾಮಾನ್ಯವಾದ ಕಾರ್ಯವಲ್ಲ. ಅದರಲ್ಲೂ ಒಂಟಿ ಸಲಗವೆಂದ ಮೇಲೆ ಅಪಾಯ ಇನ್ನೂ ಹೆಚ್ಚು, ಎಷ್ಟು ಸುರಕ್ಷತೆವಹಿಸಿದರೂ ಸಾಲದು. ಸಕಲೇಶಪುರು ತಾಲ್ಲೂಕಿನ ಯಸಳೂರು ವಲಯದ ಬಾಳೆಕೆರೆ ಕಾಡಾನೆಯಲ್ಲಿ ರೇಡಿಯೋ ಕಾಲರ್ ಅಳವಡಿಕೆ ಮಾಡಲು ಆನೆಗಳ ಸೆರೆ ಹಿಡಿಯುವ ಕಾರ್ಯಾಚರಣೆ ನಡೆಸಲಾಗಿತ್ತು.
ಎಲ್ಲರು ಒಂಟಿಸಲಗವನ್ನು ಹಿಡಿಯಲು ಪ್ಲ್ಯಾನ್ ಮಾಡಿದರು. ಆದರೆ ಒಂಟಿ ಸಲಗ ರೊಚ್ಚಿಗೆದ್ದು ಆಕ್ರಮಣ ಮಾಡಲು ಬರುತ್ತದೆ, ಮೊದಲಿಗೆ ಸಾಕಾನೆಗಳ ಮೇಲೆ ದಾಳಿ ಮಾಡುತ್ತದೆ. ಒಂಟಿಸಲಗದ ಆರ್ಭಟಕ್ಕೆ ಹೆದರಿದ ಇತರ ಆನೆಗಳು ಅಲ್ಲಿಂದ ಜಾಗ ಖಾಲಿ ಮಾಡುತ್ತವೆ, ಆವಾಗ ಆ ಒಂಟಿ ಸಲಗ ಅಲ್ಲಿದ್ದ ಅರಣ್ಯಾಧಿಕಾರಿಗಳು ಹಾಗೂ ಮಾವುತನ ಮೇಲೆ ದಾಳಿಗೆ ಮುಂದಾಗುತ್ತದೆ, ಇದನ್ನು ನೋಡಿದ ಅರ್ಜುನ ಅವರ ರಕ್ಷಣೆ ಮುಂದಾಗುತ್ತಾನೆ. ಆ ಕಾಡಾನೆಯನ್ನು ಸಮರ್ಥವಾಗಿ ಎದುರಿಸಿ ನಿಲ್ಲುತ್ತಾನೆ. ಅರ್ಜುನ ಮೊದಲಿನಿಂದಲೂ ಹಾಗೆಯೇ ಎಂಥದ್ಧೇ ಪರಿಸ್ಥಿತಿ ಇರಲಿ ಹೆದರಿ ಹಿಂದೇಟು ಹಾಕುತ್ತಿರಲಿಲ್ಲ.
ಒಂಟಿಯಾಗಿಯೇ ಸಲಗವನ್ನು ಎದುರಿಸಿದೆ, ಅಷ್ಟೊತ್ತಿಗೆ ಅರಣ್ಯ ಸಿಬ್ಬಂದಿ ಹಾಗೂ ಮಾವುತ ಸುರಕ್ಷಿತ ಸ್ಥಳ ತಲುಪುತ್ತಾರೆ, ಕಾಡಾನೆ ಅರ್ಜುನನ ಹೊಟ್ಟೆಗೆ ತಿವಿದಿದೆ. ಅರ್ಜುನ ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ತಿಳಿದ ಮೇಲೆ ಕುಸಿದು ಬಿದ್ದ ಎಂದು ಅದನ್ನು ಪ್ರತ್ಯಕ್ಷ ನೋಡಿದವರು ಹೇಳುತ್ತಾರೆ. ತನ್ನ ನಂಬಿ ಬಂದವರನ್ನು ರಕ್ಷಿಸಿ ಅರ್ಜುನ ವೀರ ಮರನವೊಂದಿದ್ದಾನೆ.
ಪ್ರೀತಿಯ ಅರ್ಜುನ ಇನ್ನಿಲ್ಲ ಎಂದು ತಿಳಿದು ನಾನು ಅನಾಥನಾದೆ ಎಂದು ಗೋಳಾಡಿದ ಮಾವುತ
ತನ್ನನ್ನು ತನ್ನ ಮನೆಯವರಿಗಿಂತ ಹೆಚ್ಚು ಪ್ರೀತಿಸುತ್ತಿದ್ದ ಅರ್ಜುನ ಮರಣವೊಂದಿದ ಎಂದು ತಿಳಿದಾಗ ಅರ್ಜುನ ಆನೆಯನ್ನು ತಬ್ಬಿಕೊಂಡು ಬಿಕ್ಕಿ ಬಿಕ್ಕಿ ಅತ್ತ ದೃಶ್ಯ ಮನಕಲುವಂತಿತ್ತು, ಆತ ಅರ್ಜುನನ ಅಗಲಿಕೆಯ ನೋವು ಸಹಿಸಲಾಗದೆ ಕುಸಿದುಬಿದ್ದಿದ್ದಾನೆ, ಮಾವುತನನ್ನು ಆಸ್ಪತ್ರೆಗೆ ಕರೆದುಕೊಮಡು ಹೋಗಿ ಚಿಕಿತ್ಸೆ ನೀಡಲಾಗುತ್ತಿದೆ.
ಅರ್ಜುನನ ಸಾವು ಜನತೆಗೆ, ಅರಣ್ಯ ಇಲಾಖೆಗೆ ಭರಿಸಲಾರದ ನಷ್ಟ, ಅವನು ಈ ಆನೆಗಳನ್ನು ಸೆರೆ ಹಿಡಿಯುವ ಕಾರ್ಯದಲ್ಲಿ ತನ್ನ ಸಾಮರ್ಥ್ಯ ಜೊತೆಗೆ ಬುದ್ಧಿವಂತಿಕೆಯಿಂದ ಗಮನ ಸೆಳೆಯುತ್ತಿದ್ದ. ಬಹುಶಃ ಇತರ ಆನೆಗಳು ಹೆದರಿ ಓಡದಿದ್ದರೆ ಎಲ್ಲರೂ ಸೇರಿ ಆ ಒಂಟಿಸಲಗವನ್ನು ಹಿಡಿಯಬಹುದಿತ್ತೇನೋ, ಆದರೆ ವಿಧಿಯ ಆಟವೇ ಬೇರೆ ಇತ್ತು ಕಾಣುತ್ತೆ, ಅರ್ಜುನ ಒಂಟಿಯಾಗಿ ಕಾದಾಡಿ ಮರಣವೊಂದಿದ್ದಾನೆ. ತನ್ನ ಮಾವುತನಿಗಾಗಿ ತನ್ನ ಪ್ರಾಣವನ್ನೇ ನೀಡಿದ್ದಾನೆ.
ಅರ್ಜುನ ಇಡೀ ಕನ್ನಡಿಗರಿಗೆ ಚಿರಪರಿಚಿತ, ಏಕೆಂದರೆ ಅವನು ಅಂಬಾರಿ ಹೊತ್ತಿದ್ದರಿಂದ ಎಲ್ಲರಿಗೂ ಅರ್ಜುನ ಆನೆಯ ಮೇಲೆ ಪ್ರೀತಿ ಹೆಚ್ಚು. ಮೈಸೂರು ದಸರಾದಲ್ಲಿ ಪ್ರಮುಖ ಆಕರ್ಷಣೆಯಾಗಿದ್ದ ಅರ್ಜುನ ಇನ್ನು ನೆನಪು ಮಾತ್ರ, ತಾಯಿ ಚಾಮುಂಡೇಶ್ವರಿ ಸದ್ಗತಿ ಕರುಣಿಸಲಿ ಎಂಬುವುದೇ ಎಲ್ಲರ ಪ್ರಾರ್ಥನೆ..
ಅರ್ಜುನನ ಬಗ್ಗೆ ಮತ್ತಷ್ಟು ಮಾಹಿತಿ
* 2012ರಿಂದ 2019ರವರೆಗೆ ಸತತ 8 ಬಾರಿ ಮೈಸೂರು ದಸರಾದಲ್ಲಿ ಅಂಬಾರಿ ಹೊತ್ತಿದ್ದ ಅರ್ಜುನ
6,040 ಕೆಜಿ ಮೈತೂಕ ಹೊಂದಿದ
ಅರ್ಜುನ 1960ರಲ್ಲಿ ಜನನ
ಅರ್ಜುನನ ನಂತರ ಅಭಿಮನ್ಯು ಅಂಬಾರಿ ಹೊರುತ್ತಿದ್ದಾನೆ.



Click it and Unblock the Notifications