Latest Updates
-
ಮಸಾಲೆ ಲೆಸ್ ವೈಟ್ ಪಲಾವ್; ವಿಭಿನ್ನ ರುಚಿ ವಿಶೇಷ ಖಾದ್ಯ ಸಿದ್ದಮಾಡಿ ನೋಡಿ! -
ಅಂತಾರಾಷ್ಟ್ರೀಯ ಮಹಿಳಾ ದಿನ: ದಕ್ಷಿಣ ಏಷ್ಯಾದಲ್ಲಿ ಹೆಚ್ಚಾಗುತ್ತಿದೆ ರಕ್ತಹೀನತೆ, ಮಹಿಳೆಯರೇ ಬಲಿಪಶು ಏಕೆ? -
March 08 Horoscope: ಯಾರ ಬಳಿಯಾದರು ಸಾಲ ಪಡೆಯುವ ಆಲೋಚನೆ ಮುಂದೂಡಿ! -
ನೀನೇ ನನ್ನ ಶಕ್ತಿ.. ನಿಮ್ಮ ಪ್ರಿಯತಮೆಗೆ ಕಳಿಸಿ ಈ ರೊಮ್ಯಾಂಟಿಕ್ ಶುಭಾಶಯಗಳು! ಆಕೆಯ ಮುಖದಲ್ಲಿ ನಗು ತರಿಸಿ -
ಕೊನೆಗೂ ಬಂತು ರಾಜಯೋಗ: ಈ ರಾಶಿಗಳಿಗೆ ನಸೀಬಲ್ಲೇ ಇಲ್ಲದ ಸುಖ-ಸಂಪತ್ತು ಪ್ರಾಪ್ತಿ! ಪ್ರೀತಿಯಲ್ಲಿ ದೊಡ್ಡ ಯಶಸ್ಸು -
ಎಂದಾದರೂ ಮೊಸರು ಪರೋಟ ತಿಂದಿದ್ದೀರಾ? ಒಮ್ಮೆ ಇದರ ರುಚಿ ನೋಡಿ.. ಹಿಟ್ಟು ಕಲಸುವಾಗ ಈ ಟ್ರಿಕ್ ಬಳಸಿ -
ಹುಷಾರ್.. ಗಂಡನಿಗೆ ಈ 4 ಮಾತು ಹೇಳ್ತೀರಾ? ಮನೇಲಿ ಬೆಂಕಿ ಉರಿಯುತ್ತೆ.. ಹೀಗೆ ಮಾಡಿದ್ರೆ ಸಂಸಾರದಲ್ಲಿ ಸುಖ ಇರುತ್ತೆ -
ಸಿಸ್ಟರ್.. 30+ ಬಳಿಕ ಈ ಸೂತ್ರಗಳನ್ನು ಬೆಳೆಸಿಕೊಳ್ಳಿ! ಆರೋಗ್ಯ ಸದಾ ಚೆನ್ನಾಗಿ ಇರುತ್ತೆ -
10 ನಿಮಿಷದ ಹಾಟ್ ಹಾಟ್ ಪರೋಟ! ಈ ರೀತಿ ಮಾಡಿದ್ರೆ ಮೃದು & ಕ್ರಿಸ್ಪಿಯಾಗಿ ಬರುತ್ತೆ.. ಹೋಟೆಲ್ ಸ್ಟೈಲ್ ಸೀಕ್ರೆಟ್ ಇಲ್ಲಿದೆ -
ಹೋಟೆಲ್ ಸ್ಟೈಲ್ ರಾಯಲ್ ಚಟ್ನಿ! ಈ ಒಂದು ವಸ್ತು ಸೇರಿಸಿ ನೋಡಿ.. ರುಚಿ ಡಬಲ್, 2 ಇಡ್ಲಿ ಜಾಸ್ತಿ ತಿಂತೀರಾ
ನವರಾತ್ರಿಯಲ್ಲಿ ಅಖಂಡ ಜ್ಯೋತಿ ಬೆಳಗುವುದೇಕೆ? ಈ ಧಾರ್ಮಿಕ ನಿಯಮ ಪಾಲಿಸಲೇಬೇಕು
ನವರಾತ್ರಿಯ ಸಮಯದಲ್ಲಿ ತುಂಬಾ ಮನೆಗಳಲ್ಲಿ ಅಖಂಡ ಜ್ಯೋತಿ ಬೆಳಗುತ್ತಿರುತ್ತದೆ. ಅಖಂಡ ಜ್ಯೋತಿ ಎಂದರೆ ಹಚ್ಚಿದ ದೀಪ 9 ದಿನಗಳ ಕಾಲ ನಿರಂತರವಾಗಿ ಉರಿಯುತ್ತಲೇ ಇರಬೇಕು. ಅಖಂಡ ಜ್ಯೋತಿ ಬೆಳಗಿದರೆ ಮನೆಗೆ ತುಂಬಾನೇ ಒಳ್ಳೆಯದು, ಆದರೆ ಅಷ್ಟೇ ಎಚ್ಚರಿಕೆವಹಿಸಬೇಕಾಗಿದೆ, ಯಾರಾದರು ಒಬ್ಬರು ಮನೆಯಲ್ಲಿ ದೀಪ ಕೆಡದಂತೆ ಜಾಗ್ರತೆವಹಿಸಬೇಕು.
ಅಖಂಡ ಜ್ಯೋತಿಯ ಮಹತ್ವ'
ಅಕಂಡ ಜ್ಯೋತಿಯನ್ನು ಒಂಭತ್ತು ದಿನಗಳವರೆಗೆ ಬೆಳಗುವುದರಿಂದ ದೇವಿಯ ಕೃಪೆ ಆ ಮನೆಯ ಮೇಲಿರುತ್ತದೆ, ಇದರಿಂದ ನಿಮ್ಮ ಎಲ್ಲಾ ಕಾರ್ಯದಲ್ಲಿ ಯಶಸ್ಸು ಪಡೆಯುತ್ತೀರಿ, ದೇವಿಯ ಕೃಪೆಯಿಂದಾಗಿ ಮನೆಯಲ್ಲಿ ನೆಮ್ಮದಿಯ ವಾತಾವರಣ ಇರುತ್ತದೆ, ಮನೆಯ ಆರ್ಥಿಕ ಸ್ಥಿತಿ ಉತ್ತಮವಾಗುವುದು.
ಅಖಂಡ ಜ್ಯೋತಿ ಹೇಗೆ ಹಚ್ಚಬೇಕು, ಯಾವ ದೀಪ ಬಳಸಬೇಕು? ಏನು ಮಾಡಬೇಕು, ಏನು ಮಾಡಬಾರದು ಎಂದು ನೋಡೋಣ ಬನ್ನಿ:

ನವರಾತ್ರಿ ಅಖಂಡ ಜ್ಯೋತಿ ಹೇಗೆ ಹಚ್ಚಬೇಕು?
* ಅಖಂಡ ಜ್ಯೋತಿಗೆ ನೀವು ದಪ್ಪವಾದ ಬತ್ತಿ ಬಳಸಬೇಕು
* ತಾಮ್ರ, ಬೆಳ್ಳಿ ಅಥವಾ ಮಣ್ಣಿನ ದೀಪ ಬೆಳಗಿಸಬಹುದು
* ಸಾಸಿವೆಯೆಣ್ಣೆ, ಹರಳೆಣ್ಣೆ ಅಥವಾ ಶುದ್ಧ ತುಪ್ಪ ಬಳಸಬಹುದು
* ಅಖಂಡ ಜ್ಯೋತಿ ಹಚ್ಚಿಡುವ ಕಡೆ ಸ್ವಚ್ಛ ಮಾಡಿ ಅಲ್ಲಿ ಅಷ್ಟದಳ ಅಂತ ಬರೆದು, ಅದರಲ್ಲಿ ದೀಪವನ್ನು ಇಡಬೇಕು.
* ದುರ್ಗಾ ದೇವಿಯ ಬಲಭಾಗದಲ್ಲಿ ದೀಪವನ್ನು ಹಚ್ಚಬೇಕು, ಎಡಭಾಗದಲ್ಲಿ ಪೂಜೆಗೆ ಬಳಸುವ ಎಣ್ಣೆಯನ್ನು ಇಡಬೇಕು.
* ಎಣ್ಣೆ ದೀಪವಾದರೆ ಅಷ್ಡದಳದ ಎಡಭಾಗದ ತುಪ್ಪದ ದೀಪವಾದರೆ ಅಷ್ಟದಳದ ಬಲಭಾಗ ಹಚ್ಚಿಡಬೇಕು.
* ದೇವಿ ಮಂತ್ರವನ್ನು ಹೇಳುತ್ತಾ ಶುಭ ಸಮಯದಲ್ಲಿ ದೀಪವನ್ನು ಬೆಳಗಿ
ಏನು ಮಾಡಬೇಕು?
* ತುಂಬಾ ಭಕ್ತಿ ಹಾಗೂ ಶ್ರದ್ಧೆಯಿಂದ ದೀಪವನ್ನು ಹಚ್ಚಬೇಕು
* ಬತ್ತಿ ದಪ್ಪವಾಗಿರಬೇಕು, ಒಂಭತ್ತು ದನ ಬರುವಷ್ಟು ಉದ್ದವಿರಬೇಕು
* ದೀಪ ಯಾವಾಗಲೂ ಬೆಳಗುವಂತೆ ನೋಡಿಕೊಳ್ಳಿ
* ಎಣ್ಣೆ ಅಥವಾ ತುಪ್ಪ ಕಡಿಮೆಯಾಗಲು ಬಿಡಬೇಡಿ, ದೀಪಕ್ಕೆ ಆಗಾಗ ಹಾಕುತ್ತಲೇ ಇರಿ, ರಾತ್ರಿಯಲ್ಲೂ ಅಷ್ಟೇ.
* ಅಖಂಡ ದೀಪವನ್ನು ಗಾಜಿನಿಂದ ಕವರ್ ಮಾಡಿ, ಇದರಿಂದ ಗಾಳಿ ಬೀಸಿದಾಗ ಆರುವುದಿಲ್ಲ
* ಬತ್ತಿಯನ್ನು ಸರಿಪಡಿಸುವಾಗ, ಎಣ್ಣೆ ಹಾಕುವಾಗ ಬತ್ತಿ ಕೆಡದಂತೆ ನೋಡಿಕೊಳ್ಳಿ.
* ಈ 9 ದಿನಗಳು ಸಾತ್ವಿಕ ಆಹಾರವನ್ನು ಮಾತ್ರ ಸೇವಿಸಿ.ಸ
ಏನು ಮಾಡಬಾರದು?
* ದೀಪವನ್ನು ಊದಿ ಕೆಡಿಸಬಾರದು, ಮಕ್ಕಳು ಅದರ ಸುತ್ತ ಆಡದಂತೆ ಜಾಗ್ರತೆವಹಿಸಿ
* ಗಟ್ಟಿ ತುಪ್ಪವನ್ನು ಹಾಕಬೇಡಿ, ಕರಗಿಸಿ ಹಾಕಿದರೆ ಒಳ್ಳೆಯದು
* ದೀಪದ ಪಕ್ಕದ ಗೋಡೆ ಟಾಯ್ಲೆಟ್, ಬಾತ್‌ರೂಂ ಆಗಿರಬಾರದು
* ಅಖಂಡ ಜ್ಯೋತಿ ಹಚ್ಚಿದ ಮೇಲೆ ಅದರ ಬಗ್ಗೆ ನಿರ್ಲಕ್ಷ್ಯ ಮಾಡಲೇಬೇಡಿ.
* ಸೂರ್ಯಕಾಂತಿ ಎಣ್ಣೆ ಬಳಸಬಾರದು'
* ಇಟ್ಟ ದೀಪವನ್ನು 9 ದಿನಗಳವರೆಗೆ ಅಲುಗಾಡಿಸಬಾರದು
* ದಂಪತಿ 9 ದಿನ ವ್ರತ ನಿಯಮ ಪಾಲಿಸಬೇಕು, ದೈಹಿಕ ಸಂಪರ್ಕ ಬೆಳೆಸಬಾರದು.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











