Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ದಸರಾ: ವಿಜಯ ದಶಮಿಯಂದು ಹೀಗೆ ಮಾಡಿದರೆ ಯಶಸ್ಸು, ಆರೋಗ್ಯ, ಸಂಪತ್ತು ದೊರೆಯುವುದು
ದುಷ್ಟ ಶಕ್ತಿಯ ವಿರುದ್ಧ ಸತ್ಯ, ಸಾತ್ವಿಕ ಶಕ್ತಿಯ ಗೆಲುವಿನ ಸಂಕೇತವಾಗಿ ವಿಜಯ ದಶಮಿ ಹಬ್ಬವನ್ನು ಆಚರಿಸಲಾಗುವುದು. ದುರ್ಗೆ ದುಷ್ಟ ಮಹಿಷಾಸುರನನ್ನು ಸಂಹರಿಸಿದ ಬಳಿಕ ಆ ವಿಜಯವನ್ನು ವಿಜಯ ದಶಮಿಯೆಂದು ಕೊಂಡಾಡಲಾಗುವುದು. ಉತ್ತರ ಭಾರತದ ಕಡೆ ಶ್ರೀರಾಮನು ರಾವಣನನ್ನುಕೊಂಡ ವಿಜಯವನ್ನು ಈ ದಿನದಂದು ಕೊಂಡಾಡಲಾಗುವುದು. ದುಷ್ಟರ ಸಂಹಾರ, ಶಿಷ್ಟರ ರಕ್ಷಣೆಯನ್ನು ದೇವರು ಖಂಡಿತ ಮಾಡುತ್ತಾನೆ ಎಂಬುವುದು ವಿಜಯ ದಶಮಿ ಆಚರಣೆಯ ಸಂಕೇತವಾಗಿದೆ.
ಪ್ರತಿ ವರ್ಷ ಅಶ್ವಿನ್ ಶುಕ್ಲ ಪಕ್ಷದ ಹತ್ತನೇ ದಿನದಂದು ವಿಜಯದಶಮಿ ಆಚರಿಸಲಾಗುವುದು. ಈ ವಿಜಯ ದಶಮಿ ದಿನ ತುಂಬಾ ಶುಭ ಎಂದು ಹೇಳಲಾಗುವುದು. ಈ ದಿನದಂದು ಕೆಲವು ಕಾರ್ಯವನ್ನು ಮಾಡಿದರೆ ಅಕ್ಷಯ ಪುಣ್ಯವನ್ನು ಪಡೆಯುತ್ತಾನೆ ಎಂದು ಹೇಳಲಾಗುವುದು. ಈ ದಿನ ಯಾವ ಕಾರ್ಯಗಳನ್ನು ಮಾಡಿದರೆ ತುಂಬಾ ಒಳ್ಳೆಯದು ಎಂದು ನೋಡೋಣ ಬನ್ನಿ:

ವ್ಯಾಪಾರದಲ್ಲಿ ಪ್ರಗತಿಗೆ - ದಸರಾ ದಿನದಂದು ತೆಂಗಿನಕಾಯಿಯನ್ನು ಹಳದಿ ಬಟ್ಟೆಯಲ್ಲಿ ಸುತ್ತಿ, ರಾಮಮಂದಿರಕ್ಕೆ ಸಿಹಿತಿಂಡಿ ದಾನ ಮಾಡುವುದರಿಂದ ಮಂದಗತಿಯ ವ್ಯಾಪಾರ ಚುರುಕಾಗುವುದು , ವ್ಯಾಪಾರದಲ್ಲಿ ಒಳ್ಳೆಯ ಲಾಭ ಗಳಿಸುತ್ತೀರಿ ಎಂಬ ನಂಬಿಕೆಯಿದೆ.
ಶನಿಯ ಮಹಾದಶಾಕ್ಕೆ ಪರಿಹಾರ ಕೂಡ ಮಾಡಬಹುದು
ದಸರಾ ದಿನದಂದು ಆಲದ ಮರದ ಕೆಳಗೆ ಸಾಸಿವೆ ಎಣ್ಣೆಯ ದೀಪವನ್ನು ಬೆಳಗಿಸುವುದರಿಂದ ಶನಿ ಸಾಡೇಸಾತಿ ಅಥವಾ ಶನಿ ಧೈಯ್ಯಾದ ಅಶುಭ ಪರಿಣಾಮಗಳು ಕಡಿಮೆಯಾಗುವುದು.
ಅಪರಾಜಿತಾ ದೇವಿಯ ಪೂಜೆ - ದಸರಾ ದಿನದಂದು ವಿಜಯ ಮುಹೂರ್ತದಲ್ಲಿ ಅಪರಾಜಿತಾ ದೇವಿಯ ವಿಧಿವಿಧಾನದಂತೆ ಅಪರಾಜಿತಾ ದೇವಿಯನ್ನು ಪೂಜಿಸಬೇಕು. ಪ್ರತಿಯೊಂದು ಕ್ಷೇತ್ರದಲ್ಲೂ ಗೆಲುವು ಸಾಧಿಸಲಾಗಿವುದು. ಅಪರಾಜಿತಾ ದೇವಿಯನ್ನು ಪೂಜಿಸುವಾಗ, ಓಂ ಅಪರಾಜಿತಾಯೈ ನಮಃ ಎಂಬ ಮಂತ್ರವನ್ನು 108 ಬಾರಿ ಜಪಿಸಿ.
ದಾನ ಮಾಡಿ
ವಿಜಯದಶಮಿಯಂದು ಸಂಜೆ ಲಕ್ಷ್ಮಿಗೆ ಆರಾಧನೆ ಮಾಡಿದ ಬಳಿಕ ಆಹಾರ, ಬಟ್ಟೆಗಳನ್ನು ದಾನ ಮಾಡುವ ಮೂಲಕ ಲಕ್ಷ್ಮಿ ದೇವಿಯ ಕೃಪೆಗೆ ಪಾತ್ರರಾಗಬಹುದು. ಹೀಗೆ ಮಾಡಿದರೆ ಮನೆಯಲ್ಲಿ ಬಡತನವಿರಲ್ಲ, ಉತ್ತಮ ಆರ್ಥಿಕ ಪ್ರಯೋಜನಗಳನ್ನು ಪಡೆಯಿರಿ.
ಶತ್ರು ಕಾಟಕ್ಕೆ ಪತಿಹಾರ
ಪ್ರತಿ ವರ್ಷ ದಸರಾದಂದು ಅಧರ್ಮಿಯಾದ ಹತ್ತು ತಲೆಯ ರಾವಣನ ಪ್ರತಿಕೃತಿಗಳನ್ನು ಸುಡುವ ಪದ್ಧತಿ ಕೆಲವು ಕಡೆ ಇದೆ. ಈ ಹತ್ತು ತಲೆ ಮನುಷ್ಯನೊಳಗೆ ಬೆಳೆಯುತ್ತಿರುವ ಕೋಪ, ದುರಾಸೆ, ಭ್ರಮೆ, ಅಸೂಯೆ, ಸ್ವಾರ್ಥ, ಅಮಾನವೀಯತೆ, ಅಮಲು, ಅನ್ಯಾಯ ಮತ್ತು ಅಹಂಕಾರಗಳ ಬಗ್ಗೆ ಹೇಳುತ್ತದೆ, ಮೊದಲು ಇವುಗಳನ್ನು ನಾಶ ಮಾಡಬೇಕು, ನಮ್ಮಲ್ಲಿ ಈ ಗುಣಗಳು ಅಳಿಸಿದರೆ ವಿಜಯ ದೊರೆಯುವುದು ಎಂದು ಹೇಳಲಾಗುವುದು.
* ದಸರಾ ದಿನದಂದು ಮನೆಯಲ್ಲಿ ಸುಂದರಕಾಂಡವನ್ನು ಪಠಣೆ ಮಾಡುವುದರಿಂದ, ಒಬ್ಬ ವ್ಯಕ್ತಿಯು ರೋಗ-ರುಜಿನಗಳಿಂದ ಪರಿಹಾರವನ್ನು ಪಡೆಯುತ್ತಾನೆ. ಈ ದಿನ ಹವನ ಮಾಡುವ ಸಂಪ್ರದಾಯವಿದೆ. ಇದರೊಂದಿಗೆ, ಮನೆಯಲ್ಲಿ ಯಾರಾದರೂ ಪ್ರತಿದಿನ ಅನಾರೋಗ್ಯದಿಂದ ಬಳಲುತ್ತಿದ್ದರೆ, ದಸರಾ ದಿನದಂದು ರೋಗಿಯ ತಲೆಗೆ ತೆಂಗಿನಕಾಯಿಯನ್ನು 7 ಬಾರಿಮುಟ್ಟಿಸಿ ನಂತರ ಅದನ್ನು ರಾವಣ ದಹನದ ಬೆಂಕಿಯಲ್ಲಿ ಎಸೆಯುವ ಪದ್ಧತಿ ಇದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications
