Latest Updates
-
ಯುಗಾದಿ ಹಬ್ಬದಲ್ಲಿ ಸಿಹಿಯೊಂದಿಗೆ ಬೇಬಿ ಕಾರ್ನ್ 65 ಸಹ ಮಾಡಿ! ಅದ್ಭುತ ರುಚಿಯ ತಿಂಡಿ ಇದು! -
Ugadi 2026: ಬೇವಿನ ಕಹಿ ಇರಲಿ, ಬೆಲ್ಲದ ಸಿಹಿ ಇರಲಿ! ನಿಮ್ಮ ಆತ್ಮೀಯರಿಗೆ ಈ ರೀತಿ ವಿಶೇಷ ಶುಭಾಶಯ ಕಳಿಸಿ -
ರವೆ ಮತ್ತು ತುಪ್ಪ ಬಳಸಿ ಸ್ಪಂಜಿನಂಥ ಕೇಕ್ ಮಾಡಿ! ಬಾಯಲ್ಲಿ ಇಟ್ಟರೆ ಕರಗುವ ರುಚಿ.. ಓವನ್ ಇಲ್ಲದೆ ಮಾಡಬಹುದು -
ಯುಗಾದಿ ಭವಿಷ್ಯ: ಹಬ್ಬದ ಬಳಿಕ ಈ ರಾಶಿಯವರಿಗೆ ಲಕ್ಷ್ಮಿ ಆಶೀರ್ವಾದ, ಆರ್ಥಿಕ ಲಾಭ! -
ಮುದ್ದೆ, ಗಂಜಿ ಬಿಡಿ.. ರಾಗಿ ಬಳಸಿ ಈ ರೆಸಿಪಿಗಳನ್ನು ಮಾಡಿ! ಆರೋಗ್ಯಕ್ಕೆ ಸೂಪರ್, ರುಚಿಯೂ ಮಿಸ್ ಆಗಲ್ಲ -
ಯುಗಾದಿ ಸ್ಪೆಷಲ್: ವಿಭಿನ್ನ ರುಚಿ ನೀಡುವ ತೊಗರಿ ಬೇಳೆ ಹೋಳಿಗೆ! -
ಗುರು ಮನೆಯಲ್ಲಿ ಸೂರ್ಯನ ಅಬ್ಬರ! ವೃಷಭ ಸೇರಿ ಈ ರಾಶಿಗಳಿಗೆ ಶುಭ ಫಲ.. ಯಾರಿಗೆ ಲಾಭ? ಯಾರಿಗೆ ನಷ್ಟ? -
ಯುಗಾದಿ ಯಾವಾಗ ಆಚರಿಸುತ್ತಾರೆ? ಇಲ್ಲಿದೆ ದಿನಾಂಕ, ಶುಭ ಮುಹೂರ್ತ, ಸಮಯದ ಕುರಿತ ಸಂಪೂರ್ಣ ಮಾಹಿತಿ -
10 ರೂಪಾಯಿಯಲ್ಲಿ ಬಾಯಿ ಚಪ್ಪರಿಸಿ ಸವಿಯು ಚಟ್ನಿ ಮಾಡಿ! ಇಲ್ಲಿದೆ ಹೊಸ ಬಗೆಯ ರೆಸಿಪಿ! -
ಈ ರೀತಿ ಟೊಮೆಟೊ ಸೆಟ್ ದೋಸೆ! ಹಿಟ್ಟು ರುಬ್ಬುವ ಅವಶ್ಯಕತೆಯಿಲ್ಲ.. ಬ್ಯಾಚುಲರ್ಗಳಿಗೆ ಬೆಸ್ಟ್, ತೂಕ ಇಳಿಕೆಗೆ ಸೂಪರ್!
ಯುಗಾದಿ ಮಂತ್ರಗಳು: ಹಬ್ಬದಲ್ಲಿ ಈ ಮಂತ್ರ ಪಠಿಸಿದ್ರೆ ಕಷ್ಟಗಳು ದೂರಾಗುತ್ತೆ, ಅದೃಷ್ಟ ನಿಮ್ಮದಾಗುತ್ತೆ!
ಪ್ರತಿಯೊಂದು ಹಬ್ಬಕ್ಕೂ ಅದರದ್ದೇ ಆದಂತಹ ಪ್ರಾಮುಖ್ಯತೆ ಇರುತ್ತದೆ. ಈಗ ಯುಗಾದಿ ಹಬ್ಬವನ್ನು ಸಹ ಬಹಳ ಪ್ರಮುಖ ಹಬ್ಬವೆಂದು ನೋಡಲಾಗುತ್ತದೆ. ಅದ್ರಲ್ಲೂ ಯುಗಾದಿಯನ್ನು ಹೊಸ ವರ್ಷದಂತೆ ನೋಡಲಾಗುತ್ತದೆ. ಹೊಸ ಆರಂಭಕ್ಕೆ ಇದು ಸೂಕ್ತ ಸಮಯ ಎಂಬ ನಂಬಿಕೆಗಳ ನೋಡಬಹುದು. ದೇಶದ ಇತರ ಭಾಗಗಳಲ್ಲಿ ಯುಗಾದಿಯನ್ನು ವಿವಿಧ ಹೆಸರಿನಿಂದ ಆಚರಿಸಲಾಗುತ್ತದೆ. ಆದರೆ ಎಲ್ಲಾ ರಾಜ್ಯಗಳ ಆಚರಣೆಯ ಮಹತ್ವ ಮಾತ್ರ ಹೊಸ ವರ್ಷವನ್ನು ಸ್ವಾಗತಿಸುವುದಾಗಿದೆ.
ಯುಗಾದಿ ಎನ್ನುವುದು ಎರಡು ಸಂಸ್ಕೃತ ಪದಗಳಿಂದ ಬಂದಿದೆ. ಯುಗ' ಎಂದರೆ ವರ್ಷ ಆದಿ' ಎಂದರೆ ಆರಂಭವೆಂದು ಅರ್ಥ. ಹಾಗೆ ಚೈತ್ರ ಮಾಸದಲ್ಲಿ ಬರುವ ಈ ಹಬ್ಬವೂ ಉಳಿದೆಲ್ಲಾ ಹಬ್ಬಗಳಿಗೂ ಬುನಾದಿ ಎಂದು ಹೇಳಲಾಗಿದೆ. ಯುಗಾದಿಯನ್ನು ಬಹುತೇಕರು ಹೊಸ ವರ್ಷವಾಗಿಯೇ ಆಚರಿಸುತ್ತಾರೆ. ಅಲ್ಲದೆ ಹೊಸ ಬಟ್ಟೆ, ಹೊಸ ಅಡುಗೆ, ಹೊಸ ವ್ಯವಹಾರ ಹೀಗೆ ಹಲವು ರೀತಿಯ ಹೊಸತುಗಳಿಗೆ ಈ ಹಬ್ಬ ಸಾಕ್ಷಿಯಾಗಲಿದೆ.

ಈ ಶುಭ ದಿನದಂದು ಜನರು ಸಾಂಪ್ರದಾಯಿಕವಾಗಿ ಆಚರಣೆಗಳ ಮಾಡುವುದು ನೋಡಬಹುದು. ಯುಗಾದಿಯಂದು ಮಾಡಲೇಬೇಕಾದ ಮತ್ತೊಂದು ಆಚರಣೆಯೆಂದರೆ ಎಣ್ಣೆಸ್ನಾನ ಆದ್ರೆ ಹಲವರು ದೀಪಾವಳಿಯಲ್ಲಿ ಮಾಡುತ್ತಾರೆ. ಆದ್ರೆ ಯುಗಾದಿಯಲ್ಲಿ ಮಾಡುವುದು ಹಲವು ರೀತಿಯ ಪ್ರಯೋಜನಗಳ ತರಲಿದೆ. ಈ ದಿನದಂದು ಬ್ರಹ್ಮ ಪೂಜೆಯನ್ನು ಮಾಡಬೇಕು. ಯುಗಾದಿಯಂದು ಬ್ರಹ್ಮದೇವರು ಬ್ರಹ್ಮಾಂಡವನ್ನು ಸೃಷ್ಟಿಸಿದ ಕಾರಣದಿಂದಾಗಿ ಬ್ರಹ್ಮ ಪೂಜೆ ಮಾಡಲಾಗುತ್ತದೆ.
ಹಾಗೆ ಈ ದಿನ ಪೂಜೆಯ ಸಮಯದಲ್ಲಿ ಕೆಲವೊಂದು ಮಂತ್ರವನ್ನು ಪಠಿಸುವುದರಿಂದ ಹಲವು ರೀತಿಯ ಲಾಭವಿದೆ. ಇದರಿಂದ ನಿಮ್ಮ ಜೀವನದಲ್ಲಿ ದೊಡ್ಡ ಬದಲಾವಣೆಗಳನ್ನು ನೋಡಬಹುದು. ಹಾಗಾದ್ರೆ ಈ ಯುಗಾದಿಯ ದಿನದಂದು ಯಾವ ಮಂತ್ರವನ್ನು ಪಠಿಸುವುದು ನಿಮಗೆ ಅನುಕೂಲಕರ ದಿನಗಳನ್ನು ತರಲಿದೆ ಎಂಬುದನ್ನು ತಿಳಿದುಕೊಳ್ಳಿ.
ಓಂ ಸೂರ್ಯಾಯ ನಮಃ
ಈ ಮಂತ್ರವನ್ನು ಪಠಿಸುವುದರಿಂದ ಸೂರ್ಯ ದೇವರ ಆಶೀರ್ವಾದ ಪಡೆಯುತ್ತೀರಿ. ಸೂರ್ಯನ ಶಕ್ತಿ, ಹಾಗೆ ಯಶಸ್ಸು, ಆತ್ಮಸ್ಥೈರ್ಯ ನಿಮ್ಮದಾಗಲಿದೆ. ಅಲ್ಲದೆ ಯುಗಾದಿಯ ದಿನದಂದು ಈ ಮಂತ್ರ ಪಠಿಸುವುದರಿಂದ ನಿಮ್ಮ ಅನಾರೋಗ್ಯ ಸಮಸ್ಯೆಗಳು ಬಗೆಹರಿಯಲಿದೆ. ದೇಹಕ್ಕೆ ಶಕ್ತಿ ಪೂರಣವಾಗಲಿದೆ ಎಂದು ನಂಬಲಾಗಿದೆ.
ಓಂ ಶ್ರೀಮ್ ಹ್ರೀಮ್ ಕ್ಲೀಮ್ ಮಹಾಲಕ್ಷ್ಮಿಯೈ ನಮಃ
ಲಕ್ಷ್ಮಿ ದೇವತೆ ಸಂಪತ್ತು, ಸಮೃದ್ಧಿ ಮತ್ತು ಸಮೃದ್ಧಿಯ ಸಂಕೇತ. ಈ ಮಂತ್ರವನ್ನು ಪಠಿಸುವುದರಿಂದ ಆರ್ಥಿಕ ವಿಚಾರಗಳಲ್ಲಿ, ಆಸ್ತಿ ಕುರಿತಾದ ವಿಚಾರದಲ್ಲಿ ನಿಮಗೆ ದೇವಿಯ ಆಶೀರ್ವಾದ ಸಿಗಲಿದೆ. ಹಾಗೆ ಹಲವು ಆರ್ಥಿಕ ಅಡೆತಡೆಗಳು ನಿವಾರಣೆಯಾಗಲು ಈ ಮಂತ್ರವು ಸಹಕಾರಿಯಾಗಲಿದೆ. ಹಾಗೆ ನಿಮ್ಮ ಹಣಕಾಸಿನ ವಿಚಾರದಲ್ಲಿ ನಿಮಗೆ ಶುಭವಾಗುವುದು. ಮನೆಯಲ್ಲಿನ ಆರ್ಥಿಕ ವಿಚಾರಗಳಲ್ಲಿ ಶುಭವಾಗುವುದು. ಇದು ಲಕ್ಷ್ಮಿ ದೇವಿಯನ್ನು ಆಹ್ವಾನಿಸುವ ಮಂತ್ರವಾಗಿದ್ದು, ಮನೆಯಲ್ಲಿ ಲಕ್ಷ್ಮಿ ನೆಲೆಸುವಳು, ಇದು ನಿಮಗೆ ಯಾವಾಗಲು ಹಣಕಾಸು ಸ್ಥಿತಿ ಉತ್ತಮವಾಗಿರಲು ಕಾರಣವಾಗಿರಲಿದೆ.
ಓಂ ನಮೋ ಭಗವತೇ ವಾಸುದೇವಾಯ
ಈ ಮಂತ್ರವು ವಿಷ್ಣುವಿನ ಕುರಿತಾಗಿದೆ. ಇದನ್ನು ಪಠಿಸುವುದು ನಿಮ್ಮ ಆರೋಗ್ಯದಲ್ಲಿ ಸುಧಾರಣೆ, ಶಾಂತಿ, ಸಾಮರಸ್ಯ, ಹಾಗೆ ಸಕಾರಾತ್ಮಕ ಪರಿವರ್ತನೆಗಳಿಗೆ ಇದು ಕಾರಣವಾಗಲಿದೆ. ವಿಷ್ಣುವಿನ ಆಶೀರ್ವಾದ ಪಡೆದರೆ ನೀವು ಎಂತಹ ಕೆಲಸವನ್ನಾದರು ಏಕಾಂಗಿಯಾಗಿ ಮಾಡಿ ಮುಗಿಸುವಂತಹ ಧೈರ್ಯ ಪಡೆಯುತ್ತೀರಿ. ಇದರಿಂದ ನಿಮ್ಮ ಕಷ್ಟಗಳನ್ನು ಸುಲಭವಾಗಿ ನೀವು ನಿವಾರಣೆ ಮಾಡಿಕೊಳ್ಳಬಹುದು.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ಅದು ವಿಶ್ವಾಸಾರ್ಹವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications











