Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಊಟ, ಮುದ್ದೆ ಸವಿಯೋಕೆ ಈ ರೀತಿ ಮಟನ್ ಸಾಂಬಾರ್ ಮಾಡಿ!
ನಾನ್‌ವೆಜ್ ಪ್ರಿಯರು ಚಿಕನ್ ಹಾಗೆ ಮಟನ್ ಖಾದ್ಯಗಳು ಅಂದ್ರೆ ಬಹಳ ಇಷ್ಟಪಟ್ಟು ಸವಿಯುತ್ತಾರೆ. ಚಿಕನ್ ಹಾಗೂ ಮಟನ್‌ನಲ್ಲಿ ವಿವಿಧ ಬಗೆಯ ರುಚಿ ರುಚಿಯಾದ ಖಾದ್ಯಗಳು ಸಿದ್ದವಾಗುತ್ತವೆ. ಅದ್ರಲ್ಲೂ ಮಟನ್ ರುಚಿ ಬಾಯಲ್ಲಿ ನೀರು ತರಿಸುತ್ತೆ. ಹಾಗೆ ಮಟನ್‌ನಿಂದಲೂ ಹಲವು ರೀತಿಯ ಖಾದ್ಯಗಳ ಮಾಡಬಹುದು. ಮಟನ್ನಿಂದ ಮಾಡುವ ಕೆಲವು ತಿನಿಸುಗಳಲ್ಲಿ ಮಟನ್ ಬಿರಿಯಾನಿ, ಮಟನ್ ಗ್ರೇವಿ, ಮಟನ್ ಸಾಂಬಾರ್, ಮಟನ್ ಮಸಾಲದಂತಹ ರುಚಿ ರುಚಿಯ ಖಾದ್ಯಗಳನ್ನು ನೀವು ಕೂಡ ಸವಿದಿರುತ್ತೀರಿ.
ನಾವಿಂದು ಮಟನ್ ಖಾದ್ಯಗಳ ಪೈಕಿ, ಅನ್ನದೊಂದಿಗೆ, ಮುದ್ದೆಯೊಂದಿಗೆ ಬಾಯಲ್ಲಿ ನೀರು ತರಿಸುವಂತಹ ರುಚಿಯ ಮಟನ್ ಸಾಂಬಾರ್ ಮಾಡುವ ಕುರಿತಾಗಿ ತಿಳಿದುಕೊಳ್ಳೋಣ. ಈ ರೀತಿಯ ವಿಧಾನದಲ್ಲಿ ನೀವು ಮಟನ್ ಸಾಂಬಾರ್ ಮಾಡಿದ್ರೆ ಮನೆ ಮಂದಿಗೆ ಹೋಟೆಲ್ ರುಚಿಯ ನೆನಪಾಗುತ್ತೆ. ಹಾಗೆ ಬಹಳ ಇಷ್ಟಪಟ್ಟು ಇದನ್ನು ಸವಿಯೋದು ನೋಡಬಹುದು.

ಹಾಗಾದ್ರೆ ಸ್ಪೆಷಲ್ ಮಟನ್ ಸಾಂಬಾರ್ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?, ಯಾವ ಮಸಾಲೆ ಹಾಕಬೇಕು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಮಟನ್ ಸಾಂಬಾರ್ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
- ಮಟನ್-ನ 1 ಕೆ.ಜಿ
- ಬೆಳ್ಳುಳ್ಳಿ
- ಈರುಳ್ಳಿ
- ಅರಶಿಣ
- ಟೊಮೆಟೋ
- ಮಟನ್ ಮಸಾಲ
- ಚಕ್ಕೆ
- ಲವಂಗ
- ಉಪ್ಪು
- ಎಣ್ಣೆ
- ಏಲಕ್ಕಿ
- ಗಸೆಗಸೆ
- ಕೊತ್ತಂಬರಿ ಸೊಪ್ಪು
- ಪುದಿನ ಸೊಪ್ಪು
ಮಟನ್ ಸಾಂಬಾರ್ ಮಾಡುವ ವಿಧಾನವೇನು?
ಮೊದಲು ಮಟನ್ ತೊಳೆದು ಒಂದು ತಟ್ಟೆಯಲ್ಲಿ ಹಾಕಿಟ್ಟುಕೊಳ್ಳಿ. ಈಗ ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಈರುಳ್ಳಿ, ಬೆಳ್ಳುಳ್ಳಿ, ಶುಂಠಿ, ಹಸಿ ಮೆಣಸು, ಕಾಳು ಮೆಣಸು, ಕೊತ್ತಂಬರಿ ಸೊಪ್ಪು, ಪುದಿನ ಸೊಪ್ಪು ನೀರು ಹಾಕಿಕೊಂಡು ನುಣ್ಣಗೆ ರುಬ್ಬಿಕೊಳ್ಳಬೇಕು. ಇದನ್ನು ಬದಿಗಿಟ್ಟುಕೊಳ್ಳಿ. ಈಗ ಮತ್ತೆ ಮಿಕ್ಸಿ ಜಾರ್‌ಗೆ 2 ಟೊಮೆಟೋ, ಮಟನ್ ಸಾಂಬಾರ್ ಪುಡಿ, ನೀರು ಹಾಕಿಕೊಂಡು ಮತ್ತೆ ರುಬ್ಬಿ ಬೌಲ್‌ಗೆ ಹಾಕಿಟ್ಟುಕೊಳ್ಳಿ.
ಈಗ ಒಲೆ ಮೇಲೆ ಒಂದು ಕುಕ್ಕರ್ ಇಟ್ಟು ಅದಕ್ಕೆ ಎಣ್ಣೆ ಹಾಕಿ ಬಳಿಕ ರುಬ್ಬಿಕೊಂಡಿರುವ ಗ್ರೀನ್ ಮಸಾಲೆ ಹಾಕಿ ಬಳಿಕ ಅಡುಗೆ ಅರಶಿಣ ಹಾಕಿ ಫ್ರೈ ಮಾಡಿಕೊಳ್ಳಿ. ಚೆನ್ನಾಗಿ 3 ನಿಮಿಷ ಫ್ರೈ ಮಾಡಿಕೊಳ್ಳಬೇಕು. ಇದಕ್ಕೆ ಈಗ ಮಟನ್ ಸೇರಿಸಿಕೊಂಡು ಉಪ್ಪು ಸೇರಿಸಿ ಮಿಕ್ಸ್ ಮಾಡಿಕೊಂಡು ಮುಚ್ಚಳ ಮುಚ್ಚಿ ಫ್ರೈ ಆಗಲು ಬಿಡಿ. ಈಗ ಮುಚ್ಚಳ ತೆಗೆದು ಮೊದಲು ಮಾಡಿಕೊಂಡಿದ್ದ ಮಸಾಲೆಯನ್ನು ಸಹ ಇದಕ್ಕೆ ಹಾಕಿ ಸ್ವಲ್ಪ ನೀರು ಹಾಕಿ ಮಿಕ್ಸ್ ಮಾಡಿ ಕುಕ್ಕರ್ ಮುಚ್ಚಳ ಮುಚ್ಚಿ 3 ಸೀಟಿ ಹೊಡೆಯಲು ಬಿಡಿ.
ನಂತರ ಈಗ ಮಿಕ್ಸಿ ಜಾರ್‌ಗೆ ತೆಂಗಿನಕಾಯಿ ತುರಿ ಸೇರಿಸಿಕೊಳ್ಳಿ. ಹಾಗೆ ಹುರಿಗಡಲೆ, ಏಲಕ್ಕಿ, ಚಕ್ಕೆ, ಲವಂಗ, ಗಸೆ ಗಸೆ ಸಹ ಹಾಕಿಕೊಂಡು ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು. ಈ ಚಟ್ನಿಯಂತಹ ಮಸಾಲೆಯನ್ನು ಬೇಯುತ್ತಿರುವ ಮಟನ್ ಮಸಾಲೆಗೆ ಹಾಕಿಕೊಳ್ಳಬೇಕು. ಮತ್ತೆ ಸಾಂಬಾರ್ ಕುದಿಬರಲು ಬಿಡಬೇಕು. ಮತ್ತೆ ಉಪ್ಪು ಸೇರಿಸಿ ಮಿಕ್ಸ್ ಮಾಡಿ ಕುದಿಬರಲು ಬಿಡಿ.



Click it and Unblock the Notifications