Latest Updates
-
ಟೆಲಿಗ್ರಾಂ ಬಳಕೆದಾರರೇ ಗಮನಿಸಿ: ಸೇವೆ ಆರಂಭವಾದರೂ ಈ ಬದಲಾವಣೆ ಮರೆಯದಿರಿ! -
ಬಿಸಿಗಾಳಿಯ ಎಚ್ಚರಿಕೆ: ಅಡುಗೆ ಮಾಡದೆಯೇ ದೇಹಕ್ಕೆ ತಂಪು ನೀಡುವ ಪ್ರೋಟೀನ್ ಆಹಾರಗಳಿವು! -
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ
ಮಾರ್ಚ್ 1ರಂದು ಶುಕ್ರನಿಂದ ತ್ರಿಕೋನ ರಾಜಯೋಗ: ಮೂರು ರಾಶಿಯವರ ಸಂಪತ್ತು ದ್ವಿಗುಣ
ವೈದಿಕ ಜ್ಯೋತಿಷ್ಯದ ಪ್ರಕಾರ ಶುಕ್ರನನ್ನು ರಾಕ್ಷಸರ ಗುರು ಮತ್ತು ಭೌತಿಕ ಸುಖ, ಸೌಕರ್ಯಗಳು, ಪ್ರೀತಿ, ಸೌಂದರ್ಯ, ಕಲೆ, ಸಂಪತ್ತು, ಮದುವೆ ಮತ್ತು ಐಷಾರಾಮಿಗಳ ಅಂಶವೆಂದು ಪರಿಗಣಿಸಲಾಗುತ್ತದೆ. ಶುಕ್ರನ ಸ್ಥಾನದಲ್ಲಿನ ಬದಲಾವಣೆಯು 12 ರಾಶಿ ಜನರ ಮೇಲೆ ಒಂದಲ್ಲಾ ಒಂದು ರೀತಿಯಲ್ಲಿ ಪರಿಣಾಮ ಬೀರುವುದು ನೋಡಬಹುದು. ಮಾರ್ಚ್ 1ರಂದು ಶುಕ್ರನು ತನ್ನ ರಾಶಿಯನ್ನು ಬದಲಾಯಿಸುತ್ತಾನೆ.
ಮಾರ್ಚ್ 1ರಂದು ಶುಕ್ರನು ತನ್ನ ಉತ್ತುಂಗದ ರಾಶಿಯಾಗಿರುವ ಮೀನ ರಾಶಿಯನ್ನು ಪ್ರವೇಶಿಸಲಿದ್ದಾನೆ. ಮಾರ್ಚ್ 1ರಂದು ಮಧ್ಯಾಹ್ನ 12:56ಕ್ಕೆ ಮೀನ ರಾಶಿ ಪ್ರವೇಶಿಸುತ್ತಾನೆ. ಆದ್ರೆ ಮೀನ ರಾಶಿಯಲ್ಲಿ ಶನಿಯೊಂದಿಗೆ ಶುಕ್ರನು ಸಂಯೋಗವಾಗುವುದು ಹಲವು ರೀತಿಯಲ್ಲಿ ಅಪರೂಪದ ಘಟನೆಗಳಿಗೆ ಕಾರಣವಾಗುತ್ತದೆ. ಎರಡು ಗ್ರಹಗಳ ಸಂಯೋಗವು ಈ ಹೋಳಿ ಹುಣ್ಣಿಮೆಯ ಸಮಯದಲ್ಲಿ ಧನಾತ್ಮಕ ಬದಲಾವಣೆಗಳ ತರಲಿದೆ.

ಮೇಷ ರಾಶಿ
ಮೇಷ ರಾಶಿಯ ಜನರಿಗೆ ಈ ತ್ರಿಕೋನ ರಾಜಯೋಗವು ಗಮನಾರ್ಹ ಪ್ರಯೋಜನಗಳ ತರಲಿದೆ. ಸಂಪತ್ತಿನ ಅಧಿಪತಿಯು ಖರ್ಚಿನ ಮನೆಯಲ್ಲಿ ಉನ್ನತಿ ಹೊಂದುತ್ತಾನೆ ಮತ್ತು ಕೆಲಸಗಳು ಲಾಭದ ಅಧಿಪತಿಯು 12ನೇ ಮನೆಯಲ್ಲಿ ಸಾಗುತ್ತಾನೆ. ಈ ರಾಶಿ ಜನರ ಆರ್ಥಿಕ ಪರಿಸ್ಥಿತಿ ಸುಧಾರಿಸಬಹುದು. ಸಂತೋಷವು ಅವರ ಜೀವನದ ಬಾಗಿಲು ತಟ್ಟಬಹುದು. ಅವರು ಕುಟುಂಬದೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯಬಹುದು. ಅವಿವಾಹಿತರು ಉತ್ತಮ ವಿವಾಹ ಪ್ರಸ್ತಾಪವನ್ನು ಪಡೆಯಬಹುದು. ಜೀವನದ ದೀರ್ಘಕಾಲದ ಸಮಸ್ಯೆಗಳು ಕೊನೆಗೊಳ್ಳಬಹುದು. ಆರ್ಥಿಕ ಲಾಭದ ಹೆಚ್ಚಿನ ಸಾಧ್ಯತೆಗಳಿವೆ. ನಿಮ್ಮ ವ್ಯಾಪಾರ ಸಂಬಂಧಿತ ವಿಚಾರವಾಗಿ ಇದ್ದಂತಹ ಸಮಸ್ಯೆಗಳನು ಬಗೆಹರಿಯಲಿದೆ.
ವೃಷಭ ರಾಶಿ
ವೃಷಭ ರಾಶಿ ಜನರಿಗೆ ಕೇಂದ್ರ ತ್ರಿಕೋನ ಯೋಗವು ಬಹಳ ಪ್ರಯೋಜನಕಾರಿಯಾಗಬಹುದು. ಈ ರಾಶಿ ಅಧಿಪತಿ ಶುಕ್ರನು ಉತ್ತುಂಗದಲ್ಲಿದ್ದು, ಲಾಭದ ಮನೆಯಲ್ಲಿ ಚಲಿಸುತ್ತಾನೆ. ಶನಿಯೊಂದಿಗೆ ಕೇಂದ್ರ ತ್ರಿಕೋನ ರಾಜಯೋಗವನ್ನು ರೂಪಿಸುತ್ತಾನೆ. ನಿಮ್ಮ ದೀರ್ಘಕಾಲದ ಅನಾರೋಗ್ಯ ಸಮಸ್ಯೆಗಳು ಹಾಗೆ ಆರ್ಥಿಕ ಸಮಸ್ಯೆಗಳಿಗೆ ಕಡಿವಾಣ ಬೀಳಲಿದೆ. ಖರೀದಿ ಮಾರಾಟದಂತಹ ವಿಚಾರದಲ್ಲಿ ತೊಡಗಿರುವ ಮಂದಿಗೆ ಲಾಭದಾಯಕ ಸಮಯವಿದು. ವ್ಯವಹಾರ ಸಂಬಂಧವಾಗಿ ನಿಮ್ಮ ದೊಡ್ಡ ಒಪ್ಪಂದಗಳು ಸಕಾರಾತ್ಮಕವಾಗಿ ಬಗೆಹರಿಯಲಿದೆ. ಉದ್ಯೋಗದಲ್ಲಿರುವವರಿಗೆ ಸಹ ಉತ್ತಮವಾಗಿರುತ್ತದೆ. ಬಡ್ತಿಯ ಜೊತೆಗೆ ಉತ್ತಮ ಹೆಚ್ಚಳವೂ ಇರಬಹುದು.
ಧನು ರಾಶಿ
ಧನು ರಾಶಿಯ ಜನರಿಗೆ ಈ ಕೇಂದ್ರ ತ್ರಿಕೋನ ರಾಜಯೋಗವು ಅನೇಕ ಕ್ಷೇತ್ರಗಳಲ್ಲಿ ಪ್ರಯೋಜನಗಳ ಸಾಮರ್ಥ್ಯವನ್ನು ಸೃಷ್ಟಿಸುತ್ತಿದೆ. ಬಹುಕಾಲದ ಆಸೆಗಳು ಈಡೇರಬಹುದು. ಭೌತಿಕ ಸೌಕರ್ಯಗಳು ಸಹ ಹೆಚ್ಚಾಗುವ ಸಂಭವವಿದೆ. ಸಾಮಾಜಿಕ ಪ್ರತಿಷ್ಠೆ ವೇಗವಾಗಿ ಹೆಚ್ಚಾಗಬಹುದು. ಚಿನ್ನ ಬೆಳ್ಳಿ ಖರೀದಿಯಂತಹ ವಿಚಾರದಲ್ಲಿ ನಿಮಗೆ ಲಾಭವಾಗಲಿದೆ. ವಾಹನ, ಆಸ್ತಿ ಸಂಬಂಧಿತ ವಿಚಾರಗಳಲ್ಲಿ ನೀವು ಬಯಸಿದ ಫಲಿತಾಂಶ ಪಡೆಯಬಹುದು. ಸ್ನೇಹಿತರೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯಬಹುದು. ಕುಟುಂಬ ಜೀವನವು ಉತ್ತಮವಾಗಿರುತ್ತದೆ. ದಾಂಪತ್ಯದಲ್ಲಿ ಸಂತಸಕ್ಕೆ ಕಾರಣವಾಗುವ ವಿಚಾರಗಳು ನಡೆಯಲಿದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ಅದು ವಿಶ್ವಾಸಾರ್ಹವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications