Latest Updates
-
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ! -
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
Headline for Deeplink -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್!
ಕಹಿ ಇರಲ್ಲ, ರುಚಿ ಮಾತ್ರ ಸೂಪರ್! ಈ ರೀತಿ ಮಾಡಿ ಹಾಗಲಕಾಯಿ ಭರ್ತಾ.. ಕಹಿ ಕಡಿಮೆ ಮಾಡುವ ಸೀಕ್ರೆಟ್ ಇಲ್ಲಿದೆ
ಕಹಿ ಇರಲ್ಲ, ರುಚಿ ಮಾತ್ರ ಅದ್ಭುತ! ಹಾಗಲಕಾಯಿ ಎಂದರೆ ಇಷ್ಟವಿಲ್ಲದವರೂ ಫಿದಾ ಆಗ್ತಾರೆ.. ಮನೆಯಲ್ಲೇ ಹಾಗಲಕಾಯಿ ಭರ್ತಾ ರೆಸಿಪಿ (Karela Bharta Recipe) ಮಾಡಿ ಸವಿಯಿರಿ. ಕಹಿ ಕಡಿಮೆ ಮಾಡುವ ಸೀಕ್ರೆಟ್ ಇಲ್ಲಿದೆ. ಹೌದು, ಹಾಗಲಕಾಯಿಯ ಕಹಿ ಗುಣದಿಂದ ಕೆಲವರಿಗೆ ಇದು ಅಷ್ಟಾಗಿ ಇಷ್ಟವಾಗದಿರಬಹುದು. ಆದರೆ, ಇದು ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿ. ಸರಿಯಾದ ವಿಧಾನದಲ್ಲಿ ತಯಾರಿಸಿದರೆ, ಇದರ ರುಚಿಯಲ್ಲೂ ಹಿಂದೆ ಬೀಳುವುದಿಲ್ಲ.
ಅಂತಹ ಒಂದು ಜನಪ್ರಿಯ ಹಾಗೂ ಪೌಷ್ಟಿಕ ಪಾಕವಿಧಾನವೇ ಹಾಗಲಕಾಯಿ ಭರ್ತಾ. ಸುಟ್ಟ ಅಥವಾ ಹುರಿದ ಹಾಗಲಕಾಯಿಯನ್ನು ಮಸಾಲೆಯುಕ್ತ ಈರುಳ್ಳಿ-ಟೊಮೆಟೊ ಮಿಶ್ರಣದೊಂದಿಗೆ ಮಾಡುವ ಈ ಖಾದ್ಯ, ರೊಟ್ಟಿ ಅಥವಾ ಪರಾಟದೊಂದಿಗೆ ಸವಿಯಲು ಹೇಳಿ ಮಾಡಿಸಿದಂತಿದೆ.
ಹಾಗಲಕಾಯಿಯ ಕಹಿಯನ್ನು ಹೋಗಲಾಡಿಸಿ (How to reduce bitterness in Karela) ರುಚಿಕರ ಭರ್ತಾವನ್ನು ಮನೆಯಲ್ಲೇ ತಯಾರಿಸುವುದು ಸುಲಭ. ಚಪಾತಿ, ರೊಟ್ಟಿ ಅಥವಾ ಅನ್ನದಂತಹ ಯಾವುದೇ ಮುಖ್ಯ ಆಹಾರದ ಜೊತೆಗೂ ಇದು ಹೊಂದುತ್ತದೆ. ಈ ವಿಶಿಷ್ಟ ಹಾಗಲಕಾಯಿ ಭರ್ತಾ ರೆಸಿಪಿಗೆ ಬೇಕಾಗುವ ಸಾಮಗ್ರಿಗಳು ಮತ್ತು ತಯಾರಿಸುವ ಸರಳ ವಿಧಾನ (Bitter Gourd Bharta Recipe) ಇಲ್ಲಿ ವಿವರಿಸಲಾಗಿದೆ.
ಆರೋಗ್ಯಕ್ಕೆ ಇಷ್ಟೆಲ್ಲಾ ಲಾಭ?
ಆರೋಗ್ಯದ ದೃಷ್ಟಿಯಿಂದಲೂ ಹಾಗಲಕಾಯಿ ಅತ್ಯುತ್ತಮ. ಇದು ವಿಟಮಿನ್ ಸಿ, ಫೈಬರ್ ಮತ್ತು ಆಂಟಿಆಕ್ಸಿಡೆಂಟ್ಗಳಿಂದ ಸಮೃದ್ಧವಾಗಿದೆ. ಇದರ ಸೇವನೆಯು ರಕ್ತದ ಸಕ್ಕರೆ ಮಟ್ಟ ನಿಯಂತ್ರಿಸಲು (ಮಧುಮೇಹ ನಿಯಂತ್ರಣ) ಸಹಾಯ ಮಾಡುತ್ತದೆ ಮತ್ತು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಕಹಿಯನ್ನು ಕಡಿಮೆ ಮಾಡಿ ರುಚಿ ಹೆಚ್ಚಿಸುವ ಈ ಭರ್ತಾ, ಆರೋಗ್ಯ ಮತ್ತು ರುಚಿ ಎರಡನ್ನೂ ಬಯಸುವವರಿಗೆ ಸೂಕ್ತವಾಗಿದೆ.
ಹಾಗಲಕಾಯಿ ಭರ್ತಾಗೆ ಬೇಕಾಗುವ ಸಾಮಗ್ರಿಗಳು
• ಹಾಗಲಕಾಯಿ - 4-5
• ಈರುಳ್ಳಿ - 2 ಸಣ್ಣಗೆ ಹೆಚ್ಚಿದ
• ಟೊಮೆಟೊ - 2
• ಹಸಿ ಮೆಣಸಿನಕಾಯಿ - 2
• ಶುಂಠಿ-ಬೆಳ್ಳುಳ್ಳಿ ಪೇಸ್ಟ್ - 1 ಚಮಚ
• ಅರಿಶಿನ - ಅರ್ಧ ಚಮಚ
• ಕೆಂಪು ಮೆಣಸಿನ ಪುಡಿ - 1 ಚಮಚ
• ಧನಿಯಾ ಪುಡಿ - 1 ಚಮಚ
• ಗರಂ ಮಸಾಲ - ಅರ್ಧ ಚಮಚ
• ಉಪ್ಪು - ರುಚಿಗೆ ತಕ್ಕಷ್ಟು
• ಎಣ್ಣೆ - 3-4 ಚಮಚ
• ಕೊತ್ತಂಬರಿ ಸೊಪ್ಪು - ಅಲಂಕಾರಕ್ಕೆ
ಹಾಗಲಕಾಯಿ ಭರ್ತಾ ತಯಾರಿಸುವ ವಿಧಾನ
- ಮೊದಲಿಗೆ, ಹಾಗಲಕಾಯಿಗಳನ್ನು ಚೆನ್ನಾಗಿ ತೊಳೆದು, ಮೇಲಿನ ಸಿಪ್ಪೆಯನ್ನು ಸ್ವಲ್ಪ ತೆಗೆದು ಸಣ್ಣ ತುಂಡುಗಳಾಗಿ ಕತ್ತರಿಸಿಕೊಳ್ಳಿ. ಇವುಗಳಿಗೆ ಸ್ವಲ್ಪ ಉಪ್ಪು ಸೇರಿಸಿ ಸುಮಾರು 15 - 20ನಿಮಿಷಗಳ ಕಾಲ ಹಾಗೆಯೇ ಇಡಿ. ಉಪ್ಪು ಹಾಗಲಕಾಯಿಯಲ್ಲಿನ ಕಹಿ ನೀರನ್ನು ಹೊರಹಾಕಲು ಸಹಕಾರಿ. ನಂತರ, ಕೈಯಿಂದ ಲಘುವಾಗಿ ಹಿಂಡಿ ಆ ನೀರನ್ನು ತೆಗೆದುಹಾಕಿ.
- ನಂತರ ಒಂದು ಕಡಾಯಿಯಲ್ಲಿ 2 ಚಮಚ ಎಣ್ಣೆಯನ್ನು ಬಿಸಿ ಮಾಡಿ. ಕತ್ತರಿಸಿ ಸಿದ್ಧಪಡಿಸಿದ ಹಾಗಲಕಾಯಿಯನ್ನು ಹಾಕಿ, ಮಧ್ಯಮ ಉರಿಯಲ್ಲಿ ಹೊಂಬಣ್ಣಕ್ಕೆ ತಿರುಗಿ ಮೃದುವಾಗುವವರೆಗೆ ಚೆನ್ನಾಗಿ ಹುರಿದು ಒಂದು ಪಕ್ಕಕ್ಕೆ ಎತ್ತಿಟ್ಟುಕೊಳ್ಳಿ.
- ಅದೇ ಕಡಾಯಿಗೆ ಉಳಿದ ಎಣ್ಣೆಯನ್ನು ಹಾಕಿ ಬಿಸಿ ಮಾಡಿ. ಅದಕ್ಕೆ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಮತ್ತು ಹಸಿಮೆಣಸಿನಕಾಯಿ ಸೇರಿಸಿ ಲಘುವಾಗಿ ಹುರಿಯಿರಿ.
- ನಂತರ ಈರುಳ್ಳಿ ಸೇರಿಸಿ ಹೊಂಬಣ್ಣ ಬರುವವರೆಗೆ ಬೇಯಿಸಿ. ಈಗ ಟೊಮೆಟೊ, ಅರಿಶಿನ, ಕೆಂಪು ಮೆಣಸಿನ ಪುಡಿ ಮತ್ತು ಧನಿಯಾ ಪುಡಿ ಸೇರಿಸಿ, ಮಸಾಲೆಯಿಂದ ಎಣ್ಣೆ ಬಿಡಲು ಪ್ರಾರಂಭವಾಗುವವರೆಗೆ ಚೆನ್ನಾಗಿ ಬೇಯಿಸಿ.
- ಈಗಾಗಲೇ ಹುರಿದಿಟ್ಟುಕೊಂಡ ಹಾಗಲಕಾಯಿಗಳನ್ನು ಈ ಮಸಾಲೆಗೆ ಸೇರಿಸಿ ಚೆನ್ನಾಗಿ ಬೆರೆಸಿ. ಭರ್ತಾದ ಹದಕ್ಕಾಗಿ, ಸೌಟಿನ ಸಹಾಯದಿಂದ ಹಾಗಲಕಾಯಿಗಳನ್ನು ಸ್ವಲ್ಪ ಮ್ಯಾಶ್ (ಕುಟ್ಟಿ) ಮಾಡಿ. ಕೊನೆಯಲ್ಲಿ ಗರಂ ಮಸಾಲಾ ಸೇರಿಸಿ 2 - 3 ನಿಮಿಷಗಳ ಕಾಲ ಮತ್ತೆ ಹುರಿಯಿರಿ.
- ಬಿಸಿಬಿಸಿಯಾದ ಹಾಗಲಕಾಯಿ ಭರ್ತಾದ ಮೇಲೆ ಕೊತ್ತಂಬರಿ ಸೊಪ್ಪನ್ನು ಉದುರಿಸಿ, ಅನ್ನ, ಚಪಾತಿ ಅಥವಾ ಜೋಳದ ರೊಟ್ಟಿಯೊಂದಿಗೆ ಬಡಿಸಿ. ಈ ಪೌಷ್ಟಿಕ ಭರ್ತಾ ನಿಮ್ಮ ಊಟಕ್ಕೆ ಅದ್ಭುತ ರುಚಿ ನೀಡುತ್ತದೆ.



Click it and Unblock the Notifications
