Latest Updates
-
ಚೆನ್ನೈ-ಕೊಯಮತ್ತೂರಿನಲ್ಲಿ ಭಾರಿ ಮಳೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಮಾಡಿ ಈ ಸಿಂಪಲ್ ವರ್ಕ್ಔಟ್! -
ಬೆಂಗಳೂರು ಮಳೆ: ಟ್ರಾಫಿಕ್ ಜಾಮ್ ತಪ್ಪಿಸಿ ಸುರಕ್ಷಿತವಾಗಿ ಮನೆ ತಲುಪಲು ಇಲ್ಲಿದೆ ಸ್ಮಾರ್ಟ್ ಟ್ರಾವೆಲ್ ಪ್ಲಾನ್! -
ಡೆಂಗ್ಯೂ ಭೀತಿ: ನಿಮ್ಮ ಬಾಲ್ಕನಿಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಲು 10 ನಿಮಿಷದ ಸಿಂಪಲ್ ಟಿಪ್ಸ್! -
ಮುಂಬೈನಲ್ಲಿ ತೀವ್ರ ಬಿಸಿಲು: IMD ಯಿಂದ ಹಳದಿ ಎಚ್ಚರಿಕೆ; ಆರೋಗ್ಯ ಕಾಪಾಡಿಕೊಳ್ಳಲು ಈ ಮುನ್ನೆಚ್ಚರಿಕೆ ಅಗತ್ಯ! -
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: ಅತಿ ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ 72 ಗಂಟೆಗಳ ಪ್ಲಾನ್ ಫಾಲೋ ಮಾಡಿ! -
ದೆಹಲಿ ವಾಯು ಮಾಲಿನ್ಯ: AQI ಏರಿಕೆ, ಹೊರಗೆ ಹೋಗುವ ಮುನ್ನ ಈ ಮಾಸ್ಕ್ ಧರಿಸುವುದು ಕಡ್ಡಾಯ! -
ವಿಶ್ವ ಶಿಕ್ಷಕರ ದಿನ: ಶಿಕ್ಷಕರಿಗೆ ಗೌರವ ಸಲ್ಲಿಸುವಾಗ ಪೋಷಕರು ಪಾಲಿಸಬೇಕಾದ ಶಿಷ್ಟಾಚಾರಗಳೇನು? -
ಕೇರಳ-ತಮಿಳುನಾಡು ಮಳೆ ಅಲರ್ಟ್: ನಿಮ್ಮ ಮನೆ ಮತ್ತು ಕಾರನ್ನು ಸುರಕ್ಷಿತವಾಗಿಡಲು ಈ 5 ತಕ್ಷಣದ ಕ್ರಮಗಳನ್ನು ಕೈಗೊಳ್ಳಿ! -
ಜಿಮ್ಗೆ ಹೋಗುವವರೇ ಎಚ್ಚರ! ಪ್ರೊಟೀನ್ ಸಪ್ಲಿಮೆಂಟ್ಸ್ ಮೇಲೆ FDA ದಾಳಿ, ನಕಲಿ ಉತ್ಪನ್ನ ಪತ್ತೆಹಚ್ಚುವುದು ಹೇಗೆ? -
ಏಷ್ಯನ್ ಗೇಮ್ಸ್ ಕ್ರಿಕೆಟ್ ಫೈನಲ್: ಭಾರತದ ಗೆಲುವಿನ ಸಂಭ್ರಮಕ್ಕೆ ಇಲ್ಲಿದೆ ವೈರಲ್ ಮೀಮ್ಸ್ ಮತ್ತು ಸೇಫ್ ಸೆಲೆಬ್ರೇಷನ್ ಗೈಡ್!
ಯುಗಾದಿಗೆ ಸ್ಪೆಷಲ್ ಹೊಸ ರೀತಿಯ ಕ್ಯಾರೆಟ್ ಒಬ್ಬಟ್ಟು: ಬಾಯಲ್ಲಿ ನೀರು ತರಿಸುವ ಸಿಹಿ
ಯುಗಾದಿ ಹಬ್ಬದಲ್ಲಿ ಸಿಹಿ ತಿಂಡಿ ಮಾಡೋದು ಸಾಮಾನ್ಯ. ಅದ್ರಲ್ಲೂ ಬಹಳಷ್ಟು ಮಂದಿ ಸುಲಭವಾಗಿ ಮಾಡಿ ಸವಿಯುವಂತಹ ರುಚಿ ರುಚಿಯಾದ ಖಾದ್ಯಗಳ ಮಾಡುತ್ತಾರೆ. ಬಹುತೇಕರು ಈ ದಿನ ಒಬ್ಬಟ್ಟು ಅಥವಾ ಹೋಳಿಗೆ ಮಾಡಿ ಸವಿಯೋಕೆ ಮುಂದಾಗೋದು ನೋಡಬಹುದು. ಅದ್ರಲ್ಲೂ ಈ ಹೋಳಿಗೆಯಲ್ಲಿ ಹಲವು ವಿಧಗಳಿವೆ. ಒಂದೊಂದು ಬೇರೆ ಬೇರೆ ರುಚಿಯಲ್ಲಿ ಮಾಡಬಹುದು.
ಹಲವರಿಗೆ ಹೋಳಿಗೆಯಲ್ಲಿ ಹಲವು ವಿಧಗಳ ಸವಿಯುವ ಬಯಕೆ ಇರಲಿದೆ. ಹಾಗೆ ಕಾಯಿ ಹೋಳಿಗೆ, ಬೇಳೆ ಹೋಳಿಗೆ, ತೊಗರಿ ಹೋಳಿಗೆ ಹೀಗೆ ಹಲವು ವಿಧಗಳಿವೆ. ಆದ್ರೆ ನಾವಿಂದು ಕ್ಯಾರೆಟ್ ಹೋಳಿಗೆ ಮಾಡುವ ಕುರಿತು ತಿಳಿದುಕೊಳ್ಳೋಣ. ಕ್ಯಾರೆಟ್ ಬಳಸಿ ಮಾಡುವ ಈ ಹೋಳಿಗೆಯಂತು ಒಮ್ಮೆ ಸವಿದರೆ ನೀವು ಪದೇ ಪದೇ ಸವಿಯಲು ಮುಂದಾಗುವುದು ಖಚಿತ.

ಹಾಗಾದ್ರೆ ಸುಲಭವಾಗಿ ಈ ಕ್ಯಾರೆಟ್ ಒಬ್ಬಟ್ಟು ಮಾಡುವುದು ಹೇಗೆ?, ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಲ್ಲಿ ತಿಳಿದುಕೊಳ್ಳೋಣ.
ಕ್ಯಾರೆಟ್ ಹೋಳಿಗೆ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಕ್ಯಾರೆಟ್
- ಮೈದಾ ಹಿಟ್ಟು
- ಎಣ್ಣೆ
- ಸಕ್ಕರೆ
- ಬಾದಾಮ್ ಪುಡಿ
- ಹಾಲಿನ ಪುಡಿ
- ತುಪ್ಪ
- ಅಡುಗೆ ಎಣ್ಣೆ
ಕ್ಯಾರೆಟ್ ಹೋಳಿಗೆ ಮಾಡುವ ಸುಲಭದ ವಿಧಾನವೇನು?
ಮೊದಲು ಹಿಟ್ಟನ್ನು ಕಲಸಿಕೊಂಡು ಇಟ್ಟುಕೊಳ್ಳಬೇಕು. ಮೊದಲು ಒಂದು ಪಾತ್ರೆಗೆ 4 ಕಪ್ ಅಳತೆಯಲ್ಲಿ ಮೈದಾ ಹಿಟ್ಟು ಹಾಕಿಕೊಳ್ಳಿ. ಅದಕ್ಕೆ ಚೂರು ಅರಶಿಣ ಪುಡಿ, ಉಪ್ಪು ಸೇರಿಸಿ ಮಿಕ್ಸ್ ಮಾಡಿ. ಬೇಕಿದ್ದರೆ ಈ ಸಮಯದಲ್ಲಿ ಫುಡ್ ಕಲರ್ ಕೂಡ ಬಳಸಬಹುದು. ಅನಂತರ ಸ್ವಲ್ಪ ಸ್ವಲ್ಪ ನೀರು ಹಾಕಿಕೊಳ್ಳುತ್ತಾ ಚೆನ್ನಾಗಿ ಮಿಶ್ರಣ ಮಾಡಬೇಕು. ಈ ಹಿಟ್ಟು ನಿಧಾನವಾಗಿ ಹದ ಮಾಡಬೇಕು. 2 ಸ್ಪೂನ್ ಎಣ್ಣೆ ಹಾಕಿ ಹಂತ ಹಂತವಾಗಿ ಎಣ್ಣೆ ಹಾಕುತ್ತಾ ಹದ ಮಾಡಬೇಕು. ಹಿಟ್ಟು ಮೃದುವಾಗಿ ಬರುವವರೆಗೂ ಹದ ಮಾಡಬೇಕು. ಇದನ್ನು ಒಂದು ಪಾತ್ರೆಯಲ್ಲಿ ಮುಚ್ಚಿ ಇಟ್ಟುಕೊಳ್ಳಿ.
ಈಗ ಕ್ಯಾರೆಟ್ಗಳನ್ನು ತೊಳೆದು ಸಿಪ್ಪೆ ತೆಗೆದು ಚಿಕ್ಕದಾಗಿ ಕತ್ತರಿಸಿಕೊಂಡು ಅದನ್ನು ಮಿಕ್ಸಿ ಜಾರ್ಗೆ ಹಾಕಿ ನೀರು ಹಾಕಿ ರುಬ್ಬಿಕೊಳ್ಳಿ. ಇದು ನುಣ್ಣಗೆ ಪೇಸ್ಟ್ ಆಗಬೇಕು. ಈಗ ಒಲೆ ಮೇಲೆ ಬಾಣಲೆ ಇಟ್ಟು ಅದಕ್ಕೆ ತುಪ್ಪ ಅಥವಾ ಎಣ್ಣೆ ಹಾಕಿ ಅದಕ್ಕೆ ರುಬ್ಬಿಕೊಂಡಿದ್ದ ಕ್ಯಾರೆಟ್ ಪೇಸ್ಟ್ ಹಾಕಿಕೊಂಡು ಫ್ರೈ ಮಾಡಿ. ಇದನ್ನು 5 ನಿಮಿಷ ಆದರೂ ಫ್ರೈ ಮಾಡಬೇಕು.
ನಂತರ ಇದಕ್ಕೆ ಅಳತೆಯಷ್ಟು ಸಕ್ಕರೆ, ಬಾದಾಮಿ ಪುಡಿ, ಹಾಲಿನ ಪುಡಿ ಚೂರು ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. 5 ನಿಮಿಷ ಮತ್ತೆ ಮಿಕ್ಸ್ ಮಾಡಿದ ಬಳಿಕ 1 ಸ್ಪೂನ್ ತುಪ್ಪ ಹಾಕಿ ಮಿಕ್ಸ್ ಮಾಡಿ ಇದು ಗಟ್ಟಿಯಾಗುತ್ತಾ ಬರಲಿದೆ. ನಂತರ ಒಲೆ ಆಫ್ ಮಾಡಿ ತಣ್ಣಗಾಗಲು ಬಿಟ್ಟು ಕೈಗೆ ಎಣ್ಣೆ ಹಚ್ಚಿ ಉಂಡೆ ಕಟ್ಟಿಕೊಳ್ಳಿ. ಅನಂತರ ಮೈದಾ ಹಿಟ್ಟನ್ನು ಚಪಾತಿಯಂತೆ ಲಟ್ಟಿಸಿಕೊಂಡು, ಈ ಹೂರ್ಣವನ್ನು ಮಧ್ಯದಲ್ಲಿ ಇಟ್ಟು ಸಾಮಾನ್ಯ ಒಬ್ಬಟ್ಟು ತಟ್ಟಿದಂತೆ ತಟ್ಟಿಕೊಂಡು ಲಟ್ಟಿಸಿ ಕಾವಲಿ ಮೇಲೆ ಹಾಕಿದರೆ ನಿಮ್ಮ ಮುಂದೆ ರುಚಿ ರುಚಿಯಾದ ಕ್ಯಾರೆಟ್ ಒಬ್ಬಟ್ಟು ಸಿದ್ದವಾಗುತ್ತೆ.



Click it and Unblock the Notifications
