Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಯುಗಾದಿ ಭವಿಷ್ಯ: ಹಬ್ಬದ ಬಳಿಕ ಈ ರಾಶಿಯವರಿಗೆ ಲಕ್ಷ್ಮಿ ಆಶೀರ್ವಾದ, ಆರ್ಥಿಕ ಲಾಭ!
ಯುಗಾದಿಯು ಲಕ್ಷ್ಮಿ ದೇವಿಯ ಕುರಿತಾದ ಹಬ್ಬ. ಲಕ್ಷ್ಮಿ ಎಲ್ಲರ ಜೀವನದಲ್ಲೂ ಅನುಕೂಲಕರ ಸಮಯವನ್ನು ತರುವ ದಿನ ಎನ್ನಬಹುದು. ಹೀಗಾಗಿ ಹೊಸತನ, ಹೊಸ ಆರಂಭಗಳಿಗೆ ಯುಗಾದಿ ಹಬ್ಬವನ್ನು ಆಚರಿಸಲಾಗುತ್ತದೆ. ಹಾಗೆ ಯುಗಾದಿಯಲ್ಲಿ ಗ್ರಹಗತಿಳಲ್ಲಿನ ಬದಲಾವಣೆಯು ಪರಿಸರದ ಮೇಲೆ ಮಾತ್ರವಲ್ಲ ವ್ಯಕ್ತಿಗಳ ಜೀವನದ ಮೇಲೆಯೂ ಪರಿಣಾಮ ಬೀರುವುದು ನೋಡಬಹುದು.
ಹಾಗೆ ಈ ಯುಗಾದಿಯ ಬಳಿಕ ಹಲವು ರಾಶಿಗಳಿಗೆ ಅನುಕೂಲಕರ ದಿನಗಳಿವೆ. ಅದ್ರಲ್ಲೂ ಬಹುತೇಕರಿಗೆ ಹಣಕಾಸು ಹಾಗೆ ಸಂಪತ್ತು ವಿಚಾರದಲ್ಲಿ ಶುಭ ಲಾಭಗಳನ್ನು ನೋಡಬಹುದು. ಹಾಗಾದ್ರೆ ಈ ಯುಗಾದಿಯು ಯಾರಿಗೆಲ್ಲಾ ಶುಭದಾಯಕ ಯಾರ ಜೀವನದಲ್ಲಿ ಶುಭ ದಿನಗಳು ಬರಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.

ಮೇಷ ರಾಶಿ
ಮೇಷ ರಾಶಿಯ ಜನರಿಗೆ ಈ ಯುಗಾದಿಯ ಬಳಿಕ ಬದುಕು ಬದಲಾಗಬಹುದು. ನಿಮ್ಮ ಹಣಕಾಸಿನ ವಿಚಾರದಲ್ಲಿ ಅಧಿಕ ಲಾಭಗಳ ನೋಡುವಿರಿ. ಅದ್ರಲ್ಲೂ ನಿಮ್ಮ ಬಹಳ ಸಮಯದ ಹಣಕಾಸಿನ ಸಮಸ್ಯೆಯೊಂದು ಬಗೆಹರಿಯಲಿದೆ. ಉಳಿತಾಯ ಮತ್ತು ಹೂಡಿಕೆಯ ಅಗತ್ಯವನ್ನು ನೀವು ಅರಿತುಕೊಳ್ಳಬೇಕು. ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗಲಿದೆ. ವೃತ್ತಿ, ಉದ್ಯೋಗ ಮತ್ತು ವ್ಯವಹಾರದಲ್ಲಿ ನೀವು ಬಯಸಿದ ಫಲಿತಾಂಶಗಳನ್ನು ಪಡೆಯುತ್ತೀರಿ. ಗುರಿಗಳ ಎದುರಾಗಿದ್ದ ಅಡ್ಡಿಗಳು ನಿವಾರಣೆಯಾಗಲಿದೆ. ಊಹಿಸಲಾಗದ ಸಂಪತ್ತು ಸಂಗ್ರಹವಾಗುತ್ತದೆ. ಅದ್ರಲ್ಲೂ ಸ್ವಂತ ಉದ್ಯೋಗ ಮಾಡುತ್ತಿರುವ ಮಂದಿಗೆ ಈ ಸಮಯವು ಅದೃಷ್ಟವೆಂಬಂತೆ ಬದಲಾಗುತ್ತದೆ.
ಮಿಥುನ ರಾಶಿ
ಯುಗಾದಿಯ ಸಮಯದಲ್ಲಿ ಮಿಥುನ ರಾಶಿ ಜನರಿಗೆ ಅತ್ಯುತ್ತಮ ದಿನಗಳಿವೆ. ನಿಮ್ಮಲ್ಲಿ ಹಣಕಾಸು ವಿಚಾರದಲ್ಲಿ ಇದ್ದ ದೊಡ್ಡ ಸಮಸ್ಯೆಯೊಂದಕ್ಕೆ ಪರಿಹಾರ ಪಡೆಯಲಿದ್ದೀರಿ. ಸಂಪತ್ತು ಹೆಚ್ಚಾಗುತ್ತದೆ. ಗೌರವ ಸಂಪಾದನೆಯಾಗುತ್ತದೆ. ವೃತ್ತಿಪರ ಕೌಶಲ್ಯಗಳು ಹೆಚ್ಚಾಗುತ್ತವೆ. ಅನರೀಕ್ಷಿತ ಲಾಭಗಳು ನಿಮಗೆ ಶುಭತರಲಿದೆ. ಹಾಗೆ ಬಹಳ ಸಮಯದಿಂದ ನೀವು ಮತ್ತೊಂದು ಆದಾಯ ಪಡೆಯುವ ಆಲೋಚನೆಯಲ್ಲಿದ್ದರೆ ಈ ಸಮಯದಲ್ಲಿ ಶುಭವಿದೆ. ಅನೇಕರಲ್ಲಿ ದೊಡ್ಡ ಉಳಿತಾಯದ ಹಣ ಕೈ ಸೇರಬಹುದು.
ಕನ್ಯಾ ರಾಶಿ
ಕನ್ಯಾ ರಾಶಿ ಜನರಿಗೆ ಈ ಯುಗಾದಿಯ ನಂತರ ಹಣಕಾಸು ವಿಚಾರದಲ್ಲಿ ಲಾಭವಾಗುವ ಸಮಯ. ವ್ಯಾಪಾರಿಗಳಿಂದ ಹಿಡಿದು ಸಾಮಾನ್ಯರಲ್ಲೂ ಲಾಭದ ದಿನಗಳ ನೋಡಬಹುದು. ದೀರ್ಘಾವಧಿಯ ಹೂಡಿಕೆಗಳು ಲಾಭವನ್ನು ತರುತ್ತವೆ. ಆಸ್ತಿ, ವಾಹನ ಖರೀದಿ ಅಥವಾ ಮಾರಾಟ ಸಂಬಂಧಿತ ವಿಚಾರದಲ್ಲಿ ಶುಭವಿದೆ. ಭವಿಷ್ಯಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ತೆಗೆದುಕೊಳ್ಳಲು ಇದು ಸರಿಯಾದ ಸಮಯ. ದೊಡ್ಡ ಮೊತ್ತದ ಹಣವನ್ನು ಉತ್ತಮ ಕೆಲಸಗಳಿಗೆ ನೀವು ಬಳಸುತ್ತೀರಿ. ಅದ್ರಲ್ಲೂ ದಾಂಪತ್ಯ ವಿಚಾರವಾಗಿ ಹಣವನ್ನು ವ್ಯಯಿಸುವುದು ಸಂತಸಕ್ಕೆ ಕಾರಣವಾಗಲಿದೆ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯ ಜನರಿಗೆ ಈ ಯುಗಾದಿಯ ಬಳಿಕ ಉತ್ತಮ ದಿನಗಳು ಎದುರಾಗುತ್ತವೆ. ನೀವು ಮಾಡಬೇಕಿದ್ದ ಹಲವು ಕೆಲಸಗಳು ಹಣಕಾಸಿನ ಅಡಚಣೆಯಿಂದ ಅರ್ಧಕ್ಕೆ ನಿಂತಿದ್ದರೆ ಈ ಸಮಯದಿಂದ ಪೂರ್ಣವಾಗಲಿದೆ. ನಿಮಗೆ ಬರಬೇಕಿದ್ದ ಹಣ ಎಲ್ಲಿಯೂ ಸಿಲುಕದೆ ಕೈ ಸೇರಬಹುದು. ದೊಡ್ಡ ಲಾಭದ ನಿರೀಕ್ಷೆ ಈಡೇರಬಹುದು. ಹೊಸ ವ್ಯವಹಾರಗಳಲ್ಲಿ ನಷ್ಟ ಕಡಿಮೆಯಾಗಲಿದೆ. ಜೀವನದ ಪ್ರಮುಖ ಗುರಿಯೊಂದನ್ನು ಸಾಧಿಸಬಹುದು. ವಾಹನ ಖರೀದಿಯಲ್ಲಿ ನಿಮಗೆ ಶುಭವಿದೆ. ನ್ಯಾಯಾಲಯ ಸಂಬಂಧಿತ ವಿಚಾರಗಳಲ್ಲಿ ನಿಮ್ಮ ಕೈ ಮೇಲಾಗಲಿದೆ.
ಮಕರ ರಾಶಿ
ಮಕರ ರಾಶಿಯ ಜನರಿಗೆ ಈ ಯುಗಾದಿಯ ಸಮಯದಲ್ಲಿ ಅನುಕೂಲಕರ ವಾತಾವರಣ ಇರಲಿದೆ. ಆಪ್ತರೊಬ್ಬರಿಂದ ಬಹಳ ಸಮಯದಿಂದ ನಿಮಗೆ ಹಣ ಬರುವುದು ಬಾಕಿ ಉಳಿಸಿಕೊಂಡಿದ್ದರೆ ಈ ಸಮಯದಲ್ಲಿ ನಿಮ್ಮ ಕೈ ಸೇರಬಹುದು. ನಿಮ್ಮ ಹೊಸ ಉದ್ಯೋಗ ಹುಡುಕುವ ಅಥವಾ ಹೊಸ ಆದಾಯ ಗಳಿಸುವ ನಿಮ್ಮ ಬಯಕೆಯು ಈ ಸಮಯದಲ್ಲಿ ಈಡೇರಲಿದೆ. ಶನಿಯ ಚಲನೆಯ ಪರಿಣಾಮವಾಗಿ ನಿಮ್ಮ ಅಡ್ಡಿಗಳು ನಿವಾರಣೆಯಾಗಲಿದೆ. ಪ್ರಮಾಣಿಕ ಪ್ರಯತ್ನದಲ್ಲಿ ನಿಮಗೆ ಶುಭವಿದೆ. ಗೃಹಿಣಿಯರಲ್ಲಿ ಹಣಕಾಸು ಗಳಿಕೆ ಉತ್ತಮವಾಗಿರಲಿದೆ.



Click it and Unblock the Notifications