Latest Updates
-
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು! -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆಯ ಮಳೆನೀರು ಕೊಯ್ಲು ವ್ಯವಸ್ಥೆ ಹಾಳಾಗದಂತೆ ತಡೆಯುವುದು ಹೇಗೆ? -
ಮಳೆಗಾಲದಲ್ಲಿ ಮಕ್ಕಳ ಲಂಚ್ಬಾಕ್ಸ್ ಸುರಕ್ಷತೆ: ಆರೋಗ್ಯಕರ ಮತ್ತು ಹೈ-ಪ್ರೋಟೀನ್ ಆಹಾರದ ಟಿಪ್ಸ್ -
ಮುಂಬೈನಲ್ಲಿ ಭಾರೀ ಮಳೆ: ಇಂದು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ, ಪೋಷಕರು ಗಮನಿಸಿ! -
ಕರಾವಳಿ ರೆಡ್ ಅಲರ್ಟ್: ಮನೆಯಲ್ಲೇ ಸುರಕ್ಷಿತವಾಗಿ ಫಿಟ್ ಆಗಿರಲು ಈ 12 ನಿಮಿಷಗಳ ವರ್ಕೌಟ್ ಟ್ರೈ ಮಾಡಿ!
ವಿಶ್ವದ ದುಬಾರಿ ಬಣ್ಣ ಇದು: 1 ಗ್ರಾಮ್‌ಗೆ ಬರೋಬ್ಬರಿ 80 ಸಾವಿರ ರೂ.!
ಹೋಳಿಯ ಸಂದರ್ಭದಲ್ಲಿ ಎಲ್ಲಿ ನೋಡಿದ್ರು ಹಬ್ಬದ ವಾತಾವರಣ ನೋಡಬಹುದು. ಬಣ್ಣಗಳಿಂದ ತುಂಬಿರುವ ಈ ಹಬ್ಬದವನ್ನು ಭಾರತದಲ್ಲಿ ಮಾತ್ರವಲ್ಲದೆ ವಿಶ್ವದ ಹಲವು ಕಡೆಗಳಲ್ಲಿ ಆಚರಿಸಲಾಗುತ್ತದೆ. ಈ ದಿನದಂದು ಬಣ್ಣವನ್ನು ಒಬ್ಬರ ಮೇಲೆ ಮತ್ತೊಬ್ಬರು ಎರಚುವುದು, ಬಣ್ಣದ ಓಕುಳಿ ಸಾಮಾನ್ಯವಾಗಿ ನೋಡಬಹುದು. ಹಾಗೆ ಹೋಳಿಯಲ್ಲಿ ಬಳಸುವ ಬಣ್ಣದ ಕುರಿತಾದ ವಿಚಾರವಾಗಿ ಹಲವು ರೀತಿಯ ಚರ್ಚೆಗಳನ್ನು ಸಹ ನಾವು ನೋಡಬಹುದು.
ಹೋಳಿಗೆ ನೈಸರ್ಗಿಕ ಬಣ್ಣ ಬಳಸುವಂತೆ ಹೇಳಲಾಗುತ್ತದೆ. ರಾಸಾಯನಿಕದಿಂದ ಮಾಡಿರುವ ಬಣ್ಣವು ಹಲವು ರೀತಿಯ ಸಮಸ್ಯೆಗಳ ತರಬಹುದು. ಅದ್ರಲ್ಲೂ ಚರ್ಮಕ್ಕೆ ಇದು ದೊಡ್ಡ ಹಾನಿ ಮಾಡಬಹುದು. ಅಲ್ಲದೆ ಹೋಳಿಗೆ ನಾವು ಬಳಸುವ ಬಣ್ಣದಲ್ಲಿನ ಮಿಶ್ರಣದಿಂದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟುಮಾಡುವುದು ಸಹ ನೋಡಿದ್ದೇವೆ.

ಹೀಗಾಗಿ ಈ ಹಬ್ಬದ ಸಮಯದಲ್ಲಿ ಸುರಕ್ಷತೆಯ ದೃಷ್ಟಿಯಿಂದ ನೈಸರ್ಗಿಕ ಬಣ್ಣವನ್ನು ಬಳಸಬೇಕು ಎಂದು ಶಿಫಾರಸ್ಸು ಮಾಡಲಾಗುತ್ತದೆ. ಆದ್ರೆ ಈ ನೈಸರ್ಗಿಕ ಬಣ್ಣಗಳು ಸಾಮಾನ್ಯ ಕೆಮಿಕಲ್ ಬಣ್ಣಕ್ಕೆ ಹೋಲಿಸಿದರೆ ತುಸು ದುಬಾರಿಯಾಗಿರಲಿದೆ ಹೀಗಾಗಿ ಹಲವರು ಕಳಪೆ ಹಾಗೂ ಕಡಿಮೆ ಬೆಲೆಯ ಬಣ್ಣವನ್ನು ಬಳಸುತ್ತಾರೆ. ಆದ್ರೆ ದುಬಾರಿ ಬಣ್ಣಗಳ ಸಾಲಿನಲ್ಲಿ ಈ ನೀಲಿ ಬಣ್ಣ ಮೊದಲ ಸ್ಥಾನದಲ್ಲಿದೆ.
ಹೌದು ಈ ನೀಲಿ ಬಣ್ಣದ 1 ಗ್ರಾಮ್‌ಗೆ ಬರೋಬ್ಬರಿ 80 ಸಾವಿರ ರೂಪಾಯಿ ಆಗಿರಲಿದೆ, ಅಥವಾ ಅದಕ್ಕಿಂತ ಹೆಚ್ಚು ಹಣ ನೀಡಬೇಕಿದೆ. ಹೌದು ಲ್ಯಾಪಿಸ್ ಲಾಜುಲಿಯಿಂದ ತಯಾರಿಸಿದ ಅಲ್ಟ್ರಾಮರೀನ್ ನೀಲಿ ಬಣ್ಣವು ವಿಶ್ವದ ದುಬಾರಿ ಬಣ್ಣಗಳಲ್ಲಿ ಒಂದಾಗಿದೆ. ಇದನ್ನು ಪವಿತ್ರ ಕಲೆಗಳಲ್ಲಿ, ರಾಜ ಮನೆತನ, ಶ್ರೀಮಂತ ವರ್ಗ ಮಾತ್ರವೇ ಬಳಸುವಂತಾಗಿದೆ.
ಈ ನೀಲಿ ಬಣ್ಣವು ನೈಸರ್ಗಿಕವಾಗಿ ಸಿಗುವ ಲ್ಯಾಪಿಸ್ ಲಾಜುಲಿಯಿಂದ ಮಾಡಲಾಗುತ್ತದೆ. ಲ್ಯಾಪಿಸ್ ಲಾಜುಲಿ ಎಂದರೆ ನೀಲಿ ಬಣ್ಣದ ಕಲ್ಲಾಗಿದೆ. ಸಾಮಾನ್ಯವಾಗಿ ಭಾರತದಲ್ಲಿ ಆಭರಣ ತಯಾರಿಕೆಯಲ್ಲಿ ಬಳಸುವ ಪಚ್ಚೆ, ಹಳದಿ, ನೀಲಿ ಬಣ್ಣದ ಕಲ್ಲುಗಳಂತೆಯೇ ಈ ಕಲ್ಲು ಸಹ ನೈಸರ್ಗಿಕವಾಗಿ ಸಿಗಲಿದೆ. ಇದರ ಬಣ್ಣಕ್ಕೆ ದುಬಾರಿ ಬೆಲೆ ಇದೆ.
ಈ ಬಣ್ಣವನ್ನು ಶುದ್ಧ ನೀಲಿ ಬಣ್ಣ ಎಂದು ಕರೆಯಲಾಗುತ್ತದೆ. ಲ್ಯಾಪಿಸ್ ಲಾಜುಲಿಯನ್ನು ನುಣ್ಣಗೆ ಪುಡಿಮಾಡಿ, ಶುದ್ಧ ನೀಲಿ ಬಣ್ಣವನ್ನು ಹೊರತೆಗೆಯಲು ತೈಲಗಳು ಮತ್ತು ರಾಸಾಯನಿಕ ಚಿಕಿತ್ಸೆಗಳನ್ನು ಬಳಸಿ ಪದೇ ಪದೇ ಶುದ್ಧೀಕರಿಸಲಾಗುತ್ತದೆ. ಈ ಬಣ್ಣವನ್ನು ಹೋಳಿ ಆಚರಣೆಗೆ ಬಳಸಲಾಗುವುದಿಲ್ಲ. ಏಕೆಂದರೆ ಇದು ದುಬಾರಿಯಾಗಿರುವ ಕಾರಣ ಯಾರು ಸಹ ಇದನ್ನು ಎಸೆಯಲು ಇಷ್ಟಪಡೋದಿಲ್ಲ.
ಲ್ಯಾಪಿಸ್ ಲಾಜುಲಿ ಕೇವಲ ವರ್ಣದ್ರವ್ಯವಲ್ಲ ಆದರೆ ಅಮೂಲ್ಯ ಕಲ್ಲು. ಇದು ಪ್ರಕಾಶವಾದ ನೀಲಿ ಬಣ್ಣದಿಂದ ಕೂಡಿರಲಿದೆ. ಲ್ಯಾಪಿಸ್ ಲಾಜುಲಿ ಗಣಿಗಳನ್ನು ಅಫ್ಘಾನಿಸ್ತಾನದ ಬಡಾಕ್ಷಾನ್ ಪ್ರದೇಶದಲ್ಲಿ ಹೆಚ್ಚಾಗಿ ನೋಡಬಹುದು. ಈ ಕಲ್ಲುಗಳನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಯ ಮೂಲಕ ಮಾರಾಟ ಮತ್ತು ಖರೀದಿ ನೋಡಬಹುದು. ಈ ಕಲ್ಲಿನಿಂದ ತಯಾರಿಸಿದ ಬಣ್ಣವನ್ನು ಹೆಚ್ಚಾಗಿ ದುಬಾರಿ ಅಲಂಕಾರಿಕ ವಸ್ತುಗಳ ತಯಾರಿಕೆಯಲ್ಲಿ ಹಾಗೆ ದುಬಾರಿ ಆಭರಣ ತಯಾರಿಕೆಗಳಲ್ಲಿ ಮಾತ್ರವೇ ಬಳಸುತ್ತಾರೆ.
ಇತಿಹಾಸದಲ್ಲಿ ನೋಡುವ ಹಲವು ವರ್ಣಚಿತ್ರಗಳು, ರಾಜ ಮಹರಾಜರ ಆಭರಣಗಳು, ಅರಮನೆಯಲ್ಲಿನ ಕೆತ್ತನೆಗಳು, ದುಬಾರಿ ಕೊಠಡಿ ಅಲಂಕಾರಗಳಲ್ಲಿ ನೋಡಬಹುದಾಗಿದೆ. ಲಿಯೊನಾರ್ಡೊ ಡಾ ವಿನ್ಸಿ ಮತ್ತು ಮೈಕೆಲ್ಯಾಂಜೆಲೊ ಅವರಂತಹ ಪ್ರಸಿದ್ಧ ಕಲಾವಿದರು ತಮ್ಮ ಮೇರುಕೃತಿಗಳಲ್ಲಿ ಈ ಬಣ್ಣವನ್ನು ಬಳಸಿದ್ದರು ಎನ್ನಲಾಗಿದೆ. ಸದ್ಯ ಈ ನೀಲಿ ಬಣ್ಣದ ಕಲ್ಲುಗಳು ಅಫ್ಘಾನಿಸ್ತಾನ, ಪಾಕಿಸ್ತಾನದ ಭಾಗಗಳು, ಆಫ್ರಿಕಾದ ಕೆಲ ಭಾಗದಲ್ಲಿ ನಾವು ನೋಡಬಹುದು.



Click it and Unblock the Notifications