Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
March 02 Horoscope: ಸಾಲದ ಕುರಿತಾದ ಚಿಂತೆಯೊಂದು ದೂರಾಗಲಿದೆ!
ವೈದಿಕ ಶಾಸ್ತ್ರದ ಪ್ರಕಾರ ಮಾರ್ಚ್ 02 (March 02 Horoscope)ರ ನಿಮ್ಮ ರಾಶಿಫಲ ನೋಡೋಣ:
ಮೇಷ ರಾಶಿ
ಇಂದು ನಿಮ್ಮ ಆರ್ಥಿಕ ಸಮಸ್ಯೆಯೊಂದಕ್ಕೆ ಪರಿಹಾರ ಪಡೆಯಲಿದ್ದೀರಿ. ಆಪ್ತರ ಸಹಕಾರದಿಂದ ನಿಮ್ಮ ಉದ್ಯೋಗ ಸಂಬಂಧಿತ ಸಂಕಷ್ಟವೊಂದು ದೂರಾಗಲಿದೆ. ಅಮೂಲ್ಯ ವಸ್ತುಗಳ ಖರೀದಿಗೆ ನೀವು ಮುಂದಾಗಬಹುದು.
ವೃಷಭ ರಾಶಿ
ವೃಷಭ ರಾಶಿ ಜನರಿಗೆ ಈ ದಿನವು ಅನುಕೂಲಕರ. ನೀವು ಮಾಡಬೇಕಿದ್ದ ಕೆಲಸಗಳನ್ನು ಆದಷ್ಟು ಸಮಯದೊಳಗೆ ಮುಗಿಸಲು ಪ್ರಯತ್ನಿಸುವಿರಿ. ಹಲವು ಸಮಸ್ಯೆಗಳಿಂದ ನಿಮಗೆ ಮುಕ್ತಿ ಪಡೆಯುವ ದಿನವಿದು. ಗೃಹಿಣಿಯರು ಅಧಿಕ ಖರ್ಚುಗಳನ್ನು ತಡೆಯುವುದು ಉತ್ತಮ.

ಮಿಥುನ ರಾಶಿ
ಮಿಥುನ ರಾಶಿ ಜನರಲ್ಲಿ ಈ ದಿನವು ಮಿಶ್ರಫಲ ತರಲಿದೆ. ಗೃಹಿಣಿಯರು ಆದಾಯಕ್ಕಿಂತ ಮೀರಿದ ಖರ್ಚುಗಳನ್ನು ಮಾಡದೆ ಇರುವುದು ಉತ್ತಮ. ದಾಂಪತ್ಯ ವಿಚಾರದ ನಡುವೆ ಹಣಕಾಸಿನ ವಿಚಾರವು ಮುನಿಸುಗಳ ತರಬಹುದು. ಆಪ್ತರೊಬ್ಬರಿಂದ ನಿಮಗೆ ಸಹಾಯ ಕೋರಿ ಕರೆ ಬರಬಹುದು.
ಕರ್ಕ ರಾಶಿ
ಕರ್ಕ ರಾಶಿಯ ಜನರಲ್ಲಿ ಈ ದಿನವು ಅನುಕೂಲಕರ ನಿಮ್ಮ ಆರ್ಥಿಕ ವಿಚಾರವಾಗಿ ಆಪ್ತರ ಸಹಾಯ ಪಡೆಯುವಿರಿ. ಬಹು ಸಮಯದಿಂದ ಅರ್ಧಕ್ಕೆ ನಿಲ್ಲಿಸಿರುವ ಕೆಲಸವನ್ನು ಪೂರ್ಣ ಮಾಡುವಿರಿ. ಸಂಬಂಧಿಗಳ ಮನೆಗೆ ಭೇಟಿ ನೀಡಬಹುದು.
ಸಿಂಹ ರಾಶಿ
ಸಿಂಹ ರಾಶಿಯ ಜನರಿಗೆ ಇಂದು ಸಾಮಾನ್ಯ ದಿನ. ನಿರುದ್ಯೋಗಿಗಳಿಗೆ ಸಂತಸದ ಸುದ್ದಿ ಕಾದಿದೆ. ಆಪ್ತರೊಬ್ಬರಿಂದ ನಿಮಗೆ ಹಣ ಬರುವ ಸಾಧ್ಯತೆ ಇದೆ. ಯಾರಿಂದಾದರು ಸಹಾಯ ಬಯಸುವುದು ಫಲ ನೀಡಲಿದೆ. ದಿಢೀರ್ ಪ್ರಯಾಣಗಳ ಮಾಡಬೇಕಾಗುತ್ತದೆ.
ಕನ್ಯಾ ರಾಶಿ
ಕನ್ಯಾ ರಾಶಿಯ ಜನರಿಗೆ ಈ ದಿನವು ಅನುಕೂಲಕರ ವಾತಾವರಣ ತರಲಿದೆ. ನಿಮ್ಮ ಹಲವು ಕೆಲಸಗಳಲ್ಲಿ ಆಪ್ತರ ಸಹಕಾರ ನೋಡಬಹುದು. ಪ್ರವಾಸದ ದಿನಾಂಕ ಬದಲಾಯಿಸುವುದು ಉತ್ತಮ. ದೇವಾಲಯ ಸಂಬಂಧಿತ ಕಾರ್ಯಗಳಲ್ಲಿ ತೊಡಗಬಹುದು. ಮನೆಯ ಹಿರಿಯ ಸದಸ್ಯರ ಆರೋಗ್ಯದಲ್ಲಿ ಏರುಪೇರು ಸಂಭವಿಸಬಹುದು.
ತುಲಾ ರಾಶಿ
ತುಲಾ ರಾಶಿಯವರಿಗೆ ಇಂದು ಸಾಮಾನ್ಯ ದಿನ. ಹೊಸ ಆದಾಯ ಮೂಲವನ್ನು ಹುಡುಕುತ್ತಿದ್ದರೆ ಈ ದಿನದಂದು ಹೊಸ ಬಯಕೆಯನ್ನು ಈಡೇರಿಸಿಕೊಳ್ಳುವಿರಿ. ಸಾಲ ಮಾಡುವ ಇಚ್ಛೆ ಇದ್ದರೆ ಕೆಲ ದಿನಗಳ ಕಾಲ ಮುಂದೂಡುವುದು ಉತ್ತಮ.
ವೃಶ್ಚಿಕ ರಾಶಿ
ಗೃಹಿಣಿಯರಲ್ಲಿ ದಿಢೀರ್ ಹಣಕಾಸಿನ ಸಮಸ್ಯೆ ಬರಬಹುದು. ಅದರಲ್ಲೂ ಮನೆಗೆ ಅಗತ್ಯ ವಸ್ತುಗಳ ಖರೀದಿ ಸಮಯದಲ್ಲಿ ತೊಡಕುಗಳಿವೆ. ವ್ಯಾಪಾರಿಗಳಿಗೆ, ಸ್ವಂತ ಉದ್ಯೋಗ ಮಾಡುವ ಮಂದಿಗೆ ಈ ದಿನವು ಅಚ್ಚರಿ ಫಲಿತಾಂಶ ಪಡೆಯಬಹುದು. ಬಹು ಸಮಯದಿಂದ ಕಾಡಿದ್ದ ಚಿಂತೆಯೊಂದು ದೂರಾಗಬಹುದು.
ಧನು ರಾಶಿ
ಇಂದು ನೀವು ಪ್ರಯಾಣಗಳಲ್ಲಿ ತೊಡಗುವಿರಿ. ಸಮಯದೊಂದಿಗೆ ನೀವು ಕೂಡ ಬದಲಾಗಬೇಕಾಗುತ್ತದೆ. ಆಪ್ತರೊಬ್ಬರು ನೀವು ಮಾಡಿದ್ದ ಸಹಾಯ ಮರೆಯಬಹುದು. ಮನೆಯ ವಸ್ತುವೊಂದನ್ನು ಖರೀದಿಸುವ ಬಯಕೆ ಈಡೇರಿಸಿಕೊಳ್ಳುವ ಅವಕಾಶವಿದೆ.
ಮಕರ ರಾಶಿ
ಮಕರ ರಾಶಿ ಜನರಿಗೆ ಈ ದಿನವು ಅಚ್ಚರಿಗಳಿಂದ ತುಂಬಿದೆ. ನೀವು ವಿವಾಹ ಸಂಬಂಧಿತ ವಿಚಾರವಾಗಿ ಇಂದು ಮಾತುಕತೆಗೆ ಮುಂದಾದರೆ ಉತ್ತಮ ಫಲಿತಾಂಶವಿದೆ. ಬಟ್ಟೆ ವ್ಯಾಪಾರಿಗಳಿಗೆ ಶುಭವಿದೆ. ವ್ಯಾಪಾರಿಗಳು ಹೊಸ ಆದಾಯ ಪಡೆಯಬಹುದು. ಖರ್ಚುಗಳನ್ನು ನಿಭಾಯಿಸುತ್ತೀರಿ.
ಕುಂಭ ರಾಶಿ
ಕುಂಭ ರಾಶಿಯವರಿಗೆ ಉದರ ಸಂಬಂಧಿ ಸಮಸ್ಯೆಗಳು ಕಾಣಿಸಬಹುದು, ಹೀಗಾಗಿ ಆಹಾರ ಸಂಬಂಧಿತ ವಿಚಾರವಾಗಿ ಎಚ್ಚರಿಕೆಯಿಂದ ಇರುವುದು ಉತ್ತಮ. ಸಾಲ ಪಾವತಿ ಸಂಬಂಧಿಸಿದಂತೆ ಒತ್ತಡಗಳು ಬರಬಹುದು. ವಾಹನ ವಿಚಾರದಲ್ಲಿ ಶುಭವಿದೆ.
ಮೀನ ರಾಶಿ
ಮೀನ ರಾಶಿಯವರಿಗೆ ಸವಾಲಿನ ದಿನ. ನೀವು ಮಾಡಬೇಕಿದ್ದ ಕೆಲಸಗಳನ್ನು ಮುಂದೂಡುತ್ತೀರಿ. ವೈದ್ಯರ ಬಳಿ ತೆರಳಬೇಕಾದ ವಿಚಾರದಲ್ಲಿ ನಿರ್ಲಕ್ಷ್ಯ ಮಾಡಬೇಡಿ. ವಾಹನ ಚಾಲನೆಯ ವಿಚಾರದಲ್ಲಿ ಎಚ್ಚರಿಕೆ ಇರಲಿ. ನಿಮ್ಮ ಮನೆಯ ಹಣಕಾಸಿನ ವಿಚಾರದಲ್ಲಿ ಶುಭವಿದೆ.



Click it and Unblock the Notifications
