Latest Updates
-
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ! -
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ! -
ಯುಸಿಸಿ ಸಮಿತಿಯಲ್ಲಿ ಭಿನ್ನಮತ: ನಿಮ್ಮ ಮದುವೆ, ಆಸ್ತಿ ಹಕ್ಕಿನ ಮೇಲೆ ಪರಿಣಾಮವೇನು? -
15 ನಿಮಿಷದ ಡೆಂಗ್ಯೂ ಹೋಮ್ ಆಡಿಟ್: ನಿಮ್ಮ ಮನೆಯೇ ಸೊಳ್ಳೆಗಳ ತಾಣವಾಗದಿರಲಿ, ಈ ಸರಳ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ನಕಲಿ ಪ್ರೋಟೀನ್ ಸಪ್ಲಿಮೆಂಟ್ಸ್ ಎಚ್ಚರಿಕೆ: ನಿಮ್ಮ ಆರೋಗ್ಯಕ್ಕೆ ಕಂಟಕವಾಗುವ ಮುನ್ನ ಈ ಲೇಬಲ್ ಚೆಕ್ ಮಾಡಿ! -
ಒಡಿಶಾ-ಆಂಧ್ರ ಕರಾವಳಿಗೆ ಅಪ್ಪಳಿಸಲಿದೆ 'ಡೀಪ್ ಡಿಪ್ರೆಷನ್': ನಿಮ್ಮ ಸುರಕ್ಷತೆಗಾಗಿ ಈ 15 ನಿಮಿಷಗಳ ಮುನ್ನೆಚ್ಚರಿಕೆ ಮರೆಯದಿರಿ! -
ದೆಹಲಿ-ಎನ್ಸಿಆರ್ನಲ್ಲಿ ಕಳಪೆ AQI: ಶ್ವಾಸಕೋಶದ ಆರೋಗ್ಯಕ್ಕಾಗಿ ಮನೆಯಲ್ಲೇ ಮಾಡಿ ಈ 10 ನಿಮಿಷದ ಸರಳ ವ್ಯಾಯಾಮ
ಈ ವರ್ಷ ಆಯುಧ ಪೂಜೆಗೆ ಶುಭ ಮುಹೂರ್ತ ಯಾವಾಗ?
ನವರಾತ್ರಿಯಲ್ಲಿ ಆಯುಧ ಪೂಜೆಗೆ ತುಂಬಾನೇ ಮಹತ್ವವಿದೆ. ನವರಾತ್ರಿ 9ನೇ ದಿನದಂದು ಆಯುಧ ಪೂಜೆ ಮಾಡಲಾಗುವುದು. ಈ ದಿನ ನಮ್ಮ ಕೆಲಸ ಕಾರ್ಯಗಳಿಗೆ ಬಳಸುವ ಉಪಕರಣಗಳನ್ನು ಪೂಜಿಸಲಾಗುವುದು. ಕೃಷಿಗೆ ಬಳಸುವ ಉಪಕರಣಗಳು, ಓಡಿಸುವ ಗಾಡಿಗಳು, ಬಳಸುವ ಕಂಪ್ಯೂಟರ್, ಲ್ಯಾಪ್‌ಟಾಪ್ ಹೀಗೆ ನಮ್ಮ ಬದುಕಿಗೆ ಆಸರೆಯಾಗಿರುವ ಉಪಕರಣಗಳನ್ನು ಪೂಜಿಸಲಾಗುವುದು. ಈ ವರ್ಷ ಆಯುಧ ಪೂಜೆಯನ್ನು ಅಕ್ಟೋಬರ್ 23ರಂದು ಆಚರಿಸಲಾಗುವುದು.

ಆಯುಧ ಪೂಜೆ ವಿಜಯ ಮುಹೂರ್ತ ಮಧ್ಯಾಹ್ನ 02:02ರಿಂದ 02:48ರವರೆಗೆ
ನವಮಿ ತಿಥಿ ಪ್ರಾರಂಭ: ಅಕ್ಟೋಬರ್ 22 ಸಂಜೆ 07:58ಕ್ಕೆ
ನವಮಿ ತಿಥಿ ಮುಕ್ತಾಯ: ಅಕ್ಟೋಬರ್ 23 ಸಂಜೆ 05:44ಕ್ಕೆ
ಆಯುಧ ಪೂಜೆಯ ಪೌರಾಣಿಕ ಹಿನ್ನೆಲೆ
ದುರ್ಗೆಯು ಚಾಮುಂಡಿಯ ಅವತಾರ ತಾಳಿ ಮಹಿಷಾಸುರನನ್ನು ಸಂಹರಿಸುತ್ತಾಳೆ, ನಂತರ ತಾನು ರಾಕ್ಷಸನನ್ನು ಸಂಹರಿಸಲು ಬಳಸಿದ ಆಯುಧವನ್ನು ಭೂಮಿಯಲ್ಲೇ ಬಿಟ್ಟು ಹೋದಳು, ಆ ಆಯುಧವನ್ನು ತಂದು ಪೂಜಿಸಲಾಯಿತು, ಅಲ್ಲಿಂದ ಆಯುಧ ಪೂಜೆ ಆಚರಣೆಗೆ ಬಂತು ಎಂದು ಹೇಳಲಾಗುವುದು.
ಆಯುಧ ಪೂಜೆ ಧಾರ್ಮಿಕ ಆಚರಣೆ ಮಾತ್ರವಲ್ಲ ನಮ್ಮ ಭಾವನೆಯೊಂದಿಗೆ ಸಂಬಂಧ ಹೊಂದಿದೆ
ಆಯುಧ ಪೂಜೆ ಅಥವಾ ಅಸ್ತ್ರ ಪೂಜೆಯಲ್ಲಿ ನಮ್ಮ ದಿನ ನಿತ್ಯ ಬದುಕಿಗೆ ಆಸರೆಯಾಗಿರುವ ವಸ್ತುಗಳನ್ನು ನಾವು ಪೂಜಿಸುತ್ತೇವೆ. ಡ್ರೈವರ್ ಆಗಿದ್ದರೆ ಗಾಡಿಯನ್ನು ಪೂಜಿಸುತ್ತಾರೆ, ಪ್ರತಿಯೊಬ್ಬರು ತಮ್ಮ ವೃತ್ತಿ ಜೀವನಕ್ಕೆ ಸಂಬಂಧಿಸಿದ ವಸ್ತುಗಳನ್ನು ಪೂಜಿಸುತ್ತಾರೆ. ಆದ್ದರಿಂದ ಈ ಪೂಜೆ ನಮ್ಮ ಮನಸ್ಸಿಗೆ ಮತ್ತಷ್ಟು ಆಪ್ತವಾಗುವುದು.
ಆಯುಧ ಪೂಜೆಯನ್ನು ಹೇಗೆ ಆಚರಿಸಬೇಕು?
* ಮನೆ, ಅಫೀಸ್ ಸ್ವಚ್ಛಗೊಳಿಸಬೇಕು.
* ನಮ್ಮ ಆಯುಧಗಳಿಗೆ ಹೂ, ಕುಂಕುಮ ಅರ್ಪಿಸಿ
* ಕುಂಬಳಕಾಯಿಗೆ ಕುಂಕುಮ ತುಂಬಿ ಅದನ್ನು ಒಡೆಯಲಾಗುವುದು
* ನಂತರ ಪ್ರಸಾದ ತಯಾರಿಸಿ ಹಂಚಿ.
ಆಯುಧ ಪೂಜೆ ಸಮಯದಲ್ಲಿ ಏನು ಮಾಡಬೇಕು, ಏನು ಮಾಡಬಾರದು?
* ಪೂಜೆಗೆ ಮೊದಲು ಪೂಜೆಗೆ ಬಳಸುವ ವಸ್ತುಗಳನ್ನು ಸ್ವಚ್ಛಗೊಳಿಸಿ. ಆಯುಧಗಳು, ಗಾಡಿಗಳು ಇವುಗಳನ್ನು ಸ್ವಚ್ಛಗೊಳಿಸಿ.
* ನಂತರ ಶುಭ ಸಮಯದಲ್ಲಿ ಅವುಗಳಿಗೆ ಪೂಜೆ ಮಾಡಬೇಕು
* ಪೂಜೆಯಲ್ಲಿ ಕುಂಬಳಕಾಯಿಗೆ ಕುಂಕುಮ ತುಂಬಿ ಅದನ್ನು ಗಾಡಿ ಮುಂದೆ ಒಡೆಯಬೇಕು.
ಏನು ಮಾಡಬಾರದು?
* ಪೂಜೆ ಮಾಡುವಾಗ ಮನಸ್ಸಿನಲ್ಲಿ ಯಾವುದೇ ದುರಾಸೆ ಇರಬಾರದು.
ಆಯುಧ ಪೂಜೆ ವಿಧಿ
* ಆಯುಧ ಪೂಜೆಯನ್ನು ಸಂಪೂರ್ಣ ಭಕ್ತಿಯಿಂದ ಪೂರ್ಣಗೊಳಿಸಬೇಕು.
* ಪೂಜೆಗೆ ಅರಿಶಿಣ, ಕುಂಕುಮ, ವೀಳ್ಯೆದೆಲೆ, ಅಡಿಕೆ, ಕಡ್ಲೆಪುರಿ, ಬೂದು ಕುಂಬಳಕಾಯಿ, ನಿಂಬೆಹಣ್ಣು, ಬಾಳೆಹಣ್ಣು, ಹಣ್ಣುಗಳು, ಬಾಳೆ ದಿಂಡನ್ನು ಬಳಸಲಾಗುವುದು.
* ಆಯುಧಗಳನ್ನು ಪೂಜೆ ಮಾಡಿ ನವದುರ್ಗೆಯ ಆಶೀರ್ವಾದ ಬೇಡಲಾಗುವಯದು.
ಹಿಂದೆಯೆಲ್ಲಾ ಆಯುಧಗಳನ್ನು ಮಾತ್ರ ಬಳಸಲಾಗುತ್ತಿತ್ತು
ಹಿಂದೆಯೆಲ್ಲಾ ಆಯುಧಗಳನ್ನು ಮಾತ್ರ ಇಟ್ಟು ಪೂಜಿಸಲಾಗಿತ್ತು, ನಂತರ ಕೃಷಿ ಉಪಕರಣಗಳನ್ನು ಇಡಲಾಗಿತ್ತು, ಈಗ ಲ್ಯಾಪ್‌ಟಾಪ್‌ನಿಂದ ಹಿಡಿದು ಕೆಲಸಕ್ಕೆ ಸಂಬಂಧಿಸಿದ ಆಧುನಿಕ ಉಪಕರಣಗಳನ್ನು ಕೂಡ ಪೂಜಿಸಲಾಗುವುದು.
ಆಯುಧ ಪೂಜೆಯಲ್ಲಿ ಯಾವ ದೇವರನ್ನು ಪೂಜಿಸಲಾಗುವುದು?
ಆಯುಧ ಪೂಜೆಯಲ್ಲಿ ಸರಸ್ವತಿ, ಲಕ್ಷ್ಮಿ, ಪಾರ್ವತಿಯನ್ನು ಪೂಜಿಸಲಾಗುವುದು



Click it and Unblock the Notifications
