Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಬೇಸಿಗೆಯಲ್ಲಿ ಸವಿಯೋಕೆ ಇಲ್ಲಿದೆ ಸುಲಭದ ಸೂಪ್! ರೆಸ್ಟೋರೆಂಟ್ ಶೈಲಿಯಲ್ಲಿ ಮನೆಯಲ್ಲೇ ಮಾಡಿ!
ಬೇಸಿಗೆಯ ಸಮಯದಲ್ಲಿ ನೀವು ದೇಹವನ್ನು ತಂಪಾಗಿಡಲು ಹಲವು ರೀತಿಯ ಉಪಾಯ ಮಾಡುತ್ತೀರಿ. ಅದ್ರಲ್ಲೂ ಹಲವರಿಗೆ ದೇಹದ ಉಷ್ಣಾಂಶ ಹೆಚ್ಚಾಗುವುದು ದೊಡ್ಡ ಸಮಸ್ಯೆಗಳ ತರಬಹುದು. ಹೀಗಾಗಿ ಹಲವು ಹೆಚ್ಚು ನೀರು ಕುಡಿಯುವುದು, ಎಳನೀರು ಸೇವನೆ, ಜ್ಯೂಸ್ ಸೇರಿದಂತೆ ಹಲವು ರೀತಿಯ ಉಪಾಯ ಮಾಡುತ್ತಾರೆ. ಏಕೆಂದರೆ ಈ ಬಿಸಿಲಿನ ಸಮಯದಲ್ಲಿ ದೇಹಕ್ಕೆ ಹೆಚ್ಚು ನೀರಿನ ಅಂಶದ ಅಗತ್ಯವಿರಲಿದೆ.
ಇನ್ನು ಅಡುಗೆ ವಿಚಾರದಲ್ಲೂ ಸಹ ಹೆಚ್ಚು ಮಸಾಲೆ ಭರಿತ ಆಹಾರ ಸೇವನೆಗಿಂತಲು ದ್ರವರೂಪದ ಹಾಗೆ ಕಡಿಮೆ ಮಸಾಲೆಯ ಆಹಾರಗಳ ಸೇವಿಸುವುದು ಜೀರ್ಣಕ್ರಿಯೆಯ ದೃಷ್ಟಿಯಿಂದಲೂ ಬಹಳ ಉತ್ತಮವಾಗಿರಲಿದೆ. ಹಾಗೆ ಬೇಸಿಗೆಯಲ್ಲಿ ಸೂಪ್ ಮಾಡಿ ಸವಿಯೋದು ಕೂಡ ಆರೋಗ್ಯದ ದೃಷ್ಟಿಯಿಂದ ಬಹಳ ಉತ್ತಮವಾಗಿರಲಿದೆ.

ಸಾಮಾನ್ಯವಾಗಿ ಚಳಿಗಾಲದಲ್ಲಿ ಬಿಸಿ ಬಿಸಿಯಾದ ಸೂಪ್ ಮಾಡಿ ಸವಿಯುವ ರೀತಿಯಲ್ಲೇ ಬೇಸಿಗೆಯ ಸಮಯದಲ್ಲೂ ಕೂಡ ಸೂಪ್ ಮಾಡಿ ಸವಿಯಬಹುದು. ಈ ಸೂಪ್ ದೇಹವನ್ನು ತಂಪಾಗಿಡುವ ಜೊತೆಗೆ ನಿಮ್ಮ ಆರೋಗ್ಯದಲ್ಲೂ ಸುಧಾರಣೆ ತರಲಿದೆ. ಹಾಗಾದ್ರೆ ದೇಹ ತಂಪಾಗಿಸುವ ಈ ಸೂಪ್ ಮಾಡುವ ಕುರಿತಾಗಿ ನಾವು ತಿಳಿದುಕೊಳ್ಳೋಣ.
ಅದ್ರಲ್ಲೂ ರೆಸ್ಟೋರೆಂಟ್ ಶೈಲಿಯ ಸೂಪ್ ದೇಹಕ್ಕೆ ಬಹಳ ಉತ್ತಮ. ಹಾಗೆ ಇದನ್ನು ಮಾಡೋದು ಕೂಡ ಸುಲಭ. ನಾವಿಂದು ಈ ವೆಜ್ ಸೂಪ್ ಮಾಡುವುದು ಹೇಗೆ? ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಎಂಬುದನ್ನು ನಾವಿಲ್ಲಿ ತಿಳಿದುಕೊಳ್ಳೋಣ.
ವೆಜ್ ಸೂಪ್ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
- ಬೆಣ್ಣೆ - 1/2 ಟೀಸ್ಪೂನ್
- ಬೆಳ್ಳುಳ್ಳಿ
- ಕ್ಯಾರೆಟ್
- ಬೀನ್ಸ್
- ಎಲೆಕೋಸು
- ಟೊಮೆಟೋ ಸಾಸ್
- ಸೋಯಾ ಸಾಸ್
- ವಿನೆಗರ್
- ಕಾರ್ನ್ ಫ್ಲೋರ್
- ರುಚಿಗೆ ತಕ್ಕಷ್ಟು ಉಪ್ಪು
- ಕಾಳು ಮೆಣಸಿನ ಪುಡಿ
- ಸ್ಪ್ರಿಂಗ್ ಈರುಳ್ಳಿ
ವೆಜ್ ಸೂಪ್ ಮಾಡುವ ವಿಧಾನವೇನು?
ಮೊದಲು ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಬೆಣ್ಣೆ ಹಾಕಿ ಕರಗಲು ಬಿಡಿ ಅನಂತರ ಇದಕ್ಕೆ ಸಿಪ್ಪೆ ತೆಗೆದು ಸಣ್ಣದಾಗಿ ಹೆಚ್ಚಿರುವ ಬೆಳ್ಳುಳ್ಳಿ, ಕ್ಯಾರೆಟ್, ಬೀನ್ಸ್, ಸ್ಪ್ರಿಂಗ್ ಆನಿಯನ್ ಸಹ ಹಾಕಿಕೊಂಡು ಚೆನ್ನಾಗಿ ಫ್ರೈ ಮಾಡಿಕೊಳ್ಳಿ. 2 ನಿಮಿಷ ಬಿಟ್ಟು ಇದಕ್ಕೆ 2 ಕಪ್ ನೀರು ಹಾಕಿ ಉರಿ ಹೆಚ್ಚಾಗಿ ಇಟ್ಟುಕೊಂಡು ಚೆನ್ನಾಗಿ ಕುದಿಯಲು ಬಿಡಿ.
ನೀರು ಕುದಿಬರುವಾಗ ಟೊಮೆಟೋ ಸಾಸ್, ಸೋಯಾ ಸಾಸ್, ರುಚಿಗೆ ತಕ್ಕಷ್ಟು ಉಪ್ಪು, ಕಾಳು ಮೆಣಸಿನ ಪುಡಿ ಸಹ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಕುದಿಬರಲು ಬಿಟ್ಟು ಇದಕ್ಕೆ ಕಾರ್ನ್ ಫ್ಲೋರ್ ನೀರು ಹಾಕಿಕೊಳ್ಳಿ. ಬೌಲ್‌ಗೆ ಕಾರ್ನ್ ಫ್ಲೋರ್ ಹಾಕಿ ಅದಕ್ಕೆ ನೀರು ಹಾಕಿ ಗಂಟುಗಳಿಲ್ಲದಂತೆ ಮಿಕ್ಸ್ ಮಾಡಿಕೊಂಡು ಒಲೆ ಮೇಲಿನ ಸೂಪ್‌ಗೆ ಮಿಕ್ಸ್ ಮಾಡಿಕೊಳ್ಳಿ.
ಹಾಗೆ ಕುದಿಬರಲು ಬಿಟ್ಟು ಇದಕ್ಕೆ ಒಂದು ಸ್ಪೂನ್ ವಿನೆಗರ್ ಹಾಕಿ 2 ನಿಮಿಷ ಕುದಿಬರಲು ಬಿಡಿ. ಕೊನೆಯಲ್ಲಿ ಸ್ಪ್ರಿಂಗ್ ಆನಿಯನ್, ಹಾಗೆ ಕೊತ್ತಂಬರಿ ಸೊಪ್ಪು ಇದ್ದೂ ಹಾಕಿಕೊಳ್ಳಬಹುದು. ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯಾದ ಸೂಪ್ ಸಿದ್ದವಾಗುತ್ತೆ. ನೀವು ಸಹ ಮನೆಯಲ್ಲಿ ಇದನ್ನು ಮಾಡಿ ಸವಿಯಬಹುದು. ಬೇಸಿಗೆಯಲ್ಲಿ ಈ ರೀತಿಯ ಹಲವು ಸೂಪ್ ಮಾಡಿ ಸವಿದು ನೋಡಿ.



Click it and Unblock the Notifications
