Latest Updates
-
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ
3ನೇ ಮಹಾಯುದ್ಧ ಕುರಿತ ಬಾಬಾವಂಗಾ ಭವಿಷ್ಯ ನಿಜವಾಗುತ್ತಾ? ಮಧ್ಯಪ್ರಾಚ್ಯದಿಂದ ಆರಂಭವಾಗುತ್ತಾ ವಿನಾಶ!
ಬಲ್ಗೇರಿಯಾದ ಅತೀಂದ್ರಿಯ ವ್ಯಕ್ತಿ, ಅಂಧೆಯಾದರೂ ನಿಖರ ಭವಿಷ್ಯ ನುಡಿಯುವ ಬಾಬಾ ವಂಗಾ ಕುರಿತು ನೀವು ಕೇಳಿರಬಹುದು. 1911 ರಲ್ಲಿ ಬಲ್ಗೇರಿಯಾದಲ್ಲಿ ಜನಿಸಿದ ಅವರು ತಮ್ಮ 12ನೇ ವಯಸ್ಸಿನಲ್ಲಿ ಆಕಸ್ಮಿಕ ಘಟನೆಯೊಂದರಿಂದ ಸಂಪೂರ್ಣ ದೃಷ್ಟಿ ಕಳೆದುಕೊಂಡಿದ್ದರು. ಇದಾದ ಬಳಿಕ ಅವರು ಭೂಮಿ ಮೇಲೆ ನಡೆಯುವ ದುರಂತಗಳ ಕುರಿತಾಗಿ ಭವಿಷ್ಯ ನುಡಿಯಲು ಮುಂದಾದರು. ಅವರು ಹೇಳಿರುವ ಬಹುತೇಕ ಎಲ್ಲಾ ಭವಿಷ್ಯವಾಣಿಗಳು ನಿಜವಾಗಿದೆ ಎಂದು ಜನರು ಇಂದಿಗೂ ನಂಬಿದ್ದಾರೆ.
1996ರಲ್ಲಿ ಬಾಬಾ ವಂಗಾ ಮರಣ ಹೊಂದಿದರೂ 5079ರ ವರೆಗೆ ಯಾವ ವರ್ಷ ಏನೆಲ್ಲಾ ನಡೆಯಲಿದೆ ಎನ್ನುವ ಭವಿಷ್ಯವಾಣಿಯನ್ನು ನುಡಿದಿದ್ದಾರೆ. ಅಮೆರಿಕಾದ ಮೇಲಿನ 9/11 ದಾಳಿ, ರಷ್ಯಾದ ಕುರ್ಸ್ಕ್ ಜಲಾಂತರ್ಗಾಮಿ ಅಪಘಾತ, ಇಂದಿರಾ ಗಾಂಧಿ ಹತ್ಯೆ, ಒಬಾಮಾ ಅಧ್ಯಕ್ಷರಾಗುವುದು ಸೇರಿ ಕೊರೊನಾ ದುರಂತಗಳನ್ನು ಸರಿಯಾಗಿ ಊಹಿಸಿದ್ದರು. ಹೀಗಾಗಿ ಅವರ ಭವಿಷ್ಯವಾಣಿಗಳ ಕುರಿತಾಗಿ ಈಗ ಎಲ್ಲರ ಕುತೂಹಲ ಮೂಡಿಸಿದೆ.

ಮಧ್ಯಪ್ರಾಚ್ಯ ದೇಶಗಳಲ್ಲಿ ಉಂಟಾಗಿರುವ ಯುದ್ಧ ಭೀತಿಯ ಕುರಿತಾಗಿಯೂ ಬಾಬಾ ವಂಗಾ ಅವರು ಈ ಮೊದಲೇ ಭವಿಷ್ಯ ನುಡಿದ್ದರು. ಹಾಗಾದ್ರೆ 3ನೇ ಮಹಾಯುದ್ಧ, ಆಂತರಿಕ ಯುದ್ಧ, ಮಧ್ಯಪ್ರಾಚ್ಯ ಕುರಿತಾಗಿ ಬಾಬಾ ವಂಗಾ ನುಡಿದಿರುವ ಭವಿಷ್ಯವೇನು? ಆಕೆ ಹೇಳಿರುವ ಭವಿಷ್ಯವಾಣಿಯಲ್ಲಿ ಯಾವೆಲ್ಲಾ ಅಚ್ಚರಿಗಳಿವೆ ಎಂಬುದನ್ನು ನಾವಿಲ್ಲಿ ತಿಳಿದುಕೊಳ್ಳೋಣ.
ಬಾಬಾ ವಂಗಾ ಹೇಳಿರುವ ಭವಿಷ್ಯವಾಣಿಗಳ ಪೈಕಿ 2026ರಲ್ಲಿ ಹಲವು ರೀತಿಯ ಘಟನೆಗಳ ಕುರಿತ ಅವರ ಹೇಳಿಕೆ ಆಘಾತ ಮೂಡಿಸುವಂತಿತ್ತು. 2026ರಲ್ಲಿ ದೊಡ್ಡ ಜಾಗತಿಕ ಸಂಘರ್ಷವನ್ನು ಮೊದಲೇ ಊಹಿಸಿದ್ದರು. ಯುದ್ಧವು ಪೂರ್ವದಲ್ಲಿ ಹುಟ್ಟಿಕೊಳ್ಳುತ್ತದೆ, ನಂತರ ಪಶ್ಚಿಮಕ್ಕೆ ಹರಡುತ್ತದೆ, ಯುರೋಪಿನ ಕೆಲವು ಭಾಗಗಳನ್ನು ವಿನಾಶಕಾರಿಗೊಳಿಸುತ್ತದೆ ಮತ್ತು ಜಾಗತಿಕ ಶಕ್ತಿ ರಚನೆಗಳನ್ನು ಮರುರೂಪಿಸುತ್ತದೆ ಎಂದು ಅವರು ಹೇಳಿದ್ದರು.
ಈ ಭವಿಷ್ಯವಾಣಿಯ ಪ್ರಕಾರ ನೋಡುವುದಾದರೆ ಯುರೋಪ್‌ನ ಕೆಲವು ಭಾಗದಲ್ಲಿ ಈಗಾಗಲೇ ಯುದ್ಧದ ಕಾರಣಕ್ಕೆ ದೊಡ್ಡ ಬದಲಾವಣೆಗಳಾಗಿವೆ. ಖಂಡದ ಕೆಲವು ಭಾಗಗಳು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ದುರ್ಬಲಗೊಳ್ಳುತ್ತವೆ ಎಂದು ಸೂಚಿಸುತ್ತವೆ. ಹಾಗೆ ರಷ್ಯಾ ನಂತರದಲ್ಲಿ ಬಲವಾಗಿ ಹೊರಹೊಮ್ಮುತ್ತದೆ, ಜಾಗತಿಕ ಪ್ರಭಾವದ ಸಮತೋಲನವನ್ನು ಬದಲಾಯಿಸುತ್ತದೆ ಎಂದು ಹೇಳಿದ್ದರು. ಉಕ್ರೇನ್ ಮೇಲಿನ ಯುದ್ಧದ ಬಳಿಕ ರಷ್ಯಾ ಈಗ ತನ್ನ ಬಲ ಹೆಚ್ಚಿಸಿಕೊಂಡಿದೆ.
ಮಧ್ಯಪ್ರಾಚ್ಯದಲ್ಲಿ ಒಂದು ದೊಡ್ಡ ಯುದ್ಧ ಆರಂಭವಾಗುತ್ತದೆ, ಅದು ಕ್ರಮೇಣ ಇಡೀ ಜಗತ್ತನ್ನೇ ತನ್ನ ಹಿಡಿತಕ್ಕೆ ತೆಗೆದುಕೊಳ್ಳುತ್ತದೆ ಎಂದು ಬಾಬಾ ವೆಂಗಾ ಭವಿಷ್ಯ ನುಡಿದಿದ್ದಾರೆ. ಅವರ ಭವಿಷ್ಯವಾಣಿಯ ಪ್ರಕಾರ, ಮುಸ್ಲಿಂ ದೇಶಗಳು ಮತ್ತು ಪಶ್ಚಿಮದ ನಡುವೆ ದೊಡ್ಡ ಸಂಘರ್ಷ ಉಂಟಾಗುತ್ತದೆ. ಅಂತಹ ಯುದ್ಧವು ಯುರೋಪ್ ಅನ್ನು ಸಹ ಭುಗಿಲೆದ್ದಿದೆ ಎಂದು ಅವರು ಸುಳಿವು ನೀಡಿದರು.
ಮೂರನೇ ಮಹಾಯುದ್ಧವು ಈ ವರ್ಷ ಪ್ರಾರಂಭವಾಗುತ್ತದೆ ಎಂದು ಬಾಬಾ ವಂಗಾ ಅವರ ಭವಿಷ್ಯವಾಣಿ ಹೇಳಿದ್ದರು. ತೈವಾನ್ ಮೇಲೆ ಚೀನಾದ ನಿರಂತರ ಮಿಲಿಟರಿ ಒತ್ತಡ ಮತ್ತು ರಷ್ಯಾ ಮತ್ತು ಯುಎಸ್ಎ ನಡುವಿನ ಹದಗೆಟ್ಟ ಸಂಬಂಧಗಳು, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ಸೇರಿದಂತೆ ನಡೆಯುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳ ನಡುವೆ ಯುದ್ದ ಭೀತಿ ಹೆಚ್ಚಾಗಲಿದೆ ಎಂದು ಅವರು ಹೇಳಿದ್ದರು. ಅದೇ ರೀತಿಯಾಗಿ ಈಗ ಮಧ್ಯಪ್ರಾಚ್ಯದಲ್ಲಿ ಕಲಹ ಏರ್ಪಟ್ಟಿದೆ.
ಬಾಬಾ ವಂಗಾ ಬೆಂಬಲಿಗರು 2020 ರ ದಶಕದ ಮಧ್ಯಭಾಗದಲ್ಲಿ ಜಾಗತಿಕ ಶಕ್ತಿ ಸಂಬಂಧಗಳನ್ನು ಪರಿವರ್ತಿಸುವ ದುರಂತ ಸಂಘರ್ಷವನ್ನು ಅವರು ಭವಿಷ್ಯ ನುಡಿದಿದ್ದಾರೆ ಎಂದು ವಾದಿಸುತ್ತಾರೆ. ಆಕೆ ನುಡಿದ ಭವಿಷ್ಯವಾಣಿಗಳ ಕುರಿತಾಗಿ ಯಾವುದೇ ಲಿಖಿತ ದಾಖಲೆಗಳಿಲ್ಲದಿದ್ದರೂ ಅವರ ಬೆಂಬಲಿಗರು ಆಕೆಯ ಭವಿಷ್ಯವಾಣಿಯನ್ನು ಮೌಖಿಕ ರೀತಿಯಲ್ಲಿ ನಂಬುತ್ತಾರೆ.



Click it and Unblock the Notifications
