Latest Updates
-
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್ -
ಮಳೆಗಾಲದಲ್ಲಿ ನಿಮ್ಮ ಮನೆಯ ಗಿಡಗಳು ಸಾಯುತ್ತಿವೆಯೇ? ಈ 15 ನಿಮಿಷದ ಟಿಪ್ಸ್ ಪಾಲಿಸಿ!
ನವರಾತ್ರಿ: ಈ ಬಾರಿ ಆನೆ ಮೇಲೇರಿ ಬರುತ್ತಿದ್ದಾಳೆ ದುರ್ಗೆ, ಇದು ಏನನ್ನು ಸೂಚಿಸುತ್ತದೆ?
ವರ್ಷದಲ್ಲಿ 4 ನವರಾತ್ರಿ ಬರುತ್ತದೆ, ಅದರಲ್ಲಿ ಶರನ್ನವ ನವರಾತ್ರಿ ಹಾಗೂ ಚೈತ್ರ ನವರಾತ್ರಿಯನ್ನು ಅದ್ಧೂರಿಯಾಗಿ ಆಚರಿಸಲಾಗುವುದು. ಪ್ರತಿ ನವರಾತ್ರಿಗೆ ದುರ್ಗೆ ತನ್ನ ಕೆಲವೊಂದು ವಾಹನದಲ್ಲಿ ಬರುತ್ತಾಳೆ ಎಂದು ನಂಬಲಾಗಿದೆ. ದುರ್ಗೆಗೆ 5 ವಾಹನಗಳಿವೆ, ಸಿಂಹ, ಆನೆ, ಕುದುರೆ, ದೋಣಿ, ಪಲ್ಲಕ್ಕಿ. ಸಿಂಹ ದೇವಿಯ ಪ್ರಮುಖ ವಾಹನವಾಗಿದೆ. ಪ್ರತಿ ನವರಾತ್ರಿಗೆ ದುರ್ಗೆ ಆನೆ, ಕುದುರೆ, ದೋಣಿ, ಪಲ್ಲಕ್ಕಿ ಇವುಗಳಲ್ಲಿ ಯಾವುದಾದರೂ ಒಂದು ವಾಹನದಲ್ಲಿ ಬರುತ್ತಾಳೆ. ದುರ್ಗೆ ಯಾವ ವಾಹನದಲ್ಲಿ ಬರುತ್ತದೆ ಅದರಂತೆ ಭವಿಷ್ಯ ಹೇಳಲಾಗುವುದು.

ನವರಾತ್ರಿ ಯಾವ ದಿನ ಬರುತ್ತಾಳೆ ಅದರ ಮೇಲೆ ದುರ್ಗೆ ಯಾವ ವಾಹನದಲ್ಲಿ ಬರುತ್ತಾಳೆ ಎಂದು ಹೇಳಲಾಗುವುದು.
ದೇವಿ ಭಾಗವತ ಪ್ರಕಾರ ಭಾನುವಾರ, ಸೋಮವಾರ ಬಂದರೆ ದೇವಿ ಆನೆ ಮೇಲೆ ಬರುತ್ತಾಳೆ ಎಂದು ಹೇಳಲಾಗುವುದು. ಈ ವರ್ಷ ನವರಾತ್ರಿ ಅಕ್ಟೋಬರ್ 15, ಭಾನುವಾರದಂದು ಬಂದಿರುವುದರಿಂದ ದೇವಿ ಆನೆ ಮೇಲೆ ಬರುತ್ತಿದ್ದಾಳೆ.
ಶನಿವಾರ ಹಾಗೂ ಮಂಗಳವಾರ ನವರಾತ್ರಿ ಬಂದರೆ ಕುದುರೆ ಮೇಲೇರಿ ಬರುತ್ತಾಳೆ.
ಬುಧವಾರ ಬಂದರೆ ದೋಣಿ ಮೇಲೆ ಬರುತ್ತಾಳೆ
ಗುರುವಾರ ಬಂದರೆ ಪಲ್ಲಕ್ಕಿಯಲ್ಲಿ ಬರುತ್ತಾಳೆ.
ದುರ್ಗೆ ಆನೆ ಮೇಲೆ ಬಂದರೆ ಏನರ್ಥ?
ದುರ್ಗೆ ಆನೆ ಮೇಲೇರಿ ಬಂದರೆ ತುಂಬಾನೇ ಒಳ್ಳೆಯದು, ಮಳೆ-ಬೆಳೆ ಚೆನ್ನಾಗಿ ಬೆಳೆಯುತ್ತದೆ, ದೇಶದಲ್ಲಿ ಸಮೃದ್ಧಿ ಹೆಚ್ಚಾಗಲಿದೆ. ಇದರಿಂದ ನಾಡಿನ ಜನತೆ ನೆಮ್ಮದಿಯ ಬದುಕು ನಡೆಸುವಂತಾಗುವುದು ಎಂದು ಹೇಳಲಾಗುವುದು. ಈ ಬಾರಿ ದುರ್ಗೆ ಆನೆ ಮೇಲೇರಿ ಬರುತ್ತಿರುವುದರಿಂದ ತಾಯಿ ನಾಡಿನ ಜನತೆಗೆ ಒಳಿತು ಮಾಡುತ್ತಾಳೆ, ಜನರು ನೆಮ್ಮದಿಯ ಬದುಕು ನಡೆಸುವಂತಾಗುವುದು ಎಂದು ಹೇಳಲಾಗುವುದು.
ಈ ವಾಹನಗಳಲ್ಲಿ ಬಂದರೆ ಶುಭವಲ್ಲ
ದೇವಿ ಕುದುರೆ, ಪಲ್ಲಕ್ಕಿಯಲ್ಲಿ ಬಂದರೆ ಶುಭ ಎಂದು ಹೇಳಲಾಗುವುದಿಲ್ಲ. ಇದು ವಿನಾಶದ ಸೂಚನೆ. ಯುದ್ಧದ ಪರಿಸ್ಥಿತಿ ನಿರ್ಮಾಣವಾಗುವುದು, ಸಾಂಕ್ರಾಮಿಕ ರೋಗ ಕಂಡು ಬರುವುದು, ತುಂಬಾ ನಷ್ಟವನ್ನು ಭರಿಸಬೇಕಾಗುತ್ತದೆ ಎಂಬ ಸೂಚನೆಯನ್ನು ನೀಡುತ್ತದೆ.
ಯಾವ ವಾಹನದಲ್ಲಿ ಬಂದರೆ ಶುಭ
ದುರ್ಗೆ ಪಲ್ಲಕ್ಕಿ ಹಾಗೂ ದೋಣಿಯಲ್ಲಿ ಬಂದರೆ ಶುಭ ಎಂದು ಹೇಳಲಾಗುವುದು.
ದುರ್ಗೆ ನಿರ್ಗಮದಂದು ಯಾವ ವಾಹನದಲ್ಲಿ ಹೋಗುತ್ತಾಳೆ?
ದುರ್ಗೆ ಆಗಮನದ ದಿನ ಹಾಗೂ ನಿರ್ಗಮದ ದಿನ ತುಂಬಾನೇ ಮಹತ್ವದ್ದಾಗಿದೆ. ಈ ವರ್ಷ ನವರಾತ್ರಿ ಪ್ರಾರಂಭ ಭಾನುವಾರ, ನವರಾತ್ರಿ ಮುಕ್ತಾಯ ಸೋಮವಾರ. ಆದ್ದರಿಂದ ಈ ಬಾರಿ ದುರ್ಗೆ ಆನೆಯಲ್ಲಿಯೇ ಬಂದು ಆನೆಯಲ್ಲಿಯೇ ನಿರ್ಗಮಿಸುತ್ತಿದ್ದಾಳೆ. ಆದ್ದರಿಂದ ಇನ್ನೂ ಶುಭವೆಂದು ಪರಿಗಣಿಸಲಾಗಿದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications