Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಎಲ್‌ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್
ಮಧ್ಯಪ್ರಾಚ್ಯದಲ್ಲಿ ಅಮೆರಿಕಾ-ಇಸ್ರೇಲ್ ದಾಳಿಯ ನಂತರ ಇರಾನ್ ಜೊತೆ ನಡೆಯುತ್ತಿರುವ ಸಂಘರ್ಷದಿಂದ ಹಲವು ರೀತಿಯ ಸಮಸ್ಯೆಗಳು ಎದುರಾಗಿರುವುದು ನೋಡಬಹುದು. ತೈಲ ದರ ಏರಿಕೆ ಸೇರಿ ಹಲವು ದಿನಗಳಕೆ ವಸ್ತುಗಳ ಬೆಲೆಯಲ್ಲಿ ಏರಿಕೆಯಾಗುವುದು ನೋಡಬಹುದು. ಹಾಗೆ ಎಲ್‌ಪಿಜಿ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯ ಹಿನ್ನಲೆ ಬೆಂಗಳೂರು ಸೇರಿ ಹಲವು ಕಡೆ ಹೋಟೆಲ್ ಉದ್ಯಮಕ್ಕೆ ಪೆಟ್ಟು ಬಿದ್ದಿದೆ.
ಆದ್ರೆ ಎಲ್‌ಜಿಪಿ ಗ್ಯಾಸ್ ಬಳಸದೆಯೇ ಅಡುಗೆ ಮಾಡುವ ಕುರಿತಾದ ವಿಡಿಯೋವೊಂದು ವೈರಲ್ ಆಗುತ್ತಿದೆ. ಹೌದು ಗ್ಯಾಸ್ ಇಲ್ಲದೆಯೇ ಬರೀ ನೀರು ಬಳಸಿಕೊಂಡು ಅಡುಗೆ ಮಾಡುವ ವಿಧಾನ ಹೇಳಿರುವ ಆಧ್ಯಾತ್ಮಿಕ ಗುರು ಶ್ರೀ ರವಿಶಂಕರ ಗುರೂಜಿ ಅವರ ವಿಡಿಯೋ ವೈರಲ್ ಆಗುತ್ತಿದೆ. ಎಲ್‌ಪಿಜಿ ಸಿಲಿಂಡರ್ ವಿತರಣೆಯಲ್ಲಿ ವ್ಯತ್ಯಯ ಆಗುತ್ತಿರುವ ಹಿನ್ನಲೆ ಈ ವಿಡಿಯೋ ಈಗ ಮತ್ತೆ ಮುನ್ನಲೆಗೆ ಬಂದಿದೆ.

ನೀರು ಆಧಾರಿತ ಅಡುಗೆ ವಿಧಾನವನ್ನು ಶ್ರೀ ಶ್ರೀ ರವಿಶಂಕರ್ ಗುರೂಜಿ ವಿವರಿಸುತ್ತಿರುವ ವಿಡಿಯೋ ಇದಾಗಿದೆ. ಇದು ಎಲ್‌ಪಿಜಿ ಬದಲಾಗಿ ಬಳಸಲ್ಪಡಬಹುದು ಎಂದು ಹೇಳಲಾಗಿದೆ. ಗ್ಯಾಸ್ ಬದಲಾಗಿ ನೀರಿನಿಂದ ಅಡುಗೆ ಮಾಡುವುದು ಹೇಗೆ ಅನ್ನೋದನ್ನು ವಿವರಿಸಲಾಗಿದೆ. ನೀರನ್ನು ಬಳಸಿಕೊಂಡು ಹೈಡ್ರೋಜನ್ ಉತ್ಪಾದಿಸುವ ತಂತ್ರಜ್ಞಾನದ ಬಗ್ಗೆ ರವಿಶಂಕರ್ ಮಾತನಾಡುತ್ತಾರೆ.
ವೀಡಿಯೊದಲ್ಲಿ ವಿವರಿಸಿದಂತೆ ಈ ಪ್ರಕ್ರಿಯೆಯು ನೀರಿನಿಂದ ಹೈಡ್ರೋಜನ್ ಅನ್ನು ಬೇರ್ಪಡಿಸುವ ಯಂತ್ರವನ್ನು ಒಳಗೊಂಡಿರುತ್ತದೆ. ಉತ್ಪಾದಿಸುವ ಹೈಡ್ರೋಜನ್ ಅನ್ನು ಕಲ್ಲಿದ್ದಲನ್ನು ಸುಡಲು ಬಳಸಲಾಗುತ್ತದೆ, ಆದರೆ ಆಮ್ಲಜನಕವನ್ನು ವಾತಾವರಣಕ್ಕೆ ಬಿಡುಗಡೆ ಮಾಡಲಾಗುತ್ತದೆ. ಎಂದು ವಿವರಿಸಲಾಗಿದೆ. ಇದು ಬಹಳ ಸುಲಭದ ವಿಧಾನವಾಗಿದೆ. ಈ ವಿಧಾನವು ಎಲ್‌ಪಿಜಿ ಸಿಲಿಂಡರ್‌ಗಳಿಲ್ಲದೆ ದೀರ್ಘಕಾಲದವರೆಗೆ ಅಡುಗೆ ಮಾಡಲು ಅನುವು ಮಾಡಿಕೊಡುತ್ತದೆ ಮತ್ತು ಈ ವ್ಯವಸ್ಥೆಯನ್ನು ಆರಂಭದಲ್ಲಿ ಆಶ್ರಮದಲ್ಲಿ ಅಳವಡಿಸಲಾಗುವುದು ಮತ್ತು ನಂತರ ಬೇರೆಡೆ ವಿಸ್ತರಿಸಲಾಗುವುದು ಎಂದು ಅವರು ಹೇಳುತ್ತಾರೆ.
ನೀರಿನಿಂದ ಆಮ್ಲಜನಕ ಹಾಗೂ ಹೈಡ್ರೋಜನ್ ಬೇರೆ ಮಾಡಿದಾಗ ಹೈಡ್ರೋಜನ್ ಉರಿಯಾಗಿ ಬದಲಾಗುತ್ತದೆ. ಇದೇ ತಂತ್ರಜ್ಞಾನ ಹೈಡ್ರೋಜನ್ ಇಂಧನದಿಂದ ಚಲಿಸುವ ವಾಹನದಲ್ಲೂ ಬಳಕೆಯಾಗುತ್ತದೆ. ಹಾಗೆ ವಿಡಿಯೋದಲ್ಲಿಯೂ ನಾವು ಯಾವುದೇ ಇಂಧನ ಇಲ್ಲದೆಯೂ ಬೆಂಕಿ ಉರಿಯುತ್ತಿರುವುದು ನೋಡಬಹುದು. ಸದ್ಯ ಈ ರೀತಿಯ ವಿಧಾನವನ್ನು ದೊಡ್ಡ ಪ್ರಮಾಣದಲ್ಲಿ ಮಾಡಿದರೆ ಮಾತ್ರವೇ ಎಲ್‌ಪಿಜಿ ಬದಲಾಗಿ ಈ ತಂತ್ರಜ್ಞಾನ ಬಳಸಬಹುದು ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಈ ವಿಡಿಯೋ ನೋಡಿದ ಮಂದಿ ಅಚ್ಚರಿಗೊಳಗಾಗಿದ್ದಾರೆ. ಇಷ್ಟು ಸುಲಭವಾಗಿ ಸಣ್ಣ ಯಂತ್ರವನ್ನು ಅಭಿವೃದ್ಧಿಪಡಿಸಿ ಬಳಿಕ ಅದರಿಂದ ಬೆಂಕಿಯನ್ನು ಅಥವಾ ಅನಿಲ ಪಡೆಯಬಹುದು ಎಂದಾದರೆ ಈ ತಂತ್ರಜ್ಞಾನವನ್ನು ಏಕೆ ಅಭಿವೃದ್ಧಿಪಡಿಸಿಲ್ಲ ಎಂದು ಬಳಕೆದಾರರೊಬ್ಬರು ಅಭಿಪ್ರಾಯಪಟ್ಟಿದ್ದಾರೆ. ಹಾಗೆ ಈ ಅದ್ಭುತ ತಂತ್ರಜ್ಞಾನದ ಅಗತ್ಯತೆ ಆವಾಗಿಗಿಂತ ಈಗಲೇ ಹೆಚ್ಚಾಗಿದೆ ಎಂದು ಮತ್ತೊಬ್ಬರು ಅಭಿಪ್ರಾಯ ಪಟ್ಟಿದ್ದಾರೆ.
ಈ ವಿಶೇಷ ಯಂತ್ರವು ರವಿಶಂಕರ್ ಗುರೂಜಿ ಅವರ ಆಶ್ರಮದಲ್ಲಿ ಮಹರ್ಷಿ ಮಹೇಶ್ ಯೋಗಿ ಅವರು ಅಭಿವೃದ್ಧಿಪಡಿಸಿದ್ದಾರೆ. ಹಾಗೆ ಇದನ್ನು ಆಶ್ರಮದಲ್ಲಿ ಬಳಸಲಾಗುತ್ತಿದೆ ಎಂದು ರವಿಶಂಕರ್ ಗುರೂಜಿ ಹೇಳಿದ್ದಾರೆ. ರವಿಶಂಕರ್ ಅವರು ಗ್ರಾಮೀಣ ಪ್ರದೇಶಗಳಲ್ಲಿ ತಂತ್ರಜ್ಞಾನವನ್ನು ಪರಿಚಯಿಸುವುದು ದೀರ್ಘಕಾಲೀನ ಗುರಿಯಾಗಿದೆ ಎಂದು ಹೇಳುತ್ತಾರೆ. ಇದರಿಂದ ಕ್ರಮೇಣ ಎಲ್‌ಜಿಪಿ ಮೇಲಿನ ಅವಲಂಬನೆ ಕಡಿಮೆ ಮಾಡಬಹುದು ಎಂದು ಮತ್ತೊಬ್ಬರು ಹೇಳಿಕೊಂಡಿದ್ದಾರೆ.
ಸದ್ಯ ಈಗ ಮಧ್ಯಪ್ರಾಚ್ಯದಲ್ಲಿನ ಸಂಘರ್ಷವು ಎಲ್‌ಪಿಜಿ ಸೇರಿ ತೈಲ ದರವೂ ಸೇರಿ ದಿನ ನಿತ್ಯದ ಬಳಕೆಯ ವಸ್ತುಗಳ ದರದಲ್ಲೂ ಏರಿಕೆಯಾಗಿರುವುದು ನಾಗರಿಕರ ಜೇಬಿಗೆ ಕತ್ತರಿ ಬಿದ್ದಿದೆ. ಸದ್ಯ ಎಲ್‌ಪಿಜಿ ಕೊರತೆ ಮುಂದುವರೆಯುವುದಿಲ್ಲ ಎಂದು ತಿಳಿದುಬಂದಿದೆ.



Click it and Unblock the Notifications