Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ನವದಂಪತಿ ನವರಾತ್ರಿ ಆಚರಣೆ ಹೇಗೆ ಮಾಡಿದರೆ ಒಳ್ಳೆಯದು?
ನವರಾತ್ರಿ ಎಂಬುವುದು 9 ದಿನಗಳ ಆಚರಣೆ. ಈ ಸಮಯದಲ್ಲಿ ಸರಸ್ವತಿ, ದುರ್ಗೆ, ಲಕ್ಷ್ಮಿಯನ್ನು ಆರಾಧಿಸಲಾಗುವುದು. ಇನ್ನು ನವರಾತ್ರಿಯಲ್ಲಿ ನವ ದಂಪತಿಗಳು ನವರಾತ್ರಿ ಆಚರಣೆ ಮಾಡುವುದರಿಂದ ಅವರ ದಾಂಪತ್ಯ ಜೀವನ ಚೆನ್ನಾಗಿರಲಿದೆ, ನವರಾತ್ರಿಯನ್ನು ಆಚರಣೆ ಮಾಡುವಾಗ ಈ ಅಂಶಗಳ ಕಡೆ ಗಮನಹರಿಸಿ:
* ಮೊದಲು ಮನೆಯನ್ನು ಸ್ವಚ್ಛಗೊಳಿಸಬೇಕು. ಮನೆಯನ್ನು ಸ್ವಚ್ಛವಾಗಿ ಇಡದಿದ್ದರೆ ಲಕ್ಷ್ಮಿ ಬರುವುದಿಲ್ಲ ಎಂದು ಹೇಳಲಾಗುವುದು.
* ಘಟಸ್ಥಾಪನ ಸಮಯದಲ್ಲಿ ಕಲಶ ಇರಿಸಬೇಕು. ವೀಳ್ಯೆದೆಲೆ, ಅಡಿಗೆ, ನಾಣ್ಯ, ಧಾನ್ಯಗಳನ್ನು ಹಾಕಿ ಕಲಶದ ಮೇಲೆ ತೆಂಗಿನಕಾಯಿ ಇರಿಸಿ ನಂತರ ಕೆಂಪು ದಾರದಿಂದ ಕಲಶವನ್ನು ಸುತ್ತಬೇಕು. ಈ ಕಲಶ 9 ದಿನಗಳು ಇರಬೇಕು.

* ಕಲಶವನ್ನು ಕೆಂಪು ಬಟ್ಟೆಯಲ್ಲಿ ಸುತ್ತಿ ಕಲಶದ ಮೇಲೆ ಇಡಬೇಕು. ಈ ತೆಂಗಿನಕಾಯಿಯನ್ನು ಕೊನೆಯ ದಿನ ಪ್ರಸಾದವನ್ನಾಗಿ ಬಳಸಬಹುದು.
* ಧಾನ್ಯ ಬೆಳೆಯುವುದು: ಮಣ್ಣಿನ ಮಡಿಕೆಗೆ ಮಣ್ಣು ತುಂಬಿ ಅದರಲ್ಲಿ ನವ ಧಾನ್ಯಗಳನ್ನು ಹಾಕಿಡಿ, ಆ ಧಾನ್ಯಗಳು ಮೊಳಕೆ ಬರುತ್ತದೆ, ಅದನ್ನು ಕೊನೆಯ ದಿನ ಪ್ರಸಾದವನ್ನಾಗಿ ಬಳಸಬೇಕು.
* ದೇವಿಗೆ ಈ ವಸ್ತುಗಳನ್ನು ಅರ್ಪಿಸಿ: ದೇವಿಗೆ ಕೆಂಪು ಬಳೆಗಳು, ಸಿಂದೂರ, ಕುಂಕುಮ, ಮೆಹಂದಿ ಹೀಗೆ ಅಲಂಕಾರಿಕ ವಸ್ತುಗಳನ್ನು ಅರ್ಪಿಸಿ, ಇದರಿಂದ ದೇವಿ ವೈವಾಹಿಕ ಜೀವನದಲ್ಲಿ ಇಷ್ಟಾರ್ಥ ನೆರವೇರಿಸುತ್ತಾಳೆ ಎಂದು ಹೇಳಲಾಗುವುದು.
* ಅಖಂಡ ಜ್ಯೋತಿ ಬೆಳಗಿದರೆ ಒಳ್ಳೆಯದು: ನವರಾತ್ರಿಯಲ್ಲಿ ಅಖಂಡ ಜ್ಯೋತಿ ಬೆಳಗಿದರೆ ಒಳ್ಳೆಯದು, ಈ ಜ್ಯೋತಿ ನಿರಂತರ ಉರಿಯಬೇಕು, ಹಗಲು-ರಾತ್ರಿ ಈ ದೀಪ ಆರದಂತೆ ನೋಡಿಕೊಳ್ಳಬೇಕು. ಈ ರೀತಿ ಅಖಂಡ ಜ್ಯೋತಿ ಬೆಳಗವುದರಿಂದ ಎಲ್ಲಾ ಋಣಾತ್ಮಕ ಶಕ್ತಿ ದೂರಾಗುವುದು.
* ಲವಂಗ: ದೇವಿಗೆ ಆರತಿ ಬೆಳಗುವಾಗ ಕರ್ಪೂರ ಜೊತೆಗೆ ವೀಳ್ಯೆದೆಲೆಯಲ್ಲಿ ಲವಂಗ, ಜೇನು ತುಪ್ಪ ಹಾಕಿ ಅರ್ಪಿಸಿ. ಈ ರೀತಿ ಆರತಿ ಬೆಳಗಯವುದರಿಂದ ಮನೆಗೆ ಒಳಿತಾಗುವುದು.
ಪತಿ-ಪತ್ನಿ ಈ ದಿನಗಳಲ್ಲಿ ಸೇರಬಾರದು
ನವದಂಪತಿ ದುರ್ಗೆಯ ಆರಾಧನೆ ಮಾಡುವಾಗ ಸರಸ-ಸಲ್ಲಾಪ ಮಾಡಬಾರದು. ಶ್ರದ್ಧೆಯಿಂದ ದೇವಿಯನ್ನು ಆರಾಧಿಸಬೇಕು. 9 ದಿನಗಳು ಭಕ್ತಿಯಿಂದ ಅವಳನ್ನು ಆರಾಧನೆ ಮಾಡಿದರೆ ದೇವಿ ನಿಮಗೆ ಸಂತಾನ ಭಾಗ್ಯ ನೀಡುತ್ತಾಳೆ ಅಲ್ಲದೆ ನಿಮ್ಮ ವೈವಾಹಿಕ ಜೀವನ ತುಂಬಾ ಚೆನ್ನಾಗಿರುತ್ತದೆ ಎಂದು ಹೇಳಲಾಗುವುದು.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications
