Latest Updates
-
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು!
ಈ ವರ್ಷ ನವರಾತ್ರಿ ಘಟಸ್ಥಾಪನಾ ಮುಹೂರ್ತ ನಿಷೇಧಿತ ಚಿತ್ರ ನಕ್ಷತ್ರ, ವೈಧೃತಿ ಯೋಗದಲ್ಲಿ ಬಂದಿದೆ
ಶರನ್ನನವರಾತ್ರಿಯ ಸಡಗರ-ಸಂಭ್ರಮಕ್ಕೆ ಇಡೀ ದೇಶವೇ ಸಜ್ಜಾಗುತ್ತಿದೆ, ಕರ್ನಾಟಕದಲ್ಲಿ ಈ ಸಂಭ್ರಮ ಇನ್ನೂ ಅಧಿಕ, ನಾಡ ಪ್ರಸಿದ್ಧ ದಸರಾ ಹಬ್ಬಕ್ಕೆ ತಯಾರಿ ನಡೆಯುತ್ತಿದೆ. ನವರಾತ್ರಿಯಲ್ಲಿ ದೇವಿ ದುರ್ಗೆಯ ಒಂಭತ್ತು ಅವತಾರಗಳನ್ನು ಆಚರಿಸಲಾಗುವುದು. ದುಷ್ಟತನದ ವಿರುದ್ಧ ಒಳ್ಳೆಯತನದ ವಿಜಯದ ಸಂಕೇತವಾಗಿ ನವರಾತ್ರಿಯನ್ನು ಆಚರಿಸಲಾಗುವುದು.

ವರ್ಷದಲ್ಲಿ 4 ನವರಾತ್ರಿ. ಅದರಲ್ಲಿ ಚೈತ್ರ ಹಾಗೂ ಶರನ್ನವರಾತ್ರಿ ತುಂಬಾ ಪ್ರಮುಖವಾಗಿದೆ. ಶರನ್ನವರಾತ್ರಿ ಅಶ್ವಿಯುಜ ಮಾಸದ ಶುಕ್ಲ ಪಕ್ಷದ ಪ್ರತಿಪದದಿಂದ ಪ್ರಾರಂಭ. ಈ ವರ್ಷ ಅಕ್ಟೋಬರ್ 15 ರಿಂದ ಅಕ್ಟೋಬರ್ 23ರವರೆಗೆ 9 ದಿನಗಳ ಕಾಲ ನವರಾತ್ರಿಯನ್ನು ಆಚರಿಸಲಾಗುವುದು, 24ಕ್ಕೆ ದಸರಾ ಹಬ್ಬ. ಈ ವರ್ಷ ಘಟಸ್ಥಾಪನೆ ಎಷ್ಟು ಹೊತ್ತಿಗೆ ಮಾಡಲಾಗುವುದು, ಶರನ್ನವರಾತ್ರಿ ಮಹತ್ವವೇನು ಎಂದು ನೋಡೋಣ ಬನ್ನಿ:
ಘಟಸ್ಥಾಪನಾ ಮುಹೂರ್ತ: ಅಕ್ಟೋಬರ್ 15 ಬೆಳಗ್ಗೆ 06:14ರಿಂದ 10:09ರವರೆಗೆ
ಘಟಸ್ಥಾಪನಾ ಅಭಿಜಿತ್ ಮುಹೂರ್ತ: ಬೆಳಗ್ಗೆ 11:43ರಿಂದ ಮಧ್ಯಾಹ್ನ 12:30ರವರೆಗೆ
ಘಟಸ್ಥಾಪನಾ ಮುಹೂರ್ತ ಪ್ರತಿಪಾದ ತಿಥಿಯಂದು ಬರುತ್ತದೆ
ಘಟಸ್ಥಾಪನೆ ಮುಹೂರ್ತ ನಿಷೇಧಿತ ಚಿತ್ರ ನಕ್ಷತ್ರದಲ್ಲಿ ಬಂದಿದೆ.
ಘಟಸ್ಥಾಪನೆ ಮುಹೂರ್ತ ನಿಷೇಧಿತ ವೈಧೃತಿ ಯೋಗದಲ್ಲಿ ಬಂದಿದೆ.
ಪ್ರತಿಪಾದ ತಿಥಿ ಪ್ರಾರಂಬ: ಅಕ್ಟೋಬರ್ 14 ರಾತ್ರಿ 11:24ಕ್ಕೆ
ಪ್ರತಿಪಾದ ತಿಥಿ ಮುಕ್ತಾಯ: ಅಕ್ಟೋಬರ್ 15 ಮಧ್ಯರಾತ್ರಿ 12:32ರವರೆಗೆ
ಚಿತ್ರ ನಕ್ಷತ್ರ ಪ್ರಾರಂಭ: ಅಕ್ಟೋಬರ್ 14 ಮಧ್ಯಾಹ್ನ 04:24ಕ್ಕೆ
ಚಿತ್ರ ನಕ್ಷತ್ರ ಮುಕ್ತಾಯ: ಅಕ್ಟೋಬರ್ 15 ಸಂಜೆ 06:13ಕ್ಕೆ
ವೈಧೃತಿ ಯೋಗ ಯೋಗ ಪ್ರಾರಂಭ: ಅಕ್ಟೋಬರ್ 14 ಬೆಳಗ್ಗೆ 10:25ಕ್ಕೆ
ವೈಧೃತಿ ಯೋಗ ಯೋಗ ಮುಕ್ತಾಯ: ಅಕ್ಟೋಬರ್ 15 ಬೆಳಗ್ಗೆ 10:25ಕ್ಕೆ
ನವರಾತ್ರಿಯಲ್ಲಿ ಘಟಸ್ಥಾಒನೆಯ ಮಹತ್ವವೇನು?
ನವರಾತ್ರಿಯಲ್ಲಿ ಘಟಸ್ಥಾಪನೆ ಅಥವಾ ಕಲಶ ಸ್ಥಾಪನೆಗೆ ತುಂಬಾನೇ ಮಹತ್ವವಿದೆ. ನವರಾತ್ರಿಯ ಮೊದಲ ದಿನದಂದು ಘಟಸ್ಥಾಪನೆ ಮಾಡಿ ಶಕ್ತಿಯನ್ನು ಆಹ್ವಾನೆ ಮಾಡಲಾಗುವುದು. ಈ ರೀತಿ ಘಟಸ್ಥಾಪನೆ ಮಾಡುವುದರಿಂದ ಸಂತೋಷ, ಸಮೃದ್ಧಿ ಹೆಚ್ಚಾಗಲಿದೆ. ಈ ರೀತಿ ಘಟಸ್ಥಾಪನೆ ಮಾಡುವುದರಿಂದ ನಕರಾತ್ಮಕ ಶಕ್ತಿಗಳು ದೂರಾಗುವುದು.
* ಘಟಸ್ಥಾಪನೆಯನ್ನು ಶುಭ ಮುಹೂರ್ತದಲ್ಲಿಯೇ ಮಾಡಬೇಕು.
* ಘಟ ಸ್ಥಾಪನೆ ಮಾಡುವಾಗ ಮಂತ್ರವನ್ನು ಪಠಿಸಿ ದೇವತೆಗಳನ್ನು ಆಹ್ವಾನ ಮಾಬೇಕು.
* ಘಟಸ್ಥಾಪನೆ ಮುಹೂರ್ತ ದಿನ ಕಲಶ ಸ್ಥಾಪನೆ ಮಾಡಲು ಸಾಧ್ಯವಾಗದಿದ್ದರೆ ಅಭಿಜಿತ್ ಮುಹೂರ್ತದಲ್ಲಿ ಮಾಡಬೇಕು. ಈ ರೀತಿ ಘಟಸ್ಥಾಪನೆ ಮಾಡಿದ ಪ್ರತಿದಿನ ದೇವಿಯ ಒಂದೊಂದು ಅವತಾರವನ್ನು ಆರಾಧಿಸಬೇಕು.
* ನೀವು ದೇವಿಗೆ ಬೆಳಗ್ಗೆ ಮತ್ತು ಸಂಜೆ ಆರತಿ ಎತ್ತಿ ನೈವೇದ್ಯ ಅರ್ಪಿಸಬೇಕು.
ದುರ್ಗೆಯ ಮಂತ್ರಗಳು
ಯಾ ದೇವಿ ಸರ್ವಭೂತೇಷು ಮಾ ಬ್ರಹ್ಮಚಾರಿಣೀ ರೂಪೇಣ ಸಂಸ್ಥಿತಾ |
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||
ದಧಾನ ಕರ ಪದ್ಮಾಭ್ಯಾಮ ಅಕ್ಷಮಲಾ ಕಾಮಂಡಳು |ದೇವಿ ||
ಪ್ರಸೀದಾತುಮಾ|| ಓಂ ದೇವಿ ಶೈಲಪುತ್ರ್ಯೈ ನಮಃ॥ ಯಾ ದೇವಿ ಸರ್ವ ಭೂತೇಷು ಶಕ್ತಿ ರೂಪೇಣ ಸಂಸ್ಥಿತಃ|
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ||
ಧ್ಯಾನ ಮಂತ್ರ
ಓಂ ಜಾತಾ ಜತ್ ಸಮ್ಯುಕ್ತಮರ್ಧೇಂದು ಕೃತಿ ಲಕ್ಷಣಮ್
ಲೋಚನಾಯಾತ್ರಾ ಸ್ನುಕ್ತಮ್ ಪದಮೇಂದು ಸಾದ್ಯ ಶನಯಮ್ ದುರ್ಗಾ
ನವರಾತ್ರಿಯಲ್ಲಿ ಪೂಜಿಸುವ ದೇವಿಯ 9 ಅವತಾರಗಳು
ಶೈಲಪುತ್ರಿ
ಬ್ರಹ್ಮಚಾರಿಣಿ
ಚಂದ್ರಘಂಟ
ಕೂಶ್ಮಾಂಡ
ಸ್ಕಂದ ಮಾತಾ
ಕಾತ್ಯಾಯಿನಿ
ಕಾಳರಾತ್ರಿ
ಮಹಾಮಾಯ
ಮಹಾಗೌರಿ
ಸಿದ್ಧಿದಾತ್ರಿ
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications
