Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಶನಿ-ಮಂಗಳನ ಚಲನೆಯಿಂದ ದ್ವಿ ದ್ವಾದಶ ಯೋಗ: ಈ ರಾಶಿಯವರಿಗೆ ಆಶೀರ್ವಾದ, ಹಣ ಲಾಭದ ನಿರೀಕ್ಷೆ
ಶನಿಯನ್ನು ಕರ್ಮ ಫಲಗಳ ನೀಡುವ ಗ್ರಹವೆಂದು ಪರಿಗಣಿಸಲಾಗುತ್ತದೆ. ಈ ಶನಿಯು ನಿಧಾನವಾಗಿ ಚಲಿಸುವ ಕಾರಣ ಹಲವು ಗ್ರಹದೊಂದಿಗೆ ಸಂಯೋಗವಾಗುವುದು ನೋಡಬಹುದು. ಗ್ರಹಗಳಲ್ಲಿ ಶನಿಯು ಎರಡೂವರೆ ವರ್ಷಗಳ ಕಾಲ ಒಂದೇ ರಾಸಿಯಲ್ಲಿ ಚಲಿಸುತ್ತಾನೆ, ಆದ್ರೆ ಈ ಸಮಯದಲ್ಲಿ ಹಲವು ಗ್ರಹಗಳೊಂದಿಗೆ ಆತನ ಸಂಯೋಗ ನೋಡಬಹುದು. ಇದೇ ಕಾರಣದಿಂದ ಶನಿಯ ಪ್ರಭಾವ ಹೆಚ್ಚಾಗುವುದು ಹಾಗೆ ಕಡಿಮೆಯಾಗುವುದು ಸಹ ಗಮನಿಸಬೇಕಾದ ಅಂಶವಾಗಿರಲಿದೆ.
ಶನಿ ವ್ಯಕ್ತಿಗಳ ಕ್ರಿಯೆಗಳಿಗೆ ಅನುಗುಣವಾಗಿ ಪ್ರತಿಫಲವನ್ನು ನೀಡುವ ಗ್ರಹ. ಶನಿ ಪ್ರಸ್ತುತ ಮೀನ ರಾಶಿಯಲ್ಲಿದ್ದು, ಜೂನ್ 2 2027 ರ ವರೆಗೆ ಅಲ್ಲೇ ಇರುತ್ತಾನೆ. ಈ ರಾಶಿಯಲ್ಲಿದ್ದಾಗ ಶನಿಯು ವಿವಿಧ ಗ್ರಹಗಳೊಂದಿಗೆ ಸಂಯೋಗ ಅಥವಾ ಕೋನೀಯ ಚಲನೆಯನ್ನು ರೂಪಿಸುತ್ತಾನೆ. ಈ ಚಲನೆಯ ಸಮಯದಲ್ಲಿ ಹಲವು ರೀತಿಯ ಯೋಗಗಳಿಗೆ ಕಾರಣವಾಗುತ್ತಾನೆ. ಇದು ಶುಭ ಮತ್ತು ಅಶುಭ ಪರಿಣಾಮಗಳಿಗೆ ಕಾರಣವಾಗುತ್ತದೆ.

ಸದ್ಯ ಈಗ ಇದೇ ಮಾರ್ಚ್ 5ರಂದು ಶನಿ ಮಂಗಳನೊಂದಿಗೆ ಸೇರಿ ದ್ವಿದ್ವಾದಶ ಯೋಗವನ್ನು ರೂಪಿಸುತ್ತಾನೆ. ಈ ಯೋಗವು ಎಲ್ಲಾ 12 ರಾಶಿ ಜನರ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಆದಾಗ್ಯೂ ಮೇಷ, ಸಿಂಹ ಮತ್ತು ಮೀನ ರಾಶಿಯವರು ಹೆಚ್ಚು ಸಕಾರಾತ್ಮಕ ಪರಿಣಾಮಗಳನ್ನು ಅನುಭವಿಸುತ್ತಾರೆ. ಮಾರ್ಚ್ 5ರಂದು ಶನಿ ಮತ್ತು ಮಂಗಳನು ಸುಮಾರು 30 ಡಿಗ್ರಿ ಕೋನದಲ್ಲಿ ಚಲಿಸುತ್ತಾರೆ. ಇದು ದ್ವಿದ್ವಾದಶ ಯೋಗಕ್ಕೆ ಕಾರಣವಾಗುತ್ತದೆ. ಹಾಗಾದ್ರೆ ಈ ಯೋಗದಿಂದ ಯಾರಿಗೆ ಶುಭಕರ ಅನ್ನೋದನ್ನು ನಾವಿಲ್ಲಿ ತಿಳಿದುಕೊಳ್ಳೋಣ.
ಮೇಷ ರಾಶಿ
ಶನಿ ಮತ್ತು ಮಂಗಳನ ದ್ವಿದ್ವಾದಶ ಯೋಗವು ಮೇಷ ರಾಶಿಯವರಿಗೆ ಪ್ರಯೋಜನಕಾರಿಯಾಗಬಹುದು. ಶನಿ ಹನ್ನೆರಡನೇ ಮನೆಯಲ್ಲಿ ಮತ್ತು ರಾಹು ಹನ್ನೊಂದನೇ ಮನೆಯಲ್ಲಿದ್ದಾರೆ. ಈ ಕಾರಣದಿಂದಾಗಿ ತಮ್ಮ ವೃತ್ತಿಜೀವನದಲ್ಲಿ ಗಣನೀಯ ಲಾಭವನ್ನು ಪಡೆಯಬಹುದು. ನಿರುದ್ಯೋಗಿಗಳಿಗೆ ಈ ಸಮಯದಲ್ಲಿ ಬಯಸಿದಂತಹ ವೇತನದ ಉದ್ಯೋಗ ಸಿಗಬಹುದು. ಹಣಕಾಸು ವಿವಾರದಲ್ಲಿನ ದೊಡ್ಡ ಅಡ್ಡಿಯೊಂದು ನಿವಾರಣೆಯಾಗುತ್ತೆ. ದೀರ್ಘಕಾಲದಿಂದ ಬಾಕಿ ಉಳಿಸಿಕೊಂಡಿದ್ದ ಕೆಲಸಗಳನ್ನು ಪೂರ್ಣ ಮಾಡುವಿರಿ. ಮನೆಯಲ್ಲಿ ಶುಭ ಕಾರ್ಯ ಸಂಬಂಧಿತ ವಿಚಾರವಾಗಿ ಧನಾತ್ಮಕ ರೀತಿಯ ಮಾತುಕತೆಗಳಿವೆ.
ಸಿಂಹ ರಾಶಿ
ಈ ರಾಶಿಯಡಿಯಲ್ಲಿ ಜನಿಸಿದವರಿಗೆ ದ್ವಿದ್ವಾದಶ ಯೋಗವು ತುಂಬಾ ಪ್ರಯೋಜನಕಾರಿಯಾಗಬಹುದು. ಈ ರಾಶಿಯ ಏಳನೇ ಮನೆಯಲ್ಲಿ ಮಂಗಳವಿದೆ. ಪರಿಣಾಮವಾಗಿ ಈ ರಾಶಿಯ ಜನರಿಗೆ ಆಧ್ಯಾತ್ಮಿಕತೆಯ ಕಡೆಗೆ ಬಲವಾದ ಒಲವು ಹೊಂದಿರಬಹುದು. ಇದಲ್ಲದೆ ನಿಮ್ಮ ಗೌರವ ಹೆಚ್ಚಾಗುವ ಸಮಯವೂ ಹೌದು. ಅವರು ಗಣನೀಯ ಪ್ರಮಾಣದ ಹಣವನ್ನು ಗಳಿಸುವಲ್ಲಿ ಯಶಸ್ವಿಯಾಗಬಹುದು. ವಿದೇಶಕ್ಕೆ ಹೋಗುವ ನಿಮ್ಮ ಕನಸು ನನಸಾಗಬಹುದು. ನಿಮಗೆ ಹೊಸ ಜವಾಬ್ದಾರಿಗಳು ಬರಬಹುದು. ಆಪ್ತರೊಬ್ಬರಿಂದ ನಿಮಗೆ ಹಣಕಾಸಿನ ಲಾಭವಿದೆ. ನಿಮ್ಮ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುತ್ತದೆ. ಭವಿಷ್ಯಕ್ಕಾಗಿ ಹಣವನ್ನು ಉಳಿಸುವಲ್ಲಿ ನೀವು ಯಶಸ್ವಿಯಾಗುತ್ತೀರಿ. ಸಂಬಂಧಗಳು ಸಿಹಿಯಾಗಿರುತ್ತವೆ. ವೈವಾಹಿಕ ಜೀವನವು ಉತ್ತಮವಾಗಿರುತ್ತದೆ.
ಮೀನ ರಾಶಿ
ಮಂಗಳ-ಶನಿ ಸಂಯೋಗವು ಮೀನ ರಾಶಿಯವರಿಗೆ ಪ್ರಯೋಜನಕಾರಿಯಾಗಿದೆ. ಶನಿ ಈ ರಾಶಿ ಜನರ ಎರಡನೇ ಮನೆಯಲ್ಲಿ ಮತ್ತು ಮಂಗಳ ಲಗ್ನ ಮನೆಯಲ್ಲಿ ಇರಿಸಲ್ಪಟ್ಟಿದ್ದಾನೆ. ಪರಿಣಾಮವಾಗಿ ನಿಮ್ಮ ಆರ್ಥಿಕ ಲಾಭಗಳನ್ನು ಪಡೆಯುವ ಸಾಧ್ಯತೆಯಿದೆ. ವೃತ್ತಿಪರ ಜೀವನದಲ್ಲಿ ದೀರ್ಘಕಾಲದ ಸಮಸ್ಯೆಗಳು ಕೊನೆಗೊಳ್ಳಬಹುದು. ನೀವು ಕೆಲಸದ ಸ್ಥಳದಲ್ಲಿ ಅಪಾರ ಯಶಸ್ಸನ್ನು ಸಾಧಿಸಬಹುದು. ನಷ್ಟದಲ್ಲಿದ್ದ ವ್ಯವಹಾರಗಳು ಲಾಭದತ್ತ ತಿರುಗಬಹುದು. ಉಳಿತಾಯಗಳು ಹೆಚ್ಚಾಗುತ್ತದೆ. ಆದಾಯ ಮೂಲಗಳು ಹೆಚ್ಚಾಗುತ್ತೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ಅದು ವಿಶ್ವಾಸಾರ್ಹವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications
