ಕಣ್ಣಿನ ದೃಷ್ಟಿ ಸಾಮರ್ಥ್ಯ ಹೆಚ್ಚಿಸುವ ಸಿಂಪಲ್ ಮನೆಮದ್ದು

By: Arshad
Subscribe to Boldsky

ನೀವು ದಿನವಿಡೀ ಕಂಪ್ಯೂಟರ್ ಪರದೆಯನ್ನು ವೀಕ್ಷಿಸುತ್ತಲೇ ಇರಬೇಕಾದ ಅನಿವಾರ್ಯತೆ ಇದೆಯೇ? ಹಾಗಾದರೆ ನಿಮ್ಮ ಕಣ್ಣುಗಳು ಇತರರಿಗಿಂತ ಹೆಚ್ಚಾಗಿ ಶ್ರಮಗೊಳ್ಳುತ್ತವೆ. ಪರಿಣಾಮವಾಗಿ ನಿಮ್ಮ ಕನ್ನಡಕದ ಸಂಖ್ಯೆ ವರ್ಷ ಕಳೆದಂತೆ ಹೆಚ್ಚುತ್ತಲೇ ಹೋಗುತ್ತದೆ...! ಇದನ್ನು ತಡೆಯಬೇಕೆಂದರೆ ನಮ್ಮ ಕಣ್ಣುಗಳನ್ನು ಇನ್ನಷ್ಟು ಆರೋಗ್ಯವಂತಗೊಳಿಸುವುದೇ ಉತ್ತಮ ಮಾರ್ಗವಾಗಿದೆ.  ನಿರಂತರ ಕಂಪ್ಯೂಟರ್ ಬಳಸುವುವಾಗ ಕಣ್ಣುಗಳ ರಕ್ಷಣೆಗೆ 10 ಸಲಹೆಗಳು 

Eyes
 

ಇಂದಿನ ದಿನಗಳಲ್ಲಿ ಮನರಂಜನೆಗಾಗಿ ಟೀವಿ, ಗೇಮ್ಸ್, ಮೊಬೈಲ್ ಮೊದಲಾದ ಹತ್ತು ಹಲವು ಸಾಧನಗಳಿರುವ ಮೂಲಕ ನಾವು ನಮ್ಮ ಕಣ್ಣುಗಳನ್ನು ಹೆಚ್ಚು ಹೆಚ್ಚಾಗಿ ಒತ್ತಡಕ್ಕೆ ಒಳಪಡಿಸುತ್ತಿದ್ದೇವೆ. ಹೆಚ್ಚಿನ ಒತ್ತಡದ ಕಾರಣ ಕಣ್ಣಿನ ದೃಷ್ಟಿನರವೂ ಹೆಚ್ಚು ಕೆಲಸ ನಿರ್ವಹಿಸಬೇಕಾಗಿ ಬರುತ್ತದೆ. ಪರಿಣಾಮವಾಗಿ ದೃಷ್ಟಿ ಕುಂದುತ್ತದೆ ಹಾಗೂ ಹಲವಾರು ದೃಷ್ಟಿದೋಶಗಳು ಎದುರಾಗುವ ಸಾಧ್ಯತೆ ಹೆಚ್ಚುತ್ತದೆ. 

Honey
 

ಆದ್ದರಿಂದ ನಮ್ಮ ದೇಹದ ಅತಿ ಮುಖ್ಯ ಹಾಗೂ ಸೂಕ್ಷ್ಮ ಅಂಗವಾದ ಕಣ್ಣುಗಳನ್ನು ಅತಿಹೆಚ್ಚಿನ ಕಾಳಜಿಯಿಂದ ರಕ್ಷಿಸಿಕೊಳ್ಳುವುದೇ ಜಾಣತನದ ಮಾರ್ಗವಾಗಿದ್ದು ನಿಸರ್ಗ ನೀಡಿರುವ ಕೆಲವು ಪೋಷಕಾಂಶಗಳ ನೆರವಿನಿಂದ ಕಣ್ಣುಗಳು ಕಳೆಕೊಂಡಿದ್ದ ಶಕ್ತಿಯನ್ನು ಮತ್ತೆ ಪಡೆದುಕೊಳ್ಳಲು ಸಾಧ್ಯವಿದೆ. ಬನ್ನಿ, ಇಂದು ಈ ನೈಸರ್ಗಿಕ ವಿಧಾನವನ್ನು ಅನುಸರಿಸಿ ಕಣ್ಣುಗಳ ಆರೋಗ್ಯವನ್ನು ಇನ್ನಷ್ಟು ಉತ್ತಮಗೊಳಿಸೋಣ:

ಅಗತ್ಯವಿರುವ ಸಾಮಾಗ್ರಿಗಳು

*ನಾರಗಸೆಯೆಣ್ಣೆ (Linseed oil) - ಎರಡು ದೊಡ್ಡ ಚಮಚ

*ಜೇನು: ಒಂದು ದೊಡ್ಡ ಚಮಚ

*ಲಿಂಬೆ ರಸ: ಒಂದು ದೊಡ್ಡ ಚಮಚ   ಇಲ್ಲಿದೆ ನೋಡಿ ಕಣ್ಣಿನ ಸುರಕ್ಷತೆಗಾಗಿ ಟಾಪ್ ಸಲಹೆಗಳು 

Lime jiuce

ನಿಸರ್ಗದ ಈ ಸಾಮಾಗ್ರಿಗಳನ್ನು ನಿಯಮಿತವಾಗಿ ಸೇವಿಸುವ ಮೂಲಕ ಕಣ್ಣುಗಳ ಆರೋಗ್ಯವನ್ನು ಉತ್ತಮಗೊಳಿಸಬಹುದು. ಆದರೆ ಇದರೊಂದಿಗೇ ಕಣ್ಣುಗಳಿಗೆ ದಣಿವಾಗುವ ಯಾವುದೇ ಕ್ರಿಯೆಯನ್ನು ಹೆಚ್ಚಿಸಬಾರದು. ವಿಶೇಷವಾಗಿ ಕಂಪ್ಯೂಟರ್ ಮತ್ತು ಮೊಬೈಲ್ ವೀಕ್ಷಣೆಯನ್ನು ನಿಮ್ಮ ಅತ್ಯಗತ್ಯ ಕ್ರಿಯೆಗಳಿಗೆ ಮಾತ್ರ ಮೀಸಲಿಟ್ಟು ಸಾಧ್ಯವಾದಷ್ಟು ಕಣ್ಣುಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡಬೇಕು. ಆಗ ಮಾತ್ರ ಕಣ್ಣುಗಳು ಉತ್ತಮ ಆರೋಗ್ಯ ಹೊಂದಲು ಸಾಧ್ಯವಾಗುತ್ತದೆ.

ಈ ಮೂರೂ ಸಾಮಾಗ್ರಿಗಳಲ್ಲಿರುವ ಪೋಷಕಾಂಶಗಳು ವಿಶೇಷವಾಗಿ ದೃಷ್ಟಿನರವನ್ನು ಉತ್ತಮಗೊಳಿಸಿ ಇದರ ಕ್ಷಮತೆ ಹೆಚ್ಚಿಸುವ ಮೂಲಕ ಕಣ್ಣಿನ ಆರೋಗ್ಯವನ್ನು ವೃದ್ಧಿಸುತ್ತದೆ. ಅಲ್ಲದೇ ಸುಲಭವಾಗಿ ಘಾಸಿಗೊಳ್ಳದಿರುವಂತೆ ರಕ್ಷಿಸುತ್ತದೆ. 

Olive Oil

ಅಲ್ಲದೇ ಕಣ್ಣುಗಳ ಒಳಭಾಗ ಹೆಚ್ಚು ತೇವಗೊಂಡಿರಲು ನೆರವಾಗುವ ಮೂಲಕ ಕಣ್ಣುಗಳು ಒಣಗದಿರುವಂತೆ ನೋಡಿಕೊಳ್ಳುತ್ತದೆ. ಇದರಿಂದ ಕಣ್ಣುಗಳ ಉರಿಯಿಂದ ರಕ್ಷಣೆ ಪಡೆಯಬಹುದು.

ತಯಾರಿಕಾ ವಿಧಾನ:

*ಒಂದು ಕಪ್ ನಲ್ಲಿ ಈ ಮೂರೂ ಸಾಮಾಗ್ರಿಗಳನ್ನು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ.

*ಈ ಮಿಶ್ರಣವನ್ನು ವಾರದಲ್ಲಿ ಮೂರು ದಿನ ಬೆಳಗ್ಗಿನ ಉಪಾಹಾರದ ಬಳಿಕ ಟೀ ಬದಲಿಗೆ ಸೇವಿಸಿ.

*ನಿಯಮಿತವಾಗಿ ಈ ಮಿಶ್ರಣವನ್ನು ಸೇವಿಸುತ್ತಾ ಬರುವ ಮೂಲಕ ಕಣ್ಣುಗಳ ಆರೋಗ್ಯದಲ್ಲಿ ಉತ್ತಮ ಪರಿಣಾಮ ಕಂಡುಬರುತ್ತದೆ.

ಎಚ್ಚರಿಕೆ: ಈ ಮಿಶ್ರಣ ಕೇವಲ ಕುಡಿಯಲಿಕ್ಕೇ ಹೊರತು ಸರ್ವಥಾ ಕಣ್ಣುಗಳಿಗೆ ಹಚ್ಚಲಿಕ್ಕೆ ಅಲ್ಲ.

English summary

Homemade Remedy For Better Eyesight That Has Shocked Doctors!

Do you feel like your eyes get strained on a daily basis due to excess computer use? If yes, then there is an exceptional home remedy for a better eyesight that you must try. If you have a job that requires you to use a computer for long hours on a daily basis or you are someone who loves to play games on the computer and watch television on a daily basis, then your eyes are more prone to damage.
Story first published: Monday, January 2, 2017, 23:14 [IST]
Please Wait while comments are loading...
Subscribe Newsletter