Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಬೇಸಿಗೆಯಲ್ಲಿ ತಲೆ ಹೊಟ್ಟು ನಿವಾರಣೆ ಹೇಗೆ? ನೆತ್ತಿ ರಕ್ಷಣೆಗೆ ಇಲ್ಲಿದೆ ಕೆಲವು ಟಿಪ್ಸ್
ಬೇಸಿಗೆ ಆರಂಭವಾಯಿತು ಅಂದ್ರೆ ಹತ್ತು ಹಲವು ರೀತಿಯ ಸಮಸ್ಯೆಗಳ ನೋಡಬಹುದು. ಅದ್ರಲ್ಲೂ ಬಿಸಿಲಿನ ತಾಪಕ್ಕೆ ಚರ್ಮ ಸಂಬಂಧಿ ಸಮಸ್ಯೆಗಳು ಕಾಣಿಸಿಕೊಳ್ಳುವುದು ಸಾಮಾನ್ಯ. ಚರ್ಮವು ಕಪ್ಪಾಗುವುದು, ಬಿಸಿಲಿನ ತಾಪದ ಕಾರಣಕ್ಕೆ ಅಲರ್ಜಿಗಳು ಕಾಣಿಸಿಕೊಳ್ಳುವುದು ನೋಡಬಹುದು. ಹಾಗೆ ಬೇಸಿಗೆಯಲ್ಲಿ ನಿಮಗೆ ಕಾಣಿಸಿಕೊಳ್ಳುವ ಸಮಸ್ಯೆಗಳಲ್ಲಿ ತಲೆ ಹೊಟ್ಟು ಸಹ ಒಂದಾಗಿದೆ.
ಬೇಸಿಗೆಯಲ್ಲಿ ಬೆವರು ಹೆಚ್ಚಾಗುವ ಕಾರಣದಿಂದಾಗಿ ಹೊಟ್ಟು ಹೆಚ್ಚಾಗುವುದು ನೋಡಬಹುದು. ಅದ್ರಲ್ಲೂ ಬೆವರುವಿಕೆಯಿಂದ ಹೊಟ್ಟು ಹೆಚ್ಚಾಗಿ ತಲೆ ಕೂದಲು ಉದುರುವಿಕೆಗೂ ಕಾರಣವಾಗುತ್ತದೆ. ಹೀಗಾಗಿ ಬೇಸಿಗೆಯಲ್ಲಿ ತಲೆ ಹೊಟ್ಟು ನಿವಾರಣೆಗೆ ಮೊದಲ ಆದ್ಯತೆ ನೀಡಬೇಕಾಗುತ್ತದೆ. ಕೂದಲಿನ ಆರೋಗ್ಯ ಕಾಪಾಡಿಕೊಳ್ಳುವ ಮೊದಲ ಆದ್ಯತೆಯಾಗಿ ನಾವು ನೆತ್ತಿಯ ಆರೋಗ್ಯ ಕಾಪಾಡಿಕೊಳ್ಳಬೇಕು.

ಕೂದಲಿನ ಕೆಳಗಿರುವ ಚರ್ಮವು ನಿಮ್ಮ ದೇಹದ ಉಳಿದ ಭಾಗಗಳಂತೆಯೇ ಬೇಸಿಗೆಯ ಸಮಯದಲ್ಲಿ ಹಾನಿಗೊಳಗಾಗುತ್ತದೆ. ಅದ್ರಲ್ಲೂ ಹೆಚ್ಚು ಬಿಸಿಲಿನ ಕಾರಣದಿಂದ ಒಣಗುವುದು ಅಥವಾ ಬಿರುಕುಗಳು ಕಾಣಿಸಿಕೊಳ್ಳಿಲಿದೆ. ಇದು ಕೂದಲು ಉದುರುವಿಕೆಯಂತಹ ಗಂಭೀರ ಸಮಸ್ಯೆಗಳನ್ನು ಕೂಡ ತರಬಹುದು. ನೆತ್ತಿಯ ಮೇಲೆ ಬಿಸಿಲು ಬಿದ್ದಾಗ ಬೆವರು ಕಾಣಿಸಿಕೊಳ್ಳಲಿದೆ. ಹಾಗೆ ಈ ಬೆವರಿನೊಂದಿಗೆ ಮಾಲಿನ್ಯ, ಧೂಳು ಬೆರೆಯಲಿದೆ. ಇದು ವಿಪರೀತ ತುರಿಕೆ, ತಲೆಹೊಟ್ಟು, ಕಿರುಚೀಲಗಳು ಮುಚ್ಚಿಕೊಳ್ಳುವಂತಹ ಸಮಸ್ಯೆಗಳಿಗೆ ಕಾರಣವಾಗಲಿದೆ.
ಈ ಎಲ್ಲಾ ಕಾರಣದಿಂದ ನೆತ್ತಿಯಲ್ಲಿ ಕೂದಲು ಉದುರುವಿಕೆ, ತಲೆ ಹೊಟ್ಟು ಹೆಚ್ಚಾಗುವಿಕೆ, ತುರಿಕೆ ಕಾಣಿಸಿಕೊಳ್ಳಿದೆ. ಹಾಗಾದ್ರೆ ಬೇಸಿಗೆಯಲ್ಲಿ ಕಾಣಿಸಿಕೊಳ್ಳುವ ಈ ಸಮಸ್ಯೆಗಳಿಂದ ಮುಕ್ತಿ ಪಡೆಯಲು ಯಾವೆಲ್ಲಾ ಪರಿಹಾರ ಮಾಡಿಕೊಳ್ಳಬೇಕು ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಬಿಸಿಲಿನಿಂದ ತಪ್ಪಿಸಿಕೊಳ್ಳುವ ಉಪಾಯಗಳು
ಬೇಸಿಗೆಯಲ್ಲಿ ಬಿಸಿಲು ನೇರವಾಗಿ ನೆತ್ತಿಯ ಮೇಲೆ ಬೀಳುವುದನ್ನು ತಪ್ಪಿಸುವುದಬಹಳ ಮುಖ್ಯ. ಹೀಗಾಗಿ ಮನೆಯಿಂದ ಹೊರಬರುವ ಸಮಯದಲ್ಲಿ ಛತ್ರಿ, ಹ್ಯಾಟ್, ತಲೆ ಮುಚ್ಚುವಂತಹ ಬಟ್ಟೆ ಧರಿಸುವುದು ಉತ್ತಮ. ಹಾಗೆ ಆದಷ್ಟು ಬಿಸಿಲು ತಲೆ ಮೇಲೆ ನೇರವಾಗಿ ಬೀಳುವುದನ್ನು ತಡೆಯುವುದು ಉತ್ತಮ.
ತಲೆಸ್ನಾನ ಮತ್ತು ತೆಂಗಿನ ಎಣ್ಣೆ
ಬೇಸಿಗೆಯ ಸಮಯದಲ್ಲಿ ನಿಯಮಿತ ತಲೆಸ್ನಾನ ಮಾಡುವುದು ಉತ್ತಮ. ಬೇಸಿಗೆಯಲ್ಲಿ ಬೆವರಿನ ಕಾರಣದಿಂದಾಗಿ ಹೆಚ್ಚು ಹೊಟ್ಟು ಅಥವಾ ತುರಿಕೆಯು ಈ ಸಮಸ್ಯೆಯನ್ನು ದ್ವಿಗುಣವಾಗಿಸಲಿದೆ. ಹೀಗಾಗಿ ವಾರದಲ್ಲಿ 4 ಬಾರಿಯಾದರು ತಲೆಸ್ನಾನ ಮಾಡುವುದು ಉತ್ತಮ. ಉಳಿದಂತೆ ತಲೆಗೆ ತೆಂಗಿನ ಎಣ್ಣೆ ಹಾಕುವುದು ನೆತ್ತಿಯನ್ನು ತಂಪಾಗಿಸಲಿದೆ.
ಹೊಟ್ಟು ನಿವಾರಣೆಗೆ ನೈಸರ್ಗಿಕ ಪದಾರ್ಥಗಳ ಬಳಸಿ
ಬೇಸಿಗೆಯಲ್ಲಿ ಹೆಚ್ಚಾಗಿ ಕಾಡುವ ಈ ತಲೆಹೊಟ್ಟು ನಿವಾರಣೆಗೆ ನೈಸರ್ಗಿಕ ವಿಧಾನ ಬಳಸುವುದು ಸೂಕ್ತ. ಅದ್ರಲ್ಲೂ ಹಲವು ಮನೆಮದ್ದುಗಳ ಬಳಸಿಕೊಂಡು ಒಂದಿಷ್ಟು ಔಷಧಿ ಮಾಡಿಕೊಂಡರೆ ಪರಿಣಾಮಕಾರಿಯಾಗಿ ಈ ಸಮಸ್ಯೆಗಳಿಂದ ಮುಕ್ತರಾಗಬಹುದು. ನಿಮ್ಮ ನೆತ್ತಿಗೂ ಒಳಗಿನಿಂದ ತೇವಾಂಶ ಬೇಕು. ಸಾಕಷ್ಟು ನೀರು ಕುಡಿಯಿರಿ ಮತ್ತು ಸೌತೆಕಾಯಿ, ಕಲ್ಲಂಗಡಿ ಮತ್ತು ಪುದೀನದಂತಹ ತಂಪಾಗಿಸುವ ಆಹಾರಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿ.
ಶಾಂಪೂ, ಔಷಧಿ
ಇನ್ನು ನೆತ್ತಿಯ ಆರೋಗ್ಯಕ್ಕಾಗಿ ಹಾಗೆ ಬೇಸಿಗೆಯಲ್ಲಿನ ಸಮಸ್ಯೆಗಳ ನಿವಾರಿಸಿಕೊಳ್ಳಲು ವೈದ್ಯರ ಸಲಹೆಯ ಮೇರೆಗೆ ಶಾಂಪೂ ಹಾಗೂ ಔಷಧಿಯನ್ನು ಬಳಸಬಹುದು. ಅದ್ರಲ್ಲೂ ತಲೆಹೊಟ್ಟು ನಿವಾರಣೆಗಾಗಿ, ಸ್ಕಾಲ್ಪ್ ರಕ್ಷಣೆಗೆ ಸಹಕಾರಿಯಾಗುವಂತಹ ಹಲವು ಔಷಧಿಗಳು ಮಾರುಕಟ್ಟೆಯಲ್ಲಿ ಸಿಗುವುದು ನೋಡಬಹುದು.



Click it and Unblock the Notifications
