Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ದಸರಾ ಕುರಿತ 7 ಆಸಕ್ತಿಕರ ಸಂಗತಿಗಳು: ದಸರಾವನ್ನು ದೇಶದ ಹೊರಗಡೆಯೂ ಆಚರಿಸುತ್ತಾರೆ
10 ದಿನಗಳ ದಸರಾ ಆಚರಣೆಯನ್ನು ಜಗತ್ತಿನಲ್ಲಿಯೇ ಅತೀ ಹೆಚ್ಚು ಅದ್ದೂರಿಯಿಂದ ಆಚರಿಸಲ್ಪಡುವುದು ಮೈಸೂರಿನಲ್ಲಿ. ಮೈಸೂರು ಹೊರತುಪಡಿಸಿ ಕೊಡಗು ಮತ್ತಿತರ ಕಡೆಗಳಲ್ಲಿ ದಸರಾ ಹಬ್ಬವನ್ನು ಆಚರಿಸುತ್ತಾರೆ. ಮಡಿಕೇರಿ, ಗೋಣಿಕೊಪ್ಪ ಈ ಕಡೆಗಳಲ್ಲಿ ದಸರಾವನ್ನು ವಿಜೃಂಭಣೆಯಿಂದ ಆಚರಿಸಲಾಗುವುದು. ಆದರೆ ದಸರಾವನ್ನು ಭಾರತದಲ್ಲಿ ಮಾತ್ರವಲ್ಲ ವಿದೇಶದಲ್ಲೂ ಆಚರಿಸುತ್ತಾರೆ ಎಂಬುವುದು ಗೊತ್ತೇ?

ಮೈಸೂರು ದಸರಾ: ಮೈಸೂರು ದಸರಾವನ್ನು 17ನೇ ಶತಮಾನದಿಂದ ಆಚರಿಸಲಾಗುತ್ತಿದೆ. ಜಂಬೂ ಸವಾರಿ ಮೈಸೂರು ದಸರಾದ ಪ್ರಮುಖ ಆಕರ್ಷಣೆ. ಚಿನ್ನದ ಅಂಬಾರಿಯಲ್ಲಿ ಚಾಮುಂಡೇಶ್ವರಿಯನ್ನು ಹೊತ್ತುಕೊಂಡು ಬರುವ ಆನೆಯನ್ನು ನೋಡಲೆಂದೇ ಲಕ್ಷಾಂತರ ಜನರು ಮೈಸೂರಿಗೆ ಆಗಮಿಸುತ್ತಾರೆ.
ಕುಲ್ಲು ದಸರಾ: ಹಿಮಾಚಲ ಪ್ರದೇಶದಲ್ಲಿ ಒಂದು ವಾರಗಳ ಕಾಲ ಕುಲ್ಲು ದಸರಾ ಎಂದು ಆಚರಿಸಲಾಗುವುದು. ದಸರಾ ದಿನದಂದು ಪ್ರಾರಂಭವಾಗಿ ಏಳು ದಿನಗಳವರೆಗೆ ನಡೆಯಲಿದೆ. ಈ ಸಮಯದಲ್ಲಿ ರಾಮನನ್ನು ಪೂಜಿಸಲಾಗುವುದು, ರಾಮನ ಮೂರ್ತಿಯನ್ನು ಮೆರವಣಿಗೆ ಮಾಡಲಾಗುವುದು.
ವಿದೇಶದಲ್ಲಿ ದಸರಾ ಆಚರಣೆ
ನೇಪಾಳ, ಬಾಂಗ್ಲದೇಶದಲ್ಲಿ ದಸರಾ ಆಚರಣೆ ಮಾಡಲಾಗುವುದು. ಮಲೇಷ್ಯಾದಲ್ಲಿ ಕೂಡ ದಸರಾ ಹಬ್ಬವನ್ನು ಆಚರಿಸಲಾಗುವುದು.
ಬೌದ್ಧರಿಗೆ ವಿಶೇಷವಾದ ದಿನ
ಬೌದ್ಧರು ಈ ಸಂದರ್ಭದಲ್ಲಿ ಬೌದ್ಧ ಧರ್ಮದ ಪ್ರಚಾರವನ್ನು ಮಾಡುತ್ತಾರೆ.
ಮಳೆಗಾಲ ಮುಕ್ತಾಯದ ಸಂಕೇತ
ದಸರಾ ಬಳಿಕ ಮಳೆಗಾಲ ಮುಗುದು ಚಳಿಗಾಲ ಶುರುವಾಗುವುದು. ಈ ಅವಧಿಯಲ್ಲಿ ಬೆಳೆಕೊಯ್ಲು ಮಾಡಲಾಗುವುದು.
ಮೈಸೂರು ದಸರಾದ ವಿಶೇಷತೆ
ರಾಜ ವಡೆಯರ್ ಮೈಸೂರು ರಾಜ್ಯವನ್ನು 1610ರಲ್ಲಿ ಸ್ಥಾಪಿಸಿದರು. ಚಿನ್ನದ ಅಂಬಾರಿಯಲ್ಲಿ ರಾಜ ಕುಳಿತು ಮೆರವಳಿಗೆಯನ್ನು ಮಾಡುತ್ತಿದ್ದರು. 1971ರವರೆಗೆ ಈ ಪದ್ಧತಿ ಇತ್ತು, ಅದಾದ ಬಳಿಕ ಚಮುಂಡೇಶ್ವರಿ ದೇವಿಯನ್ನು ಪಲ್ಲಕ್ಕಿಯಲ್ಲಿ ಕೂರಿಸಿ ಮೆರವಣಿಗೆ ಮಾಡಲಾಗುವುದು. ಮೆರವಣಿಗೆಯ ಮುನ್ನ ಮೈಸೂರು ರಾಜ ಮನೆತನದವರು ಪೂಜಾ ವಿಧಿಗಳನ್ನು ಪೂರೈಸುತ್ತಾರೆ. ಇಡೀ ಮೈಸೂರು ನವವಧುವಿನಂತೆ ಸಿಂಗರಿಸಿರುತ್ತದೆ, ಮೈಸೂರು ಅರಮನೆ ನೋಡಲು ಎರಡು ಕಣ್ಣು ಸಾಲದು ಅಷ್ಟೊಂದು ಸುಂದರವಾಗಿರುತ್ತದೆ.
* ಬಲರಾಮ, ಅರ್ಜುನ ಬಳಿಕ ಅಭಿಮನ್ಯು ಅಂಬಾರಿಯನ್ನು ಹೊರಲಿದ್ದಾರೆ. ಅಭಿಮನ್ಯು 750 ಕೆಜಿ ತೂಕದ ಚಿನ್ನದ ಅಂಬಾರಿಯನ್ನು ಹೊತ್ತುಕೊಂಡು ಸಾಗಲಿದೆ. ಅಭಿಮನ್ಯು ಜೊತೆಗೆ ವಿಜಯ, ವರಲಕ್ಷ್ಮಿ, ಅರ್ಜುನ, ಭೀಮಾ, ಮಹೇಂದ್ರ, ಧನಂಜಯ, ಗೋಪಿ, ಪಾರ್ಥಸಾರಥಿ ಮೆರವಣಿಗೆಯಲ್ಲಿ ಸಾಗಲಿವೆ.
ಈ ತಿಂಗಳಿನಲ್ಲಿ ಆನೆಗಳಿಗೆ ಹಾಗೂ ಮಾವುತರಿಗೆ ರಾಜ ಆತಿಥ್ಯ ಸಿಗಲಿದೆ. ಅಲ್ಲದೆ ದಸರಾ ಶುರುವಾಗುವ ಒಂದು ತಿಂಗಳು ಮೊದಲು ಬರುವ ಆನೆಗಳಿಗೆ ಸೂಕ್ತ ತರಬೇತಿಯನ್ನು ನೀಡಲಾಗುವುದು. 750 ಕೆಜಿ ಮರದ ಪಲ್ಲಕ್ಕಿಯನ್ನು ಅಭಿಮನ್ಯು ಬೆನ್ನಿಗೆ ಕಟ್ಟಿ ತರಬೇತಿ ನೀಡಲಾಗುವುದು. ಶುಭ ಸಮಯದಲ್ಲಿ ಮೆರವಣಿಗೆ ಪ್ರಾರಂಭವಾಗುವುದು, 5 ಗಂಟೆಗಳ ಮೆರವಣಿಗೆ ಬಳಿಕ ಬನ್ನಿಮಂಡಪಕ್ಕೆ ಬರಲಾಗುವುದು. ಇಲ್ಲಿಗೆ ಬಂದಾಗ ಆ ವರ್ಷದ ದಸರಾ ಆಚರಣೆಗೆ ತೆರೆ ಬೀಳುತ್ತದೆ.



Click it and Unblock the Notifications
