Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಈ 4 ಬಗೆಯ ಜನರಿಗೆ ಎಂದಿಗೂ ಸಹಾಯ ಮಾಡಬೇಡಿ! ನಿಮ್ಮ ಒಳ್ಳೆಯತನವೇ ಮುಳುವಾಗುತ್ತೆ
ಈ 4 ಬಗೆಯ ಜನರಿಗೆ ಎಂದಿಗೂ ಸಹಾಯ ಮಾಡಬೇಡಿ, ನೆರವಾಗದಿರಿ! ನಿಮ್ಮ ಒಳ್ಳೆಯತನವೇ ಮುಳುವಾಗಬಹುದು. ಹೌದು, ಚಾಣಕ್ಯ ನೀತಿಯ (Chanakya Niti) ಪ್ರಕಾರ, ಎಲ್ಲರಿಗೂ ಸಹಾಯ ಮಾಡುವುದು ಬುದ್ಧಿವಂತಿಕೆಯಲ್ಲ. ಕೆಲವರು ನಿಮ್ಮ ಸದ್ಗುಣಗಳನ್ನು ದುರುಪಯೋಗಪಡಿಸಿಕೊಂಡು, ನಿಮ್ಮನ್ನೇ ಸಂಕಷ್ಟಕ್ಕೆ ಸಿಲುಕಿಸಬಹುದು.
ಜೀವನದಲ್ಲಿ ಗೌರವ, ಶಾಂತಿ ಮತ್ತು ಸಮತೋಲನವನ್ನು ಕಾಪಾಡಿಕೊಳ್ಳಲು ಯಾವ ಜನರೊಂದಿಗೆ ಅಂತರ ಕಾಯ್ದುಕೊಳ್ಳಬೇಕು? (People to avoid according to Chanakya) ಮತ್ತು ಅವರಿಗೆ ಸಹಾಯ ಮಾಡುವುದನ್ನು ಏಕೆ ತಪ್ಪಿಸಬೇಕು? ಎಂದು ಆಚಾರ್ಯ ಚಾಣಕ್ಯರು (Chanakya) ತಿಳಿಸಿದ್ದಾರೆ. ಈ ರೀತಿಯ ಜನರಿಗೆ ಸಹಾಯ ಮಾಡುವ ಮೂಲಕ ನೀವು ತೊಂದರೆಗಳನ್ನು ಆಹ್ವಾನಿಸಿಕೊಳ್ಳಬಹುದು.

ಆಚಾರ್ಯ ಚಾಣಕ್ಯರು ಇತಿಹಾಸ ಕಂಡ ಅತಿ ಜ್ಞಾನಿ ಮತ್ತು ಬುದ್ಧಿವಂತ ವ್ಯಕ್ತಿಗಳಲ್ಲಿ ಒಬ್ಬರು. ಮಾನವಕುಲಕ್ಕೆ ಸರಿಯಾದ ಮಾರ್ಗವನ್ನು ತೋರಿಸಲು ಅವರು ನೀಡಿದ ತತ್ವಗಳು ಇಂದಿಗೂ ಪ್ರಸ್ತುತವಾಗಿವೆ. ತಮ್ಮ ನೀತಿಗಳಲ್ಲಿ, ಚಾಣಕ್ಯರು ಜೀವನದಲ್ಲಿ ಎಂದಿಗೂ ಸಹಾಯ ಮಾಡಬಾರದ ಕೆಲವು ವ್ಯಕ್ತಿಗಳ (Never help these 4 types of people) ಬಗ್ಗೆ ಉಲ್ಲೇಖಿಸಿದ್ದಾರೆ.
ಅವರು "ದುಷ್ಟಸ್ಯ ದಯಾ ನ ಕರ್ತವ್ಯಾ" ಎಂದು ಹೇಳುತ್ತಾರೆ, ಇದರರ್ಥ, 'ದುಷ್ಟ ಅಥವಾ ಕೆಟ್ಟ ಸ್ವಭಾವದ ವ್ಯಕ್ತಿಗಳಿಗೆ ದಯೆ ತೋರಬಾರದು.' ಅಂತಹವರಿಗೆ ಸಹಾಯ ಮಾಡಿದರೆ ಅವರು ಸುಧಾರಿಸುವುದಿಲ್ಲ, ಬದಲಿಗೆ ನಿಮ್ಮ ಒಳ್ಳೆಯತನವನ್ನು ದುರುಪಯೋಗಪಡಿಸಿಕೊಳ್ಳಲು ಶುರು ಮಾಡುತ್ತಾರೆ. ಚಾಣಕ್ಯ ನೀತಿಯ ಆಧಾರದ ಮೇಲೆ, ಅಪ್ಪಿ ತಪ್ಪಿಯೂ ಸಹಾಯ ಮಾಡಬಾರದ ನಾಲ್ಕು ಬಗೆಯ ವ್ಯಕ್ತಿಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗಿದೆ.
ಕೃತಜ್ಞತೆ ಇಲ್ಲದವರು
ಕೆಲವರು ಎಷ್ಟೇ ಸಹಾಯ ಪಡೆದರೂ ಅದರ ಮಹತ್ವ ಅರಿಯುವುದಿಲ್ಲ; ಚಾಣಕ್ಯರು ಇವರನ್ನು 'ಗುಣಹೀನರು' ಎಂದು ಬಣ್ಣಿಸಿದ್ದಾರೆ. ಇಂತಹವರು ಮಾಡಿದ ಉಪಕಾರವನ್ನು ಎಂದಿಗೂ ಗುರುತಿಸುವುದಿಲ್ಲ; ಬದಲಾಗಿ, ನಿಮ್ಮ ಸಹಾಯವನ್ನು ತಮ್ಮ ಹಕ್ಕು ಎಂದು ಭಾವಿಸುತ್ತಾರೆ. ಕೃತಜ್ಞತೆ ಇಲ್ಲದವರಿಗೆ ನೆರವಾದರೆ ಸಂಬಂಧದಲ್ಲಿ ಸಮತೋಲನ ತಪ್ಪಿ, ಅಂತಿಮವಾಗಿ ನಿರಾಸೆ ಎದುರಾಗುತ್ತದೆ.
ಪದೇ ಪದೆ ತಪ್ಪು ಮಾಡುವವರು
ತಪ್ಪು ಮಾಡುವುದು ಸಹಜ. ಆದರೆ, ಅದರಿಂದ ಪಾಠ ಕಲಿಯದೆ ಪದೇ ಪದೇ ಅದೇ ತಪ್ಪನ್ನು ಪುನರಾವರ್ತಿಸುವವರಿಗೆ ನೆರವಾಗುವುದು ವ್ಯರ್ಥ ಎನ್ನುತ್ತಾರೆ ಚಾಣಕ್ಯರು. ಇಂತಹವರು ಸ್ವತಃ ಸುಧಾರಿಸಿಕೊಳ್ಳುವ ಬದಲು, ಸದಾ ಇತರರ ಸಹಾಯವನ್ನೇ ಅವಲಂಬಿಸಿರುತ್ತಾರೆ. ಇವರ ಹಿಂದೆ ಸಮಯ, ಶಕ್ತಿ, ಹಣ ವ್ಯಯಿಸುವುದು ನಿಮ್ಮ ಮಾನಸಿಕ ಶಾಂತಿಯನ್ನು ಹಾಳುಮಾಡುತ್ತದೆ.
ಅತಿಯಾದ ಸ್ವಾರ್ಥಿಗಳು
ಸ್ವಾರ್ಥಿಗಳಿಗೆ ಸಂಬಂಧಗಳಲ್ಲಿ ಭಾವನೆಗಳಿಗಿಂತ 'ಅಗತ್ಯ'ವೇ ಪ್ರಮುಖ. ಚಾಣಕ್ಯರ ಪ್ರಕಾರ, ಇವರು ಕೆಲಸ ಆಗುವವರೆಗೆ ಮಾತ್ರ ಹತ್ತಿರ ಇರುತ್ತಾರೆ. ಉದ್ದೇಶ ಈಡೇರಿದ ತಕ್ಷಣ ದೂರ ಸರಿಯುತ್ತಾರೆ. ನಿಮ್ಮ ಸಹಾಯ ಕೇವಲ 'ಅವಕಾಶ', ಪ್ರೀತಿಯಿಂದಲ್ಲ. ಇಂತಹವರಿಗೆ ನೆರವಾದರೆ ನಿಮ್ಮ ವಿಶ್ವಾಸಕ್ಕೆ ದ್ರೋಹವಾಗುವ ಸಾಧ್ಯತೆ ಹೆಚ್ಚು.
ನಕಾರಾತ್ಮಕ ಚಿಂತನೆಯುಳ್ಳವರು
ನಕಾರಾತ್ಮಕ ಮನಸ್ಥಿತಿಯ ವ್ಯಕ್ತಿಗಳು ಎಂತಹ ಉತ್ತಮ ಪರಿಸ್ಥಿತಿಯಲ್ಲೂ ಕೊರತೆಗಳನ್ನೇ ಹುಡುಕುತ್ತಾರೆ. ನೀವು ಎಷ್ಟೇ ಸಹಾಯ ಮಾಡಿದರೂ ಅವರು ಎಂದಿಗೂ ಸಂತೃಪ್ತರಾಗುವುದಿಲ್ಲ. ಇವರೊಂದಿಗೆ ಹೆಚ್ಚು ಸಮಯ ಕಳೆಯುವುದು ಅಥವಾ ನೆರವು ನೀಡಲು ಹೋಗುವುದು ಆತ್ಮವಿಶ್ವಾಸವನ್ನು ಕುಗ್ಗಿಸುತ್ತದೆ. ಅವರ ನಕಾರಾತ್ಮಕ ಶಕ್ತಿಯು ನಿಮ್ಮ ಮೇಲೆ ಒತ್ತಡವನ್ನು ಹೆಚ್ಚಿಸಿ, ಮಾನಸಿಕ ಶಾಂತಿಯನ್ನು ಕಸಿದುಕೊಳ್ಳಬಹುದು.
ಒಟ್ಟಾರೆ, ಆಚಾರ್ಯ ಚಾಣಕ್ಯರ ಈ ಎಚ್ಚರಿಕೆಗಳು ಜೀವನದಲ್ಲಿ ಯಾರೊಂದಿಗೆ ಸಂಬಂಧ ಇಟ್ಟುಕೊಳ್ಳಬೇಕು ಮತ್ತು ಯಾರಿಂದ ಅಂತರ ಕಾಯ್ದುಕೊಳ್ಳಬೇಕು ಎಂಬುದರ ಕುರಿತು ಪಾಠಗಳನ್ನು ಕಲಿಸುತ್ತವೆ. ಅವರ ನೀತಿ ಸೂತ್ರಗಳು ನಮ್ಮನ್ನು ಅನಗತ್ಯ ಸಂಕಷ್ಟಗಳಿಂದ ದೂರವಿಟ್ಟು, ಸುಖಮಯ ಜೀವನ ನಡೆಸಲು ನೆರವಾಗುತ್ತವೆ. ಈ ಜ್ಞಾನಯುಕ್ತ ಸಲಹೆಗಳನ್ನು ಪಾಲಿಸುವುದರಿಂದ ಬಾಂಧವ್ಯಗಳು ಸದೃಢವಾಗಿ, ಮನಸ್ಸಿನ ನೆಮ್ಮದಿಯೂ ವೃದ್ಧಿಯಾಗುತ್ತದೆ.



Click it and Unblock the Notifications