For Quick Alerts
ALLOW NOTIFICATIONS  
For Daily Alerts

ಮಹಿಳೆಯರೇ ಈ ಲೈಂಗಿಕ ರೋಗಗಳ ಸಮಸ್ಯೆಯನ್ನು ತಪ್ಪದೇ ಪರೀಕ್ಷೆ ಮಾಡಿಸಿಕೊಳ್ಳಿ…

|

ಲೈಂಗಿಕ ರೋಗಗಳ ಪರೀಕ್ಷೆ ಮಾಡಿಸಿಕೊಳ್ಳುವುದು ಎಂದರೆ ನಾವೆಲ್ಲರೂ ತುಂಬಾ ದೂರ ಓಡಿಹೋಗುತ್ತೇವೆ. ಯಾಕೆಂದರೆ ನಮಗೆ ಆ ಬಗ್ಗೆ ಸರಿಯಾದ ತಿಳಿವಳಿಕೆ ಇಲ್ಲ ಮತ್ತು ಲೈಂಗಿಕ ರೋಗ ಪರೀಕ್ಷೆ ಮಾಡಿಸಿಕೊಂಡರೆ ಏನು ಹೇಳುತ್ತಾರೆಯಾ ಎನ್ನುವ ಭಯ ನಮ್ಮನ್ನು ಆವರಿಸಿಕೊಂಡಿರುತ್ತದೆ. ಆದರೆ ಲೈಂಗಿಕ ರೋಗದ ಬಗ್ಗೆ ಸರಿಯಾಗಿ ಪರೀಕ್ಷೆ ಮಾಡಿಸಿಕೊಳ್ಳುವುದು ಅತೀ ಅಗತ್ಯ.

ಅದರಲ್ಲೂ ಮಹಿಳೆಯರು ಈ ಬಗ್ಗೆ ಪರೀಕ್ಷೆ ಮಾಡಿಸಿಕೊಂಡರೆ ತುಂಬಾ ಒಳ್ಳೆಯದು. ಲೈಂಗಿಕ ರೋಗಗಳು ಯಾವ ರೀತಿಯಿಂದ ಹರಡುವುದು ಎಂದು ಹೇಳಲು ಆಗದು. ಈ ಕಾರಣದಿಂದಾಗಿ ನಾವು ಲೈಂಗಿಕ ರೋಗಗಳ ಬಗ್ಗೆ ತುಂಬಾ ಎಚ್ಚರಿಕೆ ವಹಿಸಬೇಕು. ಇದು ನಿಮಗೆ ಹಾಗೂ ನಿಮ್ಮ ಸಂಗಾತಿಗೆ ತುಂಬಾ ಒಳ್ಳೆಯದು. ಈ ಲೇಖನದಲ್ಲಿ ನಾವು ನಿಮಗೆ ಹತ್ತು ರೀತಿಯ ಲೈಂಗಿಕ ಆರೋಗ್ಯ ಸಮಸ್ಯೆಗಳ ಬಗ್ಗೆ ತಿಳಿಸಲಿದ್ದೇವೆ. ಇದನ್ನು ನೀವು ಪರೀಕ್ಷೆ ಮಾಡಿಕೊಂಡು ಶೇ. 100ರಷ್ಟು ಆರೋಗ್ಯವಾಗಿದ್ದೀರಾ ಎಂದು ತಿಳಿಯಿರಿ....

ಸಿಫಿಲಿಸ್

ಸಿಫಿಲಿಸ್

ಇದಕ್ಕೆ ಚಿಕಿತ್ಸೆ ಮಾಡದೆ ಹೋದರೆ ಆಗ ಅದು ದೇಹದೊಳಗಡೆ ಹಾನಿ ಉಂಟು ಮಾಡುವುದು. ನರಗಳಿಗೆ ಹಾನಿ, ಅಂಗಾಂಗಗಳಿಗೆ ಹಾನಿ, ಬುದ್ದಿಮಾಂದ್ಯತೆ ಅಥವಾ ಸಾವು ಸಂಭವಿಸಬಹುದು. ಇದರ ಪರೀಕ್ಷೆ ಹೇಗೆ: ರಕ್ತ ಪರೀಕ್ಷೆಯಿಂದ ಇದನ್ನು ಪತ್ತೆ ಹಚ್ಚಬಹುದು.

ಎಚ್ ಐವಿ

ಎಚ್ ಐವಿ

ಎಚ್ ಐವಿ ಯು ಏಡ್ಸ್ ಆಗಿ ಪರಿವರ್ತನೆಗೊಳ್ಳಲು ಸುಮಾರು ಹತ್ತು ವರ್ಷ ಬೇಕಾಗುವುದು. ಈ ಸಂದರ್ಭದಲ್ಲಿ ಇದು ಪತ್ತೆಯಾಗದೆ ಉಳಿಯಬಹುದು. ಇದರ ಪರೀಕ್ಷೆ ಹೇಗೆ: ರಕ್ತ ಪರೀಕ್ಷೆ ಮೂಲಕ ಇದನ್ನು ಪತ್ತೆ ಮಾಡಬಹುದು.

ಕ್ಲಮೈಡಿಯಾ

ಕ್ಲಮೈಡಿಯಾ

ಇದಕ್ಕೆ ಚಿಕಿತ್ಸೆ ನೀಡದೆ ಇದ್ದರೆ ತುಂಬಾ ಅಪಾಯಕಾರಿ. ಅದರಲ್ಲೂ ಮಹಿಳೆಯರಿಗೆ ಇದು ಅಪಾಯಕಾರಿ ಎಂದು ಪರಿಗಣಿಸಲಾಗಿದೆ. ಇದು ಫಾಲೊಪೈನ್ ಟ್ಯೂಬು ಅನ್ನು ಹಾನಿಗೀಡು ಮಾಡುವುದು. ಇದರಿಂದ ಎಕ್ಟೊಪಿಕ್ ಪ್ರೆಗ್ನೆನ್ಸಿ (ಗರ್ಭಕೋಶದ ಹೊರಗಡೆ ಗರ್ಭಧಾರಣೆ) ಅಪಾಯವು ಹೆಚ್ಚಾಗಿರುವುದು. ಇದರ ಪರೀಕ್ಷೆ ಮಾಡಿಸುವುದು ಹೇಗೆ: ಮೂತ್ರ ಪರೀಕ್ಷೆ ಅಥವಾ ಸ್ವಾಬ್ ಸ್ಯಾಂಪಲ್ ಪರೀಕ್ಷೆಯನ್ನು ಮಾಡಿ ಕೊಳ್ಳಬೇಕು. ಜನನೇಂದ್ರಿಯ ಹಾರ್ಪಿಸ್: ಇದು ಶಿಶುವಿನಲ್ಲಿ ತುಂಬಾ ಮಾರಣಾಂತಿಕ ಸೋಂಕನ್ನು ಉಂಟು ಮಾಡುವಂತಹ ಸಾಮರ್ಥ್ಯ ಹೊಂದಿದೆ. ಇದರ ಪರಿಕ್ಷೆ ಹೇಗೆ: ದೈಹಿಕ ಪರೀಕ್ಷೆ, ರಕ್ತ ಪರೀಕ್ಷೆ ಅಥವಾ ಸ್ವಾಬ್ ಸ್ಯಾಂಪಲ್ ಪರೀಕ್ಷೆ ಮಾಡಿಸಬೇಕು.

Most Read:ಪುರುಷರಲ್ಲಿ ಲೈಂಗಿಕ ದೌರ್ಬಲ್ಯವನ್ನು ಹೋಗಲಾಡಿಸಲು ಅಶ್ವಗಂಧದ ಪ್ರಯೋಜನಗಳು

ಗೊನೊರಿಯಾ

ಗೊನೊರಿಯಾ

ಇದು ರಕ್ತದ ಮೂಲಕ ಗಂಟುಗಳಿಗೆ ಹಬ್ಬಬಹುದು. ಇದರಿಂದಾಗಿ ಸಂಧಿವಾತದಂತಹ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಇದರ ಪರೀಕ್ಷೆ ಮಾಡಿಸುವುದು ಹೇಗೆ: ಮೂತ್ರ ಪರೀಕ್ಷೆ ಅಥವಾ ಸ್ವಾಬ್ ಸ್ಯಾಂಪಲ್ ಪರೀಕ್ಷೆ ಮಾಡಿಸಿಕೊಳ್ಳಬೇಕು.

ಹೆಪಟೈಟಿಸ್ ಬಿ ಮತ್ತು ಸಿ

ಹೆಪಟೈಟಿಸ್ ಬಿ ಮತ್ತು ಸಿ

ದೀರ್ಘಕಾಲದ ಹೆಪಟೈಟಿಸ್ ಬಿ ಮತ್ತು ಸಿ ಪರಿಣಾಮದಿಂದಾಗಿ ಯಕೃತ್(ಲಿವರ್) ಸಿರೋಸಿಸ್ ಅಥವಾ ಲಿವರ್ ಕ್ಯಾನ್ಸರ್ ಉಂಟಾಗಬಹುದು. ಇದರ ಪರೀಕ್ಷೆ ಮಾಡಿಸಿಕೊಳ್ಳುವುದು ಹೇಗೆ: ರಕ್ತ ಪರೀಕ್ಷೆಯಿಂದ

ಹ್ಯೂಮನ್ ಪ್ಯಾಪಿಲೋಮಾವೈರಸ್

ಹ್ಯೂಮನ್ ಪ್ಯಾಪಿಲೋಮಾವೈರಸ್

ಇದು ಗರ್ಭಕಂಠದ ಕ್ಯಾನ್ಸರ್ ಗೆ ಕಾರಣವಾಗಬಹುದು. ಇದರ ಪರೀಕ್ಷೆ ಹೇಗೆ: ಪ್ಯಾಪ್ ಪರೀಕ್ಷೆ

Most Read:ನೆನಪಿಡಿ, ಈ ಸ್ಥಳಗಳಲ್ಲಿ ಅಪ್ಪಿತಪ್ಪಿಯೂ ನಿಮ್ಮ ಫೋನ್ ಇಟ್ಟುಕೊಳ್ಳಬೇಡಿ

ಟ್ರೈಕೊಮೊನಿಯಾಸಿಸ್

ಟ್ರೈಕೊಮೊನಿಯಾಸಿಸ್

ಇದರ ಪರಿಣಾಮವಾಗಿ ಅಕಾಲಿಕ ಹೆರಿಗೆ ಅಥವಾ ಹುಟ್ಟಿದ ಮಗು ಕಡಿಮೆ ತೂಕ ಹೊಂದಿರಬಹುದು. ಇದರ ಪರೀಕ್ಷೆ ಹೇಗೆ: ದೈಹಿಕ ಪರೀಕ್ಷೆ ಅಥವಾ ಸ್ವಾಬ್ ಸ್ಯಾಂಪಲ್ ಪರೀಕ್ಷೆ.

ಶ್ರೋಣಿಯ ಉರಿಯೂತ ಕಾಯಿಲೆ(ಪಿಐಡಿ)

ಶ್ರೋಣಿಯ ಉರಿಯೂತ ಕಾಯಿಲೆ(ಪಿಐಡಿ)

ಇದು ಮಹಿಳೆಯರ ಸಂತಾನೋತ್ಪತ್ತಿ ಅಂಗಗಳನ್ನು ಶಾಶ್ವತವಾಗಿ ಹಾನಿಗೀಡು ಮಾಡಬಹುದು ಅಥವಾ ಅಪಸ್ಥಾನೀಯ ಗರ್ಭಧಾರಣೆಗೆ ಕಾರಣವಾಗಬಹುದು. ಇದರ ಪರೀಕ್ಷೆ ಹೇಗೆ: ದೈಹಿಕ ಪರೀಕ್ಷೆ ಅಥವಾ ಅಲ್ಟ್ರಾ ಸೌಂಡ್ ಪರೀಕ್ಷೆ ಮಾಡಿಸಿಕೊಳ್ಳಬೇಕು.

ಬ್ಯಾಕ್ಟೀರಿಯಲ್ ವಜಿನಿಸೀಸ್

ಬ್ಯಾಕ್ಟೀರಿಯಲ್ ವಜಿನಿಸೀಸ್

ಇದರಿಂದಾಗಿ ಪಿಐಡಿ ಬರಬಹುದು ಅಥವಾ ಗರ್ಭ ಧರಿಸಿರುವಂತಹ ಮಹಿಳೆಯರಲ್ಲಿ ಇದು ಅಕಾಲಿಕ ಹೆರಿಗೆಗೆ ಕಾರಣವಾಗಬಹುದು. ಇದರ ಪರೀಕ್ಷೆ ಮಾಡಿಸಿಕೊಳ್ಳುವುದು ಹೇಗೆ: ಇದನ್ನು ದೈಹಿಕ ಪರಿಕ್ಷೆ ಅಥವಾ ಯೋನಿಯ ದ್ರವದ ಪ್ರಯೋಗಾಲಯ ಪರೀಕ್ಷೆ ಮೂಲಕವಾಗಿ ಪತ್ತೆ ಮಾಡಬಹುದು.

English summary

Sexual Health Tests Every Woman Should Do

It’s not something any of us wants to do, but getting tested for sexually-transmitted infections is essential, both for your wellbeing and your partner’s. Use this checklist and chat to your doc about whether you should be tested for some or all of these sexual health issues to make sure you’re 100 percent in the clear.
X
Desktop Bottom Promotion