For Quick Alerts
ALLOW NOTIFICATIONS  
For Daily Alerts

ನಿರಂತರ ಕಂಪ್ಯೂಟರ್ ಬಳಸುವುವಾಗ ಕಣ್ಣುಗಳ ರಕ್ಷಣೆಗೆ 10 ಸಲಹೆಗಳು

By hemanth P
|

ಇಂದಿನ ದಿನಗಳಲ್ಲಿ ಕನ್ನಡಕ ಧರಿಸುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ ಎನ್ನುವುದನ್ನು ನೀವು ಗಮನಿಸಿದ್ದೀರಾ? ನೀವು ಸದಾ ಕಂಪ್ಯೂಟರ್, ಲ್ಯಾಪ್ ಟಾಪ್, ಮೊಬೈಲ್ ಫೋನ್ ಮತ್ತು ಟಾಬ್ಲೆಟ್ ಗಳನ್ನು ಬಳಸುತ್ತಿದ್ದೀರಾ? ಹಾಗಾದರೆ ಇದರ ಪರಿಣಾಮ ಈಗ ನಿಮ್ಮ ಕಣ್ಣುಗಳಲ್ಲಿ ಕಾಣಿಸುತ್ತದೆ. ಇದರಿಂದಾಗಿ ಕಂಪ್ಯೂಟರ್ ಸ್ಕ್ರೀನ್ ನಿಂದ ನಿಮ್ಮ ಕಣ್ಣುಗಳನ್ನು ರಕ್ಷಿಸುವುದು ತುಂಬಾ ಮುಖ್ಯ.

ಇಂದಿನ ದಿನಗಳಲ್ಲಿ ಯುವ ಜನರನ್ನು ಹೊಸ ರೀತಿಯ ಕಾಯಿಲೆ ಕಾಡುತ್ತಿದೆ. ಇದನ್ನು ಕಂಪ್ಯೂಟರ್ ಕಣ್ಣಿನ ದಣಿವು ಎನ್ನಲಾಗುತ್ತಿದೆ. ಕಂಪ್ಯೂಟರ್ ಸ್ಕ್ರೀನ್ ನಿಂದ ನಿಮ್ಮ ಕಣ್ಣುಗಳನ್ನು ರಕ್ಷಿಸಲು ಸಾಧ್ಯವಾಗದಿದ್ದರೆ ನೀವು ಕೂಡ ಇದೇ ರೀತಿಯ ಸಮಸ್ಯೆಗೆ ಒಳಗಾಗಲಿದ್ದೀರಿ.

ಕಂಪ್ಯೂಟರ್ ಬಳಕೆದಾರರಿಗೆ ಕಣ್ಣಿನ ಕಾಳಜಿಯ ಟಿಪ್ಸ್

ಸ್ಕ್ರೀನ್ ನ ಬ್ರೈಟ್ ನೆಸ್ ನಿಮ್ಮ ಕಣ್ಣುಗಳ ಮೇಲೆ ಒತ್ತಡ ಬೀರಬಹುದು. ಸತತವಾಗಿ ಸ್ಕ್ರೀನ್ ನ್ನು ನೋಡುವುದರಿಂದ ನಿಮ್ಮ ರೆಟಿನಾದ ಗಾತ್ರದ ಮೇಲೆ ಪರಿಣಾಮವಾಗಬಹುದು. ಕಂಪ್ಯೂಟರ್ ಸ್ಕ್ರೀನ್ ನಿಂದ ನಿಮ್ಮ ಹೇಗೆ ರಕ್ಷಿಸಿಕೊಳ್ಳಬಹುದೆಂಬುವುದನ್ನು ನೀವು ಕಲಿಯಬೇಕು.

ನಿಮ್ಮ ಕಣ್ಣುಗಳು ಸುರಕ್ಷಿತವಾಗಿರಲು ಕೆಲವೊಂದು ಸಣ್ಣಪುಟ್ಟ ಬದಲಾವಣೆಗಳನ್ನು ಕಂಪ್ಯೂಟರ್ ನಲ್ಲಿ ಮಾಡಬೇಕು. ನಿಮ್ಮ ಕಣ್ಣುಗಳು ಮತ್ತು ಸ್ಕ್ರೀನ್ ಮಧ್ಯೆ ಪ್ರತಿಬಂಧಕವನ್ನು ಹಾಕಿದರೆ ಕಂಪ್ಯೂಟರ್ ಕಣ್ಣಿನ ದಣಿವನ್ನು ನಿವಾರಿಸಬಹುದು. ಕಣ್ಣನ್ನು ರಕ್ಷಿಸುವ ಕೆಲವೊಂದು ಟಿಪ್ಸ್ ಗಳು ತುಂಬಾ ಆಸಕ್ತಿದಾಯಕವಾಗಿದೆ. ಕಂಪ್ಯೂಟರ್ ಸ್ಕ್ರೀನ್ ನಿಂದ ನಿಮ್ಮ ಕಣ್ಣುಗಳನ್ನು ರಕ್ಷಿಸಲು ಕೆಲವೊಂದು ಟಿಪ್ಸ್ ಗಳನ್ನು ಪ್ರಯತ್ನಿಸಿ.

ಸ್ಕ್ರೀನ್ ನ (ಕಂಪ್ಯೂಟರ್ ಪರದೆಯ) ಬ್ರೈಟ್ ನೆಸ್ ಕಡಿಮೆ ಮಾಡಿ

ಸ್ಕ್ರೀನ್ ನ (ಕಂಪ್ಯೂಟರ್ ಪರದೆಯ) ಬ್ರೈಟ್ ನೆಸ್ ಕಡಿಮೆ ಮಾಡಿ

ನಿಮ್ಮ ಕೆಲಸಕ್ಕೆ ಅನುಗುಣವಾಗಿ ಇಡೀ ದಿನ ನೀವು ಕಂಪ್ಯೂಟರ್ ಸ್ಕ್ರೀನ್ ನ್ನು ನೋಡುವುದಾದರೆ ಸ್ಕ್ರೀನ್ ನ ಬ್ರೈಟ್ ನೆಸ್ ಕಡಿಮೆ ಮಾಡಿ. ಸ್ಕ್ರೀನ್ ನ ಪ್ರಕಾಶದಿಂದಾಗಿ ಕಣ್ಣುಗಳಿಂದ ನೀರು ಬರಬಹುದು.

ಲೆನ್ಸ್ ಬದಲು ಗ್ಲಾಸ್ ಬಳಸಿ

ಲೆನ್ಸ್ ಬದಲು ಗ್ಲಾಸ್ ಬಳಸಿ

ಕಂಪ್ಯೂಟರ್ ನಲ್ಲಿ ಕೆಲಸ ಮಾಡುವಾಗ ನೀವು ಲೆನ್ಸ್ ಧರಿಸಿದರೆ ಅದು ನಿಮ್ಮ ಕಣ್ಣುಗಳ ಮೇಲೆ ಪರಿಣಾಮ ಬೀರುತ್ತದೆ. ಲೆನ್ಸ್ ನಿಮ್ಮ ಕಣ್ಣುಗಳನ್ನು ಒಣಗಿಸುತ್ತದೆ ಮತ್ತು ಕಣ್ಣು ಹಾಗೂ ಸ್ಕ್ರೀನ್ ಮಧ್ಯೆ ದೈಹಿಕ ಪ್ರತಿಬಂಧಕವಾಗಿ ಕೆಲಸ ಮಾಡುವುದಿಲ್ಲ.

ಆ್ಯಂಟಿ ಗ್ಲೇರ್ ಧರಿಸಿ

ಆ್ಯಂಟಿ ಗ್ಲೇರ್ ಧರಿಸಿ

ನೀವು ಗ್ಲಾಸ್ ಧರಿಸಬೇಕೆಂದರೆ ಅದಕ್ಕೆ ಆ್ಯಂಟಿ ಗ್ಲೇರ್ ಅಳವಡಿಸಿ. ಎಲ್ಲಾ ಕನ್ನಡಕದ ಅಂಗಡಿಗಳಲ್ಲಿ ಇಂದಿನ ದಿನಗಳಲ್ಲಿ ಆ್ಯಂಟಿ ಗ್ಲೇರ್ ಲಭ್ಯವಿದೆ.

ಎಷ್ಟು ಸಾಧ್ಯವೋ ಅಷ್ಟು ಕಣ್ಣು ಮಿಟುಕಿಸಿ

ಎಷ್ಟು ಸಾಧ್ಯವೋ ಅಷ್ಟು ಕಣ್ಣು ಮಿಟುಕಿಸಿ

ನಮ್ಮ ಕೆಲಸದಲ್ಲಿ ಎಷ್ಟು ವ್ಯಸ್ತರಾಗಿರುತ್ತೇವೆ ಎಂದರೆ ಕೆಲವೊಮ್ಮೆ ಕಣ್ಣಿನ ರೆಪ್ಪೆಗಳನ್ನು ಮುಚ್ಚಲು ಮರೆಯುತ್ತೇವೆ. ಇದರಿಂದ ಕಣ್ಣುಗಳು ಒಣಗುತ್ತದೆ. ನೀವು ಸಾಧ್ಯವಿದ್ದಷ್ಟು ಸಲ ಕಣ್ಣುಗಳನ್ನು ಮಿಟುಕಿಸಲು ಪ್ರಯತ್ನಿಸಿ, ಇದರಿಂದ ಕಣ್ಣುಗಳಲ್ಲಿ ತೇವಾಂಶವಿರುತ್ತದೆ.

ಸ್ಕ್ರೀನ್‌ನಿಂದ ಸೂಕ್ತ ಅಂತರ ಕಾಯ್ದುಕೊಳ್ಳಿ

ಸ್ಕ್ರೀನ್‌ನಿಂದ ಸೂಕ್ತ ಅಂತರ ಕಾಯ್ದುಕೊಳ್ಳಿ

ಕೆಲಸ ಮಾಡುತ್ತಿರುವಾಗ ಸ್ಕ್ರೀನ್ ನಿಂದ ಒಂದು ಸೂಕ್ತ ಅಂತರವನ್ನು ಕಾಯ್ದುಕೊಳ್ಳಿ. ಲ್ಯಾಪ್ ಟಾಪ್ ಮತ್ತು ಟಾಬ್ಲೆಟ್ ಗಳನ್ನು ಬಳಸುವ ಬದಲು ಡೆಸ್ಕ್ ಟಾಪ್ ಗಳನ್ನು ಬಳಸಿ.

ಅಕ್ಷರಗಳು ದೊಡ್ಡದಾಗಿರಲಿ

ಅಕ್ಷರಗಳು ದೊಡ್ಡದಾಗಿರಲಿ

ನೀವು ಏನನ್ನಾದರೂ ಓದಲು ಅಥವಾ ಬೇಗನೆ ಬರೆಯಲು ಪ್ರಯತ್ನಿಸುತ್ತಿದ್ದರೆ ಆಗ ದೊಡ್ಡ ಅಕ್ಷರಗಳನ್ನು ಬಳಸಿ. ಇದು ಕಂಪ್ಯೂಟರ್ ನ್ನು ಬಳಸುವಾಗ ನಿಮ್ಮ ಕಣ್ಣುಗಳ ಮೇಲೆ ಬೀಳುವ ಒತ್ತಡವನ್ನು ಕಡಿಮೆ ಮಾಡುತ್ತದೆ.

ಅರೆಮುಚ್ಚಬೇಡಿ

ಅರೆಮುಚ್ಚಬೇಡಿ

ಸ್ಕ್ರೀನ್ ನಲ್ಲಿ ಏನಾದರೂ ಓದುತ್ತಿದ್ದರೆ ಅರೆಮುಚ್ಚಬೇಡಿ. ನಿಮ್ಮ ಟಾಬ್ಲೆಟ್ ಅಥವಾ ಫೋನ್ ನಲ್ಲಿ ಮ್ಯಾಕ್ಸಿಮೈಸ್ ಅವಕಾಶವಿರುತ್ತದೆ. ಇದನ್ನು ಬಳಸಿ. ಅರೆಮುಚ್ಚುವುದರಿಂದ ಅದು ನಿಮ್ಮ ಕಣ್ಣುಗಳ ಮೇಲೆ ಒತ್ತಡ ಬೀರುತ್ತದೆ.

ಸ್ಕ್ರೀನ್ ಆಪ್ಟಿಕಲ್ ಗಾರ್ಡ್ ಸೇರಿಸಿ

ಸ್ಕ್ರೀನ್ ಆಪ್ಟಿಕಲ್ ಗಾರ್ಡ್ ಸೇರಿಸಿ

ಕೆಲವರು ತಮ್ಮ ಕಣ್ಣುಗಳ ರಕ್ಷಣೆಗಾಗಿ ಸ್ಕ್ರೀನ್ ಆಪ್ಟಿಕಲ್ ಗಾರ್ಡ್ ನ್ನು ಬಳಸುತ್ತಾರೆ. ಇದು ಕಣ್ಣುಗಳ ಮೇಲೆ ಬೀಳುವ ಒತ್ತಡ ಕಡಿಮೆ ಮಾಡಲು ಅತ್ಯುತ್ತಮ ವಿಧಾನ.

ಕಣ್ಣುಗಳನ್ನು ತಿರುಗಿಸಿ

ಕಣ್ಣುಗಳನ್ನು ತಿರುಗಿಸಿ

ಕಂಪ್ಯೂಟರ್ ಸ್ಕ್ರೀನ್ ಮೇಲೆ ಯಾವಾಗಲೂ ಕಣ್ಣುಗಳನ್ನು ನೆಟ್ಟಿರುವುದರಿಂದ ಕಣ್ಣುಗಳು ತುಂಬಾ ಜಡವಾಗುತ್ತದೆ. ಕೆಲವೊಮ್ಮೆ ಕಣ್ಣುಗಳನ್ನು ತಿರುಗಿಸಿ, ಇದರಿಂದ ನಿಜವಾದ ವ್ಯಾಯಾಮ ಸಿಗುತ್ತದೆ.

ಝಿರೋ ಪವರ್ ಗ್ಲಾಸ್‌ಗಳು

ಝಿರೋ ಪವರ್ ಗ್ಲಾಸ್‌ಗಳು

ನೀವು 6x6 ದೃಷ್ಟಿಯನ್ನು ಹೊಂದಿದ್ದರೆ ಆಗ ನೀವು ಝಿರೋ ಪವರ್ ಗ್ಲಾಸ್ ಗಳನ್ನು ಧರಿಸುವುದು ತುಂಬಾ ಒಳ್ಳೆಯದು. ಇದು ಕಂಪ್ಯೂಟರ್ ಸ್ಕ್ರೀನ್ ನ ನೇರ ಪ್ರಕಾಶದಿಂದ ನಿಮ್ಮ ಕಣ್ಣುಗಳನ್ನು ರಕ್ಷಿಸುತ್ತದೆ.

English summary

Computer eye strain can be easily avoided

Computer eye strain can be easily avoided if you put a barrier between your eyes and the screen. You might find the following eye protection tips interesting. Try these tips to protect your eyes from the computer screen.
X
Desktop Bottom Promotion