For Quick Alerts
ALLOW NOTIFICATIONS  
For Daily Alerts

ಇಲ್ಲಿದೆ ನೋಡಿ ಕಣ್ಣಿನ ಸುರಕ್ಷತೆಗಾಗಿ ಟಾಪ್ ಸಲಹೆಗಳು

By Super
|

ಕಣ್ಣಿನ ಆಯಾಸ ಹಲವು ರೀತಿಯಲ್ಲಿ ದೇಹಕ್ಕೆ ಅಹಿತಕರವಾಗಿದೆ. ಕಣ್ಣು ಕೆಂಪಗಾಗುವುದು, ಕಣ್ಣುಗಳಲ್ಲಿ ಉರಿ, ಎದುರಿನ ವಸ್ತುಗಳನ್ನು ಸ್ಪಷ್ಟವಾಗಿ ನೋಡಲಸಾಧ್ಯವಾಗುವುದು, ಹಗಲಿನ ಬೆಳಕನ್ನು ನೋಡಲಾಗದಿರುವುದು, ಪ್ರಖರ ಬೆಳಕು ಕಣ್ಣು ಚುಚ್ಚಿದಂತಾಗುವುದು, ತಲೆನೋವು, ಗಂಟಲುನೋವು, ಭುಜ ಮತ್ತು ಬೆನ್ನುಗಳಲ್ಲಿ ನೋವು ಕಾಣಿಸಿಕೊಳ್ಳುವುದು ಮೊದಲಾದವು ಕಣ್ಣು ಶ್ರಮಗೊಂಡಿರುವುದನ್ನು ಪ್ರಸ್ತುತಪಡಿಸುತ್ತವೆ. ಕಣ್ಣಿನ ದೃಷ್ಟಿ ಸಾಮರ್ಥ್ಯ ಕಾಪಾಡಲು ಟಾಪ್ 20 ಟಿಪ್ಸ್

ಸಾಮಾನ್ಯವಾಗಿ ರಾತ್ರಿ ಮಲಗಿ ಬೆಳಿಗ್ಗೆದ್ದ ಬಳಿಕ ಈ ಶ್ರಮ ಸರಿಸುಮಾರಾಗಿ ಕಡಿಮೆಯಾಗಿರುತ್ತದೆ. ಆದರೆ ಕೊಂಚ ವೇಳೆಯಲ್ಲಿಯೇ ಯಾವುದಾದರೂ ವಸ್ತುವನ್ನು ಕೊಂಚ ಗಮನವಿಟ್ಟು ನೋಡಬೇಕಾಗಿ ಬಂದರೆ ಮೇಲೆ ವಿವರಿಸಿದ ತೊಂದರೆಗಳು ನಿಧಾನವಾಗಿ ತಮ್ಮ ಪ್ರಸ್ತುತಿಯನ್ನು ಪ್ರಕಟಿಸುತ್ತವೆ. ಈಗ ಶ್ರಮಗೊಂಡ ಕಣ್ಣುಗಳಿಗೆ ನಿಜವಾಗಿಯೂ ಆರೈಕೆ ಬೇಕಾಗಿದೆ. ಇದಕ್ಕಾಗಿ ಹಲವು ಔಷಧಿಗಳನ್ನು ನೇತ್ರವೈದ್ಯರು ಸಲಹೆ ಮಾಡಿದರೂ ಪರ್ಯಾಯವಾಗಿ ಕೆಲವು ಸುಲಭವಾದ ಮತ್ತು ಸ್ಥಳದಲ್ಲಿಯೇ ನಿರ್ವಹಿಸಬಹುದಾದ ವ್ಯಾಯಾಮಗಳಿಂದಲೂ ಈ ಶ್ರಮವನ್ನು ಕಡಿಮೆ ಮಾಡಿಕೊಳ್ಳಬಹುದು. ಇದು ಹೇಗೆ ಎಂಬುದನ್ನು ನೋಡೋಣ

ತಣ್ಣೀರಿನಿಂದ ಕಣ್ಣುಗಳನ್ನು ತೊಳೆದುಕೊಳ್ಳಿ

ತಣ್ಣೀರಿನಿಂದ ಕಣ್ಣುಗಳನ್ನು ತೊಳೆದುಕೊಳ್ಳಿ

ಶ್ರಮವಾಗಿರುವ ಕಣ್ಣುಗಳಿಗೆ ತಣ್ಣೀರು ಸಹಾ ನೆರವು ನೀಡಬಲ್ಲದು. ಇದರಿಂದ ಕಣ್ಣುಗಳ ರಕ್ತ ಪರಿಚಲನೆ ಹೆಚ್ಚುವುದು, ಶ್ರಮಗೊಂಡಿದ್ದ ಸ್ನಾಯುಗಳು ಸಡಿಲಗೊಳ್ಳುವುದು ಹಾಗೂ ಒಂದು ವೇಳೆ ಕಣ್ಣುಗಳು ಶ್ರಮದ ಕಾರಣ ಊದಿಕೊಂಡಿದ್ದರೆ ಶೀಘ್ರವೇ ಮೊದಲಿನಂತಾಗುತ್ತದೆ.

ಇದಕ್ಕಾಗಿ ತಣ್ಣನೆಯ ಮತ್ತು ಸ್ವಚ್ಛವಾದ ನೀರನ್ನು ಕಣ್ಣುಗಳು ಮುಚ್ಚಿದ್ದಂತೆಯೇ ಕೈಗಳಿಂದ ಚಿಮುಕಿಸಿ. ಸುಮಾರು ಒಂದರಿಂದ ಎರಡು ನಿಮಿಷ ಚಿಮುಕಿಸಿದ ಬಳಿಕ ಕಣ್ಣುಗಳು ಶೀಘ್ರವಾಗಿ ಆಯಾಸದಿಂದ ಮುಕ್ತಿ ಪಡೆಯುತ್ತದೆ.

ಬೆಚ್ಚನೆಯ ಸಂಕುಚನ (Warm Compress)

ಬೆಚ್ಚನೆಯ ಸಂಕುಚನ (Warm Compress)

ಕಣ್ಣಿನ ಆಯಾಸವನ್ನು ಕಳೆಯಲು ಬೆಚ್ಚನೆಯ ನೀರಿನಿಂದ ಅದ್ದಿದ ಬಟ್ಟೆಯ ಹಿತವಾದ ಸಂಕುಚನವೂ ಪರಿಣಾಮಕಾರಿ ವಿಧಾನವಾಗಿದೆ. ಇದರಿಂದ ಕಣ್ಣುಗಳ ಸುತ್ತಲ ಸ್ನಾಯುಗಳು ಸಡಿಲಗೊಳ್ಳುತ್ತವೆ, ಕಣ್ಣುಗಳಲ್ಲಿ ಕಣ್ಣೀರು ಹರಿಯುವುದು ಸುಲಭವಾಗಿ ಒಣಕಣ್ಣು ಹೆಚ್ಚು ತೇವಗೊಳ್ಳುತ್ತದೆ ಜೊತೆಗೇ ಕಣ್ಣಿನ ಸುತ್ತಲ ಭಾಗದಲ್ಲಿ ಅಥವಾ ರೆಪ್ಪೆಗಳ ಅಡಿಯಲ್ಲಿ ಚಿಕ್ಕ ಕುರುವಿನ ಕಾರಣ ಊದಿದ್ದು ನೋವಿದ್ದರೆ ಕಡಿಮೆಯಾಗುತ್ತದೆ. ಇದರ ವಿಧಾನ ಹೀಗಿದೆ:

1) ಒಂದು ಸ್ವಚ್ಛವಾದ ಮತ್ತು ಮೃದುವಾದ ಬಟ್ಟೆ ಅಥವಾ ಟವೆಲ್ ಅನ್ನು ಉಗುರುಬೆಚ್ಚನೆಯ ನೀರಿನಲ್ಲಿ ಅದ್ದಿ ಚೆನ್ನಾಗಿ ಹಿಂಡಿ ನೀರು ತೊಟ್ಟಿಕ್ಕದಷ್ಟು ಒದ್ದೆಯಾಗಿಸಿ

2) ಆರಾಮವಾಗಿ ಮಲಗಿ ಕಣ್ಣುಮುಚ್ಚಿಕೊಳ್ಳಿ, ತಲೆದಿಂಬು ಇಲ್ಲದಿದ್ದರೆ ಅಥವಾ ತೆಳುವಾದ ಒಂದು ದಿಂಬು ಬಳಸಿ. ಈಗ ಬಟ್ಟೆಯನ್ನು ಕೊಂಚ ಮುದ್ದೆ ಮಾಡಿ ಎರಡೂ ಕಣ್ಣುಗಳನ್ನು ಆವರಿಸುವಂತೆ ಕಣ್ಣುರೆಪ್ಪೆಗಳ ಮೇಲೆ ಇಡಿ.

3) ದೈಹಿಕವಾಗಿ ಮತ್ತು ಮಾನಸಿಕವಾಗಿ ಪೂರ್ಣವಾಗಿ ವಿಶ್ರಾಂತಿ ಸ್ಥಿತಿಯಲ್ಲಿ ಒಂದದಿಂದ ಐದು ನಿಮಿಷ ಇರಿ. ಸಾಮಾನ್ಯ ಗತಿಯಲ್ಲಿ ಉಸಿರಾಡಿ.

ಕ್ಯಾಮೋಮೈಲ್ ಹೂವುಗಳ ಚಹಾ (Chamomile Tea)

ಕ್ಯಾಮೋಮೈಲ್ ಹೂವುಗಳ ಚಹಾ (Chamomile Tea)

ನಮ್ಮ ಸೇವಂತಿಗೆಯಂತಹಾ ಕ್ಯಾಮೋಮೈಲ್ ಹೂವು ಹಲವು ಉತ್ತಮ ಪೋಷಕಾಂಶಗಳನ್ನು ಹೊಂದಿದೆ. ಇದರ ಒಣಗಿದ ಹೂವುಗಳ ದಳಗಳನ್ನು ಪುಡಿಮಾಡಿ ಸೇರಿಸಿದ ಟೀ ಚಿಕ್ಕ ಬ್ಯಾಗ್ ಗಳ ರೂಪದಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ.ಈ ಟೀ ಬ್ಯಾಗ್ ಕಣ್ಣುಗಳ ಆಯಾಸವನ್ನು ಕಡಿಮೆಗೊಳಿಸಲು ಮತ್ತು ಕಣ್ಣುಗಳ ಸುತ್ತಲ ಭಾಗದ ಊತವನ್ನು ಕಡಿಮೆಗೊಳಿಸಲು ನೆರವಾಗುತ್ತದೆ. ಇದನ್ನು ಉಪಯೋಗಿಸುವ ವಿಧಾನ:

1) ಎರಡು ಟೀ ಬ್ಯಾಗ್ ಗಳನ್ನು ಕುದಿನೀರಿನಲ್ಲಿ ಐದು ನಿಮಿಷಗಳವರೆಗೆ ಇಡಿ (ಕುದಿಸುವ ಅಗತ್ಯವಿಲ್ಲ)

2) ಈಗ ಎರಡೂ ಟೀ ಬ್ಯಾಗ್‌ಗಳನ್ನು ನೀರಿನಿಂದ ಹೊರತೆಗೆದು ಫ್ರಿಜ್ ನಲ್ಲಿಡಿ (ನಂತರದ ಬಳಕೆಗೆ)ಅಥವಾ ಹಾಗೇ ತಣಿಯಲು ಬಿಡಿ (ಈಗಲೇ ಬಳಸುವುದಾದರೆ)

3)ಮೇಲಿನ ಬೆಚ್ಚನೆಯ ಸಂಕುಚನ ವಿಧಾನದಲ್ಲಿ ವಿವರಿಸಿದಂತೆಯೇ ಕಣ್ಣುಗಳ ಮೇಲೆ ಬಟ್ಟೆಯ ಬದಲಿಗೆ ಈ ಒದ್ದೆಯಾದ ಟೀ ಬ್ಯಾಗ್ ಇಡಿ (ಹೆಚ್ಚು ಬಿಸಿ ಇದ್ದಾಗ ಕಣ್ಣುಗಳ ಮೇಲಿರಿಸಿದರೆ ಕಣ್ಣುರೆಪ್ಪೆ ಸುಡುವ ಅಪಾಯವಿದೆ, ಹಾಗಾಗಿ ಮೊದಲು ನೀವು ಸಹಿಸಬಹುದಾದಷ್ಟು ತಣ್ಣಗಾಗುವುದು ಅಗತ್ಯ)

4) ಬಳಿಕ ಉಪಯೋಗಿಸುವುದಾದರೆ ಉಪಯೋಗಿಸುವುದಕ್ಕೆ ಸುಮಾರು ಹದಿನೈದು ನಿಮಿಷದ ಮುನ್ನ ಫ್ರಿಜ್ ನಿಂದ ಹೊರತೆಗೆದು ಸಾಮಾನ್ಯ ತಾಪಮಾನಕ್ಕೆ ಬರಲು ಬಿಡಿ, ಬಳಿಕ ಮೇಲಿನ ವಿಧಾನ ಅನುಸರಿಸಿ. ಕ್ಯಾಮೋಮೈಲ್ ಟೀ ದಿನಕ್ಕೆ ಎರಡರಿಂದ ಮೂರು ಕಪ್ ಕುಡಿಯುವುದರಿಂದ ಕಣ್ಣುಬೇನೆಯಿಂದಾಗಿ ತಲೆನೋವು ಆವರಿಸಿದ್ದರೆ ಕಡಿಮೆಯಾಗುತ್ತದೆ.

 ಗುಲಾಬಿ ನೀರು

ಗುಲಾಬಿ ನೀರು

ಮನಸ್ಸನ್ನು ಮುದಗೊಳಿಸಲು ಗುಲಾಬಿಯ ಸುವಾಸನೆ ಹೇಗೆ ನೆರವಾಗುತ್ತದೆಯೋ, ಗುಲಾಬಿಯ ನೀರು ಶ್ರಮಗೊಂಡಿರುವ ಕಣ್ಣುಗಳಿಗೆ ವಿಶ್ರಾಂತಿ ನೀಡಲೂ ನೆರವಾಗುತ್ತದೆ. ಈ ನೀರಿನಿಂದ ಕಣ್ಣುಗಳ ಸುತ್ತಲ ಭಾಗ ಕಪ್ಪಗಾಗಿದ್ದರೆ ಸಾಮಾನ್ಯ ಬಣ್ಣಕ್ಕೆ ಹಿಂದಿರುಗಲು ನೆರವಾಗುತ್ತದೆ. ಜೊತೆಗೇ ಊತವನ್ನೂ ಕಡಿಮೆಗೊಳಿಸುತ್ತದೆ. ಇದನ್ನು ಉಪಯೋಗಿಸುವ ವಿಧಾನ:

1) ಕಣ್ಣುಗಳನ್ನು ತಣ್ಣನೆಯ ಅಥವಾ ಉಗುರುಬೆಚ್ಚನೆಯ ನೀರಿನಲ್ಲಿ ತೊಳೆದುಕೊಂಡು ಸ್ವಚ್ಛವಾದ ಬಟ್ಟೆಯಿಂದ ಒರೆಸಿಕೊಳ್ಳಿ

2) ಎರಡು ಹತ್ತಿಯ ಉಂಡೆಗಳನ್ನು ಗುಲಾಬಿ ನೀರಿನಲ್ಲಿ ಮುಳುಗಿಸಿ ಹಿಂಡಿ ತೆಗೆಯಿರಿ. ಆದರೆ ಸಂಪೂರ್ಣವಾಗಿ ಹಿಂಡಬಾರದು, ತೊಟ್ಟಿಕ್ಕದಷ್ಟು ಮಟ್ಟಿಗೆ ಹಿಂಡಿ

3) ಬೆಚ್ಚನೆಯ ಸಂಕುಚನ ವಿಧಾನದಲ್ಲಿ ವಿವರಿಸಿದಂತೆ ಮಲಗಿ ಈ ಎರಡೂ ಹತ್ತಿಯ ಉಂಡೆಗಳನ್ನು ಕಣ್ಣುಗಳ ಮೇಲಿಟ್ಟು ವಿಶ್ರಾಂತಿ ಪಡೆಯಿರಿ.

4) ಪ್ರತಿದಿನ ಎರಡು ಬಾರಿಯಂತೆ ಈ ವಿಧಾನವನ್ನು ಪುನರಾವರ್ತಿಸಿ.

ಸೌತೆಕಾಯಿ

ಸೌತೆಕಾಯಿ

ಶ್ರಮಗೊಂಡ ಕಣ್ಣುಗಳಿಗೆ ಎಳೆಸೌತೆಕಾಯಿಯ ಬಿಲ್ಲೆಗಳನ್ನು ಇಡುವ ಮೂಲಕ ತಕ್ಷಣವೇ ಪರಿಹಾರ ಪಡೆಯಬಹುದು. ಜೊತೆಗೇ ಕಣ್ಣುಗಳ ಸುತ್ತಲ ಸ್ನಾಯುಗಳು ಸಡಿಲಗೊಂಡು ಆಯಾಸ ಪರಿಹಾರವಾಗುತ್ತದೆ. ಸೌತೆಕಾಯಿಯಲ್ಲಿ ರಕ್ತಸ್ರಾವವನ್ನು ಶೀಘ್ರವಾಗಿ ತಡೆಗಟ್ಟುವ (astringent) ಗುಣವಿರುವ ಕಾರಣ ಒಂದು ವೇಳೆ ಕಣ್ಣುಗಳ ನರಗಳಲ್ಲಿ ರಕ್ತಸಂಚಾರ ಸುಗಮವಾಗಲು ನೆರವಾಗುತ್ತದೆ. ಜೊತೆಗೇ ಕಣ್ಣುಗಳ ಕೆಳಗಿನ ಕಪ್ಪುಭಾಗವನ್ನೂ ಸಾಮಾನ್ಯ ಬಣ್ಣಕ್ಕೆ ತರುವಲ್ಲಿ ನೆರವಾಗುತ್ತದೆ. ಇದನ್ನು ಉಪಯೋಗಿಸುವ ವಿಧಾನ:

1) ಎಳೆಯ, ಮಧ್ಯಮಗಾತ್ರದ ಮತ್ತು ತಾಜಾ ಸೌತೆಕಾಯಿಯನ್ನು ಸುಮಾರು ಅರ್ಧಘಂಟೆಗಳ ಕಾಲ ಫ್ರಿಜ್ ನಲ್ಲಿಡಿ.

2) ತಣ್ಣಗಿದ್ದಂತೆಯೇ ಸಿಪ್ಪ ಸುಲಿಯದೇ ಕಿರುಬೆರಳಿನ ದಪ್ಪದ ಅರ್ಧದಷ್ಟು ದಪ್ಪದ ಬಿಲ್ಲೆಗಳನ್ನಾಗಿ ಕತ್ತರಿಸಿ.

3) ಬೆಚ್ಚನೆಯ ಸಂಕುಚನ ವಿಧಾನದಲ್ಲಿ ವಿವರಿಸಿದಂತೆ ಮಲಗಿ ಈ ಎರಡೂ ಬಿಲ್ಲೆಗಳನ್ನು ಕಣ್ಣುಗಳ ಮೇಲಿರಿಸಿ ಐದು ನಿಮಿಷಗಳ ಬಳಿಕ ಕಣ್ಣುಗಳನ್ನು ತೊಳೆದುಕೊಳ್ಳಿ. ದಿನಕ್ಕೆ ಎರಡು ಬಾರಿ ಈ ವಿಧಾನ ಅನುಸರಿಸಿ.

4) ಇದೇ ವಿಧಾನವನ್ನು ತಾಜಾ ಆಲುಗಡ್ಡೆಯ ಬಿಲ್ಲೆ ಉಪಯೋಗಿಸಿಯೂ ಮಾಡಬಹುದು.

ಸಂಪೂರ್ಣ ಹಾಲು

ಸಂಪೂರ್ಣ ಹಾಲು

ಮಾರುಕಟ್ಟೆಯಲ್ಲಿ ಸಿಗುವ ಸಿದ್ಧರೂಪದ ಸಂಪೂರ್ಣ ಹಾಲು (Whole Milk) ಸಹಾ ಕಣ್ಣುಗಳ ಆಯಾಸವನ್ನು ಕಡಿಮೆಗೊಳಿಸಲು ನೆರವಾಗುತ್ತದೆ. ಜೊತೆಗೆ ಕಣ್ಣುಗಳ ಉರಿ, ಕಣ್ಣುಗಳ ಸುತ್ತಲ ಭಾಗ ಊದಿಕೊಂಡಿರುವುದನ್ನೂ ಕಡಿಮೆಗೊಳಿಸುತ್ತದೆ. ನೆರವಾಗುತ್ತದೆ. ಇದನ್ನು ಉಪಯೋಗಿಸುವ ವಿಧಾನ:

1) ಒಂದು ಹತ್ತಿಯ ಉಂಡೆಯನ್ನು ತಣ್ಣನೆಯ ಹಾಲಿನಲ್ಲಿ ಅದ್ದಿ ಹಿಂಡಿಕೊಳ್ಳಿ. ಹಾಲು ತೊಟ್ಟಿಕ್ಕದಷ್ಟು ಮಟ್ಟಿಗೆ ಹಿಂಡಿ.

2) ಕಣ್ಣುಗಳು ಮುಚ್ಚಿರುವಂತೆ ಈ ಉಂಡೆಯನ್ನು ಕೆಲವು ನಿಮಿಷಗಳ ಕಾಲ ನಯವಾಗಿ ಕಣ್ಣುರೆಪ್ಪೆ ಮತ್ತು ಸುತ್ತಲ ಭಾಗದಲ್ಲಿ ಒತ್ತಡ ನೀಡದೇ ಅದ್ದಿ.

3) ಬಳಿಕ ಕೆಲನಿಮಿಷಗಳ ಕಾಲ ಹಾಗೇ ಒಣಗಲು ಬಿಡಿ, ಕಣ್ಣು ಮುಚ್ಚಿಕೊಂಡೇ ಇರಿ. ಸುಮಾರು ಐದು ನಿಮಿಷಗಳ ಬಳಿಕ ಸ್ವಚ್ಛನೀರಿನಿಂದ ತೊಳೆದುಕೊಳ್ಳಿ. ಈ ವಿಧಾನ ದಿನಕ್ಕೊಂದು ಬಾರಿ ಅನುಸರಿಸಿದರೆ ಸಾಕು. ಕಣ್ಣುಗಳಲ್ಲಿ ಉರಿ ಇದ್ದರೆ ಮಾತ್ರ ಹೆಚ್ಚು ಬಾರಿ (ಅಗತ್ಯಕ್ಕೆ ತಕ್ಕಂತೆ) ಪುನರಾವರ್ತಿಸಬಹುದು.

ಹೆಚ್ಚುವರಿ ಸಲಹೆಗಳು

ಹೆಚ್ಚುವರಿ ಸಲಹೆಗಳು

* ಒಂದು ವೇಳೆ ನಿಮ್ಮ ಕೆಲಸದಲ್ಲಿ ಕಂಪ್ಯೂಟರ್ ಪರದೆಯನ್ನು ಸತತವಾಗಿ ನೋಡಲೇಬೇಕಾದ ಅನಿವಾರ್ಯತೆಯಿದ್ದರೆ ಪ್ರತಿ ಇಪ್ಪತ್ತು ನಿಮಿಷಗಳ ಬಳಿಕ ಸುಮಾರು ಇಪ್ಪತ್ತು ಅಡಿ ದೂರದಲ್ಲಿರುವ ವಸ್ತುವನ್ನು ನೆಟ್ಟ ದೃಷ್ಟಿಯಿಂದ ಇಪ್ಪತ್ತು ಸೆಕೆಂಡುಗಳ ಕಾಲ ನೋಡಿ. ಬಳಿಕ ನಿಮ್ಮ ಕೆಲಸಕ್ಕೆ ಹಿಂದಿರುಗಿ.

* ನಿಮ್ಮ ಕಂಪ್ಯೂಟರ್ ನಲ್ಲಿ ಕೆಲಸ ಮಾಡುತ್ತಿರುವಾಗ ನಡು ನಡುವೆ ವಿಶ್ರಾಂತಿ ತೆಗೆದುಕೊಳ್ಳಿ ಎಂದು ಕ್ಲುಪ್ತಕಾಲಾಕ್ಕೆ ಎಚ್ಚರಿಸುವ ಸಾಫ್ಟ್ ವೇರ್ ಗಳನ್ನು ಅಳವಡಿಸಿ. ಉದಾಹರಣೆಗೆ EyeLeo ಮತ್ತು Eye Rave.

* ನಿಮ್ಮ ಕಣ್ಣುಗಳಿಂದ ಕಂಪ್ಯೂಟರ್ ಪರದೆ ಇಪ್ಪತ್ತರಿಂದ ಇಪ್ಪತ್ತಾರು ಇಂಚು ದೂರವಿರಬೇಕು. ಅಲ್ಲದೇ ಕಣ್ಣುಗಳ ಮಟ್ಟಕ್ಕಿಂದ ಕೊಂಚ ಕೆಳಗಿರಬೇಕು. ಒಂದು ಅಳತೆಪಟ್ಟಿಯನ್ನು ಉಪಯೋಗಿಸಿ ಖಚಿತಪಡಿಕೊಳ್ಳಿ. ಅಗತ್ಯಬಿದ್ದರೆ ದೂರವನ್ನು ಸರಿಪಡಿಸಿಕೊಳ್ಳಿ.

* ಕಣ್ಣುಗಳು ಆಯಾಸಗೊಂಡಿದ್ದರೆ ಕಣ್ಣುಗಳಿಗೆ ಹಚ್ಚುವ ಸೌಂದರ್ಯ ಪ್ರಸಾದನಗಳ ಬಳಕೆಯನ್ನು ತ್ಯಜಿಸಿ.

* ನಿಮ್ಮ ಕಣ್ಣುಗಳನ್ನು ನೇತ್ರವೈದ್ಯರಲ್ಲಿ ನಿಯಮಿತವಾಗಿ ತಪಾಸಿಸಿಕೊಳ್ಳಿ ಹಾಗೂ ಅವರ ಸಲಹೆಗಳನ್ನು ಪಾಲಿಸಿ ಕಣ್ಣುಗಳ ಸೌಂದರ್ಯ ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳಿ.

English summary

10 Best Ways To Reduce Eye Strain

Eye strain is a common problem today. It can happen for a number of reasons. Some common causes are lack of sleep, staring at digital devices for long stretches of time, reading in low light for a long time without taking a break, allergies, incorrect vision prescription, exposure to bright light and some kind of eye problem. Here are the top 10 ways to reduce eye strain.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X