For Quick Alerts
ALLOW NOTIFICATIONS  
For Daily Alerts

ಮಹಿಳೆಯರಿಗೆ ಮುಟ್ಟಿನ ನಂತರ ತಲೆನೋವು ಬರಲು ಕಾರಣವೇನು?

|

ಹುಡುಗಿಯು ಪ್ರೌಢಾವಸ್ಥೆಗೆ ತಲುಪಿದ ಬಳಿಕ ಪ್ರತೀ ತಿಂಗಳು ಋತುಚಕ್ರ ಆಗುವುದು ಸಹಜ ಕ್ರಿಯೆ. ಇದು ಪ್ರಕೃತಿ ನಿಯಮ ಕೂಡ. ಪ್ರತೀ ತಿಂಗಳು ಋತುಚಕ್ರದ ವೇಳೆ ಮಹಿಳೆಯ ದೇಹದಲ್ಲಿ ಹಲವಾರು ರೀತಿಯ ಬದಲಾವಣೆಗಳು, ಸಮಸ್ಯೆಗಳು ಕಾಣಿಸಿಕೊಳ್ಳುವುದು. ಕೆಲವು ಮಹಿಳೆಯರಿಗೆ ಅತಿಯಾದ ಹೊಟ್ಟೆನೋವು, ತಲೆನೋವು, ಮನಸ್ಥಿತಿ ಬದಲಾವಣೆ ಇತ್ಯಾದಿಗಳು ಋತುಚಕ್ರದ ವೇಳೆ ಕಂಡು ಬರುವಂತಹ ಸಾಮಾನ್ಯ ಸಮಸ್ಯೆಗಳು ಆಗಿದೆ.

ಮಹಿಳೆಯರಲ್ಲಿ ಋತುಚಕ್ರವು ಸಾಮಾನ್ಯವಾಗಿ ಎರಡರಿಂದ ಎಂಟು ದಿನಗಳ ಕಾಲ ಇರುವುದು. ಈ ಸಮಯದಲ್ಲಿ ಕಾಣಿಸಿಕೊಳ್ಳುವ ತಲೆನೋವು ಮಾತ್ರ ವಿವಿಧ ಕಾರಣಗಳಿಂದ ಬರಬಹುದು. ಆದರೆ ಸಾಮಾನ್ಯವಾಗಿ ಹೇಳಬೇಕೆಂದರೆ ನರಗಳು ಊದಿಕೊಳ್ಳುವುದು ಅಥವಾ ಬಿಗಿಗೊಳ್ಳುವ ಪರಿಣಾಮವಾಗಿ ಈ ರೀತಿಯ ತಲೆನೋವು ಕಾಣಿಸಿಕೊಳ್ಳಬಹುದು. ನರಗಳ ಸುತ್ತಲು ಒತ್ತಡವು ಆರಂಭವಾಗುತ್ತಿರುವಂತೆ ಮೆದುಳಿಗೆ ನೋವಿನ ಸಂಕೇತವು ಹೋಗುವುದು. ಇದರಿಂದಾಗಿ ತೀವ್ರವಾದ ತಲೆನೋವು ಮತ್ತು ಕೆಲವೊಮ್ಮೆ ಸಾಧಾರಣ ತಲೆನೋವು ಕಾಣಿಸಿಕೊಳ್ಳಬಹುದು.

ಕೆಲವರಿಗೆ ಇಂತಹ ತಲೆನೋವನ್ನು ಸಹಿಸಿಕೊಳ್ಳಲು ಆಗಲ್ಲ. ಇದರಿಂದಾಗಿ ಅವರ ದಿನನಿತ್ಯದ ಚಟುವಟಿಕೆಗಳ ಮೇಲೆ ತೀವ್ರ ರೀತಿಯ ಪರಿಣಾಮ ಬೀರುವುದು. ಇಂದಿನ ದಿನಗಳಲ್ಲಿ ಹೆಚ್ಚಿನ ಮಹಿಳೆಯರು ಉದ್ಯೋಗದಲ್ಲಿರುವ ಕಾರಣದಿಂದಾಗಿ ತಲೆನೋವು ತೀವ್ರವಾಗಿ ಕಾಡಿದರೆ ಆಗ ಕೆಲಸ ಮೇಲೆ ಇದು ವ್ಯತಿರಿಕ್ತ ಪರಿಣಾಮ ಬೀರುವುದು. ಪ್ರತೀ ತಿಂಗಳು ಕಾಡುವಂತಹ ಇಂತಹ ತಲೆನೋವಿಗೆ ಚಿಕಿತ್ಸೆ ಪಡೆದುಕೊಂಡರೆ ತುಂಬಾ ಒಳ್ಳೆಯದು. ಇಲ್ಲವಾದಲ್ಲಿ ಇದು ನಿಮ್ಮ ವೃತ್ತಿ ಹಾಗೂ ವೈಯಕ್ತಿಕ ಜೀವನದ ಮೇಲೆ ಪರಿಣಾಮ ಬೀರುವುದು ಖಚಿತ. ಋತುಚಕ್ರದ ವೇಳೆ ತಲೆನೋವಿಗೆ ಕಾರಣವೇನು ಎಂದು ತಿಳಿಯಲು ನೀವು ಈ ಲೇಖನ ಓದಿ...

ಋತುಚಕ್ರದ ಬಳಿಕದ ತಲೆನೋವು

ಋತುಚಕ್ರದ ಬಳಿಕದ ತಲೆನೋವು

ನಿಮಗೆ ಋತುಚಕ್ರದ ಬಳಿಕವೂ ತಲೆನೋವು ಕಾಣಿಸಿಕೊಳ್ಳುತ್ತಾ ಇದ್ದರೆ ಆಗ ಇದಕ್ಕೆ ಮುಖ್ಯ ಕಾರಣವೆಂದರೆ ಅದು ನಿರ್ಜಲೀಕರಣ, ಒತ್ತಡ, ಅನುವಂಶೀಯ ಅಥವಾ ಆಹಾರದಲ್ಲಿನ ಕೆಲವೊಂದು ಅಂಶಗಳು ತಲೆನೋವನ್ನು ಉಂಟು ಮಾಡಬಹುದು. ಅದಾಗ್ಯೂ, ಋತುಚಕ್ರಕ್ಕೆ ಮೊದಲು ಅಥವಾ ಬಳಿಕ ಕಾಣಿಸಿಕೊಳ್ಳುವಂತಹ ತಲೆನೋವು ನಿಮ್ಮ ಋತುಚಕ್ರಕ್ಕೆ ಸಂಬಂಧಿಸಿದ್ದು ಆಗಿರಬಹುದು. ಇದರಲ್ಲಿ ಪ್ರಮುಖವಾಗಿ ಹಾರ್ಮೋನು ಅಸಮತೋಲನ, ಕಬ್ಬಿನಾಂಶದ ಮಟ್ಟದಲ್ಲಿ ಕುಸಿತ ಇತ್ಯಾದಿಗಳು.

ಋತುಚಕ್ರದ ಮೈಗ್ರೇನ್

ಋತುಚಕ್ರದ ಮೈಗ್ರೇನ್

ಕೆಲವು ಮಹಿಳೆಯರಿಗೆ ಋತುಚಕ್ರದ ವೇಳೆ ತುಂಬಾ ತೀವ್ರ ರೀತಿಯ ತಲೆ ನೋವು ಕಾಣಿಸಿಕೊಳ್ಳುವುದು. ಇದನ್ನು ಮುಖ್ಯವಾಗಿ ಋತುಚಕ್ರದ ಮೈಗ್ರೇನ್ ಎಂದು ಕರೆಯಲಾಗುತ್ತದೆ. ಹಾರ್ಮೋನು ಮಟ್ಟದಲ್ಲಿ ಬದಲಾವಣೆ ಆಗುವ ಕಾರಣದಿಂದ಻ಗಿ ಹೀಗೆ ತಲೆ ನೋವು ಬರುವುದು. ಋತುಚಕ್ರದ ವೇಳೆ ಕಾಣಿಸಿಕೊಳ್ಳುವಂತಹ ತಲೆ ನೋವು ತುಂಬಾ ತೀವ್ರವಾಗಿರುವುದು ಮತ್ತು ಇದರೊಂದಿಗೆ ಕೆಲವು ಇತರ ಸಮಸ್ಯೆಗಳಾಗಿರುವ ವಾಕರಿಕೆ, ವಾಂತಿ, ತೀವ್ರ ಮತ್ತು ಹಿಂಸೆ ನೀಡುವಂತಹ ಸಿಡಿತ, ಕಣ್ಣಿನ ಹಿಂದಿನ ಭಾಗದಲ್ಲಿ ತುಂಬಾ ನೋವಿನಿಂದ ಕೂಡಿರುವಂತಹ ಒತ್ತಡ, ಕಡು ಬಣ್ಣ ಮತ್ತು ಜೋರಾದ ಶಬ್ಧಕ್ಕೆ ಅತಿ ಸೂಕ್ಷ್ಮತೆಯು ಉಂಟಾಗುವುದು.

Most Read:ಮಹಿಳೆಯರೇ ಈ ಲೈಂಗಿಕ ರೋಗಗಳ ಸಮಸ್ಯೆಯನ್ನು ತಪ್ಪದೇ ಪರೀಕ್ಷೆ ಮಾಡಿಸಿಕೊಳ್ಳಿ...

 ಋತುಚಕ್ರದ ಬಳಿಕದ ತಲೆನೋವಿಗೆ ಚಿಕಿತ್ಸೆಗಳು ಏನು?

ಋತುಚಕ್ರದ ಬಳಿಕದ ತಲೆನೋವಿಗೆ ಚಿಕಿತ್ಸೆಗಳು ಏನು?

*ವಿಶ್ರಾಂತಿ ಅಥವಾ ನಿದ್ರೆ ಮಾಡುವುದರಿಂದ ತಲೆನೋವು ಅದಾಗಿಯೇ ಮಾಯವಾಗುವುದು. ಅದಾಗ್ಯೂ, ವೇಗವಾಗಿ ತಲೆನೋವು ನಿವಾರಣೆ ಮಾಡಲು ಅಥವಾ ತಲೆನೋವಿನ ಮಟ್ಟ ಕಡಿಮೆ ಮಾಡಲು ನೀವು ಕೆಲವು ಚಿಕಿತ್ಸೆಗಳನ್ನು ಮಾಡಿಕೊಳ್ಳಬಹುದು.

*ಹಣೆಗೆ ತಂಪಾಗಿರುವ ಒತ್ತಡ ಹಾಕಿ. ಇದರಿಂದ ರಕ್ತನಾಳಗಳು ಹಿಗ್ಗುವುದು

*ಒವರ್ ದ ಕೌಂಟರ್(ಒಟಿಸಿ) ಸ್ಟಿರಾಯ್ಡ್ ಇಲ್ಲದೆ ಇರುವಂತಹ ಉರಿಯೂತ ಶಮನಕಾರಿ ಮಾತ್ರೆ(ಎನ್ ಎಸ್ ಎ ಐಡಿ) ಗಳಾಗಿರುವಂತಹ ಇಬುಪ್ರೊಫೆನ್ (ಅಡ್ವಿಲ್) ಅಥವಾ ಅಸೆಟಾಮಿನೋಫೆನ್ (ಟೈಲೆನಾಲ್) ಬಳಸಿಕೊಳ್ಳಿ.

ಹೆಚ್ಚಿನ ನೀರು ಕುಡಿದು ದೇಹವನ್ನು ತೇವಾಂಶದಿಂದ ಇಟ್ಟುಕೊಳ್ಳಿ.

*ನಿಮಗೆ ಹಾರ್ಮೋನು ಸಂಬಂಧಿ ತಲೆನೋವು ಕಾಣಿಸಿಕೊಳ್ಳುತ್ತಾ ಇದ್ದರೆ ಆಗ ವೈದ್ಯರು ನಿಮಗೆ ಈಸ್ಟ್ರೋಜನ್ ಸಪ್ಲಿಮೆಂಟ್ ಮಾತ್ರೆ, ಜೆಲ್ ಅಥವಾ ಮೆಗ್ನಿಶಿಯಂ ಪ್ಯಾಚ್ ತೆಗೆದುಕೊಳ್ಳಲು ಸೂಚಿಸಬಹುದು.

Most Read:ನೋಡಿ, ಇದೇ ಕಾರಣಕ್ಕೆ ದೇಹದಲ್ಲಿ ಕಿಡ್ನಿ ಸರಿಯಾಗಿ ಕಾರ್ಯ ನಿರ್ವಹಿಸದೇ ಇರುವುದು!

ಕೊನೆಯ ಮಾತು

ಕೊನೆಯ ಮಾತು

ಹೆಚ್ಚಿನ ಮಹಿಳೆಯರಿಗೆ ಋತುಚಕ್ರದ ವೇಳೆ ತಲೆನೋವು ಕಾಣಿಸಿಕೊಳ್ಳುವುದು ಸಹಜವಾಗಿರುವುದು. ಇದಕ್ಕಾಗಿ ನೀವು ಹಾರ್ಮೋನು ಥೆರಪಿ, ಕಬ್ಬಿನಾಂಶ ಸಪ್ಲಿಮೆಂಟ್ ಅಥವಾ ಒಟಿಸಿ ಬಳಸಬಹುದು. ನೀವು ಔಷಧಿಗಿಂತಲೂ ಪರಿಣಾಮಕಾರಿಯಾಗಿ ಮಾಡಬೇಕಾಗಿರುವಂತಹ ಕೆಲಸವೆಂದರೆ ಒಂದು ಕತ್ತಲೆ ಕೋಣೆಯಲ್ಲಿ ಆರಾಮವಾಗಿ ಮಲಗಿ. ತಲೆನೋವು ಹೋಗುವ ತನಕ ನೀವು ಮಲಗಿಕೊಂಡರೆ ಉತ್ತಮ.

ತಲೆನೋವು ತೀವ್ರವಾಗಿ ಇದ್ದರೆ

ತಲೆನೋವು ತೀವ್ರವಾಗಿ ಇದ್ದರೆ

ಋತುಚಕ್ರದ ವೇಳೆ ನಿಮಗೆ ತಲೆನೋವು ತೀವ್ರವಾಗಿ ಇದ್ದರೆ ಆಗ ನೀವು ವೈದ್ಯರನ್ನು ಭೇಟಿಯಾಗಿ ಪರೀಕ್ಷೆ ಮಾಡಿಸಿಕೊಂಡರೆ ಒಳ್ಳೆಯದು. ಇದರಿಂದ ನಿಮ್ಮ ದೈನಂದಿನ ಚಟುವಟಿಕೆಗಳ ಮೇಲೆ ಪರಿಣಾಮ ಬೀರುವುದು ತಪ್ಪುವುದು.

ಋತುಚಕ್ರದ ಬಳಿಕವೂ ನಿಮಗೆ ತೀವ್ರ ರೀತಿಯಲ್ಲಿ ಸಹಿಸಲು ಸಾಧ್ಯವಾಗದೆ ಇರುವಂತಹ ತಲೆನೋವು ಇದ್ದರೆ ಆಗ ನೀವು ತಕ್ಷಣವೇ ಹೋಗಿ ವೈದ್ಯರನ್ನು ಭೇಟಿಯಾಗಬೇಕು. ಯಾಕೆಂದರೆ ಇದರಿಂದ ಸರಿಯಾದ ಕಾರಣವನ್ನು ಪತ್ತೆ ಮಾಡಲು ಸಾಧ್ಯವಾಗುವುದು. ಯಾವುದೇ ಸಣ್ಣ ಸಮಸ್ಯೆ ಎಂದು ಕಡೆಗಣಿಸಿದರೆ ಅದು ದೊಡ್ಡ ಮಟ್ಟದ ಅಪಾಯಕ್ಕೆ ಕಾರಣವಾಗಲೂ ಬಹುದು.

English summary

What Causes Headaches After Periods?

Headaches are caused by a variety of reasons, but generally speaking they’re the result of swelling or tightening of pressure on your nerves. When the pressure around your nerves changes, a pain signal is sent to your brain, leading to the aching, throbbing pain of a headache.Read on to find out what happens during menstruation that can trigger headaches.
X
Desktop Bottom Promotion