For Quick Alerts
ALLOW NOTIFICATIONS  
For Daily Alerts

ನೋಡಿ, ಇದೇ ಕಾರಣಕ್ಕೆ ದೇಹದಲ್ಲಿ ಕಿಡ್ನಿ ಸರಿಯಾಗಿ ಕಾರ್ಯ ನಿರ್ವಹಿಸದೇ ಇರುವುದು!

|

ಮಾನವ ದೇಹದ ಪ್ರಮುಖ ಅಂಗವಾಗಿರುವಂತಹ ಕಿಡ್ನಿಯು ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿದರೆ ಆಗ ದೊಡ್ಡ ಮಟ್ಟದ ಅನಾರೋಗ್ಯವು ಕಾಡುವುದರಲ್ಲಿ ಯಾವುದೇ ಸಮಸ್ಯೆಯಿಲ್ಲ. ಇದರಿಂದ ಕಿಡ್ನಿಯ ಆರೋಗ್ಯ ಅತೀ ಅಗತ್ಯವಾಗಿರುವುದು. ನಮ್ಮ ದೇಹದ ಒಳಗಡೆ ಕಿಡ್ನಿಯು ಇರುವ ಕಾರಣದಿಂದಾಗಿ ಇದು ಆರೋಗ್ಯವಾಗಿದೆಯಾ? ಇಲ್ಲವಾ ಎಂದು ತಿಳಿಯಲು ನಮಗೆ ಕಷ್ಟವಾಗುವುದು. ಇಂತಹ ಸಮಯದಲ್ಲಿ ಕಿಡ್ನಿಯು ಸರಿಯಾಗಿ ಕಾರ್ಯನಿರ್ವಹಣೆ ಮಾಡುತ್ತಿದೆಯಾ ಎಂದು ತಿಳಿಯಲು ಕೆಲವೊಂದು ಕ್ರಮಗಳು ಇವೆ.

ದೇಹದಲ್ಲಿ ಕಿಡ್ನಿ ಸರಿಯಾಗಿ ಕಾರ್ಯ ನಿರ್ವಹಿಸದೆ ಇದ್ದರೆ ಆಗ ಅದರ ಲಕ್ಷಣಗಳು ದೇಹದಲ್ಲಿ ಕಾಣಿಸಿಕೊಳ್ಳುವುದು. ಕಿಡ್ನಿ ಸಮಸ್ಯೆ ಎನ್ನುವುದು ಇಂದಿನ ದಿನಗಳಲ್ಲಿ ಹೆಚ್ಚಾಗುತ್ತಲೇ ಇದೆ. ಹಲವಾರು ಕಾರಣಗಳಿಂದಾಗಿ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವವರ ಸಂಖ್ಯೆಯು ಗಣನೀಯ ಪ್ರಮಾಣದಲ್ಲಿ ಹೆಚ್ಚುತ್ತಿದೆ. ಇದಕ್ಕೆ ಇಂದಿನ ಜೀವನ ಶೈಲಿಯು ಕಾರಣ ಎಂದು ಹೇಳಬಹುದು.

ಪ್ರತೀ ವರ್ಷ ಕಿಡ್ನಿ ಸಮಸ್ಯೆಯಿಂದಾಗಿ ಸುಮಾರು 8,50000 ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಎಂದರೆ ಇದನ್ನು ನಂಬುವುದು ಕಷ್ಟವಾಗುತ್ತದೆ. ಆದರೆ ಕಿಡ್ನಿ ಸಮಸ್ಯೆಯು ಕೆಟ್ಟ ಜೀವನಶೈಲಿ ಹವ್ಯಾಸಗಳಿಂದ ಬರುವುದು. ಇದರಿಂದ ಕಿಡ್ನಿಗೆ ರಕ್ತವನ್ನು ಶುದ್ಧೀಕರಿಸಲು ಸಾಧ್ಯವಾಗದು. ಇದರಿಂದಾಗಿಯೇ ದೇಹದಲ್ಲಿ ಕಲ್ಮಶವು ಉಳಿದುಕೊಳ್ಳುವುದು.

ದೀರ್ಘಕಾಲದ ಕಿಡ್ನಿ ಕಾಯಿಲೆ

ದೀರ್ಘಕಾಲದ ಕಿಡ್ನಿ ಕಾಯಿಲೆ

ದೀರ್ಘಕಾಲದ ಕಿಡ್ನಿ ಕಾಯಿಲೆಯು ಕಿಡ್ನಿಯ ಸಮಸ್ಯೆಗಳಲ್ಲಿ ಒಂದು ಸಾಮಾನ್ಯವಾದ ಸಮಸ್ಯೆಯಾಗಿದೆ. ಇದು ಹೆಚ್ಚಾದಂತೆ ಅದು ಕಿಡ್ನಿಯ ಕಾರ್ಯ ನಿರ್ವಹಣೆ ಮೇಲೆ ಪರಿಣಾಮ ಬೀರುವುದು. ಇದು ತಿಂಗಳುಗಳಿಂದ ವರ್ಷಗಳ ತನಕ ಹಾಗೆ ಇರಬಹುದು. ವಿಶ್ವದ ಜನಸಂಖ್ಯೆಯ ಶೇ. 10ರಷ್ಟು ಜನರು ಇದರಿಂದ ಬಳಲುತ್ತಿದ್ದಾರೆ.

ಕಾರಣವೇನು?

ಕಾರಣವೇನು?

ಭಾರತದಲ್ಲಿ ಇರುವಂತಹ ದೀರ್ಘಕಾಲದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಾ ಇರುವಂತಹ ಶೇ.50ರಷ್ಟು ಜನರು ಬೊಜ್ಜಿನ ಸಮಸ್ಯೆಗೆ ಒಳಗಾಗಿರುವವರು ಎಂದು ಪಾನ್ ಇಂಡಿಯಾದ ಅಧ್ಯಯನವು ಹೇಳಿದೆ. ಇತ್ತೀಚೆಗೆ ನಡೆದ ಸಮೀಕ್ಷೆಯೊಂದರ ಪ್ರಕಾರ ಇದರ ಪ್ರಮಾಣವು ಗಣನೀಯವಾಗಿ ಹೆಚ್ಚಾಗಿದೆ. ಅದಾಗ್ಯೂ, ಭಾರತದಲ್ಲಿ ದೀರ್ಘಕಾಲದ ಕಿಡ್ನಿ ಸಮಸ್ಯೆಯ ಬಗ್ಗೆ ಯಾವುದೇ ರೀತಿಯ ಅಧ್ಯಯನವಾಗಲಿ ಅಥವಾ ಸಾಮಾನ್ಯ ದತ್ತಾಂಶಗಳಾಗಲಿ ಇಲ್ಲ. ಪ್ರಮುಖವಾಗಿ ಕಿಡ್ನಿ ಸಮಸ್ಯೆಗೆ ಕಾರಣವೆಂದರೆ ದೇಹದಲ್ಲಿ ಕಾಣಿಸಿಕೊಂಡಿರುವ ಬೊಜ್ಜು.

ಹೊಟ್ಟೆಯ ಬೊಜ್ಜು ಇದಕ್ಕೆ ಕಾರಣ!

ಹೊಟ್ಟೆಯ ಬೊಜ್ಜು ಇದಕ್ಕೆ ಕಾರಣ!

ಅದರಲ್ಲೂ ಪ್ರಮುಖವಾಗಿ ಹೊಟ್ಟೆಯ ಬೊಜ್ಜು ಇದಕ್ಕೆ ಕಾರಣ. ಭಾರತದಲ್ಲಿ ಹೊಟ್ಟೆಯ ಬೊಜ್ಜು ಹೊಂದಿರುವ ವ್ಯಕ್ತಿಗಳ ಸಂಖ್ಯೆಯು ಅಧಿಕ ಪ್ರಮಾಣದಲ್ಲಿದೆ. ಅಧ್ಯಯನವೊಂದು ಹೇಳುವ ಪ್ರಕಾರ ಶೇ. 48ರಷ್ಟು ಪುರುಷರು ಮತ್ತು ಶೇ. 63ರಷ್ಟು ಮಹಿಳೆಯರ ಸೊಂಟದ ಅಳತೆಯು ಸರಾಸರಿಗಿಂತ ಎಷ್ಟೋ ಪಟ್ಟು ಅಧಿಕವಾಗಿದೆ. ಇದರಿಂದಾಗಿಯೇ ಅವರು ದೀರ್ಘಕಾಲದ ಕಿಡ್ನಿ ಸಮಸ್ಯೆಗೆ ಗುರಿಯಾಗುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

Most Read:ಕಿಡ್ನಿ ಸ್ಟೋನ್ ಸಮಸ್ಯೆ ಇದ್ದರೆ, ದಿನಕ್ಕೆ ಒಂದು ಲೋಟ ಲಿಂಬೆ ಜ್ಯೂಸ್ ಕುಡಿಯಿರಿ

ದೀರ್ಘಕಾಲದ ಕಿಡ್ನಿ ಸಮಸ್ಯೆಯು ಆರಂಭದಲ್ಲಿ ಯಾವುದೇ ಲಕ್ಷಣ ತೋರಿಸದು

ದೀರ್ಘಕಾಲದ ಕಿಡ್ನಿ ಸಮಸ್ಯೆಯು ಆರಂಭದಲ್ಲಿ ಯಾವುದೇ ಲಕ್ಷಣ ತೋರಿಸದು

ನೆಫ್ರಾಜಲಿ ಮತ್ತು ಮೂತ್ರಪಿಂಡ ಕಸಿ ತಜ್ಞರಾಗಿರುವಂತಹ ಡಾ. ಅಜಿತ್ ಕೆ ಹುಯಿಲ್ಗೋಲ್ ಅವರು ಹೇಳು ಪ್ರಕಾರ``ದೀರ್ಘಕಾಲದ ಕಿಡ್ನಿ ಸಮಸ್ಯೆಯು ತುಂಬಾ ಅಪಾಯಕಾರಿ ಮತ್ತು ಇದು ಯಾವುದೇ ರೀತಿಯ ಲಕ್ಷಣಗಳನ್ನು ತೋರಿಸಲ್ಲ ಮತ್ತು ಆರಂಭದಲ್ಲಿ ಇದು ಮೌನವಾಗಿಯೇ ಬೆಳೆಯುವುದು. ಕಿಡ್ನಿ ಸಮಸ್ಯೆಯು ತುಂಬಾ ತೀವ್ರ ಸ್ಥಿತಿಗೆ ತಲುಪಿದ ವೇಳೆ ರೋಗಿಯು ಈ ಕೆಲವೊಂದು ಲಕ್ಷಣಗಳಾಗಿರುವಂತಹ ನಿಶ್ಯಕ್ತಿ ಮತ್ತು ಆಯಾಸ, ಮೂತ್ರ ವಿಸರ್ಜನೆ ವೇಳೆ ನೋವು, ಊತ,ಪದೇ ಪದೇ ಮೂತ್ರ ವಿಸರ್ಜನೆ, ಕೆಳಭಾಗದ ಬೆನ್ನುನೋವು, ಹಸಿವು ಕಡಿಮೆ ಆಗುವುದು, ವಾಂತಿ ಮತ್ತು ವಾಕರಿಕೆ, ತುರಿಕೆ ಮತ್ತು ಚರ್ಮವು ಕೆಂಪಾಗಬಹುದು.''

ಮಹಿಳೆ ಮತ್ತು ಕಿಡ್ನಿ ಸಮಸ್ಯೆ

ಮಹಿಳೆ ಮತ್ತು ಕಿಡ್ನಿ ಸಮಸ್ಯೆ

ದೀರ್ಘಕಾಲದ ಕಿಡ್ನಿ ಸಮಸ್ಯೆಯು ಮಹಿಳೆಯ ಫಲವತ್ತತೆ ಮೇಲೆ ತುಂಬಾ ನಕಾರಾತ್ಮಕವಾದ ಪರಿಣಾಮ ಬೀರಬಹುದು ಮತ್ತು ಇನ್ನು ಕೆಲವೊಂದು ಸಂದರ್ಭದಲ್ಲಿ ಕಿಡ್ನಿ ಸಮಸ್ಯೆಗಾಗಿ ತೆಗೆದುಕೊಳ್ಳುವ ಔಷಧಿಯು ಪರಿಣಾಮಕಾರಿಯಾಗಿ ಇಲ್ಲದೆ ಇರಬಹುದು.

Most Read:ಮೂತ್ರದ ಬಣ್ಣ ಬದಲಾಗಿದೆಯೇ? ಹಾಗಿದ್ದರೆ ವೈದ್ಯರ ಸಲಹೆ ಪಡೆಯಿರಿ

ಮಹಿಳೆ ಮತ್ತು ಕಿಡ್ನಿ ಸಮಸ್ಯೆ

ಮಹಿಳೆ ಮತ್ತು ಕಿಡ್ನಿ ಸಮಸ್ಯೆ

ಇದರಿಂದ ವಯಸ್ಸನ್ನು ಪರಿಗಣಿಸದೆ ಮಗು ಇರುವಂತಹ ಮಹಿಳೆಗೆ ಔಷಧಿಯನ್ನು ನೀಡುವಾಗ ತುಂಬಾ ಎಚ್ಚರಿಕೆ ವಹಿಸಬೇಕು. ದೀರ್ಘಕಾಲದ ಕಿಡ್ನಿ ಸಮಸ್ಯೆ ಇರುವಂತಹ ಮಹಿಳೆಗೆ ಗರ್ಭಧಾರಣೆಯು ದೊಡ್ಡ ಸಮಸ್ಯೆಯಾಗಬಹುದು ಮತ್ತು ಇದು ಮಗುವಿನ ಮೇಲೂ ಪರಿಣಾಮ ಬೀರಬಹುದು.''ಮಾರ್ಚ್ 8 ವಿಶ್ವ ಕಿಡ್ನಿ ದಿನವಾಗಿದೆ. ಇದರ ಮುಖ್ಯ ಉದ್ದೇಶವೆಂದರೆ ಮಹಿಳೆಯರ ಮೇಲೆ ಕಿಡ್ನಿ ಸಮಸ್ಯೆಯಿಂದ ಆಗುವ ಪರಿಣಾಮ ಮತ್ತು ಅದರ ಹೊರೆ.

English summary

reason your kidneys could be failing

Did you know kidney diseases lead to approximately 850,000 deaths every year? The leading cause of this disease is poor lifestyle habits, which damage the kidney and affect their ability to filter blood, resulting in waste piling up inside the body.
X
Desktop Bottom Promotion