Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಯುಗಾದಿ ಹಬ್ಬದಲ್ಲಿ ಸಿಹಿಯೊಂದಿಗೆ ಬೇಬಿ ಕಾರ್ನ್ 65 ಸಹ ಮಾಡಿ! ಅದ್ಭುತ ರುಚಿಯ ತಿಂಡಿ ಇದು!
ಯುಗಾದಿ ಹಬ್ಬಕ್ಕೆ ಬಹುತೇಕರ ಮನೆಯಲ್ಲಿ ಸಿಹಿ ತಿಂಡಿ ಮಾಡಿಯೇ ಮಾಡುತ್ತಾರೆ. ಅದ್ರಲ್ಲೂ ಹೋಳಿಗೆಯಂತು ಬಹುತೇಕರ ಮನೆಯಲ್ಲಿ ಸಿದ್ದ ತಿಂಡಿ ಎನ್ನಬಹುದು. ನೀವು ಕೂಡ ಹಲವು ಸಿಹಿ ತಿಂಡಿಗಳ ಮಾಡಿ ಸವಿದಿರುತ್ತೀರಿ. ಆದ್ರೆ ಸಿಹಿ ತಿಂಡಿಯೊಂದಿಗೆ ಎಣ್ಣೆಯಲ್ಲಿ ಕರಿದ ರುಚಿ ರುಚಿಯಾದ ತಿಂಡಿಗಳು ಅಂದರೂ ಹಲವರಿಗೆ ಇಷ್ಟವಾಗುತ್ತೆ. ಅದ್ರಲ್ಲೂ ಕರಿದ ತಿಂಡಿಗಳು ಹಬ್ಬದ ಊಟದ ರುಚಿಯನ್ನು ದುಪ್ಪಟ್ಟಾಗಿಸಲಿದೆ.
ಆದ್ರೆ ಹಬ್ಬದಲ್ಲಿ ಸಿಹಿ ತಿಂಡಿಯನ್ನೇ ಮಾಡಲು ಬಯಸುತ್ತಾರೆ. ಈ ಕರಿದ ತಿಂಡಿಯನ್ನು ಊಟದ ಬಳಿಕ ಅಥವಾ ಟೀ ಕಾಫಿ ಸವಿಯುವ ಸಮಯದಲ್ಲಿ ಸವಿಯಲು ಇಷ್ಟಪಡುವುದು ನೋಡಬಹುದು. ಈ ಕರಿದ ತಿಂಡಿಗಳ ಪೈಕಿ ನಾವಿಂದು ಬೇಬಿ ಕಾರ್ನ್ 65 ಮಾಡುವ ಕುರಿತು ತಿಳಿದುಕೊಳ್ಳೋಣ. ನೀವು ಮದುವೆ ಮನೆಯಂತಹ ಸಮಾರಂಭದಲ್ಲಿ ಈ ಬೇಬಿ ಕಾರ್ನ್ 65 ನೀವು ಸಹ ಸವಿದಿರುತ್ತೀರಿ. ಆದ್ರೆ ಇದನ್ನು ಮನೆಯಲ್ಲೇ ನಾವಿಂದು ಮಾಡುವ ಕುರಿತು ತಿಳಿದುಕೊಳ್ಳೋಣ.
ಹಾಗೆ ಈ ಯುಗಾದಿಯಲ್ಲಿ ಹೋಳಿಗೆಯ ಜೊತೆಗೆ ಬೇಬಿ ಕಾರ್ನ್ ಕರಿದು ಸವಿಯುವ ಕುರಿತಾಗಿ ನಾವು ತಿಳಿದುಕೊಳ್ಳೋಣ. ಈ ಬೇಬಿ ಕಾರ್ನ್ 65 ಮಾಡುವುದು ಹೇಗೆ? ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಬೇಬಿ ಕಾರ್ನ್ 65 ಮಾಡಲು ಅಗತ್ಯ ವಸ್ತುಗಳು
- ಬೇಬಿ ಕಾರ್ನ್
- ಮೈದಾ ಹಿಟ್ಟು
- ಕಾರ್ನ್ ಫ್ಲೋರ್
- ಶುಂಠಿ ಬೆಳ್ಳುಳ್ಳಿ ಪೇಸ್ಟ್
- ಕೊತ್ತಂಬರಿ ಸೊಪ್ಪು
- ಕರಿಬೇವು
- ಅರಿಶಿನ ಪುಡಿ
- ಗರಂ ಮಸಾಲ ಪುಡಿ
- ಖಾರದ ಪುಡಿ
- ಕರಿಮೆಣಸಿನ ಪುಡಿ
- ಜೀರಿಗೆ ಪುಡಿ
- ರೆಡ್ ಫುಡ್ ಕಲರ್
- ಎಣ್ಣೆ
- ಉಪ್ಪು
ಬೇಬಿ ಕಾರ್ನ್ 65 ಮಾಡುವ ವಿಧಾನವೇನು?
ಮೊದಲು ಬೇಬಿ ಕಾರ್ನ್‌ಗೆ ಮಸಾಲೆ ಮಾಡಿಕೊಳ್ಳಬೇಕು. ಅದಕ್ಕೂ ಮೊದಲು ಈ ಬೇಬಿ ಕಾರ್ನ್‌ಗಳನ್ನು ಬೇಯಿಸಬೇಕು. ಇದಕ್ಕಾಗಿ ಒಲೆ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ ನೀರು ಹಾಕಿ ಬಿಸಿಯಾಗಲು ಬಿಡಿ. ನೀರು ಬಿಸಿಯಾದಾಗ ಅದಕ್ಕೆ ಬೇಬಿ ಕಾರ್ನ್ ಅನ್ನು ಸೀಳಿಕೊಂಡು ನೀರಿನಲ್ಲಿ ಹಾಕಿ 3 ನಿಮಿಷ ಬೇಯಿಸಿಕೊಂಡು ಒಲೆ ಆಫ್ ಮಾಡಿಕೊಂಡು ನೀರಿನಿಂದ ತೆಗೆದು ತಣ್ಣಗಾಗಲು ಬಿಡಿ.
ಈಗ ಒಂದು ಬೌಲ್‌ಗೆ ಮೈದಾ ಹಿಟ್ಟು, ಕಾರ್ನ್ ಫ್ಲೋರ್, ಶುಂಠಿ ಬೆಳ್ಳುಳ್ಳಿ ಪೇಸ್ಟ್, ರುಚಿಗೆ ತಕ್ಕಷ್ಟು ಉಪ್ಪು, ಕೊತ್ತಂಬರಿ ಸೊಪ್ಪು, ಕರಿಬೇವು, ಅರಶಿಣ, ಗರಂ ಮಸಾಲೆ, ಖಾರದ ಪುಡಿ, ಕಾಳು ಮೆಣಸಿನ ಪುಡಿ, ಜೀರಿಗೆ ಪುಡಿ ಹಾಗೆ ಕಲರ್ ಪುಡಿ ಹಾಕಿ ಒಮ್ಮೆ ಡ್ರೈ ಮಿಕ್ಸ್ ಮಾಡಿಕೊಳ್ಳಿ. ನಂತರ ಸ್ವಲ್ಪ ಸ್ವಲ್ಪ ನೀರು ಹಾಕಿಕೊಳ್ಳುತ್ತಾ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು.
ಈ ಹಿಟ್ಟು ಬಹಳ ತೆಳುವಾಗಿ ಇಲ್ಲವೆ ಬಹಳ ಗಟ್ಟಿಯಾಗಿಯೂ ಇರಬಾರದು. ಬೋಂಡಾ ಹಿಟ್ಟು ಮಾಡುವ ಹದಕ್ಕೆ ಮಾಡಿಕೊಳ್ಳಿ. ಈಗ ಒಲೆ ಮೇಲೆ ಎಣ್ಣೆ ಬಾಣಲೆ ಇಟ್ಟು ಕಾಯಲು ಬಿಡಿ ಅನಂತರ ಬೇಬಿ ಕಾರ್ನ್ ಅನ್ನು ಹಿಟ್ಟಿನಲ್ಲಿ ಹಾಕಿ 5 ನಿಮಿಷ ಬಿಡಿ. ತದ ನಂತರ ಒಂದೊಂದೇ ಬೇಬಿ ಕಾರ್ನ್ ಅನ್ನು ಹಿಟ್ಟಿನಿಂದ ತೆಗೆದು ಎಣ್ಣೆಯಲ್ಲಿ ಬಿಡಬೇಕು.
ಎಲ್ಲಾ ಬೇಬಿ ಕಾರ್ನ್‌ಗೂ ಈ ಮಸಾಲೆ ಚೆನ್ನಾಗಿ ಹಿಡಿದಿರಬೇಕು. ಅದು ಕೆಂಪು ಬಣ್ಣಕ್ಕೆ ತಿರುಗುವವರೆಗೂ ಕರಿದುಕೊಳ್ಳಬೇಕು, ಮಧ್ಯ ಉರಿಯಲ್ಲಿ ಕರಿಯಲು ಬಿಡಿ. ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯಾದ ಬೇಬಿ ಕಾರ್ನ್ 65 ಸಿದ್ದವಾಗುತ್ತೆ. ಹಬ್ಬದಲ್ಲಿ ಊಟದ ರುಚಿ ದುಪ್ಪಟ್ಟಾಗಿಸಲಿದೆ.



Click it and Unblock the Notifications

