Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮೈಸೂರು ದಸರಾದ ಹತ್ತು ಹಲವು ಸಂಗತಿಗಳಿಗಳಲ್ಲಿ 4 ಪ್ರಮುಖ ಆಕರ್ಷಣೆಗಳಿವು
ಮೈಸೂರು ದಸರಾದ ಪ್ರಮುಖ ಆಕರ್ಷಣೆ ಜಂಬೂ ಸವಾರಿ. ಇದರ ಜೊತೆಗೆ ಇನ್ನು ಹಲವು ಕಾರಣಗಳಿಂದ ಮೈಸೂರು ದಸರಾ ವಿಶ್ವಪ್ರಸಿದ್ಧವಾಗಿದೆ. ಹಿಂದೆ ಮೈಸೂರಿನ ದೊರೆಗಳು ಜಂಬೂ ಸವಾರಿ ನಡೆಸುತ್ತಿದ್ದರು. ಆನೆಯ ಮೇಲೆ ಅಂಬಾರಿಯನ್ನು ಕೂರಿಸಿ, ಅದರಲ್ಲಿ ರಾಜರು ಕೂತು ನಗರದಾದ್ಯಂತ ಮೆರವಣಿಗೆ ಮಾಡುತ್ತಿದ್ದರು. ಆದರೆ ಕರ್ನಾಟಕ ರಾಜ್ಯ ಅಂತ ಆದ ಮೇಲೆ ತಾಯಿ ಚಾಮುಂಡೇಶ್ವರಿಯನ್ನು ಕೂರಿಸಿ ಜಂಬೂ ಸವಾರಿ ಮಾಡಲಾಗುವುದು. ಮೈಸೂರು ದಸರಾ ಜಂಬೂ ಸವಾರಿ ಜೊತೆಗೆ ಈ ಕಾರಣಗಳಿಂದ ಪ್ರವಾಸಿಗರನ್ನು ಸೆಳೆಯುತ್ತದೆ.:

ಜಂಬೂ ಸವಾರಿ: ವಿಜಯ ದಶಮಿ ದಿನದಂದು ಚಾಮುಂಡೇಶ್ವರಿ ವಿಗ್ರಹವನ್ನು ಅಂಬಾರಿಯಲ್ಲಿ ಕೂರಿಸಿ ಭವ್ಯ ಮೆರವಣಿಗೆ ಮಾಡಲಾಗುವುದು. ಈ ಅಂಬಾರಿಯನ್ನು ಹೊರಲೆಂದೇ ಆನೆಗೆ ವಿಶೇಷ ತರಬೇತಿ ನೀಡಲಾಗಿರುತ್ತದೆ. 750 ಕೆಜಿ ಅಂಬಾರಿ ಹೊತ್ತು ಆನೆ ಸಾಗುವಾಗ ಅದರ ಜೊತೆಗೆ ಅಲಂಕೃತವಾಗಿರುವ ಆನೆಗಳು ಹೆಜ್ಜೆ ಹಾಕುತ್ತವೆ. ಬಲರಾಮ, ಅರ್ಜುನ ಬಳಿಕ ಇಧೀಗ ಅಭಿಮನ್ಯು ಅಂಬಾರಿಯನ್ನು ಹೊರುತ್ತಿದ್ದಾನೆ. ಅಭಿಮನ್ಯು ಜೊತೆಗೆ ವರಲಕ್ಷ್ಮಿ, ಅರ್ಜುನ, ಭೀಮಾ, ಧನಂಜಯ, ಗೋಪಿ, ಪಾರ್ಥಸಾರಥಿ ಬಹಳ ಆಕರ್ಷಕವಾಗಿ ಅಲಂಕೃತಗೊಂಡು ನಡೆದುಕೊಂಡು ಹೋಗುತ್ತಾರೆ. ಈ ದೃಶ್ಯ ನೋಡುವುದೇ ಕಣ್ಣಿಗೆ ಹಬ್ಬ.
ಜಂಬೂ ಸವಾರಿ ಮೆರವಣಿಗೆಯಲ್ಲಿ ಗಮನ ಸೆಳೆಯುವ ಟ್ಯಾಬ್ಲೋ
ಈ ಬಾರಿ ಜಂಬೂ ಸವಾರಿ ಮೆರವನಿಗೆಯಲ್ಲು 49 ಟ್ಯಾಬ್ಲೋಗಳು ಇರಲಿವೆ. ಗಜಪಡೆಗಳ ಜೊತೆಗೆ ಸ್ತಬ್ದ ಚಿತ್ರಗಳು ಸಾಗಲಿವೆ. 31 ಜಿಲ್ಲೆಗಳ ಕಲೆ, ಸಂಸ್ಕೃತಿಯನ್ನು ಆ ಸ್ತಬ್ಧ ಚಿತ್ರಗಳು ಪ್ರತಿನಿಧಿಸುತ್ತದೆ. ಜಂಬೂಸವಾರಿ ಅರಮನೆಯಿಂದ ಬನ್ನಿ ಮಂಟಪದವರೆಗೆ ಸಾಗಲಿದೆ. ಬೆಳಗ್ಗೆ 11ರಿಂದ 11.4ರವರೆಗೆ ಅರಮನೆಯ ಬಾಗಿಲಿನಿಂದ ಭುವನೇಶ್ವರಿ ದೇವಾಲಯದವರೆಗೆ ಮೆರವಣಿಗೆ ಸಾಗಲಿದೆ. ಭುವನೇಶ್ವರಿ ದೇವಾಲಯದಲ್ಲಿ ಯದುವೀರ್ ಒಡೆಯರ್ ಶಮಿ ಪೂಜೆ ನೆರವೇರಿಸುವ ಸಂಪ್ರದಾಯವಿದೆ. ನಂತರ ನಂದಿಧ್ವಜಕ್ಕೆ ಮುಖ್ಯಮಂತ್ರಿ ಪೂಜೆ ಸಲ್ಲಿಸುತ್ತಾರೆ. ಸಂಜೆ 4:40-5ರ ಸಮಯದಲ್ಲಿ ಶುಭ ಮೀನ ಲಗ್ನದಲ್ಲಿ ಚಾಮುಂಡಿ ದೇವಿಯನ್ನು ಅಂಬಾರಿಯಲ್ಲಿ ಕೂರಿಸಿ ಜಂಬೂ ಸವಾರಿ ಮಾಡಲಾಗುವುದು. ಈ ಸುಂದರ ದೃಶ್ಯವನ್ನು ಲಕ್ಷಾಂತರ ಮಂದಿ ಕಣ್ತುಂಬಿಕೊಳ್ಳುತ್ತಾರೆ.
ಜಗಮಗಿಸುವ ಬೆಳಕಿನಲ್ಲಿ ಅರಮನೆಯ ಭವ್ಯ ದೃಶ್ಯ
ಮೈಸೂರಿನಲ್ಲಿ ಪ್ರವಾಸಿಗರನ್ನು ಸೆಳೆಯುವ ಪ್ರಮುಖ ಸ್ಥಳವೆಂದರೆ ಅರಮನೆ, ಅದರಲ್ಲೂ ದಸರಾ ಸಮಯದಲ್ಲಿ ದೀಪಗಳ ಅಲಂಕಾರದಲ್ಲಿ ಅರಮನೆಯ ವೈಭೋಗ, ಸೊಬಗು ಕಣ್ತುಂಬಿಕೊಳ್ಳುತ್ತಾ ನಮ್ಮನ್ನು ನಾವು ಮರೆತು ಹೋಗುತ್ತೇವೆ, ಅಷ್ಟೊಂದು ಆಕರ್ಷಕವಾಗಿರುತ್ತದೆ.
ಪಂಜಿನ ಕವಾಯಿತು
ಸಂಜೆ ಬನ್ನಿ ಮಂಟಪದಲ್ಲಿ ಪಂಜಿನ ಕವಾಯಿತು ನಡೆಯುವುದು, ಇದನ್ನು ನೋಡಲು ಕೂಡ ಲಕ್ಷಾಂತರ ಜನರು ಸೇರುತ್ತಾರೆ. ಈ ಪಂಜಿನ ಕವಾಯಿತು ನೋಡಲು ತುಂಬಾನೇ ಆಕರ್ಷಕವಾಗಿರುತ್ತದೆ.
ವರ್ಚುಯಲ್ ವೀಕ್ಷಣೆ ಮೂಲಕ ದಸರಾ ಸಂಭ್ರಮ ಕಣ್ತುಂಬಿಕೊಳ್ಳಬಹುದು
ಜಂಬೂಸವಾರಿಯನ್ನು ನೋಡಲು ಲಕ್ಷಾಂತರ ಜನ ಸೇರುವುದರಿಂದ ನೂಕುನುಗ್ಗಲು ಇರುತ್ತದೆ, ಆದರೆ ವರ್ಚುಯಲ್ ಮೂಲಕ ಕುಳಿತಲ್ಲಿಯೇ ಆ ಸುಂದರ ದೃಶ್ಯ ಕಣ್ತುಂಬಿಕೊಳ್ಳಬಹುದು. ನಂದಿ ಪೂಹೆ, ಪಂಜಿನ ಕವಾಯಿತು ಎಲ್ಲವನ್ನೂ ವರ್ಚುಯಲ್ ಮೂಲಕ ಕಣ್ತುಂಬಿಕೊಳ್ಳಲು ವ್ಯವಸ್ಥೆ ಕಲ್ಪಿಸಲಾಗಿದೆ.
ದಸರಾ ಹಬ್ಬದ ಸಂದರ್ಭದಲ್ಲಿ ಗಾಳಿಪಟ್ ಹಾರಾಟ, ಕಲಾ ಪ್ರದರ್ಶನಗಳು, ಕುಸ್ತಿ ಸಂಗೀತ, ಆಹಾರ ಮಳಿಗೆಗಳು, ಅಲಂಕೃತಗೊಂಡ ಬೃಂದಾವನ ಗಾರ್ಡನ್ ಇವೆಲ್ಲಾ ದಸರಾಗೆ ಬರುವ ಪ್ರವಾಸಿಗರಿಗೆ ಖುಷಿ ನೀಡಲಿದೆ.



Click it and Unblock the Notifications