Latest Updates
-
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ! -
ಸಕ್ಕರೆ ಬೆಲೆ ಏರಿಕೆ ಬಿಸಿ: ಹಬ್ಬದ ಸಿಹಿ ಬಜೆಟ್ ಉಳಿಸಲು ಇಲ್ಲಿದೆ 300 ರೂಪಾಯಿಯ ಸ್ಮಾರ್ಟ್ ಟಿಪ್ಸ್ -
ವರಮಹಾಲಕ್ಷ್ಮೀ ವ್ರತದ ಶಾಸ್ತ್ರೋಕ್ತ ವಿಧಾನ ಮತ್ತು ಪೂಜಾ ನಿಯಮಗಳು -
ವರಮಹಾಲಕ್ಷ್ಮೀ ಹಬ್ಬದ ಸಂಭ್ರಮಕ್ಕೆ ಬೆಲೆ ಏರಿಕೆಯ ಬಿಸಿ: ಕೆ.ಆರ್. ಮಾರುಕಟ್ಟೆಯಲ್ಲಿ ಗಗನಕ್ಕೇರಿದ ಹೂವು-ಹಣ್ಣುಗಳ ದರ -
BWF ವಿಶ್ವ ಚಾಂಪಿಯನ್ಷಿಪ್: ದೆಹಲಿಯಲ್ಲಿ ಭಾರತೀಯ ಆಟಗಾರರ ಅಬ್ಬರ, ಅಭಿಮಾನಿಗಳಿಗೆ ಇಲ್ಲಿದೆ ವಿಶೇಷ ಗೇಮ್ ಪ್ಲಾನ್! -
ವರಮಹಾಲಕ್ಷ್ಮಿ ಹಬ್ಬದ ದಿನಾಂಕದ ಗೊಂದಲ: ಆಗಸ್ಟ್ 21 ಅಥವಾ 28? ಇಲ್ಲಿದೆ ಸ್ಪಷ್ಟ ಮಾಹಿತಿ! -
ವಿಶ್ವ ಸೊಳ್ಳೆ ದಿನ: ಮಳೆಗಾಲದಲ್ಲಿ ಬಾಲ್ಕನಿಯಲ್ಲಿ ಯೋಗ ಮಾಡುವಾಗ ಸೊಳ್ಳೆ ಕಡಿತದಿಂದ ಪಾರಾಗುವುದು ಹೇಗೆ? -
BWF ವರ್ಲ್ಡ್ಸ್ ದೆಹಲಿ: ಕ್ಯೂನಲ್ಲಿ ನಿಂತು ಸುಸ್ತಾಗಿದ್ದೀರಾ? ಈ 8 ನಿಮಿಷದ ವ್ಯಾಯಾಮ ನಿಮ್ಮ ನೋವನ್ನು ಮರೆಸುತ್ತೆ!
ನವರಾತ್ರಿ: ಮನೆಯಲ್ಲಿ ದುರ್ಗೆಯ ಆರಾಧಿಸುವುದಾದರೆ ಪಾಲಿಸಬೇಕಾದ ಧಾರ್ಮಿಕ ನಿಯಮಗಳು
ನವರಾತ್ರಿ ಹಬ್ಬಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿಯಿದೆ. ನವರಾತ್ರಿ ಘಟಸ್ಥಾಪನ ಮಾಡುವ ಮೂಲಕ ಪ್ರಾರಂಭವಾಗುವುದು. 9 ದಿನಗಳ ಆಚರಣೆಯಲ್ಲಿ ದುರ್ಗೆಯ 9 ಅವತಾರಗಳನ್ನು ಆರಾಧಿಸಲಾಗುವುದು. ಕೆಲವು ಕಡೆ ದೇವಾಲಯದಲ್ಲಿ ನವರಾತ್ರಿ ಆಚರಿಸಿದರೆ ಇನ್ನು ಕೆಲವರು ಮನೆಯಲ್ಲಿಯೇ ಆಚರಿಸುತ್ತಾರೆ. ನೀವು ನವರಾತ್ರಿ ಮನೆಯಲ್ಲಿಯೇ ಮಾಡುವುದಾದರೆ ದೇವಿಯ ಆರಾಧನೆ ಮಾಡುವ ಈ ಧಾರ್ಮಿಕ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ.

ಘಟಸ್ಥಾಪನದಿಂದ ನವರಾತ್ರಿ ಪ್ರಾರಂಭ
ಘಟಸ್ಥಾಪನ ಮುಹೂರ್ತ ಪ್ರತಿಪಾದ ತಿಥಿಯಂದು ಬರುತ್ತದೆ ಘಟಸ್ಥಾಪನೆ ಮುಹೂರ್ತ ನಿಷೇಧಿತ ಚಿತ್ರ ನಕ್ಷತ್ರದಲ್ಲಿ ಬಂದಿದೆ. ಈ ಬಾರಿ ಘಟಸ್ಥಾಪನೆ ಮುಹೂರ್ತ ನಿಷೇಧಿತ ವೈಧೃತಿ ಯೋಗದಲ್ಲಿ ಬಂದಿದೆ.
ಘಟಸ್ಥಾಪನ ಮುಹೂರ್ತ: ಅಕ್ಟೋಬರ್ 15 ಬೆಳಗ್ಗೆ 06:14ರಿಂದ 10:09ರವರೆಗೆ
ಘಟಸ್ಥಾಪನ ಅಭಿಜಿತ್ ಮುಹೂರ್ತ: ಬೆಳಗ್ಗೆ 11:43ರಿಂದ ಮಧ್ಯಾಹ್ನ 12:30ರವರೆಗೆ
ಪ್ರತಿಪಾದ ತಿಥಿ ಪ್ರಾರಂಭ: ಅಕ್ಟೋಬರ್ 14 ರಾತ್ರಿ 11:24ಕ್ಕೆ
ಪ್ರತಿಪಾದ ತಿಥಿ ಮುಕ್ತಾಯ: ಅಕ್ಟೋಬರ್ 15 ಮಧ್ಯರಾತ್ರಿ 12:32ರವರೆಗೆ
ಚಿತ್ರ ನಕ್ಷತ್ರ ಪ್ರಾರಂಭ: ಅಕ್ಟೋಬರ್ 14 ಮಧ್ಯಾಹ್ನ 04:24ಕ್ಕೆ
ಚಿತ್ರ ನಕ್ಷತ್ರ ಮುಕ್ತಾಯ: ಅಕ್ಟೋಬರ್ 15 ಸಂಜೆ 06:13ಕ್ಕೆ
ವೈಧೃತಿ ಯೋಗ ಯೋಗ ಪ್ರಾರಂಭ: ಅಕ್ಟೋಬರ್ 14 ಬೆಳಗ್ಗೆ 10:25ಕ್ಕೆ
ವೈಧೃತಿ ಯೋಗ ಯೋಗ ಮುಕ್ತಾಯ: ಅಕ್ಟೋಬರ್ 15 ಬೆಳಗ್ಗೆ 10:25ಕ್ಕೆ
ಘಟಸ್ಥಾಪನ ಮಾಡುವುದೇಕೆ?
ದೇವಿ ಶಕ್ತಿಯನ್ನು ಆಹ್ವಾನಿಸಲು ಘಟಸ್ಥಾಪನ ಮಾಡಲಾಗುವುದು. ಧಾರ್ಮಿಕ ನಂಬಿಕೆಗಳ ಪ್ರಕಾರ ಕಲಶದಲ್ಲಿ ದೇವಾನು ದೇವತೆಗಳು ನೆಲೆಸಿದ್ದಾರೆ. ಈ ಕಲಶ ಪ್ರತಿಷ್ಠಾಪನೆ ಮಾಡುವುದರಿಂದ ಸಂತೋಷ, ಸಮೃದ್ಧಿ ಹೆಚ್ಚಾಗಲಿದೆ.
ಧಾನ್ಯಗಳನ್ನು ಬಿತ್ತಬೇಕು
ಘಟಸ್ಥಾಪನೆ ಮಾಡುವಾಗ ಧಾನ್ಯಗಳನ್ನು ಬಿತ್ತಬೇಕು. ಬಾಯಿ ಅಗಲವಾದ ಮಣ್ಣಿನ ಮಾತ್ರೆಗೆ ಮಣ್ಣು ತುಂಬಿ ಅದರಲ್ಲಿ ಧಾನ್ಯಗಳನ್ನು ಹಾಕಬೇಕು. 7 ಬಗೆಯ ಧಾನ್ಯಗಳನ್ನು ಭಿತ್ತಬೇಕು.
ಘಟಸ್ಥಾಪನ ಪೂಜಾ ವಿಧಾನ:
* ನೀವು ಶುಭ ಮುಹೂರ್ತದಲ್ಲಿ ಮಾಡಬೇಕು.
* ಧಾನ್ಯಗಳನ್ನು ಭಿತ್ತಿ
* ಪೂಜಾ ಮಣೆಯ ಮೇಲೆ ಕೆಂಪು ಬಟ್ಟೆ ಹಾಸಿ ಅದರಲ್ಲಿ ದುರ್ಗೆಯ ಫೋಟೋವನ್ನು ಪ್ರತಿಷ್ಠಾಪಿಸಿ
* ನಂತರ ಕಲಶದಲ್ಲು ಗಂಗಾಜಲ, ಗರಿಕೆ, ಅಕ್ಷತೆಕಾಳು, ನಾಣ್ಯ, ವೀಳ್ಯೆದೆಲೆ, ಕುಂಕುಮ ಹಾಕಿ. ಕಲಶಕ್ಕೆ ಮಾವಿನ ಎಲೆಗಳಿಂದ ಅಲಂಕರಿಸಿ.
* ಕೆಂಪು ಬಟ್ಟೆಯಲ್ಲಿ ಸುತ್ತಿದ ತೆಂಗಿನಕಾಯಿ ಇಡಿ.
* ಕಲಶದಲ್ಲಿ ಸ್ವಸ್ತಿಕ ಚಿಹ್ನೆ ಬಳಸಿ.
* ನಂತರ ಧಾನ್ಯ ಬಿತ್ತಿದ ಮಡಕೆ ಹಾಗೂ ಕಲಶವನ್ನು ದೇವಿಯ ಫೋಟೋದ ಮುಂದೆ ಇರಿಸಿ.
ಓಂ ಆ ಜಿಘ್ರ ಕಲಶಂ ಮಹ್ಯ ತ್ವಾ ವಿಶಾಂತ್ವಿಂದವ:. ಪುನರುರ್ಜಾ ನಿ ವರ್ತಸ್ವ ಸಾ ನ ಸಹಸ್ರಾನ್ ಧುಕ್ಷ್ವೋರುಧರಾ ಪಯಸ್ವತೀ ಪುನರ್ಮಾ ವಿಷ್ಟದಾಯಿಃ ॥
ಈ ಮಂತ್ರ ಪಠಿಸಿ.
ಧಾನ್ಯಗಳನ್ನು ಬಿತ್ತುವಾಗ ಈ ಮಂತ್ರಗಳನ್ನು ಪಠಿಸಿ
ಓಂ ಧಾನ್ಯಮಸಿ ಧೀನುಹಿ ದೇವಾನ್ ಪ್ರಾಣಾಯ ತ್ಯೋ ದಾನಾಯ ತ್ವಾ ವ್ಯಾನಯ ತ್ವಾ । ಧರ್ಗಮನು ಪ್ರಸೀತಿಮಾಯುಷೇ ಧಾ ದೇವೋ ವಃ ಸವಿತಾ ಹಿರಣ್ಯಪಾಣಿಃ ಪ್ರತಿ ಗರ್ಭಿಣಿ, ಪಾಣಿನಾ ಚಕ್ಷುಷೇ ತ್ವಾ ಮಾಸಮಂ ಪಯೋಸ್ಸಿ ।
ಕಲಶವನ್ನು ಇಡುವಾಗ ಈ ಮಂತ್ರ ಪಠಿಸಿ
ಓಂ ಯಾಃ ಫಲಿನಿರಿಯಾ ಅಫಲಾ ಅಪುಷ್ಪ ಯಾಶ್ಚ ಪುಷ್ಪಿಣಿಃ । ಬೃಹಸ್ಪತಿಪ್ರಸೂತಸ್ತಾ ನೋ ಮುಂಚನ್ತ್ವಾ ಹಸಃ ।
ನೀವು ಘಟಸ್ಥಾಪನ ಮುಹೂರ್ತ ಅಥವಾ ಅಭಿಜಿತ್ ಮುಹೂರ್ತದಲ್ಲಿ ಘಟಸ್ಥಾಪನೆ ಮಾಡಬಹುದು. ದೇಹ ಹಾಗೂ ಮನಸ್ಸು ಮಡಿಯಾಗಿರಬೇಕು.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications