For Quick Alerts
ALLOW NOTIFICATIONS  
For Daily Alerts

  ಆ ದಿನಗಳಲ್ಲಿ ಕಾಡುವ ಅತೀವ ರಕ್ತಸ್ರಾವ! ಕಾರಣವೇನು?

  By Arshad
  |

  ಮಾಸಿಕ ದಿನಗಳು ಎಂದರೆ ಪ್ರತಿ ಮಹಿಳೆಗೂ ನೋವು ಉಣ್ಣುವ ಅನುಭವವಾಗಿದ್ದು ಕೆಲವರಲ್ಲಿಯಂತೂ ಇದು ಅತಿ ಹೆಚ್ಚಾಗಿರುತ್ತದೆ. ಕೆಲವರಿಗೆ ಮಿತಿಮೀರಿದ್ದು ಏಳಲೂ ಆಗದಂತಹ ನೋವು ಆವರಿಸಿದ್ದು ದೈಹಿಕವಾಗಿಯೂ ಮಾನಸಿಕವಾಗಿಯೂ ಕುಗ್ಗಿಸಿಬಿಡುತ್ತವೆ. ಒಂದು ವೇಳೆ ಹಿಂದಿನ ಕೆಲವು ತಿಂಗಳುಗಳಿಂದ ಸ್ರಾವ ಅತಿ ಹೆಚ್ಚಾಗಿದ್ದುದು ಕಂಡುಬಂದರೆ ಇದರ ನಿಜವಾದ ಕಾರಣಗಳು ನಿಮ್ಮನ್ನು ಅವಾಕ್ಕಾಗಿಸಬಹುದು.      ಮುಟ್ಟು ವಿಳಂಬವಾಯಿತೇ? ಕಾರಣ ತಿಳಿದುಕೊಳ್ಳಿ

  ವಾಸ್ತವವಾಗಿ ಮಾಸಿಕ ಸ್ರಾವ ನೈಸರ್ಗಿಕ ಕ್ರಿಯೆಯಾಗಿದ್ದು ಋತುಮತಿಯಾದ ಬಳಿಕ ರಜೋನಿವೃತ್ತಿಯವರೆಗೂ ಪ್ರತಿ ಮಹಿಳೆಯೂ ಅನಿವಾರ್ಯವಾಗಿ ಅನುಭವಿಸಬೇಕಾಗುತ್ತದೆ. ಸುಮಾರು ಹನ್ನೆರಡರಿಂದ ಐವತ್ತೈದು ವರ್ಷದವರೆಗೂ ಗರ್ಭಾವಸ್ಥೆಯನ್ನು ಹೊರತುಪಡಿಸಿ ಈ ಕ್ರಿಯೆ ಪ್ರತಿತಿಂಗಳೂ ನಡೆಯುತ್ತದೆ. ಪ್ರತಿ ತಿಂಗಳ ಒಂದು ಅವಧಿಯಲ್ಲಿ ಜರುಗುವ ಈ ಕ್ರಿಯೆ ಸುಮಾರು ನಾಲ್ಕರಿಂದ ಏಳು ದಿನಗಳವರೆಗೆ ಸಾಗುತ್ತಾ ನೋವು ಬಾಧಿಸುತ್ತದೆ.  ಅನಿಯಮಿತ ಮುಟ್ಟಿಗೂ, ಮಾನಸಿಕ ಸ್ಥಿತಿಗೂ ಸಂಬಂಧವಿದೆ

  ಗರ್ಭಾಶಯದಲ್ಲಿರುವ ಅಂಡಾಣು ಫಲಿತಗೊಳ್ಳದೇ ಇದ್ದಾಗ ಹೊಸ ಅಂಡಾಣುವಿಗೆ ಜಾಗ ನೀಡುವ ಸಲುವಾಗಿ ಹಿಂದಿನ ತಿಂಗಳ ಅಂಡಾಣು ವಿಸರ್ಜನೆಗೊಳ್ಳುವುದೇ ಈ ಕ್ರಿಯೆ. ಅಂಡನಾಳದ ಒಳಭಾಗದಿಂದ ಸ್ರವಿತಗೊಳ್ಳುವ ರಕ್ತಸ್ರಾವದ ಮೂಲಕ ಅಂಡಾಣು ದೇಹದಿಂದ ವಿಸರ್ಜನೆಗೊಳ್ಳುತ್ತದೆ. ಈ ಸ್ರಾವ ಪ್ರಾರಂಭಿಕ ದಿನದಲ್ಲಿ ಅಧಿಕವಿದ್ದು ಕ್ರಮೇಣ ಕಡಿಮೆಯಾಗುತ್ತಾ ಹೋಗುತ್ತದೆ. ಕೆಲವಾರು ತೊಂದರೆಗಳಿಂದ ಹಲವು ಮಹಿಳೆಯರಿಗೆ ಈ ಸ್ರಾವ ಪ್ರಥಮ ಎರಡು ದಿನಗಳಲ್ಲಿ ಅತಿ ಹೆಚ್ಚಾಗಿರುತ್ತದೆ.  ವಿಳಂಬವಾಗುತ್ತಿರುವ ಮುಟ್ಟಿನ ಸಮಸ್ಯೆಗೆ ಆಯುರ್ವೇದದ ಪರಿಹಾರ

  ಒಂದು ವೇಳೆ ಈ ಸ್ರಾವ ಸಾಮಾನ್ಯಕ್ಕಿಂತಲೂ ಅಧಿಕವಿದ್ದರೆ ಹಾಗೂ ಎರಡಕ್ಕಿಂತ ಹೆಚ್ಚಿನ ದಿನ ಬಾಧಿಸಿದರೆ ಅಥವಾ ಮೂರನೆಯ ದಿನವೂ ಎರಡನೆಯ ದಿನದಷ್ಟೇ ಸ್ರಾವ ಇದ್ದರೆ ಇದಕ್ಕೆ ಇತರ ಕಾರಣಗಳಿರಬಹುದು. ಹೆಚ್ಚಿನವರು ತಮ್ಮ ವಯಸ್ಸು ಮತ್ತು ಇತರ ಕಾರಣಗಳಿರಬಹುದು, ನಾಳೆ ಸರಿಯಾಗಬಹುದು ಎಂದು ನಿರ್ಲಕ್ಷ್ಯ ವಹಿಸುತ್ತಾರೆ.   ಮುಟ್ಟಿನ ನೋವಿಗೆ ಸಾಂತ್ವನ ನೀಡುವ ನುಗ್ಗೆ ಸೊಪ್ಪಿನ ಜ್ಯೂಸ್

  ಆದರೆ ಈ ನಿರ್ಲಕ್ಷ್ಯವೇ ಮುಂದೆ ದೊಡ್ಡ ತೊಂದರೆಗೆ ಮೂಲವಾಗಬಹುದು. ಈ ತೊಂದರೆಗೆ ಕೆಳಗೆ ನೀಡಿರುವ ಕೆಲವು ಕಾರಣಗಳು ಪರೋಕ್ಷವಾಗಿರಬಹುದು. ಯಾವುದಕ್ಕೂ ತಕ್ಷಣ ಸ್ತ್ರೀರೋಗ ತಜ್ಞರಲ್ಲಿ ಪರಿಶೀಲಿಸಿಕೊಂಡು ಸೂಕ್ತ ಚಿಕಿತ್ಸೆ ಪಡೆಯುವ ಮೂಲಕ ಇದನ್ನು ಉಲ್ಬಣಗಒಳ್ಳದಂತೆ ತಡೆಯಬಹುದು....      ಮುಟ್ಟಿನ ಅವಧಿಯಲ್ಲಿ ಅಧಿಕ ರಕ್ತಸ್ರಾವಕ್ಕೆ ಆಯುರ್ವೇದ ಚಿಕಿತ್ಸೆ    

  ಗರ್ಭಾಶಯದ ಗಂಟುಗಳು (Uterine Fibroids)

  ಗರ್ಭಾಶಯದ ಗಂಟುಗಳು (Uterine Fibroids)

  ಕೆಲವೊಮ್ಮೆ ನಮ್ಮ ದೇಹದ ಹೊರಭಾಗ ಮತ್ತು ಒಳಭಾಗಗಳಲ್ಲಿ ಗಂಟುಗಳು ಮೂಡುತ್ತವೆ. ಇವು ಕ್ಯಾನ್ಸರ್ ಕಾರಕವಲ್ಲ, ಆದರೆ ಇದರ ಮೇಲೆ ಒತ್ತಡ ಬೀಳುವವರೆಗೆ ನೋವನ್ನೂ ನೀಡುವುದಿಲ್ಲ. ಇಂತಹ ಗಂಟುಗಳು ಗರ್ಭಾಶಯದ ಗೋಡೆಗಳಲ್ಲಿ ಮೂಡಿದರೆ ಇದನ್ನು ಗರ್ಭಾಶಯದ ಗಂಟುಗಳು ಎಂದು ಕರೆಯುತ್ತಾರೆ. ಈ ಗಂಟುಗಳು ಮಾಸಿಕ ದಿನಗಳಲ್ಲಿ ಅಧಿಕ ರಕ್ತಸ್ರಾವಕ್ಕೆ ಕಾರಣವಾಗಿವೆ. ಈ ಗಂಟುಗಳ ಪರಿಣಾಮವಾಗಿ ಬಗ್ಗಿದಾಗ ಅಥವಾ ಎಡಮಗ್ಗುಲಿಗೆ ಮಲಗಿದಾಗ ಚುಚ್ಚಿದಂತೆ ನೋವಾಗುವುದು, ಮಾಸಿಕ ದಿನಗಳಲ್ಲದ ದಿನಗಳಲ್ಲಿಯೂ ನಡುನಡುವೆ ರಕ್ತದ ಬಿಂದುಗಳು ಹೊರಬರುವುದು ಇತ್ಯಾದಿಗಳು ಇದರ ಲಕ್ಷಣಗಳಾಗಿವೆ.

  ಗರ್ಭಾಶಯದ ಒಳಗೋಡೆಗಳ ಬೆರಳುಗಳು (Uterine Polyps)

  ಗರ್ಭಾಶಯದ ಒಳಗೋಡೆಗಳ ಬೆರಳುಗಳು (Uterine Polyps)

  ಗರ್ಭಾಶಯದ ಒಳಭಾಗದ ಗೋಡೆಯಿಂದ ಚಿಕ್ಕ ಭಾಗ ಉಬ್ಬಿದಂತೆ (cessile polyp) ಅಥವಾ ಚಿಕ್ಕ ದ್ರಾಕ್ಷಿಗೊಂಚಲಿನಂತೆ (pedunculated polyp) ಅಥವಾ ಬೆರಳಿನಂತೆ ನೀಳವಾಗಿದ್ದು ಗರ್ಭಾಶಯದ ದ್ವಾರದಿಂದ ಹೊರಬರುವಂತೆ (cervical polyps) ಒಳಚರ್ಮ ಜೋತುಬೀಳುತ್ತದೆ. ಪಾಲಿಪ್ಸ್ ಎಂದು ಕರೆಯಲಾಗುವ ಈ ಬೆರಳುಗಳಂತಿರುವ ಬೆಳವಣಿಗೆಗಳು ಅಧಿಕ ರಕ್ತಸ್ರಾವಕ್ಕೆ ಕಾರಣವಾಗಿದ್ದು ಇದರ ಅಡ್ಡಪರಿಣಾಮಗಳಿಂದ ಗರ್ಭಾಪಾತ, ಅನಿಯಮಿತ ಮಾಸಿಕ ದಿನಗಳು ಮೊದಲಾದ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ತಕ್ಷಣವೇ ಇದಕ್ಕೆ ಚಿಕಿತ್ಸೆ ದೊರಕದಿದ್ದರೆ ಗರ್ಭಕೋಶವನ್ನು ನಿವಾರಿಸುವ ಅತಿ ಕಠಿಣ ನಿರ್ಧಾರವನ್ನು ವೈದ್ಯರು ತೆಗೆದುಕೊಳ್ಳಬೇಕಾಗಿ ಬರುತ್ತದೆ.

  ಗರ್ಭಾಶಯದ ಒಳಗೋಡೆ ದಪ್ಪನಾಗುವುದು (Endometrial Hyperplasia)

  ಗರ್ಭಾಶಯದ ಒಳಗೋಡೆ ದಪ್ಪನಾಗುವುದು (Endometrial Hyperplasia)

  ಕೆಲವು ಕಾರಣಗಳಿಂದ ಗರ್ಭಾಶಯದ ಒಳಗೋಡೆ ದಪ್ಪನಾಗುತ್ತಾ ಹೋಗಿ ಗರ್ಭಾಶಯದ ಒಳಭಾಗವನ್ನು ತುಂಬಿಕೊಳ್ಳುತ್ತಾ ಬರುತ್ತದೆ. ಈ ಸ್ಥಿತಿ ನಿಧಾನವಾಗಿ ಪ್ರಾರಂಭವಾಗಿ ಬೆಳೆಯುತ್ತಾ ಹೋದಂತೆ ಪ್ರತಿಬಾರಿಯ ಸ್ರಾವ ನಿಧಾನವಾಗಿ ಹೆಚ್ಚುತ್ತಾ ಹೋಗುತ್ತದೆ.

  ರಕ್ತ ಹೆಪ್ಪುಗಟ್ಟದ ರೋಗ (Von Willebrand Disease)

  ರಕ್ತ ಹೆಪ್ಪುಗಟ್ಟದ ರೋಗ (Von Willebrand Disease)

  ಕೆಲವು ವ್ಯಕ್ತಿಗಳ ರಕ್ತದಲ್ಲಿ ರಕ್ತ ಹೆಪ್ಪುಗಟ್ಟಿಸಲು ಅಗತ್ಯವಿರುವ ವಿಟಮಿನ್ ಕೆ ಹಾಗೂ ಕೆಲವು ಅಗತ್ಯ ಪ್ರೋಟೀನುಗಳೇ ಇಲ್ಲವಾಗಿದ್ದು ಇವರ ರಕ್ತ ಸುಲಭವಾಗಿ ಹೆಪ್ಪುಗಟ್ಟುವುದಿಲ್ಲ. ಈ ತೊಂದರೆ ಇರುವ ಮಹಿಳೆಯರಿಗೂ ಮಾಸಿಕ ದಿನಗಳಲ್ಲಿ ರಕ್ತಸ್ರಾವ ನಿಲ್ಲದೇ ಅತಿಯಾಗಿರುತ್ತದೆ.

  ಹಾರ್ಮೋನುಗಳ ಏರಿಳಿತ

  ಹಾರ್ಮೋನುಗಳ ಏರಿಳಿತ

  ನಮ್ಮ ದೇಹದ ಎತ್ತರ, ಬಣ್ಣ ಮೊದಲಾದವುಗಳನ್ನು ನಿರ್ಧರಿಸುವಂತೆಯೇ ಮಾಸಿಕ ದಿನಗಳನ್ನೂ ಕೆಲವು ಹಾರ್ಮೋನುಗಳು ನಿಯಂತ್ರಿಸುತ್ತವೆ. ಒಂದು ವೇಳೆ ಮಹಿಳೆಯರಲ್ಲಿನ ಪ್ರೊಜೆಸ್ಟರಾನ್ ಮತ್ತು ಈಸ್ಟ್ರೋಜೆನ್ ಎಂಬ ಹಾರ್ಮೋನುಗಳ ಮಟ್ಟದಲ್ಲಿ ಏರುಪೇರಾದರೆ ಇದರ ಪರಿಣಾಮವಾಗಿ ಅತಿ ಹೆಚ್ಚಿನ ಸ್ರಾವವನ್ನು ಅನುಭವಿಸಬೇಕಾಗಿ ಬರುತ್ತದೆ.

  ಗರ್ಭಾಶಯದ ಕ್ಯಾನ್ಸರ್

  ಗರ್ಭಾಶಯದ ಕ್ಯಾನ್ಸರ್

  Uterine Cancer ಅಥವಾ Endometrial Cancer ಎಂದು ಕರೆಯಲಾಗುವ ಈ ಕ್ಯಾನ್ಸರ್ ಮಾರಕವಾಗಿದ್ದು ಇದರ ಪರಿಣಾಮವಾಗಿಯೂ ಅತಿ ಹೆಚ್ಚಿನ ರಕ್ತಸ್ರಾವವಾಗಬಹುದು. ಈ ಸ್ಥಿತಿಯನ್ನು ತಜ್ಞ ವೈದ್ಯರು ಮಾತ್ರವೇ ಕಂಡುಹಿಡಿಯಬಲ್ಲರಾಗಿದ್ದು ತಡಮಾಡಿದಷ್ಟೂ ಅಪಾಯಕರವಾಗಿದೆ.

  ಜನನಾಂಗದ ಸೋಂಕು

  ಜನನಾಂಗದ ಸೋಂಕು

  ಒಂದು ವೇಳೆ ಜನನಾಂಗದ ಒಳಭಾಗದಲ್ಲಿ ಸೋಂಕು ಉಂಟಾಗಿದ್ದರೆ ಈ ಸೋಂಕು ಗರ್ಭನಾಳ ಮತ್ತು ಗರ್ಭಕೋಶಕ್ಕೂ ಪಸರಿಸುವ ಸಾಧ್ಯತೆ ಅತಿ ಹೆಚ್ಚಾಗಿದೆ. ನೈರ್ಮಲ್ಯವನ್ನು ಕಾಪಾಡಿಕೊಳ್ಳದ ಮಹಿಳೆಯರಲ್ಲಿ ಇದು ಅತಿ ಹೆಚ್ಚಾಗಿ ಕಂಡುಬರುತ್ತದೆ. ಪರಿಣಾಮವಾಗಿ ಮಾಸಿಕ ರಕ್ತಸ್ರಾವದಲ್ಲಿಯೂ ಹೆಚ್ಚಳ ಕಾಣಿಸುತ್ತದೆ.

   

  English summary

  Deadly Reasons For Heavy Periods Each Woman Must Know About!

  if you feel that the bleeding is more than normal, and if the heavy flow lasts for more than 3 days, there could be a reason for concern. Have a look at some of the shocking causes for heavy periods, here.
  Story first published: Tuesday, November 22, 2016, 7:03 [IST]
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more