Latest Updates
-
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ
ಪ್ರತೀವರ್ಷ ನವರಾತ್ರಿ ಬಣ್ಣ ಬದಲಾಗುವುದೇಕೆ? ಬಣ್ಣವನ್ನು ಹೇಗೆ ನಿರ್ಧರಿಸಲಾಗುವುದು?
ಪ್ರತಿವರ್ಷ ನವರಾತ್ರಿಯಲ್ಲಿ ಪ್ರತಿದಿನ ಒಂದೊಂದು ಬಣ್ಣವಿದೆ, ಆದರೆ ಈ ಬಣ್ಣ ಎಲ್ಲಾ ವರ್ಷ ಒಂದೇ ರೀತಿ ಇರುವುದಿಲ್ಲ, ಪ್ರತಿ ವರ್ಷ ಬಣ್ಣ ಬದಲಾಗುತ್ತಲೇ ಇರುತ್ತದೆ.
ಏಕೆ ಪ್ರತಿವರ್ಷ ಬಣ್ಣ ಬದಲಾಗುವುದು?
ನವರಾತ್ರಿ ವಾರದಲ್ಲಿ ಯಾವ ದಿನ ಪ್ರಾರಂಭವಾಗುವುದೋ ಅದರಂತೆ ಬಣ್ಣ ನಿರ್ಧರಿಸಲಾಗುವುದು. ಈ ವರ್ಷ ಅಕ್ಟೋಬರ್ 15ಕ್ಕೆ ನವರಾತ್ರಿ ಶುರುವಾಗುವುದು. ನವರಾತ್ರಿ ಭಾನುವಾರದಂದು ಬಂದಿದೆ.

ಈ ವರ್ಷ ಯಾವ ದಿನ ಯಾವ ಬಣ್ಣ
ಅಕ್ಟೋಬರ್ 15ಕ್ಕೆ ಆರೇಂಜ್ ಬಣ್ಣ
ಅಕ್ಟೋಬರ್ 16ಕ್ಕೆ ಬಿಳಿ
ಅಕ್ಟೋಬರ್ 17ಕ್ಕೆ ಕೆಂಪು
ಅಕ್ಟೋಬರ್ 18ಕ್ಕೆ ನೀಲಿ
ಅಕ್ಟೋಬರ್ 19ಕ್ಕೆ ಹಳದಿ
ಅಕ್ಟೋಬರ್ 20ಕ್ಕೆ ಹಸಿರು
ಅಕ್ಟೋಬರ್ 21ಕ್ಕೆ ಬೂದು
ಅಕ್ಟೋಬರ್ 22ಕ್ಕೆ ನೇರಳೆ
ಅಕ್ಟೋಬರ್ 23ಕ್ಕೆ ಹಸಿರು
ದಸರಾ ದಿನ ನೀವು ಕಪ್ಪು ಬಣ್ಣ ಬಿಟ್ಟು ಯಾವುದೇ ಬಣ್ಣ ಧರಿಸಬಹುದು.
ನವರಾತ್ರಿಯಲ್ಲಿ ಬಣ್ಣಕ್ಕೆ ಏಕಿಷ್ಟು ಮಹತ್ವ?
ನವರಾತ್ರಿಯಲ್ಲಿ ದೇವಿಯನ್ನು ಖುಷಿ ಪಡಿಸಲು ಬೇರೆ-ಬೇರೆ ಬಣ್ಣದ ವಸ್ತ್ರವನ್ನು ಧರಿಸಿ ದೇವಿಯನ್ನು ಆರಾಧಿಸಲಾಗುವುದು. ನವದುರ್ಗೆಯರನ್ನು ನವಬಣ್ಣದ ಉಡುಪುಗಳನ್ನು ಧರಿಸಿ ಪೂಜಿಸಲಾಗುವುದು.
ಬಣ್ಣ ಏನನ್ನು ಸೂಚಿಸುತ್ತದೆ?
ಪಿಂಕ್ ಅಥವಾ ಆರೇಂಜ್ ಬಣ್ಣ: ದೇವಿ ತನ್ನ ಭಕ್ತರಿಗೆ ಆಹಾರಕ್ಕೆ ಯಾವುದನ್ನೂ ಕೊರತೆ ಮಾಡುವುದಿಲ್ಲ , ಯಾವಾಗ ಅಗ್ಯತ ಬೀಳುವುದೋ ಆವಾಗ ದೇವಿಯ ಸಹಾಯದಿಂದ ಆಹಾರ ಸಿಕ್ಕೇ ಸಿಗುವುದು ಎಂಬರ್ಥವಾಗಿದೆ.
ಬಿಳಿ ಬಣ್ಣ: ಅವಳ ಭಕ್ತರು ಅವಳನ್ನು ಯಾವುದೇ ಸಮಯದಲ್ಲಿ ಭಕ್ತಿಯಿಂದ ಕರೆದರೂ ದೇವಿ ಅವರ ಕಷ್ಟಗಳನ್ನು ನೀಗಿಸಲು ಸಹಾಯ ಮಾಡುತ್ತಾಳೆ ಎಂಬುವುದರ ಸೂಚನೆಯಾಗಿದೆ
ಕೆಂಪು ಬಣ್ಣ: ಕೆಂಪು ಬಣ್ಣ ಶಕ್ತಿಯನ್ನು ಸೂಚಿಸುತ್ತದೆ, ದೇವಿ ಶಕ್ತಿ ಸದಾ ನಮ್ಮನ್ನು ರಕ್ಷಣೆ ಮಾಡುತ್ತಾಳೆ ಎಂಬುದನ್ನು ಸೂಚಿಸುತ್ತದೆ.
ನೀಲಿ ಬಣ್ಣ: ನೀಲಿ ಬಣ್ಣ ದೇವಿ ನಿಮ್ಮ ಜ್ಞಾನವನ್ನು ಹೆಚ್ಚಿಸುತ್ತಾಳೆ ಎಂಬುವುದರ ಸೂಚನೆ
ಹಳದಿ ಬಣ್ಣ: ಹಳದಿ ಬಣ್ಣ ದೇವಿ ನಿಮ್ಮ ಸಮೃದ್ಧಿಯನ್ನು ಸೂಚಿಸುತ್ತದೆ
ಮೆರೂನ್ ಬಣ್ಣ: ದೇವಿ ಧೈರ್ಯವನ್ನು ನೀಡುತ್ತಾಳೆ ಎಂಬುವುದರ ಸಂಕೇತ
ಹಸಿರು ಬಣ್ಣ: ದೇವಿ ನಿಮ್ಮ ಕ್ರಿಯಾಶೀಲತೆ ಹೆಚ್ಚಿಸುತ್ತಾಳೆ
ಬೂದು ಬಣ್ಣ: ದೇವಿ ನಮ್ಮನ್ನು ಎಲ್ಲಾ ಕಷ್ಟಗಳಿಂದ ಪಾರು ಮಾಡುತ್ತದೆ ಎಂಬುವುದನ್ನು ಸೂಚಿಸುತ್ತದೆ
ನೇರಳೆ ಬಣ್ಣ: ದೇವಿ ನಿಮಗೆ ಸಂತೋಷವನ್ನು ನೀಡುತ್ತಾಳೆ ಎಂಬುವುದರ ಸಂಕೇತ
ಯಾವ ದಿನ ನವರಾತ್ರಿ ಬರುತ್ತದೆಯೋ ಅದರ ಮೇಲೆ ದುರ್ಗೆ ಯಾವ ವಾಹನದಲ್ಲಿ ಬರುತ್ತಾಳೆ ಎಂದು ಕೂಡ ಹೇಳಲಾಗುವುದು
ಈ ವರ್ಷ ನವರಾತ್ರಿ ಭಾನುವಾರ ಬಂದಿರುವುದರಿಂದ ದುರ್ಗೆ ಆನೇಯ ಮೇಲೆ ಬರುತ್ತಿದ್ದಾಳೆ, ದೇವಿ ಆನೆಯ ಮೇಲೆ ಬರುವುದರಿಂದ ಸಮೃದ್ಧಿ ಹೊತ್ತು ತರುತ್ತಾಳೆ ಎಂದು ಹೇಳಲಾಗುವುದು. ಈ ವರ್ಷ ದುರ್ಗೆ ಆನೇಯ ಮೇಲೇರಿ ಬಂದು ಆನೆಯ ಮೇಲೆಯೇ ಮರಳುತ್ತಾಳೆ. ಇದರಿಂದ ಈ ವರ್ಷ ದೇವಿ ಕೃಪೆಯಿಂದ ನಾಡು ಸಮೃದ್ಧಿಯಿಂದ ಕೂಡಿರುತ್ತದೆ.



Click it and Unblock the Notifications
