For Quick Alerts
ALLOW NOTIFICATIONS  
For Daily Alerts

ನೆನಪಿಡಿ ಸಪ್ಲಿಮೆಂಟ್ ಪದಾರ್ಥಗಳು ಆರೋಗ್ಯಕ್ಕೆ ಹಾನಿಕಾರಕ

By vani nayak
|

ನಾವು ತಿನ್ನುವ ಆಹಾರದಿಂದ ಅವಶ್ಯಕತೆ ಇದ್ದಷ್ಟು ಪೋಷಕಾಂಶಗಳು ದೊರೆಯದಿದ್ದಾಗ, ಆ ಲೋಪವನ್ನು ಸರಿಪಡಿಸಲು ಹೊರಗೆ ದೊರೆಯುವಂತಹ ಸಪ್ಲಿಮೆಂಟ್ ಪದಾರ್ಥಗಳು ಅಂದರೆ ಪೂರಕಗಳ ಮೇಲೆ ಅವಲಂಬಿಸುತ್ತೇವೆ. ಅವು ವಿಟಮಿನ್ಸ್ ಅಥವಾ ಓಮೇಗ-3 ಕೊಬ್ಬಿನ ಆಮ್ಲಗಳು ಆಗಿರಬಹುದು.

ಇವುಗಳನ್ನು ನಾವು ಆರೋಗ್ಯವನ್ನು ಕಾಪಾಡಿಕೊಳ್ಳಲು ತೆಗೆದುಕೊಳ್ಳುತ್ತೇವೆ. ಆದರೆ, ಇಂತಹ ಪೂರಕಗಳಲ್ಲಿ ಯಾವ ಯಾವ ಪದಾರ್ಥಗಳನ್ನು ಬಳಸಿರುತ್ತಾರೆ ಎಂದು ಒಮ್ಮೆಯಾದರೂ ಯೋಚಿಸಿದ್ದೀರ? ಕೆಲವು ಸಪ್ಲಿಮೆಂಟ್ಸ್‌ಗಳಲ್ಲಿ ದೇಹಕ್ಕೆ ಹಾನಿಕಾರಕ ಪದಾರ್ಥಗಳಿದ್ದು, ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರುತ್ತದೆ. ಇದರ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಈ ಕೆಳಗೆ ಕೊಟ್ಟಿರುವ ಪೂರಕ ಪದಾರ್ಥಗಳ ಬಗ್ಗೆ ಓದಿ.

Supplement Ingredients That Are Harmful

ಇಡೀ ವಿಶ್ವವದಲ್ಲೇ, ಮಂಕು ಕವಿದಂತೆ ಗ್ರೀನ್ ಟೀ ಯ ಬಳಕೆಯು ಹೆಚ್ಚಾಗುತ್ತಿದೆ. ಇದನ್ನು ರೋಗ ನಿಯಂತ್ರಣ ಶಕ್ತಿಯನ್ನು ವೃದ್ಧಿಸಿಕೊಳ್ಳಲು, ತೂಕವನ್ನು ಇಳಿಸಲು ಬಳಸಲಾಗುತ್ತಿದೆ. ಆದರೆ, ನಿಮಗೆ ತಿಳಿದಿದಿಯೇ? ಆರೋಗ್ಯವೇ ಭಾಗ್ಯ ನಾಣ್ಣುಡಿ ಮರೆತು, ಕೊರಗಬೇಡಿ!

ಇತ್ತೀಚಿನ ಸಂಶೋಧನೆಯ ಪ್ರಕಾರ, ಧೀರ್ಘ ಕಾಲದ ಗ್ರೀನ್ ಟೀ ಸೆವನೆ, ಲಿವರೆಗೆ ಹಾಲಿಯನ್ನುಂಟು ಮಾಡಬಹುದು, ಹೆಚ್ಚಿದ ರಕ್ತದೊತ್ತಡ, ರಕ್ತ ಹೀನತೆ, ತಲೆಸುತ್ತು ಮುಂತಾದ ಸಮಸ್ಯೆಗಳು ಎದುರಾಗಿ ಸಾವು ಕೂಡ ಸಂಭವಿಸಬಹುದು. ಹೀಗೆಯೇ ಕೆಂಪು ಯೀಸ್ಟ್ ಅಕ್ಕಿ ಹೆಚ್ಚಾಗಿ ಬಳಸುವ ಒಂದು ಪೂರಕ ಪದಾರ್ಥ. ಇದನ್ನು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಮತ್ತು ಹೃದ್ರೋಗಕ್ಕೆ ಸಂಬಂಧಪಟ್ಟಂತೆ ಇತರ ಸಮಸ್ಯೆಗಳಿಗೆ ಬಳಸಲಾಗುತ್ತದೆ.

ಆದರೆ ಇತ್ತೀಚೆಗೆ ನಡೆಸಿದ ಸೆಶೋಧನೆಯ ಪ್ರಕಾರ, ಇದರಿಂದ ಹೃದಯ, ಮೂತ್ರಪಿಂಡ, ಸ್ನಾಯು ಹಾಗು ಲಿವರ್ ನ ಮೇಲೆ ಅಡ್ಡ ಪರಿಣಾಮ ಬೀರಿ, ಕೂದಲು ಉದರುವಿಕೆಯ ಸಮಸ್ಯೆಯು ಹೆಚ್ಚಾಗುತ್ತದೆ. ಇನ್ನೊಂದು ಉಸ್ನಿಕ್ ಆಮ್ಲ ಎಂಬ ಪೂರಕ ಪದಾರ್ಥವಿದೆ. ಅದನ್ನು ನೋವು ನಿವಾರಿಸಲು ಮತ್ತು ತೂಕ ಇಳಿಸಲು ಬಳಸಲಾಗುತ್ತದೆ. ಇದೂ ಸಹ ಲಿವರ್ ಗೆ ತೊಂದರೆಯನ್ನುಂಟು ಮಾಡಿ ಹಾನಿಗೊಳಿಸಬಹುದು.

ಇನ್ನು ಪಚನಕ್ಕೆ ಮತ್ತು ಉಸಿರಾಟಕ್ಕೆ ಸಂಬಂಧಪಟ್ಟ ಸಮಸ್ಯೆಗಳಿಗೆ ಪೆನ್ನಿರಾಯಲ್ ಆಯಿಲ್ ಎಂಬ ಇನ್ನೊಂದು ಪೂರಕ ಪದಾರ್ಥವನ್ನು ಬಳಸಲಾಗುತ್ತದೆ. ಇದು ಕೂಡ ಲಿವರ್ ಮತ್ತು ನರಮಂಡಲಕ್ಕೆ ಹಾನಿಗೊಳಿಸುತ್ತದೆ. ಕೆಲವೊಮ್ಮೆ ಮೂತ್ರಪಿಂಡ ವೈಫಲ್ಯವಾಗಿ ಸಾವು ಕೂಡ ಸಂಭವಿಸಬಹುದು.

ಲೊಬಿಲಿಯ ಎಂಬ ಪೂರಕ ಪದಾರ್ಥವನ್ನು ಶ್ವಾಸಕೋಶದ ಸಮಸ್ಯೆಗಳಿಗೆ ಮತ್ತು ಧೂಮಪಾನದಿಂದ ಮುಕ್ತಿ ಹೊಂದಲು ಬಳಸುತ್ತಾರೆ. ಸಂಶೋಧನೆಯ ಪ್ರಕಾರ ಇದರಿಂದ ವಾಂತಿ, ಬೇಧಿ, ವಾಕರಿಕೆ, ನಡುಕ ಹಾಗು ರೋಗಗ್ರಸ್ತವಾಗುವ ಎಲ್ಲಾ ಸಾಧ್ಯತೆಗಲು ಇರುತ್ತದೆ. ಕೆಲವೊಮ್ಮೆ ಸಾವು ಕೂಡ ಸಂಭವಿಸಬಹುದು.

ಹಾಗಾಗಿ, ಇನ್ನು ಮುಂದೆ ನೀವು ಪೂರಕ ಪದಾರ್ಥಗಳನ್ನು ಕೊಳ್ಳುವಾಗ, ಅದರ ಮೇಲಿನ ಪಟ್ಟಿಯನ್ನು ಈ ರೀತಿಯ ಪದಾರ್ಥಗಳಿವೆಯೇ ಎಂದು ಗಮನಿಸಿ. ಒಂದು ವೇಳೆ, ಇದ್ದಲ್ಲಿ ಇಂತಹ ಪೂರಕಗಳನ್ನು ಧೀರ್ಘ ಕಾಲದವರೆಗೂ ಆರೋಗ್ಯವನ್ನು ಕಾಪಾಡಿಕೊಳ್ಳಲು ಬಳಸದಿರಿ.

English summary

Supplement Ingredients That Are Harmful

When we cannot get enough nutrition from the food items that we eat, we fall back on supplements. Whether it is vitamins or omega-3 fatty acids, we consume these for their health benefits. But have you ever given a thought about the ingredients that are used in these supplements?
Story first published: Wednesday, September 14, 2016, 20:35 [IST]
X
Desktop Bottom Promotion