Latest Updates
-
2026ರ ಏಷ್ಯನ್ ಗೇಮ್ಸ್: ಮೊದಲ ದಿನವೇ ಭಾರತಕ್ಕೆ ಪದಕದ ಬೇಟೆ! ಪಂದ್ಯಗಳ ಸಂಪೂರ್ಣ ವೇಳಾಪಟ್ಟಿ ಮತ್ತು ಲೈವ್ ಅಪ್ಡೇಟ್ಸ್ ಇಲ್ಲಿದೆ -
ದೆಹಲಿ-ಎನ್ಸಿಆರ್ನಲ್ಲಿ ಕಲುಷಿತ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಬಾಂದ್ರಾ ಫೇರ್ ರಶ್: ಕಪಲ್ಸ್ ಹುಷಾರ್! ಟ್ರಾಫಿಕ್ ಜಾಮ್ನಲ್ಲಿ ಸಿಲುಕದಂತೆ ಡೇಟಿಂಗ್ ಪ್ಲಾನ್ ಮಾಡುವುದು ಹೇಗೆ? -
ಅಪಾರ್ಟ್ಮೆಂಟ್ನಲ್ಲಿ ಗಣೇಶ ವಿಸರ್ಜನೆ: ಪರಿಸರ ಸ್ನೇಹಿಯಾಗಿ ಆಚರಿಸಲು ಇಲ್ಲಿವೆ 5 ಸಿಂಪಲ್ ಟಿಪ್ಸ್ -
ಹಬ್ಬದ ಸೀಸನ್ನಲ್ಲಿ ಎಚ್ಚರ! ಮಾರುಕಟ್ಟೆಯಲ್ಲಿ ನಕಲಿ 'ಅನಲಾಗ್ ಪನೀರ್' ಹಾವಳಿ: ಅಸಲಿ ಪನೀರ್ ಗುರುತಿಸುವುದು ಹೇಗೆ? -
iPhone 18 ಪ್ರೀ-ಆರ್ಡರ್ ಆರಂಭ: ನಿಮ್ಮ ಫೋನ್ ಬುಕ್ ಮಾಡುವ ಮುನ್ನ ಈ 5 ವಿಷಯಗಳನ್ನು ಮಿಸ್ ಮಾಡ್ಬೇಡಿ! -
ಬೀಚ್ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಳ್ಳುತ್ತಿದ್ದೀರಾ? ಗಾಯಗಳಾಗದಂತೆ ಕೆಲಸ ಮಾಡಲು ಈ ಸುರಕ್ಷತಾ ಟಿಪ್ಸ್ ಮಿಸ್ ಮಾಡಬೇಡಿ! -
ಇಂದಿನ ಲವ್ ಜಾತಕ: ನಿಮ್ಮ ಪ್ರೀತಿಯನ್ನು ಗಟ್ಟಿಗೊಳಿಸಲು ಇಂದಿನ ಬೆಸ್ಟ್ ಟಿಪ್ಸ್ ಮತ್ತು ಡೇಟಿಂಗ್ ಐಡಿಯಾಗಳು -
₹1,000 ಕ್ಕಿಂತ ಕಡಿಮೆ ಬಜೆಟ್ನಲ್ಲಿ ಮನೆಗೆ ಹೊಸ ಲುಕ್: ಬಿದಿರಿನ ಅಲಂಕಾರಿಕ ವಸ್ತುಗಳ ಮ್ಯಾಜಿಕ್! -
ನೆಸ್ಲೆ ಶಿಶು ಆಹಾರದ ಮೇಲೆ FSSAI ಕಣ್ಣು: ನಿಮ್ಮ ಮಗುವಿನ ಸುರಕ್ಷತೆಗಾಗಿ ಪೋಷಕರು ತಿಳಿಯಲೇಬೇಕಾದ ವಿಷಯಗಳು
ಆರೋಗ್ಯವೇ ಭಾಗ್ಯ ನಾಣ್ಣುಡಿ ಮರೆತು, ಕೊರಗಬೇಡಿ!
ಆರೋಗ್ಯವೇ ಭಾಗ್ಯ ಎಂಬ ನಾಣ್ಣುಡಿಯಿದೆ. ಆರೋಗ್ಯವಿದ್ದರೆ ಏನು ಬೇಕಿದ್ದರೂ ಪಡೆಯಬಹುದು ಎನ್ನುವುದು ಇದರರ್ಥ. ಹಿಂದಿನ ಕಾಲದಲ್ಲಿ ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿತ್ತು. ಇದಕ್ಕಾಗಿಯೇ ಅವರ ಆಯಸ್ಸು ಕೂಡ ಹೆಚ್ಚಾಗಿತ್ತು. ಆದರೆ ಇಂದು ಆರೋಗ್ಯದ ಬಗ್ಗೆ ಮಾತನಾಡಿದರೆ ಪೌಷ್ಠಿಕಾಂಶ, ಹೆಚ್ಚಿನ ತರಕಾರಿ, ಹಣ್ಣುಗಳು ಮತ್ತು ವ್ಯಾಯಾಮ ಎನ್ನುತ್ತೇವೆ.
ಉತ್ತಮ ಆರೋಗ್ಯಕ್ಕಾಗಿ ಹಲವಾರು ವಿಷಯಗಳನ್ನು ತ್ಯಜಿಸಬೇಕಾಗುತ್ತದೆ ಎನ್ನುವುದನ್ನು ನಾವು ಮನದಟ್ಟು ಮಾಡಿಕೊಳ್ಳಬೇಕು. ಅನಾರೋಗ್ಯಕರ ಆಹಾರದಿಂದ ಹಿಡಿದು, ಕಚೇರಿಯ ಕುರ್ಚಿಯ ತನಕ.. ಮನೆಯಲ್ಲಿ ಬಳಸುವ ಕೆಲವೊಂದು ರಾಸಾಯನಿಕ ಮತ್ತು ನಾವು ಸುರಕ್ಷಿತವೆಂದು ಭಾವಿಸಿದ್ದರೂ ಸುರಕ್ಷಿತವಾಗಿರದ ಕೆಲವೊಂದು ವಸ್ತುಗಳನ್ನು ನಾವು ತ್ಯಜಿಸಬೇಕಾಗುತ್ತದೆ.
ಅನಾರೋಗ್ಯಕರವೆಂದು ತಿಳಿದಿರುವ ವಸ್ತುಗಳನ್ನು ಪದೇ ಪದೇ ಬಳಸುವುದರಿಂದ ಆರೋಗ್ಯದ ಸಮಸ್ಯೆಗಳು ಎದುರಾಗಬಹುದು. ಇದನ್ನು ಹೊರತುಪಡಿಸಿ ವಯಸ್ಕರಿಗೆ ಸುರಕ್ಷಿತವಾಗಿರುವಂತಹ ಕೆಲವೊಂದು ವಸ್ತುಗಳು ಮಕ್ಕಳಿಗೆ ಸುರಕ್ಷಿತವಾಗಿರಲಿಕ್ಕಿಲ್ಲ. ಏನಾದರೂ ಬದಲಾವಣೆ ಮಾಡಬೇಕೆಂದು ನೀವು ಬಯಸಿದರೆ ಆಗ ಅದು ತಾತ್ಕಾಲಿಕವಾಗಿರದೆ, ಶಾಶ್ವತವಾಗಿರಲಿ. ಈ ವಿಷಯದ ಬಗ್ಗೆ ಹೆಚ್ಚಿಗೆ ತಿಳಿದುಕೊಳ್ಳುವುದರಿಂದ ನಿಮ್ಮ ಮನೆಯನ್ನು ಆರೋಗ್ಯಕರ ಪ್ರದೇಶವನ್ನಾಗಿಡಬಹುದು. ಉತ್ತಮ ಆರೋಗ್ಯಕ್ಕಾಗಿ ಯಾವೆಲ್ಲಾ ವಿಷಯಗಳನ್ನು ಬಿಡಬೇಕು ಎನ್ನುವ ಬಗ್ಗೆ ನಿಮಗೆ ಚಿಂತೆಯಾಗಿದ್ದರೆ ಆರೋಗ್ಯಕ್ಕೆ ಹಾನಿಯನ್ನು ಉಂಟು ಮಾಡಬಲ್ಲ ಕೆಲವೊಂದು ವಿಷಯಗಳನ್ನು ನಾವಿಲ್ಲಿ ಪಟ್ಟಿ ಮಾಡಿದ್ದೇವೆ...

ಕೃತಕ ಸಿಹಿ
ಇದು ನಿಮ್ಮ ಸಿಹಿ ತಿನ್ನುವ ಬಯಕೆಯನ್ನು ಈಡೇರಿಸಬಹುದು. ಆದರೆ ಇದು ದೀರ್ಘಕಾಲಕ್ಕೆ ಲಾಭದಾಯಕವಲ್ಲ. ಕೃತಕ ಸಿಹಿಯನ್ನು ಕಡೆಗಣಿಸಲು ಇರುವ ಪ್ರಮುಖ ಆರೋಗ್ಯ ಸಲಹೆಯೆಂದರೆ ಕೃತಕ ಸಿಹಿ ಮತ್ತು ಎಲ್ಲಾ ರೀತಿಯ ತಂಪು ಪಾನೀಯಗಳನ್ನು ತ್ಯಜಿಸಬೇಕು. ಇದರಲ್ಲಿ ರುಚಿಗಾಗಿ ಕೃತಕ ಸಿಹಿ ಬಳಸಿರುತ್ತಾರೆ.

ಪ್ಲಾಸ್ಟಿಕ್ ಕಂಟೈನರ್
ಪ್ಲಾಸ್ಟಿಕ್ ಕಂಟೈನರ್ ಗಳಲ್ಲಿ ಆಹಾರವನ್ನು ಕೊಂಡೊಯ್ಯಲು ಹಾಗೂ ಶೇಖರಿಸಿಡುವುದು ತುಂಬಾ ಸುಲಭ. ಆದರೆ ಬಿಸಿಯಾದ ಆಹಾರ ಅಥವಾ ನೀರನ್ನು ಪ್ಲಾಸ್ಟಿಕ್ ಕಂಟೈನರ್ ಗೆ ಹಾಕಿದಾಗ ಟಾಕ್ಸಿಕ್ ರಾಸಾಯನಿಕವು ಉತ್ಪತ್ತಿಯಾಗುತ್ತದೆ. ಇದರಿಂದ ದೀರ್ಘಾವಧಿಗೆ ಆರೋಗ್ಯದ ಸಮಸ್ಯೆ ಉಂಟಾಗಬಹುದು.

ನಾನ್ ಸ್ಟಿಕ್ ಕುಕ್ ವೇರ್
ನಾನ್ ಸ್ಟಿಕ್ ಕುಕ್ ವೇರ್ ನಲ್ಲಿರುವ ಟೆಫ್ಲಾನ್ ಕೋಟಿಂಗ್ ನಲ್ಲಿ ಕಾರ್ಸಿನೊಜೆನ್ ಎನ್ನುವ ಅಂಶವಿದೆ ಎಂದು ಅಧ್ಯಯನಗಳು ಹೇಳಿವೆ. ಇದರ ಬದಲು ಗಾಜು, ಮಣ್ಣು ಅಥವಾ ಸ್ಟೈನ್ ಲೆಸ್ ಸ್ಟೀಲನ್ನು ಬಳಸಿ. ಉತ್ತಮ ಆರೋಗ್ಯಕ್ಕಾಗಿ ನಾನ್ ಸ್ಟಿಕ್ ಅಡುಗೆ ಪಾತ್ರೆಗಳನ್ನು ದೂರವಿಡಿ.

ಏರ್ ಫ್ರೆಶ್ನರ್
ಇದನ್ನು ಇಂದು ಪ್ರತಿಯೊಂದು ಮನೆಯಲ್ಲೂ ಉಪಯೋಗಿಸಲ್ಪಡಲಾಗುತ್ತದೆ. ಅತ್ಯಂತ ಬೇಸರದ ವಿಷಯವೆಂದರೆ ಇದರಿಂದ ಆಗುವ ತೊಂದರೆಯ ಹೆಚ್ಚಿನವರಿಗೆ ತಿಳಿದೇ ಇಲ್ಲ. ಇದನ್ನು ಅತಿಯಾಗಿ ಉಸಿರಾಡುವುದರಿಂದ ಆರೋಗ್ಯ ಸಮಸ್ಯೆ ಎದುರಾಗಬಹುದು. ಇದರಿಂದ ಕ್ಯಾನ್ಸರ್‌ಗೂ ಕಾರಣವಾಗಬಹುದು.

ಫ್ರಿಡ್ಜ್ ನಲ್ಲಿ ಉಳಿದಿರುವ ಆಹಾರ
ನಿಮ್ಮ ಫ್ರಿಡ್ಜ್ ಅನ್ನು ಪರಿಶೀಲಿಸಿ ಮತ್ತು ವಾರಾಂತ್ಯಕ್ಕೆ ಅದರಲ್ಲಿ ಎಷ್ಟು ಬಾಕಿಯಿದೆ ಎಂದು ನೋಡಿ. ಬಳಸಲು ಸಾಧ್ಯವಿಲ್ಲವೆಂದು ತಿಳಿದಿರುವ ಆಹಾರವನ್ನು ಹೊರಗಿಡಿ. ಉತ್ತಮ ಆರೋಗ್ಯಕ್ಕಾಗಿ ನೀವು ತ್ಯಜಿಸಲೇಬೇಕಾದ ಅತ್ಯಂತ ಅಪಾಯಕಾರಿ ಆಹಾರವಿದು.



Click it and Unblock the Notifications
