For Quick Alerts
ALLOW NOTIFICATIONS  
For Daily Alerts

ನಿಮಗೆ ಕೀವುಗುಳ್ಳೆ ಹಾಗೂ ಕುರ ಆಗಿದ್ದರೆ ಇಲ್ಲಿದೆ ನೋಡಿ ಪವರ್‌ ಫುಲ್ ಮನೆಮದ್ದುಗಳು

By Arshad
|

ಎರಡು ಚಿಕ್ಕಚಮಚ ಅರಿಶಿನ ಪುಡಿಯನ್ನು ಒಂದು ಲೋಟ ಉಗುರುಬೆಚ್ಚನೆಯ ನೀರಿಗೆ ಹಾಕಿ ಚೆನ್ನಾಗಿ ಕಲಕಿ ನಿತ್ಯವೂ ಕುಡಿಯುವ ಮೂಲಕ ಕೀವುಗುಳ್ಳೆ, ಕುರಗಳು ಶೀಘ್ರವಾಗಿ ವಾಸಿಯಾಗುತ್ತವೆ. ಜೊತೆಗೇ ಕೊಂಚ ನೀರಿನಲ್ಲಿ ಅರಿಶಿನ ಪುಡಿಯನ್ನು ಬೆರೆಸಿ ದಪ್ಪನೆಯ ಲೇಪನ ತಯಾರಿಸಿ ಗುಳ್ಳೆ ಅಥವಾ ಕುರದ ಮೇಲೆ ಮತ್ತು ಸುತ್ತಲಿನ ಭಾಗದ ಚರ್ಮಕ್ಕೆ ಸವರಿ ಇದರ ಮೇಲೆ ತೆಳುವಾದ ಬಟ್ಟೆಯ ಪಟ್ಟಿಯನ್ನು ಕಟ್ಟಬೇಕು. ನಿತ್ಯವೂ ಈ ಪಟ್ಟಿಯನ್ನು ಬದಲಿಸಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವ ಮೂಲಕ ಶೀಘ್ರವೇ ಉಪಶಮನ ದೊರಕುತ್ತದೆ.

ಕೀವುಗುಳ್ಳೆ ಮತ್ತು ಕುರ, ಎರಡೂ ಒಂದೇ ಬಗೆಯಂತೆ ತೋರಿದರೂ ಇವುಗಳಲ್ಲಿ ಪ್ರಮುಖ ವ್ಯತ್ಯಾಸವಿದೆ. ಕೂದಲ ಬುಡವೊಂದರಲ್ಲಿ ಸೋಂಕು ಉಂಟಾದರೆ ಈ ಭಾಗದಲ್ಲಿ ಕೀವು ತುಂಬಿಕೊಂಡು ಹೊರಬರದೇ ಒಳಗೇ ಹೆಚ್ಚುತ್ತಾ ಚರ್ಮವನ್ನು ಮುಂದೂಡುತ್ತಾ ಬರುತ್ತದೆ. ಆದರೆ ಕುರ (carbuncles)ಚರ್ಮದ ಆಳದಲ್ಲಿ ಮೂಡುವ ಹಲವಾರು ಕೀವುಗುಳ್ಳೆಗಳ ಒಂದು ಗುಚ್ಛವಾಗಿದ್ದು ಒಳಭಾಗದಲ್ಲಿ ದೊಡ್ಡಪ್ರಮಾಣದಲ್ಲಿ ಹರಡಿದ ಬಳಿಕ ಚರ್ಮವನ್ನು ದೂಡಿ ಹೊರಬರುತ್ತಾ ದಿನೇದಿನೇ ದೊಡ್ಡದಾಗುತ್ತಾ ಸುಮಾರು ನೆಲ್ಲಿಕಾಯಿಯ ಗಾತ್ರವನ್ನು ಪಡೆಯುತ್ತದೆ.

Home Remedies to Cure Boils and Carbuncles

ಆದರೆ ಇವೆರಡೂ ಸೋಂಕುಗಳಿಗೆ ಕಾರಣವಾಗುವ ಬ್ಯಾಕ್ಟೀರಿಯಾ ಮಾತ್ರ ಒಂದೇ (Staphylococcus aureus).ಈ ಕೀವುಗುಳ್ಳೆಗಳು ಚರ್ಮದಡಿಯಲ್ಲಿ ಬೆಳೆಯುವ ಸಮಯದಲ್ಲಿ ನೋವಿಲ್ಲದೇ ಹೋದರೂ ನಿಧಾನವಾಗಿ ಚರ್ಮವನ್ನು ದೂಡುವ ಸಮಯದಲ್ಲಿ ಚಿಕ್ಕದಾಗಿ ನೋವು ನೀಡುತ್ತವೆ. ಕ್ರಮೇಣ ಬೆಳೆಯುತ್ತಾ ಪೂರ್ಣಬೆಳವಣಿಗೆ ಪಡೆಯುತ್ತಿದ್ದಂತೆಯೇ ಚರ್ಮದೊಳಗಿನ ಸೋಂಕು ಸಹಾ ಹೆಚ್ಚು ವ್ಯಾಪಿಸಿ ಮುಟ್ಟಲೂ ಆಗದಷ್ಟು ಸಂವೇದಿ ಹಾಗೂ ನೋವಿನಿಂದ ಕೂಡಿರುತ್ತದೆ. ಸಾಮಾನ್ಯವಾಗಿ ಕೀವುಗುಳ್ಳೆಗಳು ಮತ್ತು ಕುರಗಳು ಕುತ್ತಿಗೆ, ಮುಖ, ನಿತಂಬ, ಕಂಕುಳು ಮತ್ತು ಜನನಾಂಗದ ಮೇಲ್ಭಾಗದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ.

Most Read:ಯಾವ್ಯಾವ ರಾಶಿಚಕ್ರದವರು ಹೇಗೆ ರಹಸ್ಯವನ್ನು ಕಾಪಾಡಿಕೊಳ್ಳುತ್ತಾರೆ ನೋಡಿ...

ಅದರಲ್ಲೂ ಕುರಗಳು ನಿತಂಬ, ಸೊಂಟ, ತೊಡೆ, ತೊಡೆಸಂಧಿ ಮೊದಲಾದ ಭಾಗಗಳಲ್ಲಿಯೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಅಂದರೆ ಕೂದಲ ಬುಡಗಳು ಹೆಚ್ಚಾಗಿದ್ದು ಚಲನೆಯಲ್ಲಿ ಕೂದಲ ಸೆಳೆತವನ್ನು ಬುಡಗಳು ಅನುಭವಿಸುವ ಚರ್ಮಭಾಗದಲ್ಲಿಯೇ ಕುರಗಳು ಹೆಚ್ಚು ಕಾಣಿಸಿಕೊಳ್ಳುತ್ತವೆ. ಕೆಲವೊಮ್ಮೆ ಒಂದೇ ಭಾಗದಲ್ಲಿ ಕುರ ಮತ್ತು ಕೀವುಗುಳ್ಳೆಗಳು ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತವೆ. ಸಾಮಾನ್ಯವಾಗಿ ನಮ್ಮ ದೇಹದ ರೋಗ ನಿರೋಧಕ ಶಕ್ತಿಯೇ ಈ ಕುರಗಳನ್ನು ಗುಣಪಡಿಸಲು ಶಕ್ತವಾಗಿರುವ ಕಾರಣ ಒಂದು ವಾರದಲ್ಲಿ ತಾನಾಗಿಯೇ ವಾಸಿಯಾಗುತ್ತದೆ.

ಆದರೆ ಇದರೊಂದಿಗೆ ಜ್ವರ ಮತ್ತು ನೋವು ಹೆಚ್ಚಾಗಿದ್ದರೆ ವೈದ್ಯರಿಂದ ಚಿಕಿತ್ಸೆ ಪಡೆಯಬೇಕಾಗಿ ಬರುತ್ತದೆ. ರೋಗ ನಿರೋಧಕ ಶಕ್ತಿ ಕುಂದಿರುವ, ಮಧುಮೇಹ, ಕ್ಯಾನ್ಸರ್, ಲೈಂಗಿಕ ರೋಗ/ಏಡ್ಸ್, ಶೀತದ ಸೋಂಕು ಚರ್ಮಕ್ಕೆ ಆಗಮಿಸಿದ (staph infection)ರೋಗಿಗಳಿಗೆ ಕುರಗಳು ಹೆಚ್ಚಾಗಿ ಕಾಡುತ್ತವೆ. ಕುರ ಯಾವಾಗ ಪ್ರಕಟಗೊಂಡಿತೋ ಆಗಿನಿಂದಲೇ ಸೂಕ್ತ ಮನೆಮದ್ದನ್ನು ಅನುಸರಿಸುವ ಮೂಲಕ ಕುರ ಮತ್ತು ಕೀವುಗಳ್ಳೆಗಳನ್ನು ಇನ್ನಷ್ಟು ಬೆಳೆಯಲು ಬಿಡದೇ ಹಾಗೇ ಹಿಮ್ಮಟ್ಟಿಸಬಹುದು. ಇದೇ ಕ್ರಮಗಳಿಂದ ಚರ್ಮರೋಗಗಳಾದ ಸೋರಿಯಾಸಿಸ್, ಎಕ್ಸಿಮಾ, ವಲ್ಗಾರಿಸ್ ಮೊಡವೆ ಮತ್ತು ಇತರ ಚರ್ಮದ ಸೋಂಕುಗಳನ್ನೂ ಹಿಮ್ಮೆಟ್ಟಿಸಬಹುದು.

ಅರಿಶಿನ

ಅರಿಶಿನ

ಎರಡು ಚಿಕ್ಕಚಮಚ ಅರಿಶಿನ ಪುಡಿಯನ್ನು ಒಂದು ಲೋಟ ಉಗುರುಬೆಚ್ಚನೆಯ ನೀರಿಗೆ ಹಾಕಿ ಚೆನ್ನಾಗಿ ಕಲಕಿ ನಿತ್ಯವೂ ಕುಡಿಯುವ ಮೂಲಕ ಕೀವುಗುಳ್ಳೆ, ಕುರಗಳು ಶೀಘ್ರವಾಗಿ ವಾಸಿಯಾಗುತ್ತವೆ. ಜೊತೆಗೇ ಕೊಂಚ ನೀರಿನಲ್ಲಿ ಅರಿಶಿನ ಪುಡಿಯನ್ನು ಬೆರೆಸಿ ದಪ್ಪನೆಯ ಲೇಪನ ತಯಾರಿಸಿ ಗುಳ್ಳೆ ಅಥವಾ ಕುರದ ಮೇಲೆ ಮತ್ತು ಸುತ್ತಲಿನ ಭಾಗದ ಚರ್ಮಕ್ಕೆ ಸವರಿ ಇದರ ಮೇಲೆ ತೆಳುವಾದ ಬಟ್ಟೆಯ ಪಟ್ಟಿಯನ್ನು ಕಟ್ಟಬೇಕು. ನಿತ್ಯವೂ ಈ ಪಟ್ಟಿಯನ್ನು ಬದಲಿಸಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವ ಮೂಲಕ ಶೀಘ್ರವೇ ಉಪಶಮನ ದೊರಕುತ್ತದೆ.

ಈರುಳ್ಳಿ

ಈರುಳ್ಳಿ

ಕೆಲವು ಈರುಳ್ಳಿಗಳನ್ನು ದೊಡ್ಡದಾಗಿ ಹೆಚ್ಚಿ ಕೊಂಚ ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಬೇಕು. ನೀರು ಅರ್ಧಮಟ್ಟಕ್ಕೆ ಇಳಿದ ಬಳಿಕ ಈ ನೀರನ್ನು ಸೋಸಿ ತಣಿಯಲು ಬಿಡಬೇಕು. ಈ ನೀರನ್ನು ಕೀವುಗುಳ್ಳೆ ಅಥವಾ ಕುರ ಮತ್ತು ಸುತ್ತಲಿನ ಚರ್ಮಭಾಗವನ್ನು ಆವರಿಸುವಂತೆ ಚಿಮುಕಿಸುತ್ತಾ ಇರಬೇಕು. ದಿನವಿಡೀ ಸಾಕಷ್ಟು ಬಾರಿ ಚಿಮುಕಿಸುತ್ತ ಗುಳ್ಳೆಗಳು ಪೂರ್ಣವಾಗಿ ಗುಣವಾಗುವವರೆಗೂ ಮುಂದುವರೆಸಬೇಕು.

ಕೃಷ್ಣಜೀರಿಗೆ ಎಣ್ಣೆ (Black Seed Oil)

ಕೃಷ್ಣಜೀರಿಗೆ ಎಣ್ಣೆ (Black Seed Oil)

ನೀವು ಕುಡಿಯುವ ನಿತ್ಯದ ಯಾವುದೇ ಬಿಸಿ ಅಥವಾ ತಣ್ಣನೆಯ ಪೇಯ ಅಥವಾ ಹಸಿರು ಟೀಯಲ್ಲಿ ಅರ್ಧ ಚಿಕ್ಕಚಮಚ ಕೃಷ್ಣಜೀರಿಗೆ ಎಣ್ಣೆಯನ್ನು ಬೆರೆಸಿ ದಿನಕ್ಕೆ ಎರಡು ಬಾರಿ ಕುಡಿಯಿರಿ. ಇದರಿಂದ ಕುರಗಳು ಶೀಘ್ರವೇ ಗುಣವಾಗುವುದು ಮಾತ್ರವಲ್ಲ, ಮುಂದಿನ ದಿನಗಳಲ್ಲಿ ಮರುಕಳಿಸುವ ಸಾಧ್ಯತೆಯೂ ಕಡಿಮೆಯಾಗುತ್ತದೆ.

Most Read:ಕೂದಲು ಸೊಂಪಾಗಿ ಬೆಳೆಯಲು 'ಪವರ್ ಫುಲ್-ಎಣ್ಣೆಗಳು'- ಪ್ರಯತ್ನಿಸಿ ನೋಡಿ

ಬೆಳ್ಳುಳ್ಳಿ

ಬೆಳ್ಳುಳ್ಳಿ

ಎರಡು ಅಥವಾ ಮೂರು ಎಸಶು ಬೆಳ್ಳುಳ್ಳಿಗಳನ್ನು ಕೊಂಚ ನೀರಿನೊಂದಿಗೆ ನುಣ್ಣಗೆ ಅರೆಯಿರಿ. ಈ ಲೇಪವನ್ನು ನೇರವಾಗಿ ಕುರ ಅಥವಾ ಕೀವುಗುಳ್ಳೆಯ ಮೇಲೆ ದಪ್ಪನಾಗಿ ಲೇಪಿಸಿ ಹತ್ತು ನಿಮಿಷ ಉರಿಯನ್ನು ತಡೆದುಕೊಳ್ಳಿ. ಬಳಿಕ ಸ್ವಚ್ಛವಾದ ಬಟ್ಟೆಯಿಂದ ಈ ಲೇಪವನ್ನು ಒರೆಸಿ ತೆಗೆಯಿರಿ ಹಾಗೂ ಹಾಗೇ ಒಣಗಲು ಬಿಡಿ. ಕುರ ಪೂರ್ಣವಾಗಿ ಇಲ್ಲವಾಗುವವರೆಗೂ ದಿನಕ್ಕೆರಡು ಬಾರಿ ಪುನರಾವರ್ತಿಸಿ.

ಕಹಿಬೇವು

ಕಹಿಬೇವು

ಒಂದು ಹಿಡಿಯಷ್ಟು ಕಹಿಬೇವಿನ ಎಲೆಗಳನ್ನು ಚೆನ್ನಾಗಿ ತೊಳೆದು ಕೊಂಚ ನೀರಿನೊಂದಿಗೆ ನುಣ್ಣಗೆ ಅರೆಯಿರಿ. ಈ ಲೇಪವನ್ನು ಕುರ ಮತ್ತು ಕೀವುಗಳ್ಳೆಯ ಮೇಲೆ ಮತ್ತು ಪಕ್ಕದ ಚರ್ಮಭಾಗಕ್ಕೆ ದಪ್ಪನಾಗಿ ಹಚ್ಚಿಕೊಳ್ಳಿ. ಈ ಲೇಪದ ಮೇಲೆ ತೆಳುವಾದ ಬಟ್ಟೆಯನ್ನು ಅಥವಾ ಬ್ಯಾಂಡೇಜ್ ಪಟ್ಟಿಯನ್ನು ಕಟ್ಟಿ. ದಿನಕ್ಕೆರಡು ಬಾರಿ ಹೊಸ ಪಟ್ಟಿಯನ್ನು ಬದಲಿಸಿ. ಕುರ ಪೂರ್ಣವಾಗಿ ಇಲ್ಲವಾಗುವವರೆಗೂ ಮುಂದುವರೆಸಿ.

ಆಲೂಗಡ್ಡೆ

ಆಲೂಗಡ್ಡೆ

ಒಂದು ಹಸಿ ಆಲೂಗಡ್ಡೆಯನ್ನು ಚೆನ್ನಾಗಿ ತೊಳೆದು ಸಿಪ್ಪೆ ಸುಲಿದು ಚಿಕ್ಕದಾಗಿ ತುರಿಯಿರಿ. ಈ ತುರಿಯನ್ನು ಹಿಂಡಿ ತಾಜಾ ರಸವನ್ನು ಸಂಗ್ರಹಿಸಿ. ಈ ರಸದಲ್ಲಿ ಸ್ವಚ್ಛವಾದ ಹತ್ತಿಯುಂಡೆಯೊಂದನ್ನು ಮುಳುಗಿಸಿ ಕುರದ ಮೇಲೆ ಹೆಚ್ಚಿನ ಒತ್ತಡವಿಲ್ಲದೇ ಇರಿಸಿ. ಕೊಂಚವೇ ಹಿಂಡಿ ರಸ ಒಸರಿ ಕೀವುಗುಳ್ಳೆ ಹೀರುವಂತೆ ಮಾಡಿ. ಬಳಿಕ ರಸವನ್ನು ಒಣಗಲು ಬಿಡಿ. ಈ ವಿಧಾನವನ್ನು ದಿನಕ್ಕೆ ನಾಲ್ಕೈದು ಬಾರಿ ಪುನರಾವರ್ತಿಸಿ.

ಜೀರಿಗೆ

ಜೀರಿಗೆ

ಸುಮಾರು ಐವತ್ತು ಗ್ರಾಂ ಜೀರಿಗೆಯನ್ನು ಕುಟ್ಟಿ ಪುಡಿಮಾಡಿ ಇದಕ್ಕೆ ಕೊಂಚವೇ ನೀರು ಬೆರೆಸಿ ಅರೆಯಿರಿ. ಈ ಲೇಪವನ್ನು ಗುಳ್ಳೆಯ ಭಾಗದ ಮೇಲೆ ದಪ್ಪನಾಗಿ ಹಚ್ಚಿ ಒಣಗಲು ಬಿಡಿ. ಪೂರ್ಣ ಒಣಗಿದ ಬಳಿಕ ನಿಧಾನವಾಗಿ ನಿವಾರಿಸಿ. ಕುರಗಳು ಪೂರ್ಣವಾಗಿ ಗುಣವಾಗುವವರೆಗೂ ಈ ವಿಧಾನವನ್ನು ಮುಂದುವರೆಸಿ.

ಹರಳೆಣ್ಣೆ

ಹರಳೆಣ್ಣೆ

ಒಂದು ಹತ್ತಿಯುಂಡೆಯನ್ನು ಹರಳೆಣ್ಣೆಯಲ್ಲಿ ಅದ್ದಿ ಈ ಉಂಡೆಯನ್ನು ಮೊಡವೆಯ ಮೇಲಿರಿಸಿ ತೆಳುವಾದ ಬಟ್ಟೆ ಅಥವಾ ಬ್ಯಾಂಡೇಜ್ ಪಟ್ಟಿಯಿಂದ ಹೆಚ್ಚಿನ ಒತ್ತಡ ಬೀಳದಂತೆ ಕಟ್ಟಿ. ರಾತ್ರಿ ಮಲಗುವ ಮುನ್ನ ಕಟ್ಟಿ ಮರುದಿನ ಬೆಳಿಗ್ಗೆ ನಿವಾರಿಸಿ.

ಕೀವುಗುಳ್ಳೆ ಮತ್ತು ಕುರಗಳು ಮತ್ತೆ ಆವರಿಸದಂತೆ ಈ ಮುನ್ನೆಚ್ಚರಿಕೆಗಳನ್ನು ಪಾಲಿಸಿ:

ಕೆಳಗೆ ವಿವರಿಸಿರುವ ಕ್ರಮಗಳನ್ನು ಅನುಸರಿಸುವ ಜೊತೆಗೇ ಆರೋಗ್ಯಕರ ಆಹಾರಕ್ರಮದ ಪಾಲನೆ, ಸ್ವಚ್ಛತೆಗೆ ಆದ್ಯತೆಯನ್ನು ನೀಡುವುದೂ ಅಗತ್ಯವಾಗಿದೆ.

Most Read:ಏಡಿ ಮಾಂಸ ತಿಂದು ಆರೋಗ್ಯ ಕಾಪಾಡಿ

ಕೀವನ್ನು ಗುಣಪಡಿಸಲು ಈ ಟಿಪ್ಸ್ ಅನ್ನು ಅನುಸರಿಸಿ

ಕೀವನ್ನು ಗುಣಪಡಿಸಲು ಈ ಟಿಪ್ಸ್ ಅನ್ನು ಅನುಸರಿಸಿ

* ಕೀವನ್ನು ಗುಣಪಡಿಸಲು ರೋಗ ನಿರೋಧಕ ಶಕ್ತಿಯನ್ನು ಇನ್ನಷ್ಟು ಬಲಪಡಿಸಬೇಕಾಗುತ್ತದೆ. ಇದಕ್ಕಾಗಿ ಸಾಕಷ್ಟು ಹಸಿರು ತರಕಾರಿಗಳು, ಹಣ್ಣುಗಳು ಮತ್ತು ಒಣಫಲಗಳನ್ನು ಆಹಾರದಲ್ಲಿ ಅಳವಡಿಸಿಕೊಳ್ಳಿ.

* ಸಕ್ಕರೆಯ ಪ್ರಮಾಣ ಹೆಚ್ಚಿರುವ ಆಹಾರಗಳನ್ನು ಆದಷ್ಟೂ ತಗ್ಗಿಸಿ. ಅಂತೆಯೇ ಹೆಚ್ಚಿನ ಕೊಬ್ಬು, ಹೆಚ್ಚಿನ ಕಾರ್ಬೋಹೈಡ್ರೇಟುಗಳಿರುವ ಆಹಾರಗಳನ್ನು ವರ್ಜಿಸಿ. ಬುರುಗುಬರುವ ಪಾನೀಯಕ್ಕಂತೂ ತಿಲಾಂಜಲಿ ನೀಡುವುದೇ ಉತ್ತಮ

* ವಿಟಮಿನ್ ಸಿ, ಇ. ಮತ್ತು ಎ ಹೆಚ್ಚಿನ ಪ್ರಮಾಣದಲ್ಲಿರುವ ಅಹಾರಗಳನ್ನು ಹೆಚ್ಚಾಗಿ ಸೇವಿಸಿ, ತನ್ಮೂಲಕ ಬ್ಯಾಕ್ಟೀರಿಯಾಗಳ ಸೋಂಕಿನಿಂದ ಹೆಚ್ಚಿನ ರಕ್ಷಣೆ ಪಡೆದುಕೊಳ್ಳಿ.

* ಪ್ರತಿಬಾರಿಯೂ ಔಷಧಿ/ಪಟ್ಟಿಗಳನ್ನು ಹಚ್ಚುವ ಮೊದಲು ಮತ್ತು ನಂತರ ಹಸ್ತಗಳನ್ನು ಚೆನ್ನಾಗಿ ಸೋಪು ಹಾಕಿ ತೊಳೆದುಕೊಳ್ಳಿ.

* ಕೀವುಗಳನ್ನು ಸ್ವಚ್ಛಗೊಳಿಸಲು ಪ್ರತ್ಯೇಕ ಬಟ್ಟೆಗಳನ್ನೇ ಬಳಸಿ, ನಿಮ್ಮ ಯಾವುದೇ ಬಟ್ಟೆ, ಟವೆಲ್ಲುಗಳನ್ನು ಇತರರೊಂದಿಗೆ ಹಂಚಿಕೊಳ್ಳದಿರಿ. ಪ್ರತಿ ಬಾರಿಯೂ ಸ್ವಚ್ಛವಾಗಿ ಒಗೆದು ಇಸ್ತ್ರಿ ಮಾಡಿದ ಉಡುಪುಗಳು, ಕಾಲುಚೀಲಗಳನ್ನೇ ಧರಿಸಿ. ಪಾದರಕ್ಷೆಗಳನ್ನು ಆದಷ್ಟೂ ಒಣದಾಗಿರಿಸಿ. ನೀವು ಮಲಗುವ ಹಾಸಿಗೆ ಹೊದಿಕೆಯನ್ನೂ ಇತರರಿಗೆ ಉಪಯೋಗಿಸಲು ನೀಡದಿರಿ.

* ಗುಳ್ಳೆ, ಕುರಗಳನ್ನೆಂದೂ ಚಿವುಟದಿರಿ ಅಥವಾ ಸೂಜಿ ಚುಚ್ಚಿ ಕೀವನ್ನು ಹೊರಬರುವಂತೆ ಮಾಡದಿರಿ. ಇದು ಸೋಂಕನ್ನು ಇನ್ನಷ್ಟು ಹೆಚ್ಚಿಸಬಹುದು.

* ಗಾಯಗಳನ್ನು ಒರೆಸಲು, ಕೀವನ್ನು ಸ್ವಚ್ಛಗೊಳಿಸಲು ಬಳಸಿದ ಬಟ್ಟೆಯನ್ನು ಎಸೆದುಬಿಡಿ. ಇವರ ಬಟ್ಟೆ, ಟವೆಲ್ಲುಗಳನ್ನು ಪ್ರತಿಬಾರಿಯ ಬಳಕೆಯ ನಂತರ ಒಗೆಯಲು ಹಾಕಿ.

* ಕೀವುಗುಳ್ಳೆ ಅಥವಾ ಕುರ ಇರುವ ಭಾಗದ ಚರ್ಮವನ್ನು ನಿತ್ಯವೂ ಸೂಕ್ತ ಸ್ವಚ್ಛಕಾರಕ ದ್ರಾವಣದಿಂದ ಸ್ವಚ್ಛಗೊಳಿಸುತ್ತಿರಿ. ಇದರಿಂದ ಬ್ಯಾಕ್ಟೀರಿಯಾಗಳ ವೃದ್ದಿಯನ್ನು ತಡೆಯಬಹುದು.

* ಕೀವು ತುಂಬಿಕೊಳ್ಳಲು ಈಗತಾನೇ ಆರಂಭವಾಗಿದ್ದರೆ ತಕ್ಷಣವೇ colloidal silver cream ಅಥವಾ ಬ್ಯಾಕ್ಟೀರಿಯಾ ನಿವಾರಕ ಗುಣವಿರುವ ಯಾವುದಾದರೊಂದು ಕ್ರೀಂ ಹಚ್ಚಿಕೊಳ್ಳಿ.

* ಒಂದು ವೇಳೆ ಕೀವುಗುಳ್ಳೆ, ಕುರ ಪ್ರಾರಂಭವಾಗಿ ನಾಲ್ಕು ದಿನಗಳ ಬಳಿಕವೂ ಕಡಿಮೆಯಾಗದೇ ಇದ್ದರೆ ವೈದ್ಯರು ಅಥವಾ ಆರೋಗ್ಯಕೇಂದ್ರಕ್ಕೆ ತೆರಳಿ ಚಿಕಿತ್ಸೆ ಪಡೆದುಕೊಳ್ಳಿ. ಒಂದು ವೇಳೆ ಕುರ ಕಂಡುಬಂದ ದಿನದಿಂದಲೇ ಜ್ವರ ಅಥವಾ ಹಸಿವಿನಲ್ಲಿ ಹೆಚ್ಚಳ ಅಥವಾ ಇಳಿಕೆ ಕಂಡುಬಂದಿದ್ದರೆ, ಕುರ ಇರುವ ಅಂಗದಲ್ಲಿ ನೋವು ಕಂಡುಬಂದರೆ ತಡಮಾಡದೇ ವೈದ್ಯರನ್ನು ಕಾಣಬೇಕು.

English summary

Home Remedies to Cure Boils and Carbuncles on the Body

Boils and carbuncles are skin infections that are caused by the Staphylococcus aureus bacteria. Boils are also known as furuncles, and begin as a painful infection of a hair follicle which gradually grow into a large swollen and painful bump. It appears mostly on the neck, face, buttocks, armpits and groin. A carbuncle is a deeper skin infection caused due to infection of a group of hair follicles in one skin location.
X
Desktop Bottom Promotion